ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಲ್ಲಾಳಿಗಳ ಆಟ-ಜನರಿಗೆ ಪ್ರಾಣಸಂಕಟ


Team Udayavani, Apr 13, 2018, 5:54 PM IST

ray-2.jpg

ಮಾನ್ವಿ: ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆ ಆಗರವಾಗಿದ್ದು, ದಲ್ಲಾಳಿಗಳು, ಖಾಸಗಿ ವ್ಯಕ್ತಿಗಳು ಆಡಿದ್ದೇ ಆಟವಾಗಿದ್ದು, ಇದರಿಂದ ವಿವಿಧ ಕೆಲಸ-ಕಾರ್ಯಗಳಿಗೆ ಆಗಮಿಸುವ ಜನರ ಕೆಲಸಗಳು ಸಕಾಲಕ್ಕೆ ಆಗದೇ ಪರದಾಡುವಂತಾಗಿದೆ.

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಯಾವುದೇ ವ್ಯವಸ್ಥೆ ಸರಿಯಾಗಿಲ್ಲ. ಕಚೇರಿಯಲ್ಲಿ ಸಾರ್ವಜನಿಕರ ಮಾಹಿತಿಗೆ ಯಾವುದೇ ಫಲಕಗಳನ್ನು ಹಾಕಿಲ್ಲ. ಇರುವ ಫಲಕವನ್ನೂ ಕೂಡ ಕೋಣೆಯೊಂದರ ಮೂಲೆಯಲ್ಲಿಡಲಾಗಿದೆ. ದೊರೆಯುವ ಸೇವೆಗಳಿಗೆ ಅನುಗುಣವಾಗಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದಿಲ್ಲ. ಸಾರ್ವಜನಿಕರು ನೋಂದಣಿಗೆ ನೀಡಿದ ದಾಖಲೆಪತ್ರಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡದೇ ಕೋಣೆ ಯೊಂದರಲ್ಲಿ ಎಲ್ಲೆಂದರಲ್ಲಿಡಲಾಗಿದೆ. ದಾಖಲೆಗಳ ರೂಮ್‌ನಲ್ಲಿ ಸಿಬ್ಬಂದಿ ಹೊರತುಪಡಿಸಿ ಖಾಸಗಿ ವ್ಯಕ್ತಿಗಳಿಗೆ ಪ್ರವೇಶ ನಿಷಿದ್ಧವಿದ್ದರೂ ದಲ್ಲಾಳಿಗಳು, ಪ್ರಭಾವಿ ಖಾಸಗಿ ವ್ಯಕ್ತಿಗಳು ತೆರಳುತ್ತಾರೆ. ಅವ್ಯವಸ್ಥೆಯ ಬಗ್ಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ದಲ್ಲಾಳಿಗಳ ಹಾವಳಿ: ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಮಿತಿ ಮೀರಿದೆ. ನೋಂದಣಿ ಕಾರ್ಯಕ್ಕೆ ನಿಗದಿತ ಶುಲ್ಕಕ್ಕಿಂತ ಹೆಚ್ಚು ವಸೂಲಿ ಮಾಡಲಾಗುತ್ತಿದೆ. 50 ರೂ.ನಿಂದ 250 ರೂ. ಶುಲ್ಕವಿರುವ ಸೇವೆಗಳಿಗೆ 500ರಿಂದ 2000 ರೂ.ವರೆಗೆ ಖರ್ಚು ಮಾಡಬೇಕಾಗುತ್ತಿದೆ. ನೇರವಾಗಿ ಸಾರ್ವಜನಿಕರು ಹೋದರೆ ಕೆಲಸ ಬೇಗ ಆಗುವುದಿಲ್ಲ. ಬಡವರು, ಅನಕ್ಷರಸ್ಥರು ಹಾಗು ರೈತರು ಹೋದರೆ ಕಚೇರಿಯಲ್ಲಿ ಎಲ್ಲೆಲ್ಲಿ ಏನು ನಡೆಯುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಮಧ್ಯವರ್ತಿಗಳ ಮೂಲಕ ತೆರಳಿದರೆ ಒಂದೇ ದಿನದಲ್ಲಿ ಕೆಲಸವಾಗುತ್ತದೆ. ಇದಕ್ಕಾಗಿ ದಲ್ಲಾಳಿಗಳಿಗೆ ಸಾವಿರಾರು ರೂ. ನೀಡಬೇಕು ಎಂಬ ಆರೋಪ ಕೇಳಿಬರುತ್ತಿವೆ. 

ಸೌಲಭ್ಯಗಳಿಲ್ಲ: ಕಚೇರಿಗೆ ಆಗಮಿಸುವ ಸಾರ್ವಜನಿಕರ ಬಳಕೆಗೆ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರು, ಪುರುಷರು ಮೂತ್ರ ವಿಸರ್ಜನೆಗೆ ಸುತ್ತಮುತ್ತಲಿನ ಜಾಲಿಗಿಡಗಳ ಮರೆಯನ್ನೆ ಅವಲಂಬಿಸಬೇಕಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಮಾಡಿಲ್ಲ. 

ಸಿಸಿ ಕ್ಯಾಮೆರಾಗಳಿಲ್ಲ: ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅವಳಡಿಸಿಲ್ಲ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಕಚೇರಿ ಅಧಿಕಾರಿಗಳೇ ಹಿಂದೇಟು ಹಾಕುತ್ತಿದ್ದಾರೆ. ಕಚೇರಿಯಲ್ಲಿ ಅನಧಿಕೃತ ವ್ಯಕ್ತಿಗಳು ಕಚೇರಿ ಸಿಬ್ಬಂದಿಯಂತೆ ಓಡಾಡಿಕೊಂಡು ರೈತರಿಗೆ, ಅನಕ್ಷರಸ್ಥರಿಗೆ ಮೋಸ ಮಾಡುತ್ತಿದ್ದಾರೆ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಖಾಸಗಿ ವ್ಯಕ್ತಿಗಳ ಬಣ್ಣ ಬಯಲಾಗುತ್ತದೆ. ದಲ್ಲಾಳಿಗಳ ಮೇಲೆ ನಿಗಾ ವಹಿಸಬೇಕು, 2008ರಿಂದ ಮಾನ್ವಿಯಲ್ಲಿರುವ ಉಪ ನೋಂದಣಾಧಿಕಾರಿ ಶಕೀಲ್‌ ಅಹ್ಮದ್‌ ಅವರನ್ನು ವರ್ಗಾವಣೆ ಮಾಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. 

ಒಟ್ಟಾರೆಯಾಗಿ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆ ಮಿತಿ ಮೀರಿದೆ. ದಲ್ಲಾಳಿಗಳ ಹಾಗೂ ಅನಧಿಕೃತ ವ್ಯಕ್ತಿಗಳ ದರಬಾರ್‌ ಹೆಚ್ಚಾಗಿದೆ. ಸರಿಯಾದ ಸೌಲಭ್ಯಗಳಿಲ್ಲದೆ ಸಾರ್ವಜನಿಕರು ಪರದಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಮೇಲಧಿಕಾರಿಗಳು ಇತ್ತ ಗಮನ ಹರಿಸಿ ಅವ್ಯವಸ್ಥೆ ಮತ್ತು ಅವ್ಯವಹಾರಕ್ಕೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಉಪ ನೋಂದಣಾಧಿಕಾರಿ ಶಕೀಲ್‌ ಅಹಮ್ಮದ್‌ ಆಗಮಿಸಿ ಈಗಾಗಲೇ 9 ವರ್ಷ ಕಳೆದಿದ್ದು, ವರ್ಗಾವಣೆ ನಿಯಮ ಉಲ್ಲಂಘನೆ ಮಾಡಲಾಗಿದೆ. ಚುನಾವಣೆ ನಿಮಿತ್ತ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆಡಿದ್ದರೂ, ಇವರನ್ನು ಮಾಡಿಲ್ಲ. ಅಲ್ಲದೆ ಉಪ ನೋಂದಣಾಧಿಕಾರಿ ಕಚೇರಿ ಅವ್ಯವಸ್ಥೆಯನ್ನು ಮೇಲಾಧಿಕಾರಿಗಳು ಸರಿಪಡಿಸಬೇಕು. ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು.
 ಬಸವರಾಜ ನಕ್ಕುಂದಿ. ದಲಿತ ಮುಖಂಡರು ಮಾನ್ವಿ

ಮಾನ್ವಿ ಉಪ ನೋಂದಣಿ ಅಧಿಕಾರಿ ಕಚೇರಿ ಅವ್ಯವಸ್ಥೆ ಕುರಿತು ಆರೋಪಗಳು ಕೇಳಿಬರುತ್ತಿರುವುದು ನಿಜ. ಯಾರಾದರೂ ದಾಖಲೆಗಳೊಂದಿಗೆ ಸೂಕ್ತ ದೂರು ನೀಡಿದಲ್ಲಿ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ.
 ಎಂ.ಜಿಂಗದ್‌, ಜಿಲ್ಲಾ ನೋಂದಣಿ ಅಧಿಕಾರಿ ರಾಯಚೂರು.

ದಲ್ಲಾಳಿಗಳು ಅಧಿಕ ಹಣ ಪಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ದೂರು ಬಂದಲ್ಲಿ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇನೆ. ವರ್ಗಾವಣೆಯಾದರೆ ಯಾವುದೇ ತಾಲೂಕಿಗೆ ಹೋಗಲು ಸಿದ್ದ.
 ಶಕೀಲ್‌ ಅಹಮ್ಮದ್‌, ಉಪನೋಂದಣಾಧಿಕಾರಿ ಮಾನ್ವಿ 

ಟಾಪ್ ನ್ಯೂಸ್

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆ

cm-bommai

ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ

4accident

ಚಿಕ್ಕಮಗಳೂರು: ಮದುವೆಗೆ ತೆರಳುತ್ತಿದ್ದ ಕಾರು ಪಲ್ಟಿ; ನಾಲ್ವರು ಪಾರು

3praksh

ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕಾಶ್ ಟ್ರಾವೆಲ್ಸ್ ಮಾಲೀಕ ಶವವಾಗಿ ಪತ್ತೆ

ಉಳ್ಳಾಲ: ಒಂದೇ ವಾಹನಕ್ಕೆ 16 ನೋಟಿಸ್‌ ನೀಡಿದ ಪೊಲೀಸರು!

ಉಳ್ಳಾಲ: ಒಂದೇ ವಾಹನಕ್ಕೆ 16 ನೋಟಿಸ್‌ ನೀಡಿದ ಪೊಲೀಸರು!

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

ಭಾರತ; 24ಗಂಟೆಯಲ್ಲಿ 3,06,064 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ 22 ಲಕ್ಷಕ್ಕೆ ಏರಿಕೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ

ಪರಿಶ್ರಮಿ ಅಜ್ಜಿ ಕಟ್ಟಿದ ಕಲ್ಲಿನ ಕೋಟೆ; ಕೆರ್ವಾಶೆಯ ಸುಲೋಚನಮ್ಮನ ವಿಸ್ಮಯಕಾರಿ ಸಾಹಸಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22power

ಪಂಪ್‌ಸೆಟ್‌ಗಳಿಗೆ ತ್ರಿಫೇಸ್‌ ವಿದ್ಯುತ್‌ ಪೂರೈಕೆಗೆ ಮನವಿ

21plastic

ಪ್ಲಾಸ್ಟಿಕ್‌ ಧ್ವಜ ಮಾರಾಟಕ್ಕೆ ಕಡಿವಾಣ ಹಾಕಲು ಒತ್ತಾಯ

18officers

ಮುಖ್ಯಾಧಿಕಾರಿ ಕಾರ್ಯವೈಖರಿಗೆ ಸದಸ್ಯರು ಗರಂ

17death

ಮಗನ ಕಿರಿಕಿರಿಗೆ ಬೇಸತ್ತು ಕೊಲೆಗೈದ ಕುಟುಂಬ

10kit

ಆಹಾರ ಧ್ಯಾನ ಕಿಟ್‌ಗಾಗಿ ದಿಢೀರ್‌ ಪ್ರತಿಭಟನೆ

MUST WATCH

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

udayavani youtube

ಹೆಣ ಸಾಗಿಸಲು ಹೆಣಗಾಟ..!| ಇದು ಹೊಳೆಕೂಡಿಗೆ ಗ್ರಾಮದ ಜನರ ನರಕದ ಬದುಕು

udayavani youtube

ಕತ್ತಲೆ ಬಸದಿಯ ಇತಿಹಾಸ

udayavani youtube

ತೊಕ್ಕೊಟ್ಟು : ಕಂಟೈನರ್ ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಬಾರಿ ಅನಾಹುತ

udayavani youtube

ತಪ್ಪಿಸುಕೊಳ್ಳಲು ಯತ್ನಿಸುವಾಗ ಕಟ್ಟಡದಿಂದ ಬಿದ್ದ ಕಳ್ಳ

ಹೊಸ ಸೇರ್ಪಡೆ

5leporied

ಚಿಕ್ಕಮಗಳೂರು:  ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ

ಜ.28 ಕ್ಕೆ ‘ಒಂಬತ್ತನೇ ದಿಕ್ಕು’ ರಿಲೀಸ್‌

ಜ.28 ಕ್ಕೆ ‘ಒಂಬತ್ತನೇ ದಿಕ್ಕು’ ರಿಲೀಸ್‌

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 600 ಅಂಕ ಕುಸಿತ: ಭಾರೀ ಕುಸಿತ ಕಂಡ ಜೊಮೊಟೋ ಷೇರು ಬೆಲೆ

cm-bommai

ವರಿಷ್ಠರು ಒಪ್ಪಿದರೆ ಸಂಪುಟ ವಿಸ್ತರಣೆ: ಸಿಎಂ ಬೊಮ್ಮಾಯಿ ಸ್ಪಷ್ಟ ನುಡಿ

ಫೆ. 11: ಶ್ರೀ ರಾಮಾಂಜನೇಯ-ಶಿವಪಂಚಾಕ್ಷರಿ ಯಕ್ಷಗಾನ ಪ್ರದರ್ಶನ

ಫೆ. 11: ಶ್ರೀ ರಾಮಾಂಜನೇಯ-ಶಿವಪಂಚಾಕ್ಷರಿ ಯಕ್ಷಗಾನ ಪ್ರದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.