ರಾಸಲೀಲೆ ವೀಡಿಯೋ ವೈರಲ್: ಶಿಕ್ಷಕನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ
Team Udayavani, Jul 2, 2022, 11:50 PM IST
ಸಿಂಧನೂರು: ಮಹಿಳೆಯೊಂದಿಗಿನ ಲೈಂಗಿಕ ಕೃತ್ಯದ ವೀಡಿಯೋವನ್ನು ಚಿತ್ರೀಕರಿಸಿಕೊಂಡು ವೈರಲ್ ಮಾಡಿರುವ ಆರೋಪದಲ್ಲಿ ಸಹಶಿಕ್ಷಕ ಮೊಹಮ್ಮದ್ ಅಜರುದ್ದೀನ್ ಎಂಬಾತನನ್ನು ಅಮಾನತುಗೊಳಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ.
ತಾಲೂಕಿನ ಸಿಂಗಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿದ್ದ ಈತ ಮಹಿಳೆಯೊಬ್ಬರೊಂದಿಗೆ ನಡೆಸಿರುವ ರಾಸಲೀಲೆ ವೀಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಬಿಇಒ ಶರಣಪ್ಪ ವಟಗಲ್ ಸಲ್ಲಿಸಿದ ವರದಿ ಆಧರಿಸಿ ಡಿಡಿಪಿಐ ಅಮಾನತು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ
ಸಿಂಗಾಪುರದ ಸರಕಾರಿ ಶಾಲೆಯಲ್ಲಿ ಸಹಶಿಕ್ಷಕನಾಗಿದ್ದ ಮೊಹಮ್ಮದ್ ಅಜರು ದ್ದೀನ್, ಗೃಹಿಣಿಯೊಬ್ಬರ ಜತೆಗೆ ನಡೆಸಿದ್ದ ರಾಸಲೀಲೆ ವೀಡಿಯೋ 2-3 ದಿನಗಳ ಹಿಂದೆ ವೈರಲ್ ಆಗಿತ್ತು. ಕೂಡಲೇ ಗ್ರಾಮಸ್ಥರು ಶನಿವಾರ ಶಾಲೆ ಎದುರು ಜಮಾಯಿಸಿ, ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.
ಮತಾಂತರಕ್ಕೆ ಒತ್ತಡ
ಕಾರಟಗಿಯ ಸಂತ್ರಸ್ತೆಯು ಶಿಕ್ಷಕನ ವಿರುದ್ಧ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ನನ್ನ ಪುತ್ರಿ ಅಂಗವಿಕಲೆಯಾಗಿರುವ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಣ ಕೊಡಿಸುವ ನೆಪದಲ್ಲಿ ನನ್ನನ್ನು ನಂಬಿಸಿ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ. ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಹೆಚ್ಚಿನ ಸವಲತ್ತು ಕೊಡಿಸುವುದಾಗಿ ತಿಳಿಸಿದ್ದ. ಇದಕ್ಕೆ ಒಪ್ಪದಿದ್ದಾಗ ಲೈಂಗಿಕ ಕ್ರಿಯೆಯ ವೀಡಿಯೋವನ್ನು ವೈರಲ್ ಮಾಡಿದ್ದಾನೆ ಎಂದು ದೂರಿದ್ದಾರೆ.