ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ: ಶಾಸಕ ಪಾಟೀಲ

Team Udayavani, Jan 27, 2018, 4:42 PM IST

ಮಸ್ಕಿ: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದದು, ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್‌ ಹೇಳಿದರು. ಪಟ್ಟಣದ ಸರಕಾರಿ ಕೇಂದ್ರ ಶಾಲೆ ಆವರಣದಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಅಖಂಡತೆ ಉಳಿಸಿಕೊಳ್ಳಲು ನಾವು ಎಲ್ಲರೂ ಭಾರತೀಯರಾಗಿ ಸ್ವತಂತ್ರ ಪ್ರೇಮ ಬೆಳಸಿಕೊಳ್ಳಬೇಕು. ಯುವಕರು ದೇಶಪ್ರೇಮ ಬೆಳಸಿಕೊಳ್ಳುವ ಮೂಲಕ ಉತ್ತಮ ಅಭಿರುಚಿಯೊಂದಿಗೆ ದೇಶದ ಸತಪ್ರಜೆಗಳಾಗಬೇಕು ಎಂದು ಹೇಳಿದರು.  

ಮಸ್ಕಿ ತಾಲೂಕಿಗಾಗಿ 2003ರಲ್ಲಿ ಸುಮಾರು 58 ದಿನಗಳ ನಿರಂತರ ಹೋರಾಟದ ಫಲವಾಗಿ ಇಂದು ಮಸ್ಕಿ ಜನತೆಗೆ ಮರೆಯಲಾರದ ದಿನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಅವರು ಬಿಡುಗಡೆ ಮಾಡುವ ಮೂಲಕ ನೂತನ ತಾಲೂಕುಗಳನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ತಾಲೂಕಿಗೆ 142 ಗ್ರಾಮಗಳು ಒಳಪಡುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾಲೂಕು ರಚನೆ ಮಾಡಲಾಗಿದೆ. ಪಟ್ಟಣದಲ್ಲಿ 25 ಕೋಟಿ ರೂ. ವೆಚ್ಚದ ನೂತನ ಡಿಪ್ಲೋಮಾ ಕಾಲೇಜು ಮಂಜೂರಾಗಿದೆ.

ನೂತನ ತಾಲೂಕು ಕಚೇರಿ ಉದ್ಘಾಟನೆ: ಇದೇ ಸಂದರ್ಭದಲ್ಲಿ ಮಸ್ಕಿ ನೂತನ ತಾಲೂಕಿನ 25ಕ್ಕೂ ಹಚ್ಚು ಕಚೇರಿಗಳನ್ನು ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು.

 ತಹಶೀಲ್ದಾರ ಕಚೇರಿ ಉದ್ಘಾಟನೆ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಸಾಮರ್ಥ್ಯಸೌಧ ಕಟ್ಟಡದಲ್ಲಿ ಮಸ್ಕಿ ತಾಲೂಕು ನೂತನ ತಹಶೀಲ್ದಾರ  ರ್ಯಾಲಯವನ್ನು ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು. 

ತ್ರಿವರ್ಣ ನಡಿಗೆ: ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ ಕಚೇರಿಯಿಂದ ಹಳೇ ಬಸ್‌ನಿಲ್ದಾಣದವರೆಗೆ ಇಲ್ಲಿನ ಯುವ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ತ್ರಿವರ್ಣ ನಡಿಗೆ ಪಾದಯಾತ್ರೆಗೆ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು. ಯುವ ಕಾಂಗ್ರೆಸ್‌ ಅಧ್ಯಕ್ಷ ವೀರೇಶ ಕಮತರ, ಪ್ರಸನ್ನ ಪಾಟೀಲ, ವಿನಾಯಕ ಪಾಟೀಲ, ಚೇತನ ಪಾಟೀಲ, ಸಿದ್ದಣ್ಣ ಹೂವಿಬಾವಿ, ಮಲ್ಲಿಕಾರ್ಜುನ ಬ್ಯಾಳಿ, ಹುಸೇನ್‌ಬಾಷ, ಮಸೂದ್‌ ಪಾಶ,ರಿಯಾಜ್‌ ಶೇಡ್ಮಿ, ಶ್ರೀಧರ ಪಾಟೀಲ, ಅಜ್ಮಿರ್‌ ಇದ್ದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ