ತಲಮಾರಿ ಗ್ರಾಮ ಸೀಲ್‌ಡೌನ್‌-ಜಿಲ್ಲಾಧಿಕಾರಿ ಭೇಟಿ


Team Udayavani, Aug 1, 2020, 2:37 PM IST

ತಲಮಾರಿ ಗ್ರಾಮ ಸೀಲ್‌ಡೌನ್‌-ಜಿಲ್ಲಾಧಿಕಾರಿ ಭೇಟಿ

ರಾಯಚೂರು: ತಾಲೂಕಿನ ತಲಮಾರಿ ಗ್ರಾಮದಲ್ಲಿ 70 ಕೋವಿಡ್ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟ ಕಾರಣ ಶುಕ್ರವಾರದಿಂದ 15 ದಿನ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಯಿತು.

ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮಸ್ಥರಿಗೆ ಜಾಗೃತಿ ಮೂಡಿಸಲಾಯಿತು. ತಲಮಾರಿ ಗ್ರಾಮಕ್ಕೆ ಬೇರೆ ಗ್ರಾಮಗಳ ಜನ ಪ್ರವೇಶಿಸದಂತೆ ತಡೆಯಬೇಕು. ಅದರಂತೆ ಗ್ರಾಮಸ್ಥರು ಹೊರ ಹೋಗದಂತೆ ತಿಳಿ ಹೇಳಲಾಯಿತು. ಕೃಷಿ ಚಟುವಟಿಕೆ ಬಿಟ್ಟು ಇನ್ನಿತರ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿ ಸಬೇಕು ಎಂದು ಡಿಸಿ ಸೂಚಿಸಿದರು.

ಆಂಧ್ರಪ್ರದೇಶದ ಗಡಿ ಗ್ರಾಮವಾಗಿರುವ ಐಜ್‌ ಗ್ರಾಮದ ಪ್ರವೇಶ ನಿರ್ಬಂಧಿಸಬೇಕು. ತಲಮಾರಿ ಗ್ರಾಮದಲ್ಲಿ ಶೇ.100 ಬ್ಯಾರಿಕೇಡ್‌ ಅಳವಡಿಸಬೇಕು. ಕೋವಿಡ್‌-19 ಹೆಚ್ಚು ದೃಢಪಟ್ಟಿರುವ ಮನೆಗಳ ಅಕ್ಕಪಕ್ಕದಲ್ಲಿ ಕಟ್ಟಿಗೆ ಬಳಸಿ ತಡೆ ಒಡ್ಡಬೇಕು. ಒಟ್ಟಾರೆ ಓಡಾಟ ಸಂಪೂರ್ಣ ನಿರ್ಬಂ ಧಿಸಬೇಕು. ಕೃಷಿ ಯಂತ್ರೋಪಕರಣಗಳನ್ನು ಗ್ರಾಮದ ಹೊರಗಡೆ ಅಥವಾ ಕೃಷಿ ಜಮೀನಿನ ಬಳಿಯೇ ಇರಿಸಬೇಕು. ಅತ್ಯಂತ ತುರ್ತು ಅಥವಾ ಅನಿವಾರ್ಯವಿದ್ದಲ್ಲಿ ಮಾತ್ರ ಜನ ಓಡಾಡಬೇಕು. ಅದರಲ್ಲೂ ಪಾಸಿಟಿವ್‌ ಪ್ರಕರಣ ವರದಿಯಾದ ಮನೆಯವರು ಹೊರಗೆ ಬರಲೇಬೇಡಿ ಎಂದು ಸೂಚಿಸಲಾಯಿತು.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಲ್ಲಿ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ, ಮೈ-ಕೈ ನೋವು ಹಾಗೂ ತಲೆ ನೋವು ಕಂಡುಬಂದಲ್ಲಿ ರ್ಯಾಪಿಡ್‌ ಆಂಟಿಜೆನ್‌ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು. ಅದಕ್ಕಾಗಿ ಸಂಚಾರಿ ವಾಹನ ಬಳಸಿಕೊಳ್ಳಿ, ಅದಕ್ಕೆ ಅಗತ್ಯ ಇರುವ 500 ಕ್ಕೂ ಅಧಿಕ ಕಿಟ್‌ಗಳನ್ನು ಒದಗಿಸುವಂತೆ ಆರೋಗ್ಯಾಧಿಕಾರಿಗೆ ತಿಳಿಸಿದರು.

ತಲಮಾರಿ ಗ್ರಾಮದಲ್ಲಿ 16 ಕಂಟೈನ್‌ಮೆಂಟ್‌ ವಲಯಗಳನ್ನಾಗಿ ರಚಿಸಲಾಯಿತು. ಸಹಾಯಕ ಆಯುಕ್ತ ಸಂತೋಷ ಕಾಮನಗೌಡರ್‌, ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ಹರಿಬಾಬು, ತಹಶೀಲ್ದಾರ್‌ ಡಾ.ಹಂಪಣ್ಣ ಸಜ್ಜನ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಶಕೀರ್‌ ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

renukaacharya

ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16crushed

ಬಿರುಗಾಳಿಗೆ ನೆಲಕಚ್ಚಿದ ಜೋಳ

15corn

ಜೋಳದ ನಿರ್ಬಂಧ ತೆರವಿಗೆ ಚರ್ಚೆ

14covid

ರಾಯಚೂರಿನಲ್ಲಿ ಸೋಂಕಿನ ವೇಗ ಹೆಚ್ಚಾ ದರೂ ತೀವ್ರತೆ ಕಡಿಮೆ

ರತಯುಇಒಕಜಹಗ್ದಸ

ಪುರಸಭೆ ಅಧ್ಯಕ್ಷೆಯಾಗಿ ಸುನೀತಾ ಆಯ್ಕೆ

ದರತಯುಇತುಕಮಬವಚಷ

ನಿವೃತ್ತ ನೌಕರರಿಗೆ ವಂಚಕರ ಹೊಂಚು!

MUST WATCH

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

ಹೊಸ ಸೇರ್ಪಡೆ

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

ಹೊಲದಲ್ಲೇ ಬೆಲೆ ಸಿಗುವಾಗ, ಖರೀದಿ ಕೇಂದ್ರ ಏಕೆ ?

bomb

ಲಾಹೋರ್ : ಬಾಂಬ್ ಸ್ಫೋಟದಲ್ಲಿ ಇಬ್ಬರ ಸಾವು, 23 ಮಂದಿಗೆ ಗಾಯ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.