ಟ್ರಾಫಿಕ್‌ ಕಿರಿಕಿರಿ: ನಿಲ್ಲದ ಪ್ರಯಾಣಿಕರ ಯಾತನೆ  

ನಗರದಲ್ಲಿ ಜಾರಿಯಾಗದ ರಸ್ತೆ ಸಂಚಾರ ನಿಯಮ­ಪಾಲನೆಯಾಗದ ಒನ್‌ಸೈಡ್‌ ಪಾರ್ಕಿಂಗ್‌ ಆದೇಶ

Team Udayavani, Mar 7, 2021, 5:34 PM IST

Traffic

ರಾಯಚೂರು: ನಗರವನ್ನು ಟ್ರಾಫಿಕ್‌ ಫ್ರೀ ಮಾಡಬೇಕು ಎಂದು ಹಿಂದೆಯೇ ಯೋಜನೆ ರೂಪಿಸಿದ್ದ ನೀಲನಕ್ಷೆ ಜಾರಿಯಾಗದೆ ಧೂಳು ತಿನ್ನುತ್ತಿದೆ. ಇತ್ತ ಪ್ರಯಾಣಿಕರು ಕೂಡ ಟ್ರಾಫಿಕ್‌ ಸಮಸ್ಯೆಯಿಂದ ಯಾತನೆ ಅನುಭವಿಸುವುದು ತಪ್ಪುತ್ತಿಲ್ಲ.

ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್‌ ಸಮಸ್ಯೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಒನ್‌ ಸೈಡ್‌ ಪಾರ್ಕಿಂಗ್‌ ಪದ್ಧತಿ ಕಟ್ಟುನಿಟ್ಟಾಗಿ ಜಾರಿಯಾಗುತ್ತಲೇ ಇಲ್ಲ. ಜನ ಬೇಕಾಬಿಟ್ಟಿಯಾಗಿ ವಾಹನ ನಿಲುಗಡೆ ಮಾಡುತ್ತಿದ್ದು, ಓಡಾಡುವುದೇ ದುಸ್ಸಾಹಸ ಎನ್ನುವಂತಾಗಿದೆ.

ನಗರದ ಹೃದಯ ಭಾಗವಾದ ತಹಸೀಲ್‌ ಕಚೇರಿ ಬಳಿಯೇ ಬೇಕಾಬಿಟ್ಟಿ ಪಾರ್ಕಿಂಗ್‌ ಆಗುತ್ತಿದೆ. ನಗರಸಭೆ ಕಚೇರಿ, ತಹಸೀಲ್‌ ಕಚೇರಿ, ತಾಲೂಕು ಪಂಚಾಯಿತಿ, ಡಿಡಿಪಿಐ ಕಚೇರಿ, ಕರ್ನಾಟಕ ಒನ್‌ ಕಚೇರಿ, ಕೇಂದ್ರ ಅಂಚೆ ಕಚೇರಿ, ಸರ್ಕಾರಿ ಕಾಲೇಜ್‌ ಇಲ್ಲೇ ಇರುವುದರಿಂದ ನಿತ್ಯ ಜನ ಸಂಚಾರ ಹೆಚ್ಚಾಗಿರುತ್ತದೆ. ಅದರ ಜತೆಗೆ ಡಿಸಿ ಕಚೇರಿಗೆ ತೆರಳುವ ರಸ್ತೆ ಕಾಮಗಾರಿ ನಡೆದ ಕಾರಣ ಆ ಮಾರ್ಗವನ್ನು ಬಂದ್‌ ಮಾಡಿರುವುದು ವಾಹನ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ. ಇಲ್ಲಿ ಒನ್‌ ಸೈಡ್‌ ಪಾರ್ಕಿಂಗ್‌ ಮಾಡಬೇಕು ಎಂಬ ನಿಯಮ ಜಾರಿ ಮಾಡಿದರೂ ಜನ ಮಾತ್ರ ಕ್ಯಾರೇ ಎನ್ನದೆ ಎರಡು ಕಡೆ ವಾಹನ ನಿಲ್ಲಿಸುತ್ತಾರೆ. ಇದನ್ನು ಕೇಳಬೇಕಾದ ಪೊಲೀಸರು ಮೌನಕ್ಕೆ ಶರಣಾಗಿದ್ದಾರೆ. ಕಚೇರಿ ಕೆಲಸಕ್ಕೆ ಹೋದವರು ಗಂಟೆಗಟ್ಟಲೇ ಕಚೇರಿಯಲ್ಲೇ ಉಳಿಯಬೇಕಾಗುತ್ತದೆ.  ಇದರಿಂದ ಮುಂಚೆ ನಿಲ್ಲಿಸಿದ ವಾಹನಗಳ ಹಿಂದೆಯೇ ಮತ್ತೆ ವಾಹನ ನಿಲ್ಲಿಸುತ್ತಾರೆ. ಅವೈಜ್ಞಾನಿ ನಡೆಯಿಂದ ಜನರಿಗೆ ಮಾತ್ರ ತಾಪತ್ರಯ ತಪ್ಪುತ್ತಿಲ್ಲ.

ನನೆಗುದಿಗೆ ಬಿದ್ದ ಯೋಜನೆ: ನಗರದಲ್ಲಿ ವ್ಯವಸ್ಥಿತವಾದ ಟ್ರಾಫಿಕ್‌ ಪದ್ಧತಿ ಜಾರಿಗೊಳಿಸಲು ವಿಶೇಷ ಯೋಜನೆ ರೂಪಿಸಲಾಗಿತ್ತು. ಪಾರ್ಕಿಂಗ್‌, ಒನ್‌ ವೇ ಪದ್ಧತಿ, ಭಾರಿ ವಾಹನ ನಿಷೇಧ ಸೇರಿದಂತೆ ಕೆಲವೊಂದು ನಿಯಮಗಳು ಒಳಗೊಂಡ ವಿಸ್ತೃತ ವರದಿ ತಯಾರಿಸಲಾಗಿತ್ತು. ಆದರೆ, ಅದನ್ನು ಜಾರಿ ಮಾಡುವುದಾಗಿ ಹಿಂದಿನ ಎಸ್‌ಪಿ ತಿಳಿಸಿದ್ದರೂ ಈವರೆಗೂ ಜಾರಿಯಾಗಿಲ್ಲ. ನಗರದಲ್ಲಿ ದಿನೇದಿನೇ ವಾಹನ ದಟ್ಟಣೆ ಹೆಚ್ಚುತ್ತಿದ್ದರೂ ಇನ್ನೂ ಹಳೇ ಪದ್ಧತಿಯಲ್ಲೇ ಟ್ರಾಫಿಕ್‌ ನಿಯಮಗಳ ಜಾರಿ ಮಾಡುವುದು ಸಮಸ್ಯೆಗೆ ಕಾರಣವಾಗುತ್ತಿದೆ ಎಂಬುದು ಜನರ ಆರೋಪ.

ಸೂಚನಾ ಫಲಕಗಳೇ ಇಲ್ಲ: ಒನ್‌ ಸೈಡ್‌ ಪಾರ್ಕಿಂಗ್‌ ಜಾರಿ ಮಾಡಿದ ಅಧಿಕಾರಿಗಳು ಅದಕ್ಕೆ ಸಂಬಂಧಿಸಿದ ಸೂಕ್ತ ಸೂಚನಾ ಫಲಕಗಳನ್ನು ಹಾಕಿಲ್ಲ. ಜನ ಗೊತ್ತಿಲ್ಲದೇ ವಾಹನ ನಿಲ್ಲಿಸಿ ಹೋದಲ್ಲಿ ಪೊಲೀಸರು ಆಕ್ಷೇಪಣೆ ಮಾಡುತ್ತಾರೆ ಎಂದು ಜನ ದೂರುತ್ತಾರೆ. ಈ ರೀತಿ ಗೊತ್ತಿಲ್ಲದೇ ಸಾಕಷ್ಟು ಜನ ಬಂದು ದಂಡ ಕಟ್ಟಿದ ನಿದರ್ಶನಗಳಿವೆ. ಎರಡು ಬದಿ ಸಾಕಷ್ಟು ವಾಹನಗಳು ನಿಂತಾಗ ಜನರಿಗೂ ಗೊಂದಲವಾಗುತ್ತಿದೆ. ಯಾವ ಕಡೆ ನಿಲ್ಲಿಸಬೇಕು ಎಂಬುದು ಗೊತ್ತಾಗದಂತಾಗಿದೆ.

ಟಾಪ್ ನ್ಯೂಸ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್‌ ಕಾಸ್ಟಿಂಗ್‌ ಜಾರಿಯಾಗಲಿ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

13-sister

Elder Sister: ಅಕ್ಕ ಅನ್ನೋ ಮಾತೃ ಸ್ವರೂಪಿಣಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.