ದಿನೇದಿನೇ ಅನಾವರಣಗೊಳ್ಳುತ್ತಿದೆ ಬರದ ಕರಾಳಮುಖ

Team Udayavani, Aug 19, 2018, 12:01 PM IST

ray-1.jpg

ರಾಯಚೂರು: ಮಳೆರಾಯ ದಿನೇದಿನೇ ದೂರವಾಗುತ್ತಿದ್ದಂತೆ ಬರದ ಕರಾಳ ಮುಖ ಅನಾವರಣಗೊಳ್ಳುತ್ತಿದ್ದು, ಭೂಮಿಯನ್ನು ನಂಬಿದ ರೈತರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ನೆಲ ಪೈಗುಂಟೆ ಮಾಡಲು ಹಣವಿಲ್ಲದ ಸ್ಥಿತಿಯಲ್ಲಿ ಒಂದೇ ಕುಟುಂಬಸ್ಥರು ಎತ್ತುಗಳಂತೆ ಹೊಲ ಸಮತಟ್ಟು ಮಾಡುತ್ತಿರುವ ಮನಕಲುಕುವ ದೃಶ್ಯ ಜಿಲ್ಲೆಯಲ್ಲಿ ಜರುಗಿದೆ.

ತಾಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿ ಕೃಷಿ ಸಚಿವರು ಬರ ವೀಕ್ಷಣೆಗೆ ಬರುವ ಕೆಲವೆ ಘಳಿಗೆ ಮುನ್ನ ಇಂಥದ್ದೊಂದು ದೃಶ್ಯ ಕಂಡು ಬಂತು. ಇರುವ ಎರಡೂವರೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಕುಟುಂಬವೊಂದು ಎತ್ತುಗಳ ಬಾಡಿಗೆಗೆ ಹಣವಿಲ್ಲದೇ ತಾವೇ ಎತ್ತುಗಳಾಗಿ ಹೊಲ ಪೈಗುಂಟೆ ಮಾಡಿದರು. ಮಾಲೀಕ ನರಸಿಂಹಲು, ಆತನ ಅಣ್ಣನ ಮಗ ಮಹೇಶನೇ ಎರಡೆತ್ತುಗಳಾಗಿ ಸಿಮೆಂಟ್‌ ಶೀಟ್‌ನಲ್ಲಿ ಭಾರದ ಕಲ್ಲುಗಳನ್ನಿಟ್ಟು ಹೊಲ ಪೈಗುಂಟೆ ಮಾಡುತ್ತಿದ್ದರು. ಜೂನ್‌ನಲ್ಲಿ ಭತ್ತ ಮಾಡಿದ್ದ ಈ ರೈತರು 20 ಸಾವಿರ ಖರ್ಚು ಮಾಡಿದ್ದರು. ಆದರೆ, ಮಳೆ ಇಲ್ಲದೇ ಮೊಳಕೆ ಬರಲಿಲ್ಲ. ನಂತರ 2500 ಖರ್ಚು ಮಾಡಿ ಭೂಮಿ ಪೈಗುಂಟೆ ಮಾಡಿದರು.

ಆಗಲೂ ಪ್ರಯೋಜನವಾಗಿಲ್ಲ. ಟ್ರ್ಯಾಕ್ಟರ್‌ಗೆ ಗಂಟೆಗೆ 600 ರೂ. ಹಾಗೂ ಬಾಡಿಗೆ ಎತ್ತುಗಳಿಗೆ ದಿನಕ್ಕೆ 800 ರೂ. ನೀಡಬೇಕಿದೆ. ಅಷ್ಟು ಹಣ ನೀಡಲಾಗದೆ ತಾವೇ ದುಡಿಯುತ್ತಿದ್ದಾರೆ.  ಯಾಕೆ ಇಂಥ ಸ್ಥಿತಿ ಎಂದು ಪ್ರಶ್ನಿಸಿದರೆ, ನಮ್ಮದು ದೊಡ್ಡ ಕುಟುಂಬ. ಇರುವುದು ಎರಡೂವರೆ ಎಕರೆ ಜಮೀನು. ಎತ್ತುಗಳ ಕೂಲಿ, ಟ್ರ್ಯಾಕ್ಟರ್‌ ಬಾಡಿಗೆ ಕಟ್ಟುವಷ್ಟು ಶಕ್ತರಾಗಿಲ್ಲ. ಈಗಾಗಲೇ ಮೊದಲನೆ ಬಾರಿ ಭತ್ತ ಬಿತ್ತನೆ ಮಾಡಿ ಮೊಳಕೆ ಬಾರದ ಕಾರಣ ಎರಡನೇ ಬಾರಿಗೆ ಪೈಗುಂಟೆ ಮಾಡುತ್ತಿದ್ದೇವೆ. ಇಲ್ಲಿಗಾಗಲೇ ಅಂದಾಜು 40 ಸಾವಿರ ಖರ್ಚು ಮಾಡಿದ್ದೇವೆ. ಆದರೂ ಬೆಳೆ ಬರುತ್ತಿಲ್ಲ. ಹೀಗಾಗಿ ಹೊಲ ಸಮತಟ್ಟು ಮಾಡುವ ಮೂಲಕ ಬೆಳೆ ಉಳಿಸಿಕೊಳ್ಳುವ ಯತ್ನದಲ್ಲಿದ್ದೇವೆ ಎಂದು ವಿವರಿಸುತ್ತಾರೆ ರೈತ ನರಸಿಂಹಲು.

ಈ ಜಮೀನು ಕೂಡ ಅಜ್ಜಿ ಹೆಸರಿಲ್ಲಿದ್ದು, ಅವರ ಆಧಾರ್‌ ಕಾರ್ಡ್‌ ಇಲ್ಲ. ಇದರಿಂದ ಫಸಲ್‌ಬಿಮಾ ಯೋಜನೆಗೂ ನಾವು ಅನ್ವಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕಳೆದ ವರ್ಷ ಒಂದು ಲಕ್ಷ ರೂ. ಖರ್ಚು ಮಾಡಿ ಕಡಲೆ ಬಿತ್ತಿದರೆ ಸೂಕ್ತ ದರ ಸಿಗದೆ ಮಾಡಿದ್ದ ಖರ್ಚು ಕೂಡ ಸಿಗಲಿಲ್ಲ.
ಮನೆಯಲ್ಲಿ ಸಾಕಷ್ಟು ಜನರಿದ್ದು, ಮಹಿಳೆಯರಾದಿಯಾಗಿ ದುಡಿಯಲು ಗುಳೆ ಹೋಗಿದ್ದಾರೆ. ಇರುವಷ್ಟು ಭೂಮಿ ಉಳುಮೆ ಮಾಡುವ ಎಂದರೆ ವರುಣ ಅವಕೃಪೆ ಬಾಧಿಸುತ್ತಿದೆ. ನಮ್ಮಂಥ ಕಷ್ಟ ಶತ್ರುಗಳಿಗೂ ಬಾರದಿರಲಿ ಎನ್ನುತ್ತಾರೆ ರೈತ ಶಂಕ್ರಪ್ಪ.

ಟಾಪ್ ನ್ಯೂಸ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.