ಕಾಮಗಾರಿ ಬಿಲ್ ಪಾವತಿ ವಿಳಂಬ ಬೇಡ
ಇದೇ ಸ್ಥಿತಿ ಮುಂದುವರಿದಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು.
Team Udayavani, Jan 18, 2021, 6:44 PM IST
ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲೆಯಲ್ಲಿ ಕೈಗೊಂಡ 122 ಕಾಮಗಾರಿಗಳು ಮುಗಿದಿದ್ದರೂ ಅವುಗಳ ಆರ್ಥಿಕ ಪ್ರಗತಿ ಸಾ ಧಿಸಿರುವುದಿಲ್ಲ. ಕೂಡಲೇ ಬಿಲ್ ಪಾವತಿಗೆ ಕ್ರಮ ವಹಿಸುವಂತೆ ಜಿಲ್ಲಾ ಧಿಕಾರಿ ಆರ್. ವೆಂಕಟೇಶಕುಮಾರ್ ಸೂಚಿಸಿದರು. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ವ್ಯಾಪ್ತಿಯಡಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿ ಯೊಳಗೆ ಮುಗಿಸುವುದಲ್ಲದೇ ಭೌತಿಕ ಹಾಗೂ ಆರ್ಥಿಕ ಪ್ರಗತಿ ಮಾಹಿತಿ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಬೇಕು. ಕಾಮಗಾರಿ ಮುಗಿದ ಕೂಡಲೇ ವಿಳಂಬ ಮಾಡದೇ ಬಿಲ್ ಪಾವತಿಸಿ ಸಂಬಂ ಧಿಸಿದವರಿಗೆ ಕಾಮಗಾರಿ ಹಸ್ತಾಂತರಿಸಬೇಕು ಎಂದರು.
ಕೆಕೆಆರ್‌ಡಿಬಿ ಅನುದಾನದಡಿ ಈವರೆಗೆ ಜಿಲ್ಲೆಯಲ್ಲಿ ಆಗಿರುವ ಕಾಮಗಾರಿಗಳ ಪ್ರಗತಿ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಲಬುರಗಿ ಪ್ರಾದೇಶಿಕ ಆಯುಕ್ತರು ಪರಿಶೀಲನೆ ನಡೆಸಿ, ಕಾಮಗಾರಿಗಳ ನಿಗಾ ವಹಿಸುವರು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಕೆಕೆಆರ್‌ಡಿಬಿಯಡಿ ಅನುದಾನದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಮಗಾರಿ ನಿರ್ವಹಿಸುತ್ತಿರುವುದು ಲೋಕೋಪಯೋಗಿ ಇಲಾಖೆ, ಕಳೆದೆರಡು ತಿಂಗಳಿಂದ ಕಾಮಗಾರಿಗಳು ಕುಂಠಿತವಾಗಿವೆ. ಕೂಡಲೇ ಅವುಗಳನ್ನು ಮುಗಿಸಬೇಕು ಎಂದರು.
ಮಾನವಿ ತಾಲೂಕಿನಲ್ಲಿ ಕಾಮಗಾರಿಗಳು ತೀರ ಕುಂಠಿತಗೊಂಡಿವೆ. ಅಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ಇದೇ ಸ್ಥಿತಿ ಮುಂದುವರಿದಲ್ಲಿ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು. ಜಿಲ್ಲೆಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದಲ್ಲಿ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋ ದನೆ ನೀಡಿದ್ದು, ಆಡಳಿತಾತ್ಮಕ ಮಂಜೂರಾತಿಗಾಗಿ ಜಿಲ್ಲಾ ಧಿಕಾರಿಗಳು ಹಾಗೂ ಜಿಪಂ ಸಿಇಒ ಅವರಿಗೆ ಸಲ್ಲಿಸುವಂತೆ ಇಇ ಗಣಪತಿ ಸಾಕರೆ ಅವರಿಗೆ ತಿಳಿಸಿದರು.
ಕಳೆದೆರಡು ತಿಂಗಳಿಂದ ಕೆಆರ್‌ಐಡಿಎಲ್ ಯಿಂದ ನಿರ್ವಹಿಸುವ ಕಾಮಗಾರಿಗಳ ಪ್ರಗತಿ ಕಡಿಮೆಯಾಗಿದ್ದು, ಕೂಡಲೇ ಅದನ್ನು ಕೈಗೊಳ್ಳಬೇಕು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ವಹಣೆ ಕಾರ್ಯ ಮುಗಿಸಿ, ಅನುದಾನ ಖರ್ಚು ಮಾಡುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ತ್ಯಾಗಿ ತುಕಾರಾಂ ಅವರಿಗೆ ಹೇಳಿದರು.
ಕ್ಯಾಷುಟೆಕ್‌ನಿಂದ ಪ್ರಗತಿ ಸಾಧಿ ಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಅಲ್ಪ ಕುಸಿದಿದ್ದು, ಅದನ್ನು ಈ ತಿಂಗಳಲ್ಲಿ ಸರಿದೂಗಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿ ಶರಣಪ್ಪ ಪಟ್ಟೇದ್ ಅವರಿಗೆ ತಿಳಿಸಿದರು. ಈ ವೇಳೆ ಎಡಿಸಿ ಕೆ.ಎಚ್. ದುರುಗೇಶ್, ಜಿಪಂ ಮುಖ್ಯ ಯೋಜನಾಧಿಕಾರಿ ಡಾ| ಟಿ. ರೋಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ| ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ| ಬಸವರಾಜ ಪೀರಾಪುರೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021
ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ
ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21
ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್
ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ
ಹೊಸ ಸೇರ್ಪಡೆ
ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯಾಗಿ ದೊರಕಲಿದ್ದಾಳೆ
ತೀರಲಿ ಜನರ ಸಂಕಷ್ಟ : ಇಂದು ಬಿಎಸ್ವೈ 8ನೇ ಬಜೆಟ್
ಗಡಿ ಕಾವಲಿಗೆ ಉಪಗ್ರಹದ ಬಲ : ಮಾ.28ರಂದು ಇಸ್ರೋದಿಂದ ಗೇಮ್ಚೇಂಜರ್ ಉಪಗ್ರಹ ಉಡಾವಣೆ
ಸಿ.ಡಿ. ಲೇಡಿಯ ಮಾಹಿತಿ ಪೊಲೀಸರಿಗೆ ಲಭ್ಯ : ಯುವತಿಯ ಪತ್ತೆಗೆ ಬಲೆ ಬಿಸಿದ ಪೊಲೀಸರು
ಇಂದು ರಾಜ್ಯ ಬಜೆಟ್: ಸಿಎಂ ಪಾಲಿಗೆ ಹಗ್ಗದ ಮೇಲಿನ ನಡಿಗೆ