ಸಾವಿರ ಚೀಲ ಅನ್ನಭಾಗ್ಯ ಅಕ್ಕಿ, 20 ಚೀಲ ಗೋಧಿ ವಶ
Team Udayavani, Sep 19, 2018, 6:00 AM IST
ಗೊರೇಬಾಳ (ರಾಯಚೂರು): ಅನ್ನಭಾಗ್ಯ ಯೋಜನೆಗೆ ಸೇರಿದ ಸುಮಾರು 12.50 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಜಿಲ್ಲಾ ಉಪನಿರ್ದೇಶಕ ಎನ್.ಅಮರಣ್ಣ ವಶಪಡಿಸಿಕೊಂಡಿದ್ದಾರೆ. ಗಂಗಾವತಿ ರಸ್ತೆಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎಂ.ವೆಂಕಟ ಸುರೇಂದ್ರ ಎನ್ನುವವರಿಗೆ ಸೇರಿದ ರಾಮಕೃಷ್ಣ ಖಾಸಗಿ ಗೋದಾಮಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆಗೆ ಸೇರಿದ 1 ಸಾವಿರ ಚೀಲ ಅಕ್ಕಿ, 20 ಚೀಲ ಗೋಧಿ, 6 ಚೀಲ ತೊಗರಿ ಸಂಗ್ರಹಿಸಲಾಗಿತ್ತು.
ಈ ಬಗ್ಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ದೂರು ನೀಡಿದ್ದು ಆಹಾರ ಇಲಾಖೆ ಉಪನಿರ್ದೇಶಕ ಎನ್. ಅಮರಣ್ಣ ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ ಗೋದಾಮಿನಲ್ಲಿದ್ದ ಅಕ್ಕಿ, ಗೋಧಿ ಹಾಗೂ ತೊಗರಿಯನ್ನು ವಶಪಡಿಸಿ ಕೊಂಡು ಸರ್ಕಾರಿ ಗೋದಾಮಿಗೆ ಸ್ಥಳಾಂತರಿಸಿದ್ದಾರೆ. ನಂತರ
ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೀಸಲಾತಿ ತೆಗೆಯಲು ಕೇಂದ್ರ ಹುನ್ನಾರ ಮಾಡುತ್ತಿದೆ : ಯು.ಟಿ ಖಾದರ್
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ ಪ್ರದಾನ
ನನ್ನ ಬಳಿ ಯಾವುದೇ ಗಣ್ಯರ ಲೈಂಗಿಕ ಹಗರಣದ ಸಿಡಿ ಇಲ್ಲ: ಮುಲಾಲಿ
ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ
HDK ಮಾಡಿದ 5 ಕೋಟಿ ಡೀಲ್ ಆರೋಪದಿಂದ ನೊಂದು ದೂರು ವಾಪಸ್ ಪಡೆದಿದ್ದೇನೆ: ದಿನೇಶ್ ಕಲ್ಲಹಳ್ಳಿ