ನ್ಯಾಯಕ್ಕಾಗಿ ಎಸ್ಟಿ ಮೀಸಲು ಹೋರಾಟ: ವಿರೂಪಾಕ್ಷಪ್ಪ

Team Udayavani, Jan 3, 2021, 5:38 PM IST

ನ್ಯಾಯಕ್ಕಾಗಿ ಎಸ್ಟಿ ಮೀಸಲು ಹೋರಾಟ: ವಿರೂಪಾಕ್ಷಪ್ಪ

ಸಿಂಧನೂರು: ಹಿಂದುಳಿದ ಸಮಾಜಕ್ಕೆ ಸೌಲಭ್ಯ ಕೇಳುವುದು ನಮ್ಮ ಹಕ್ಕು. ಎಂದೋ ಸಿಗಬೇಕಿದ್ದಎಸ್ಟಿ ಮೀಸಲು ಈವರೆಗೆ ಸಿಗದ ಹಿನ್ನೆಲೆಯಲ್ಲಿಆಗಿರುವ ಅನ್ಯಾಯ ಸರಿಪಡಿಸುವಂತೆಆಗ್ರಹಿಸಿ ಚಳವಳಿ ನಡೆಸಲಾಗುತ್ತಿದೆಎಂದು ಕುರುಬ ಸಮುದಾಯದ ಎಸ್ಟಿಮೀಸಲು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಕೆ. ವಿರೂಪಾಕ್ಷಪ್ಪ ಹೇಳಿದರು.

ನಗರದಲ್ಲಿ ಜ. 4ರಂದು ನಡೆಯಲಿರುವಬೃಹತ್‌ ಸಮಾವೇಶದ ಸಿದ್ಧತೆ ವೀಕ್ಷಿಸಿದಬಳಿಕ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರುಮಾತನಾಡಿದರು. ಕುರುಬ ಸಮುದಾಯ1976ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಬೇಕಿತ್ತು.ಇತರ ಎಲ್ಲ ಸಮುದಾಯ ಸೇರಿಸಿ ಕುರುಬರನ್ನು ಮಾತ್ರ ಕೈ ಬಿಡಲಾಯಿತು.ಕೊಡುಗು ಜಿಲ್ಲೆಯಲ್ಲಿ ಮಾತ್ರ ಸಮುದಾಯಕ್ಕೆ ಮೀಸಲು ನೀಡಿ, ಉಳಿದ ಜಿಲ್ಲೆಗಳ ಕುರುಬರನ್ನು ಕೈ ಬಿಡಲಾಯಿತು.

1868 ರಲ್ಲೇ ಬ್ರಿಟಿಷ್‌ ಸರಕಾರ ತಂದಿರುವ ಪುಸ್ತಕದಲ್ಲಿ ಕುರಬರ್‌ ಅಥವಾ ಕುರುಂಬರ್‌ ಅತ್ಯಂತ ಮೂಲ ನಿವಾಸಿ ಬುಡಕಟ್ಟು ಜನಾಂಗವೆಂದು ನಮೂದಿಸಲಾಗಿತ್ತು. 1891ರಲ್ಲಿ ಗಣತಿನಡೆಸಿದಾಗಲೂ ಕುರುಬರು ಮೂಲ ನಿವಾಸಿ, ಅರೆನಾಗರಿಕ ಬುಡಕಟ್ಟು ಜನರೆಂದು ಉಲ್ಲೇಖೀಸ ಲಾಗಿತ್ತು. ರಾಜ್ಯದಲ್ಲಿ ಕೊಡುಗಿಗೆ ಮಾತ್ರ ಸೀಮಿತವಾದ ಮೀಸಲನ್ನು 1976ರ ಕೇಂದ್ರ ಸರಕಾರದ ಆದೇಶದ ಪ್ರಕಾರ ಇಡೀ ರಾಜ್ಯಕ್ಕೆ ವಿಸ್ತರಿಸಬೇಕಿತ್ತು. ಇದಕ್ಕಾಗಿ ದೇವರಾಜು ಅರಸು ನೇತೃತ್ವದ ಸರಕಾರಕೇಂದ್ರ ಸರಕಾರಕ್ಕೆ ಪತ್ರ ಸಲ್ಲಿಸಿತ್ತು. ಕೊರಮ,ಭೋವಿ, ಲಮಾಣಿ, ಕೊರವ ಸಮಾಜಕ್ಕೆ ಸಿಗಬೇಕಿದ್ದ ಮೀಸಲನ್ನು ರಾಜ್ಯಕ್ಕೆ ವಿಸ್ತರಿಸುವಮಸೂದೆ ಅಂಗೀಕರವಾಯಿತು. ಕುರುಬ ಸಮುದಾಯದ 6 ಉಪ ಪಂಗಡಗಳಿಗೆ ಸಂಬಂಧಿಸಿ ಬಿಲ್‌ ತಿರಸ್ಕೃತವಾಯಿತು. ಆಯಾ ಸಂದರ್ಭದಲ್ಲಿ ಗಟ್ಟಿ ಪ್ರಯತ್ನಗಳಿಲ್ಲದಪರಿಣಾಮ ಕುರುಬ ಜನಾಂಗಕ್ಕೆ ಅನ್ಯಾಯವಾಗಿದ್ದು, ಇದೀಗ ಕೊಡಿಸುವುದಕ್ಕಾಗಿ ದಿಟ್ಟ ಹೆಜ್ಜೆ ಇಡಲಾಗಿದೆ ಎಂದರು.

ಜ.4ರಂದು ಈ ನಿಟ್ಟಿನಲ್ಲಿ ಎಸ್ಟಿಹೋರಾಟ ಸಮಿತಿಯ ಬೃಹತ್‌ ಸಮಾವೇಶನಡೆಯುತ್ತಿದ್ದು, ರಾಯಚೂರು, ಕೊಪ್ಪಳ,ಬಳ್ಳಾರಿ, ಯಾದಗಿರಿ ಜಿಲ್ಲೆಯಿಂದ ಜನಆಗಮಿಸಲಿದ್ದಾರೆ. 40-50 ಸಾವಿರ ಜಸೇರುವ ನಿರೀಕ್ಷೆಯಿದೆ. 25 ಸಾವಿರ ಆಸನದವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಗದ್ಗುರುಗಳಾದನಿರಂಜನಾನಂದ ಪುರಿ ಸ್ವಾಮೀಜಿ,ಈಶ್ವಾರನಂದಪುರಿ ಸ್ವಾಮೀಜಿ, ಸಿದ್ದರಾಮನಂದ ಪುರಿಸ್ವಾಮೀಜಿ, ಶಿವನಾಂದಪುರಿ ಸ್ವಾಮೀಜಿ ಸೇರಿದಂತೆ ಹಾಲು ಮತ ಸಮಾಜದ ಎಲ್ಲ ರಾಜ್ಯಮಟ್ಟದ ಮುಖಂಡರು ಪಕ್ಷಾತೀತವಾಗಿ ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.

ಪಿಎಲ್‌ಡಿಬಿ ಬ್ಯಾಂಕ್‌ ಅಧ್ಯಕ್ಷ, ಹಾಲುಮತಸಮಾಜದ ತಾಲೂಕು ಅಧ್ಯಕ್ಷ ಪೂಜಪ್ಪಪೂಜಾರಿ, ಪ್ರಧಾನ ಕಾರ್ಯದರ್ಶಿ ಶಂಬಣ್ಣಸುಕಾಲಪೇಟೆ, ಎಸ್ಟಿ ಹೋರಾಟ ಸಮಿತಿತಾಲೂಕು ಅಧ್ಯಕ್ಷ ಫಕೀರಪ್ಪ ಬಾಗೋಡಿ,ಕಾರ್ಯದರ್ಶಿ ಕೆ. ಚಿದಾನಂದ್‌,ವೆಂಕಣ್ಣ ತಿಪ್ಪನಹಟ್ಟಿ, ನಾಗರಾಜ ಬಾದರ್ಲಿ,ಸುರೇಶ್‌ ಸುಕಾಪೇಟೆ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಚಿನ್ನ ಪಡೆದು ದುಡ್ಡು ಕೊಡುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ಚಿನ್ನ ಕೊಟ್ಟು ದುಡ್ಡು ಪಡೆಯುವ ನೆಪದಲ್ಲಿ ವ್ಯಕ್ತಿಯನ್ನೇ ಕೊಂದು ಕೆರೆಗೆ ಎಸೆದರು

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಜ್ಯದಲ್ಲಿ ಇಂದು 48,905 ಹೊಸ ಕೋವಿಡ್ ಪ್ರಕರಣಗಳು ಪತ್ತೆ : 39 ಮಂದಿ ಬಲಿ

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿಯ ಕಿರುಕುಳ ತಾಳಲಾರದೆ ಗರ್ಭಿಣಿ ಆತ್ಮಹತ್ಯೆಗೆ ಶರಣು

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಪಡಿತರ ವಿತರಣೆಗೆ ಅಗತ್ಯದಷ್ಟು ಜೋಳ, ರಾಗಿ ಸಿಗುತ್ತಿಲ್ಲ : ಸಚಿವ ಕತ್ತಿ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷ

ಜೆಡಿಎಸ್‌ ಕೋರ್‌ ಕಮಿಟಿ: ಬಂಡೆಪ್ಪ ಸಾರಥ್ಯ ಎನ್‌.ಎಂ. ನಬಿ ಕಾರ್ಯಾಧ್ಯಕ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

26road

ರಸ್ತೆ ಕಾಮಗಾರಿ ಪರಿಶೀಲನೆ

25problem1

ಗ್ರಾಪಂ ಸಮಸ್ಯೆ ಅಲ್ಲಿಯೇ ಬಗೆಹರಿಸಿ

24develop

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

14amrith

ಅಮೃತ ಯೋಜನೆಯಡಿ 19.35 ಕೋಟಿ

13formers

ಖರೀದಿ ಕೇಂದ್ರದ ಒಳಗೆ ಹೋಗದ ರೈತರು!

MUST WATCH

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

udayavani youtube

ಗಣರಾಜ್ಯ ದಿನದ ಮೆರವಣಿಗೆ 2022

ಹೊಸ ಸೇರ್ಪಡೆ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಹಾರಿದ ತ್ರಿವರ್ಣ

ಸ್ಗ್ಸಗಸ್ಗದಸ

ಅನುಮತಿ ಇಲ್ಲದ್ದರಿಂದ ತೆರವು

ಯತೆಯತೆಹತೆಹಗ

ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡಿ: ಸಿದ್ದು 

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್‌ ನೀಡಿ : ಅಧಿಕಾರಿಗಳಿಗೆ ಗೌರವ್‌ ಗುಪ್ತ ತಾಕೀತು

ಹುಣಸೂರಿನಲ್ಲಿ ಮತಾಂತರ ಕಾಯ್ದೆ ವಿರುದ್ದ ಕರಪತ್ರ ಚಳುವಳಿ

ಹುಣಸೂರಿನಲ್ಲಿ ಮತಾಂತರ ಕಾಯ್ದೆ ವಿರುದ್ದ ಕರಪತ್ರ ಚಳುವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.