ಓದು ಕರ್ನಾಟಕದಲ್ಲಿ “ಹಳ್ಳಿ’ ಹಿರಿಮೆ

Team Udayavani, Feb 27, 2022, 3:22 PM IST

17village

ಸಿಂಧನೂರು: ಹಳ್ಳಿ ಮನೆ, ಹಳ್ಳಿ ಹೋಟೆಲ್‌, ಜೋಪಡಿಯ ಊಟ ಬೆನ್ನತ್ತಿ ಹೋಗುತ್ತಿರುವ ಆಧುನಿಕ ದಿನಗಳಲ್ಲಿ ಅಪ್ಪಟ ಹಳ್ಳಿಯನ್ನೇ ಇಲ್ಲಿನ ವಿದ್ಯಾರ್ಥಿಗಳು ಶಾಲೆ ಆವರಣಕ್ಕೆ ತರುವ ಮೂಲಕ ಹಳ್ಳಿಯ ಹಿರಿಮೆ ಸಾರಿದ್ದಾರೆ.

ತಾಲೂಕಿನ ಗೋಮರ್ಸಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಕ್ಷರಶಃ ಆವರಣದಲ್ಲೇ ಹಳ್ಳಿ ಪರಂಪರೆ ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಸಮೃದ್ಧ ಪರಂಪರೆಗೆ ಸಾಕ್ಷಿಯಾದ ಹಳ್ಳಿಗಳಲ್ಲಿನ ಜೀವನ ಶೈಲಿಯನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸುವ ಓದು ಕರ್ನಾಟಕ ಕಾರ್ಯಕ್ರಮಕ್ಕೆ ಹೊಸ ಮೆರುಗು ತರಲಾಗಿದೆ. ಹಳ್ಳಿಯಲ್ಲಿ ಬಳಕೆಯಾಗುವ ಕೃಷಿ ಉಪಕರಣ, ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿರುವ ವಸ್ತುಗಳನ್ನು ತಿಳಿಸುವ ಪ್ರಯತ್ನ ಗಮನ ಸೆಳೆದಿದೆ.

ಆವರಣದಲ್ಲೇ ಹಳ್ಳಿ

ನೂರು ದಿನದ ಓದು ಅಭಿಯಾನದಲ್ಲಿ ಗುಂಪು ಚಟುವಟಿಕೆ ಕಾರ್ಯಕ್ರಮದಲ್ಲಿ ಮಕ್ಕಳು ಜಾನಪದ ಉಡುಗೆ-ತೊಡುಗೆ, ಹಳ್ಳಿಯ ಸೊಗಡಿನ ವಿವಿಧ ವೇಷಭೂಷಣದೊಂದಿಗೆ ಆಗಮಿಸಿದ್ದರು. ಹಳ್ಳಿಗರ ವೃತ್ತಿ ಜೀವನಕ್ಕೆ ಸಂಬಂ ಧಿಸಿದ ಕಸುಬು-ಉಪಕಸುಬುಗಳನ್ನು, ನಿತ್ಯದ ಜೀವನ ಶೈಲಿಯನ್ನು ಪ್ರತಿಬಿಂಬಿಸಿದರು. ಹೈನುಗಾರಿಕೆ, ಕುರಿ ಸಾಕಣಿಕೆ, ಕೃಷಿ ಚಟುವಟಿಕೆ, ಒಲೆಯ ಮೇಲೆ ಅಡುಗೆ ಸೇರಿದಂತೆ ಎಲ್ಲ ವಿಧದ ಚಟುವಟಿಕೆಗಳನ್ನು ತೋರಿಸಿದರು. ಓದು ಕರ್ನಾಟಕ ನೂರು ದಿನದ ಅಭಿಯಾನವನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಂಡರು. ಮನೆಯಲ್ಲಿ ಅಡುಗೆ ಮಾಡುವ ಪದ್ಧತಿ, ಒಣಕೆ, ರುಬ್ಬಗುಂಡು, ಅಡುಗೆ ಬೇಯಿಸುವ ಒಲೆ, ಮರಗಳಲ್ಲಿ ದವಸ, ಧಾನ್ಯ ಹಸನಗೊಳಿಸುವಿಕೆ, ಕುರಿ, ಮೇಕೆ ಸಾಕಣಿಕೆಯ ರೀತಿಯನ್ನು ವಿದ್ಯಾರ್ಥಿಗಳೇ ಪರಿಚಯಿಸಲು ಮುಂದಾಗಿದ್ದರಿಂದ ಸರಕಾರಿ ಶಾಲೆ ಆವರಣದಲ್ಲೇ ಒಂದು ಹಳ್ಳಿ ತಲೆದೋರಿದಂತಾಗಿತ್ತು.

ಹಳ್ಳಿಗರಲ್ಲಿ ಹರ್ಷ

ಕೃಷಿ ಕೂಲಿಕಾರ್ಮಿಕರು, ರೈತರ ಮಕ್ಕಳನ್ನು ಗೌರವಿಸುವುದರ ಜೊತೆಗೆ ಅವರ ಕೌಟುಂಬಿಕ ಹಿನ್ನೆಲೆ, ಪರಂಪರೆಯನ್ನು ಪ್ರೋತ್ಸಾಹಿಸುವ ಪ್ರಯತ್ನವೂ ನಡೆಯಿತು. ಸೀರೆ ತೊಟ್ಟುಕೊಂಡು ಬಂದಿದ್ದ ಪುಟ್ಟ ಕಂದಮ್ಮಗಳು, ರೈತನ ವೇಷದಲ್ಲಿ ಆಗಮಿಸಿದ್ದ ಚಿಣ್ಣರು ಇಡೀ ಆವರಣವನ್ನು ಕಳೆಗಟ್ಟಿದರು. ಎಲ್ಲರೂ ಕೂಡ ಒಂದೊಂದು ಬಗೆಯಲ್ಲಿ ತಮ್ಮ ಪ್ರತಿಭೆ ಪರಿಚಯಿಸಲು ಮುಂದಾಗಿದ್ದರಿಂದ ಹಳ್ಳಿ ಜೀವನವೇ ಹಾಸುಹೊಕ್ಕಾದ ರೀತಿ ಓದು ಕರ್ನಾಟಕ ಅಭಿಯಾನಕ್ಕೆ ವಿದ್ಯಾರ್ಥಿಗಳು ಕಳೆತಂದರು.

ಯಾಂತ್ರೀಕತೆಗೆ ಪ್ರತ್ಯುತ್ತರವಾದ ಪ್ರಯೋಗ

ಅಚ್ಚರಿ ಎಂದರೆ, ನಿತ್ಯವೂ ಅಪ್ಪ, ಅಮ್ಮ, ಪಾಲಕರು ಮಾಡುತ್ತಿದ್ದ ಕೆಲಸವನ್ನೇ ಶಾಲೆ ಆವರಣದಲ್ಲಿ ಮಾಡಲು ಮುಂದಾದ ವಿದ್ಯಾರ್ಥಿಗಳ ಮುಖದಲ್ಲಿ ಅತ್ಯುತ್ಸಾಹ ಇತ್ತು. ಇದನ್ನು ಪ್ರೋತ್ಸಾಹಿಸಲು ಶಿಕ್ಷಕರೇ ಮುಂದೆ ನಿಂತಿದ್ದರಿಂದ ಅವರ ಹುರುಪು ಮತ್ತಷ್ಟೂ ಇಮ್ಮಡಿಸಿತು. ಕುರಿ, ಜಾನುವಾರು ಸಾಕಣಿಕೆ, ಮನೆಯಲ್ಲಿ ದವಸಧಾನ್ಯ ಶುಚಿಗೊಳಿಸುವಿಕೆ ಸೇರಿದಂತೆ ಇತರ ಚಟುವಟಿಕೆಯನ್ನು ಯಂತ್ರಗಳ ಸಹಾಯವಿಲ್ಲದೇ ಬದುಕು ನಡೆಸಬಹುದು ಎಂಬುವುದನ್ನು ಇಲ್ಲಿನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಸಹಜವಾಗಿಯೇ ಈ ಪ್ರಯೋಗ ತಾಲೂಕಿನಲ್ಲಿ ಗಮನ ಸೆಳೆದಿದ್ದು, ಇತರ ಶಾಲೆಗಳಲ್ಲೂ ಈ ಮಾದರಿಯನ್ನು ಅನುರಿಸಲಾಗುತ್ತಿದೆ.

ಶಿಕ್ಷಕರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಎಲ್ಲ ಪಾಲಕರು ಸಹಕಾರ ನೀಡಿದ್ದರಿಂದ ಒಟ್ಟುಗೂಡಿ ಕಾರ್ಯಕ್ರಮ ನಡೆಸಲಾಗಿದೆ. ಹಳ್ಳಿಯ ಜೀವನ ನಮಗೂ, ಮಕ್ಕಳಿಗೂ ಹೊಸತಲ್ಲ. ಅದನ್ನು ಅಚ್ಚುಕಟ್ಟಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಕರ ಪ್ರಯತ್ನ ಖುಷಿ ಕೊಟ್ಟಿದೆ. -ಸುಖಮುನಿ, ಅಧ್ಯಕ್ಷರು, ಶಾಲಾ ಮೇಲಸ್ತುವಾರಿ ಸಮಿತಿ, ಸರಕಾರಿ ಶಾಲೆ ಗೋಮರ್ಸಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-maski

Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

Raichur; ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ನಾಮಪತ್ರ ಸಲ್ಲಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.