Udayavni Special

ಬೇಸಿಗೆ ಬೆಳೆಗಿಲ್ಲ ನೀರು


Team Udayavani, Nov 19, 2018, 1:10 PM IST

ray-2.jpg

ಗಂಗಾವತಿ: ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿರುವ ಕಾರಣ ಸದ್ಯ ಬೆಳೆದು ನಿಂತ ಭತ್ತದ ಬೆಳೆಗೆ ಜನವರಿವರೆಗೂ ನೀರು ಹರಿಸಬೇಕು. ಬೇಸಿಗೆ ಹಂಗಾಮಿನ ಬೆಳೆಗೆ ನೀರು ಹರಿಸದೇ ಕುಡಿಯಲು ಮಾತ್ರ ನೀರು ಹರಿಸಲು ಮುನಿರಾಬಾದ್‌ನಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ಸಭೆಯು ರೈತರ ವಿರೋಧದ ಮಧ್ಯೆ ತೀರ್ಮಾನ ಕೈಗೊಂಡಿದೆ.

ರವಿವಾರ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ರೈತರು ತೀವ್ರ ತರಾಟೆ ತೆಗೆದುಕೊಂಡ ಪ್ರಸಂಗವೂ ಜರುಗಿತು. ಈ ಭಾರಿ ಜಲಾನಯನ
ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯದಲ್ಲಿ 125 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸರಿಯಾಗಿ ನಿರ್ವಹಣೆ ಮಾಡದೇ ನೀರಿನ್ನು ಪೋಲು ಮಾಡಲಾಗಿದೆ.
ತೆಲಂಗಾಣ-ಆಂಧ್ರಪ್ರದೇಶಕ್ಕೆ ನದಿಯ ಮೂಲಕ ನೀರನ್ನು ಹರಿಸಲಾಗಿದ್ದು, ರಾಜ್ಯದ ರೈತರ ಹಿತ ಕಡೆಗಣಿಸಲಾಗಿದೆ.

ಜೂನ್‌-ಜುಲೈನಲ್ಲಿ ಐಸಿಸಿ ಸಭೆ ನಡೆಸಿ ಮುಂಚಿತವಾಗಿ ನೀರು ಹರಿಸಿದರೆ ಆಗಸ್ಟ್‌-ಸೆಪ್ಟಂಬರ್‌ನಲ್ಲಿ ಸುರಿದ ಮಳೆ ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದಾಗಿತ್ತು. ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳ ಮತ್ತು ಕಾಲುವೆ ಇಲ್ಲದೇ ಇರುವ ಕಾರಣ ಕಾಲವೆಯ ಮೂಲಕ ನದಿಗೆ ನೀರು ಪೋಲಾಗಿ ಹರಿದು ಆಂಧ್ರಪ್ರದೇಶ ಸೇರಿದೆ ಇದಕ್ಕೆ ಸರಕಾರದ ನಿರ್ಲಕ್ಷ ಕಾರಣವಾಗಿದೆ ಎಂದು ರೈತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಐಸಿಸಿ ಅಧ್ಯಕ್ಷ ಸಚಿವ ವೆಂಕಟರಾವ್‌ ನಾಡಗೌಡ, ಕೊಪ್ಪಳ ಉಸ್ತುವಾರಿ ಸಚಿವ ಆರ್‌. ಶಂಕರ್‌, ಸಂಸದರಾದ ಕರಡಿ ಸಂಗಣ್ಣ, ವಿ.ಎಸ್‌. ಉಗ್ರಪ್ಪ, ಬಿ.ವಿ. ನಾಯಕ ಸೇರಿ ಅಚ್ಚುಕಟ್ಟು ವ್ಯಾಪ್ತಿ ಶಾಸಕರು, ಜನಪ್ರತಿನಿಧಿಗಳು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳಿದ್ದರು.

ಮಾಹಿತಿ ನೀಡದ ನಾಡಗೌಡ’ ತೀವ್ರ ಗೊಂದಲದಿಂದ ಕೂಡಿದ್ದ ಐಸಿಸಿ ಸಭೆಯಲ್ಲಿ ಆಡಳಿತಾರೂಢ ಜನಪ್ರತಿನಿಧಿ ಗಳು ಮತ್ತು ಬಿಜೆಪಿ ರೈತ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ನೀರು ಪೋಲಾಗಲು ನೇರವಾಗಿ ಸರಕಾರ ಕಾರಣ ಎಂದು ಬಿಜೆಪಿ ಮುಖಂಡರು ಮತ್ತು ರೈತರು ಆರೋಪಿಸಿದಾಗ ಐಸಿಸಿ ಅಧ್ಯಕ್ಷ ಸಚಿವ ವೆಂಕಟರಾವ್‌ ನಾಡಗೌಡ ಮತ್ತು ಬಿಜೆಪಿ ರೈತ ಹೋರಾಟಗಾರ ತಿಪ್ಪೇರುದ್ರಸ್ವಾಮಿ ನಡುವೆ ವಾಗ್ವಾದ ಜರುಗಿತು. ಬೆಳಗ್ಗೆ 11ಕ್ಕೆ ಆರಂಭವಾದ ಸಭೆ
ಸಂಜೆ 5 ಗಂಟೆಗೆ ಮುಕ್ತಾಯವಾಯಿತು. ಈ ಮಧ್ಯೆ ಸಭೆಯಿಂದ ಮಾಧ್ಯಮದವರನ್ನು ಹೊರಗಿಡಲಾಗಿತ್ತು.

ಸಭೆ ಮುಕ್ತಾಯದ ನಂತರ ಐಸಿಸಿ ಅಧ್ಯಕ್ಷರು ಸಭೆಯಲ್ಲಿ ನಡಾವಳಿಕೆಯನ್ನು ಪತ್ರಿಕಾ ಮಾಧ್ಯಮದವರಿಗೆ ತಿಳಿಸುವುದು ವಾಡಿಕೆ. ಸಚಿವ ನಾಡಗೌಡ ಮಾಧ್ಯಮದವರಿಗೆ ಮಾಹಿತಿ ನೀಡದೇ ಪಲಾಯನ ಮಾಡಿದರು. ಪತ್ರಿಕಾಮಾಧ್ಯಮದವರನ್ನು ಹೊರಗಿಟ್ಟರೂ ಸಭೆಯಲ್ಲಿ ಕೆಲವರು ಸಭೆ ದೃಶ್ಯಗಳನ್ನು ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ ಮಾಡಿದ್ದು ಕಂಡು ಬಂತು.

ಜಲಾಶಯದ ನೀರು ಪೋಲಾಗಲು ನೇರವಾಗಿ ಸರಕಾರದ ನಿರ್ಲಕ್ಷÂ ಕಾರಣವಾಗಿದೆ. ಬೇಸಿಗೆ ಬೆಳೆಗೆ ನೀರು ಕೊಡದ ಸರಕಾರ ಅಚ್ಚುಕಟ್ಟು ಪ್ರದೇಶ ರೈತರಿಗೆ ಪ್ರತಿ ಐದು ಎಕರೆ 2 ಲಕ್ಷ ರೂ. ಪರಿಹಾರ ನೀಡಬೇಕು. ಪ್ರಕೃತಿ ಮಳೆ ನೀಡಿ ರೈತರಿಗೆ ಅನುಕೂಲ ಮಾಡಿದರೂ ಸಮಿಶ್ರ ಸರಕಾರದ ನಿರ್ಲಕ್ಷ Âದ ಫಲವಾಗಿ ರೈತರು ಈ ಭಾರಿಯೂ ಬರಗಾಲ ಅನುಭವಿಸುವ ಸ್ಥಿತಿಯುಂಟಾಗಿದೆ. ರೈತರನ್ನು ಸಂಘಟಸಿ ಸರಕಾರದ ವಿರುದ್ಧ ಹೋರಾಟ ರೂಪಿಸಲಾಗುತ್ತದೆ. ತಕ್ಕ ಪಾಠವನ್ನು ರೈತರು ಕಲಿಸಲಿದ್ದಾರೆ.
 ತಿಪ್ಪೇರುದ್ರಸ್ವಾಮಿ, ರೈತ ಮುಖಂಡ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಇಂದಿನಿಂದ ದೇಶೀಯ ವಿಮಾನಯಾನ

ಇಂದಿನಿಂದ ದೇಶೀಯ ವಿಮಾನಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಲೆ ಇಲ್ಲದೇ ಈರುಳ್ಳಿ ಬೆಳೆಗಾರರು ಕಂಗಾಲು

ಬೆಲೆ ಇಲ್ಲದೇ ಈರುಳ್ಳಿ ಬೆಳೆಗಾರರು ಕಂಗಾಲು

ನಿಯಮ ಉಲ್ಲಂಘನೆ: ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯ

ನಿಯಮ ಉಲ್ಲಂಘನೆ: ಏಜೆನ್ಸಿ ವಿರುದ್ಧ ಕ್ರಮಕ್ಕೆ ಒತ್ತಾಯ

23-May-07

ಕೋವಿಡ್ ಪ್ರಯೋಗಾಲಯ ಶೀಘ್ರ ಆರಂಭಿಸಿ

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ

ರಾಯಚೂರು ವಿವಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಿ

22-May-23

ಮುಂಗಾರಿನಲ್ಲಿ 1,08,782 ಹೆಕ್ಟೇರ್‌ ಬಿತ್ತನೆ ಗುರಿ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಸಂಪೂರ್ಣ ಲಾಕ್‌ಡೌನ್ ಉಡುಪಿ ನಾಗರಿಕರಿಂದ ಉತ್ತಮ ಸ್ಪಂದನೆ

ಸಂಪೂರ್ಣ ಲಾಕ್‌ಡೌನ್ ಉಡುಪಿ ನಾಗರಿಕರಿಂದ ಉತ್ತಮ ಸ್ಪಂದನೆ

ಬಸ್‌ನಿಲ್ದಾಣ-ಬಸ್‌ಗಳ ಸ್ವಚ್ಛತಾ ಕಾರ್ಯ

ಬಸ್‌ನಿಲ್ದಾಣ-ಬಸ್‌ಗಳ ಸ್ವಚ್ಛತಾ ಕಾರ್ಯ

ರವಿವಾರದ ಲಾಕ್‌ಡೌನ್‌: ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧ

ರವಿವಾರದ ಲಾಕ್‌ಡೌನ್‌: ದಕ್ಷಿಣ ಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ಧ

saha curfe

ಕರ್ಫ್ಯೂಗೆ ಜನರಿಂದ ಸಂಪೂರ್ಣ ಬೆಂಬಲ

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.