ಅನರ್ಹರಿಗೆ ಸುಪ್ರೀಂ ತಕ್ಕ ಪಾಠ: ಗುಂಡೂರಾವ್‌


Team Udayavani, Nov 13, 2019, 8:33 PM IST

Dinesh-Gundurao-545-A

ರಾಯಚೂರು: ರಾಜೀನಾಮೆ ನೀಡಿದ 17 ಶಾಸಕರನ್ನು ಅನರ್ಹಗೊಳಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರ ಸ್ವಾಗತಾರ್ಹ. ಸರಕಾರ ಬೀಳಿಸಬೇಕು ಎಂಬ ದುರುದ್ದೇಶದಿಂದ ಈ ಕೃತ್ಯ ಎಸಗಿದ ಅವರಿಗೆ ತಕ್ಕ ಪಾಠವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇವೆ. ಅತೃಪ್ತ ಶಾಸಕರು ಅನರ್ಹರು ಎಂಬ ಸ್ಪೀಕರ್‌ ಆದೇಶಕ್ಕೆ ನ್ಯಾಯಾಲಯ ಮನ್ನಣೆ ನೀಡಿದೆ. ಆದರೆ ಚುನಾವಣೆಗೆ ಸ್ಪ ರ್ಧಿಸಲು ಅವಕಾಶ ನೀಡಿದ್ದು, ಅನರ್ಹ ಶಾಸಕರು ಸ್ಪರ್ಧಿಸಲಿ. ರಾಜ್ಯದ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಅನರ್ಹ ಶಾಸಕರಿಗೂ ನಮಗೂ ಸಂಬಂಧವಿಲ್ಲ ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ನೈತಿಕತೆ ಇದ್ದರೆ ಯಾವುದೇ ಕಾರಣಕ್ಕೂ ಅನರ್ಹರಿಗೆ ಟಿಕೆಟ್‌ ನೀಡಬಾರದು. ಟಿಕೆಟ್‌ ನೀಡಿದರೆ ಸಂವಿಧಾನ ಬಾಹಿರ ಕೃತ್ಯ ಎಸಗಿದಂತಾಗುತ್ತದೆ. ಅಮಿತ್‌ ಶಾ, ಬಿಎಸ್‌ವೈ ತಾವೇ ಆಪರೇಷನ್‌ ಕಮಲದ ಸೂತ್ರಧಾರರು ಎಂದು ಒಪ್ಪಿಕೊಂಡಂತಾಗುತ್ತದೆ ಎಂದರು.

ಸರಕಾರ ವಜಾಕ್ಕೆ ರಾಷ್ಟ್ರಪತಿಗೆ ಮನವಿ
ಅನರ್ಹರು ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಸ್ವಾರ್ಥಕ್ಕೋಸ್ಕರ ಸಿದ್ಧಾಂತಗಳಿಗೆ ಧಕ್ಕೆ ತಂದಿದ್ದಾರೆ. ಇದು ಎಲ್ಲ ಪಕ್ಷಗಳಿಗೂ ಪಾಠವಾಗಿದೆ. ದೇಶದಲ್ಲಿ ಪûಾಂತರ ಕಾಯ್ದೆ ಸುಧಾರಣೆಯಾಗಬೇಕು. ರಾಜ್ಯದಲ್ಲಿ ಸರಕಾರ ರಚಿಸಿದ್ದೇ ವಾಮಮಾರ್ಗದಿಂದ. ಈ ಸರಕಾರಕ್ಕೆ ಅಸ್ತಿತ್ವವೇ ಇಲ್ಲ. ಅದನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಇಂಥ ಅನೈತಿಕ ಸರಕಾರದ ಹೊಣೆ ಹೊತ್ತ ಸಿಎಂ ಯಡಿಯೂರಪ್ಪ ಕೂಡಲೇ ರಾಜೀನಾಮೆ ನೀಡಲಿ. ಅನರ್ಹರಾಗಲಿ, ಅವರ ಕುಟುಂಬದವರಾಗಲಿ ಪಕ್ಷಕ್ಕೆ ಹಿಂದಿರುಗಿದರೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದರು.

ಟಾಪ್ ನ್ಯೂಸ್

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ಕೋವಿಡ್ ರೂಪಾಂತರಿ ಆತಂಕ: ಪ್ರಧಾನಿ ಮೋದಿಯಿಂದ ಮಹತ್ವದ ಸಭೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ನಥಿಂಗ್‍ ನಲ್ಲಿ ಯುವರಾಜ್‍ ಸಿಂಗ್‍, ಕರಣ್‍ ಜೋಹರ್ ಹೂಡಿಕೆ

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಮಂಗಳೂರು:ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ! ವ್ಯಕ್ತಿಗೆ ತಿವಿಯಲು ಯತ್ನ, ವಿಡಿಯೋ ವೈರಲ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಗಗನಯಾತ್ರಿ ತರಬೇತಿ ಕೇಂದ್ರ ಶೀಘ್ರ ಆರಂಭ

ಗಗನಯಾತ್ರಿ ತರಬೇತಿ ಕೇಂದ್ರ ಶೀಘ್ರ ಆರಂಭ

ನ. 29ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

ನ. 29ರಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

ವಿದೇಶ ನಿರ್ಗಮಿತರಿಗೆ ಕಡ್ಡಾಯ ಪರೀಕ್ಷೆ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

4vote

ಅಭಿವೃದ್ಧಿ ತೋರಿಸಿ ಮತ ಕೇಳಿ: ಮರತೂರ

3sugarcane

ಮಳೆ-ಗಾಳಿಗೆ ಧರೆಗುರುಳಿದ ಕಬ್ಬು

2act

ರಾಜ್ಯದ ತಿದ್ದುಪಡಿ ಕಾಯ್ದೆ ವಾಪಸ್‌ ಆಗಲಿ

sakath movie

‘ಸಖತ್’ ಚಿತ್ರ ವಿಮರ್ಶೆ: ಜಾಲಿ ರೈಡ್‌ನಲ್ಲಿ ಸಖತ್‌ ಥ್ರಿಲ್‌!

1maraton

ಮೀಸಲು ಅರಣ್ಯದಲ್ಲಿ ಮ್ಯಾರಥಾನ್ ಗೆ ಪರಿಸರ ಪ್ರಿಯರ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.