ರಾಷ್ಟ್ರಪಿತನಿಗೆ ಭಾವಪೂರ್ಣ ನಮನ


Team Udayavani, Oct 3, 2017, 1:43 PM IST

gandhiji-237×237.jpg

ರಾಯಚೂರು: ಜಿಲ್ಲಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 148ನೇ ಜಯಂತ್ಯುತ್ಸವವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿಯಿರುವ
ಗಾಂಧೀಜಿ ಪ್ರತಿಮೆಗೆ ಸಂಸದ ಬಿ.ವಿ.ನಾಯಕ, ಜಿಲ್ಲಾಧಿಕಾರಿ ಡಾ|ಬಗಾದಿ ಗೌತಮ್‌ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ಹೇಮಲತಾ ಪಿ.ಬೂದೆಪ್ಪ, ಜಿಪಂ ಸಿಇಒ ಅಭಿರಾಮ್‌ ಜಿ. ಶಂಕರ, ಎಸ್‌ಪಿ ನಿಶಾ ಜೇಮ್ಸ್‌ ಸೇರಿ ಇತರೆ ಅಧಿಕಾರಿಗಳು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.

ಇದೇ ವೇಳೆ ಸರ್ವ ಧರ್ಮ ಪ್ರಾರ್ಥನೆ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಈ ವೇಳೆ ಜಿಟಿ ಜಿಟಿ ಮಳೆ ಇದ್ದರೂ
ಲೆಕ್ಕಿಸದೆ ಕೊಡೆಗಳನ್ನು ಹಿಡಿದು ಪ್ರಾರ್ಥನೆ ಸಲ್ಲಿಸಲಾಯಿತು. ಭಾರತ ಸೇವಾದಳ ಸೇರಿ ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ನಗರಸಭೆಯಲ್ಲಿ ಅಧ್ಯಕ್ಷೆ ಹೇಮಲತಾ ಬೂದೆಪ್ಪ ಗಾಂಧೀಜಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ನಂತರ ಗಾಂಧಿ 
ವೃತ್ತದ ಬಳಿಯ ಪ್ರತಿಮೆಗೆ ಗೌರವ ಸಲ್ಲಿಸಿದರು. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲೂ ಗಾಂಧಿ ಜಯಂತಿ ಆಚರಿಸಲಾಯಿತುಸಂಸದ ಬಿ.ವಿ.ನಾಯಕ ಗೌರವ ಸಮರ್ಪಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣಿ ಸೇರಿ ಇತರೆ ಮುಖಂಡರು ಪಾಲ್ಗೊಂಡಿದ್ದರು.

ಛಾಯಾಚಿತ್ರಗಳ ಪ್ರದರ್ಶನ: ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕದಲ್ಲಿ ಗಾಂಧೀಜಿ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಗ್ರಾಮೀಣ ಶಾಸಕ ತಿಪ್ಪರಾಜ ಹವಾಲ್ದಾರ್‌ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗಾಂಧೀಜಿ ಅಹಿಂಸಾ ಮಾರ್ಗದಿಂದ ರಾಮರಾಜ್ಯ ಕಟ್ಟುವ ಕನಸು ಕಂಡಿದ್ದರು. ಗ್ರಾಮದ ಸ್ವತ್ಛತೆ, ಅಭಿವೃದ್ಧಿಯಿಂದಲೇ ನಮ್ಮ ದೇಶ ಸುಭಿಕ್ಷೆ ಆಗಲು ಸಾಧ್ಯ ಎಂಬ ಅವರ ನುಡಿ ಇಂದಿಗೂ ಪ್ರಸ್ತುತ. ಹಳ್ಳಿಗಳ ಸ್ವತ್ಛತೆಯಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂಬ ಅವರ ಆಶಯ ಈಡೇರಿಸಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಹಳ್ಳಿಗಳು ಅಭಿವೃದ್ಧಿಗೊಂಡರೆ ಇಡೀ ದೇಶ ಅಭಿವೃದ್ಧಿ ಪಥದಲ್ಲಿ ಚಲಿಸುತ್ತದೆ ಎಂಬ ಪರಿಕಲ್ಪನೆ ಹೊಂದಿದ ಮಹಾನ್‌ ವ್ಯಕ್ತಿ ಗಾಂಧೀಜಿ ಆದರ್ಶ ಇಂದಿಗೂ ಸೂಕ್ತ. ನಾವೆಲ್ಲರೂ ಗಾಂಧೀಜಿ ಅವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ವಿಶೇಷ ಸಂಚಿಕೆ ಬಿಡುಗಡೆ: ಮಹಾತ್ಮ ಗಾಂಧಿಧೀಜಿ ಜಯಂತಿ ನಿಮಿತ್ತ ನಗರದ ಜಂಬಲದಿನ್ನಿ ರಂಗಮಂದಿರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿ ವಿಶೇಂಷಾಕ ಶೀರ್ಷಿಕೆಯಡಿ ಹೊರತರಲಾದ ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಎಂಬ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ನಗರ ಶಾಸಕ ಡಾ|ಎಸ್‌.ಶಿವರಾಜ ಪಾಟೀಲ ಸಂಚಿಕೆ ಬಿಡುಗಡೆ ಮಾಡಿದರು.

ಕುಷ್ಠರೋಗಿಗಳಿಂದ ಜಯಂತಿ: ಕುಷ್ಠರೋಗಿಗಳು ವಾಸಿಸುವ ಶಾಂತಿ ಸದನ ಕಾಲೋನಿಯಲ್ಲಿ ಎಂ.ನಾಗಪ್ಪ ವಕೀಲರು ಪ್ರತಿಷ್ಠಾನ, ಆಸಿಸ್‌ ಹಾಗೂ ಲಯನ್ಸ್‌ ಕ್ಲಬ್‌ ಸಹಯೋಗದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಕಚೇರಿಯಿಂದ ಗಾಂ ಧೀಜಿ ಜಯಂತಿ ಆಚರಿಸಲಾಯಿತು. ಡಿಟಿಒ ಡಾ| ಸುರೆಂದ್ರ ಬಾಬು ಮಾತನಾಡಿ, ಕುಷ್ಠರೋಗ ಯಾವ ರೀತಿ ಹರಡುತ್ತದೆ. ಇದಕ್ಕೆ ಏನು ಮುಂಜಾಗ್ರತೆ ವಹಿಸಬೇಕು ಎಂದು ವಿವರಿಸಿದರು.

ಲಯನ್ಸ್‌ ಕ್ಲಬ್‌ ಅಧ್ಯಕ್ಷ ಶಬ್ಬೀರ್‌ ಮಳ್ಳಿ ಮಾತನಾಡಿದರು. ಎಂ.ನಾಗಪ್ಪ ಪ್ರತಿಷ್ಠಾನದ ಚನ್ನಬಸಮ್ಮ, ಮಲ್ಲಿಖಾರ್ಜುನ,
ವಿಜಯಕುಮಾರ, ಮಹೇಶ, ಡಾ| ಮುಸ್ತಫಾ, ಡಾ| ರಾಜಶೇಖರ ಸೇರಿ ಇತರರಿದ್ದರು. ನಂತರ ಫಲಾನುಭವಿಗಳಿಗೆ ಹಣ್ಣು ಮತ್ತು ಬ್ರೆಡ್‌, ನಿತ್ಯೋಪಯೋಗಿ ಪಾತ್ರೆ ವಿತರಿಸಲಾಯಿತು.

ಟಾಪ್ ನ್ಯೂಸ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

11-fd

ಚನ್ನಣ್ಣನವರ್, ಸೆಂಟ್ರಲ್ ಜೈಲ್ ಎಸ್ ಪಿ ಸೇರಿ ಹಲವು ಐಪಿಎಸ್ ಗಳ ವರ್ಗಾವಣೆ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

ಟಿ.ಪಿ. ಶಿವಕುಮಾರ್ ಚಾಮರಾಜನಗರ ನೂತನ ಎಸ್ಪಿ

1-sdsa

ಗೋವಾ: ನಾಮಪತ್ರ ಸಲ್ಲಿಸುವ ಮುನ್ನಾ ದಿನ ಬಿಜೆಪಿ ತೊರೆದ ಸಚಿವ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 581 ಅಂಕ ಇಳಿಕೆ; ಲಾಭ, ನಷ್ಟ ಕಂಡ ಷೇರುಗಳು ಯಾವುದು?

vikrant rona

ಅಡ್ವೆಂಚರ್ ಹೀರೋಗಾಗಿ ಮತ್ತಷ್ಟು ಕಾಯಬೇಕು.. ‘ವಿಕ್ರಾಂತ್ ರೋಣ’ನ ದರ್ಶನ ಸದ್ಯಕ್ಕಿಲ್ಲ

1-rwerw

ರಾಮದಾಸ್, ಸಿಂಹ ಕೋಲ್ಡ್ ವಾರ್ : ಮೈಸೂರು ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20protest

ಅಂಬೇಡ್ಕರ್ ಗೆ ಅವಮಾನ: ಹುಣಸೂರಿನಲ್ಲಿ ನ್ಯಾಯಾಧೀಶರ ವಿರುದ್ದ ಪ್ರತಿಭಟನೆ

8rice

4.92 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿ ವಶ

7ambedkar

ಅಂಬೇಡ್ಕರ್‌ ಭಾವಚಿತ್ರ ಹಾಕಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ

5gandhi

ಗಾಂಧೀಜಿ-ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ

4covid

ಸರ್ಕಾರದ ನಿರ್ದೇಶನ ಪಾಲಿಸಿ, ಕೋವಿಡ್‌ ನಿಯಂತ್ರಿಸಿ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

ಯಾದಗಿರಿ: ನವೋದಯ ಶಾಲೆಯ 75 ಮಕ್ಕಳಿಗೆ ಕೋವಿಡ್ ದೃಢ; ಒಂದು ವಾರ ಶಾಲೆ ಬಂದ್

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

“ಗ್ರಾಮ ಒನ್‌’ ಸೇವೆ ಜನಮಾನಸದಲ್ಲಿ ಉಳಿಯಲಿ; ಮುಖ್ಯಮಂತ್ರಿ ಬೊಮ್ಮಾಯಿ

ಚಚಡಿ ಯೋಜನೆ ಕಾಲುವೆ ನಿರ್ಮಾಣಕ್ಕೆ ಚಾಲನೆ

ಚಚಡಿ ಯೋಜನೆ ಕಾಲುವೆ ನಿರ್ಮಾಣಕ್ಕೆ ಚಾಲನೆ

25sweets

ಕಾರ್ಮಿಕರ ಮಕ್ಕಳಿಗೆ ಸಿಹಿ ವಿತರಣೆ

ಸಹಕಾರ-ಸಹಬಾಳ್ವೆ ಕಲಿಸಿದ ಸಂವಿಧಾನ

ಸಹಕಾರ-ಸಹಬಾಳ್ವೆ ಕಲಿಸಿದ ಸಂವಿಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.