Udayavni Special

ವಟಗಲ್‌ ಏತ ನೀರಾವರಿ ಜಾರಿಗೆ ಹೋರಾಟ

ಈ ಪ್ರಕ್ರಿಯೆಯನ್ನು ಬೇಗ ಮುಗಿಸಿ ರೈತರ ಜಮೀನಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Team Udayavani, Feb 5, 2021, 4:11 PM IST

ವಟಗಲ್‌ ಏತ ನೀರಾವರಿ ಜಾರಿಗೆ ಹೋರಾಟ

ರಾಯಚೂರು: ಮಸ್ಕಿ ಕ್ಷೇತ್ರದ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು ಎಂದು
ಆಗ್ರಹಿಸಿ ವಟಗಲ್‌ ಬಸವೇಶ್ವರ ಏತ ನೀರಾವರಿ ಹೋರಾಟ ಸಮಿತಿ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಸಿತು.

ನಗರದ ರಂಗಮಂದಿರದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಬಳಿಕ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ
ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ದುರಗೇಶ ಆಗಮಿಸಿದಾಗ ಒಪ್ಪದ ಪ್ರತಿಭಟನಾಕಾರರು, ಸ್ಥಳಕ್ಕೆ ಜಿಲ್ಲಾಧಿಕಾರಿಯೇ
ಬರಲಿ ಎಂದು ಪಟ್ಟು ಹಿಡಿದರು. ಪೊಲೀಸರು ಮನವೊಲಿಸಲು ಮುಂದಾದರೂ ಕೇಳದೆ ಧರಣಿ ಕುಳಿತು ಘೋಷಣೆ ಕೂಗಿದರು.

ಮಸ್ಕಿ ಕ್ಷೇತ್ರದ ಅಮಿನಘಡ, ಪಾಮನಕಲ್ಲೂರು, ವಟಗಲ್‌ ಮತ್ತು ಅಂಕುಶದೊಡ್ಡಿ ಗ್ರಾಮ ವ್ಯಾಪ್ತಿಯ ಸುಮಾರು 24 ಹಳ್ಳಿಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಅಕ್ಕಪಕ್ಕದಲ್ಲಿ ತುಂಗಭದ್ರಾ, ಕೃಷ್ಣ ನದಿಗಳು ಹರಿಯುತ್ತಿದ್ದರೂ ನೀರಾವರಿ ಸೌಲಭ್ಯದಿಂದ ವಂಚಿತವಾಗಿದ್ದೇವೆ. ಸತತ ಬರಕ್ಕೆ ತುತ್ತಾಗಿ ಈ ಭಾಗದ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂಥ ವೇಳೆ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆ ರೈತರಿಗೆ ಅನುಕೂಲವಾಗಲಿದ್ದು, ಯಾವುದೇ ಕಾರಣಕ್ಕೂ ಯೋಜನೆ ಜಾರಿ ಕೆಬಿಜೆಎನ್‌ಎಲ್‌ ಕರೆದ ಟೆಂಡರ್‌ ಪ್ರಕ್ರಿಯೆ ಕೈ ಬಿಡದೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ನೀರಿನ ಕೊರತೆಯಿಂದ 5ಎ ನಾಲೆ ಯೋಜನೆ ಅನುಷ್ಠಾನ ಕಷ್ಟವಾಗಲಿದೆ. ನದಿ ಜೋಡಣೆಯಿಂದ ಲಭ್ಯವಾಗಬಹುದಾಗ ನೀರಿನಲ್ಲಿ ಯೋಜನೆ ಪ್ರಸ್ತಾಪಿಸಬಹುದು ಎಂದು ನೀರಾವರಿ ಇಲಾಖೆ ಸ್ಪಷ್ಟ ನಿಲುವು ವ್ಯಕ್ತಪಡಿಸಿದೆ. ನದಿ ಜೋಡಣೆ ಪ್ರಕ್ರಿಯೆಗೆ ಕಾಲಮಿತಿ ನಿಗದಿಯಾಗಿಲ್ಲವಾದ ಕಾರಣ ಅದು ಕೂಡಲೇ ಈಡೇರುವ ಸಾಧ್ಯತೆ ಇಲ್ಲದ ಕಾರಣ ಹನಿ ನೀರಾವರಿ ಬದಲು ಹರಿ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಆಗ್ರಹಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಮೇಲ್ಭಾಗದ ರೈತರು ಅಕ್ರಮವಾಗಿ ನೀರು ಬಳಸಿಕೊಂಡರೆ ಕೆಳಭಾಗದ ರೈತರು ಶಾಶ್ವತ ನೀರಾವರಿಯಿಂದ ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಎಲ್ಲ ಗ್ರಾಮಗಳಿಂದ 500ಕ್ಕೂ ರೈತರು ಬೆಂಗಳೂರಿಗೆ ತೆರಳಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ನೀರಾವರಿ ಸೌಲಭ್ಯಕ್ಕಾಗಿ ಆಗ್ರಹಿಸಲಾಗಿದೆ. ಸರ್ಕಾರ ನಂದವಾಡಗಿ ಎರಡನೇ ಹಂತದಲ್ಲಿ ಲಭ್ಯವಿರುವ 2.25 ಟಿಎಂಸಿ ಅಡಿ ನೀರು ಬಳಸಿಕೊಂಡು ಹನಿ ನೀರಾವರಿ ಬದಲಿಗೆ ಹನಿ ನೀರಾವರಿ ಸೌಲಭ್ಯದ ಕುರಿತು ಆಲೋಚಿಸಿ ನಮ್ಮ ರೈತರಿಗೆ ಸ್ಪಂದಿಸಿ ವಟಗಲ್‌ ಬಸವೇಶ್ವರ ಏತ ನೀರಾವರಿ ಯೋಜನೆ ಸರ್ವೇ ಕಾರ್ಯಕ್ಕೆ ಟೆಂಡರ್‌
ಕರೆದಿದ್ದು, ಈ ಪ್ರಕ್ರಿಯೆಯನ್ನು ಬೇಗ ಮುಗಿಸಿ ರೈತರ ಜಮೀನಿಗೆ ನೀರೊದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸಂಚಾಲಕ ಚಂದ್ರಶೇಖರ ಜಾಗಿರದಾರ್‌, ಶಿವಕುಮಾರ ವಟಗಲ್‌, ಮಹಾದೇವಪ್ಪ, ಚಂದ್ರಶೇಖರ ಸೇರಿದಂತೆ ಅನೇಕ ಗ್ರಾಮಗಳ ರೈತರು ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯ

Logo Ilustrations

ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್‌ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್

Bairapura Gram Panchayat

ಗ್ರಾಪಂ ಅಧ್ಯಕ್ಷ, ಪಿಡಿಒ ಅಧಿಕಾರ ದುರುಪಯೋಗ

jagadish shetytar

ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮೊದಲಿದೆ: ಶೆಟ್ಟರ್‌

kaup

ಕಾಪು: ಜೆಡಿಎಸ್‌ ನ ಎಲ್ಲಾ ಘಟಕಗಳು ವಿಸರ್ಜನೆ: ಯೋಗೀಶ್ ಶೆಟ್ಟಿ

ನ್ಯೂಜಿಲೆಂಡ್‌ ನಲ್ಲಿ 7.1 ತೀವ್ರತೆಯ ಭೂಕಂಪ

ಮತ ಹಾಕದವರನ್ನು ಮುಂದೆ ನೋಡಿಕೊಳ್ಳುತ್ತೇವೆ : ಟಿಎಂಸಿ ನಾಯಕನ ಬೆದರಿಕೆ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jaladurga

ಜಲದುರ್ಗ ನೀರಾವರಿ ಯೋಜನೆಗೆ ಮರುಜೀವ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಬಿಸಿಲ ತಾಪ; 42ಡಿಗ್ರಿ ಗಡಿ ದಾಟಲಿದೆ ತಾಪ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ಹಳ್ಳಿಗಳಲ್ಲೂ ಸಾಂಸ್ಕೃತಿಕ ಕಲೆ ಪಸರಿಸಲಿ: ಶ್ರೀ

ಹಳ್ಳಿಗಳಲ್ಲೂ ಸಾಂಸ್ಕೃತಿಕ ಕಲೆ ಪಸರಿಸಲಿ: ಶ್ರೀ

ಶೇ.35 ಜನಕ್ಕಿಲ್ಲ ಉದ್ಯೋಗ ಚೀಟಿ

ಶೇ.35 ಜನಕ್ಕಿಲ್ಲ ಉದ್ಯೋಗ ಚೀಟಿ

MUST WATCH

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

udayavani youtube

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

udayavani youtube

ಗದ್ದೆಗೆ ಉಪ್ಪುನೀರು ಹರಿದು ಬಂದು ಬೆಳೆಗಳು ನಾಶ! |Udayavani

ಹೊಸ ಸೇರ್ಪಡೆ

Siddaramaiah

ಸಚಿವರಾದವರು ಇಂತಹ ಕೆಲಸ ಮಾಡುತ್ತಾರಾ?: ಸಿದ್ದರಾಮಯ್ಯ

Govt school

ಸರ್ಕಾರಿ ಶಾಲೆ ಉಳಿಸಲು ಆಂದೋಲನ ನಡೆಸಿ

Congress protest in chikkaballapura

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಲಾ 10 ಕೆ.ಜಿ.ಅಕ್ಕಿ

Logo Ilustrations

ವಿಡಿಯೋ ಕಾಲ್ ಸೇವೆಯನ್ನು ಡೆಸ್ಕ್‌ ಟಾಪ್‌ಗೂ ವಿಸ್ತರಿದ ವಾಟ್ಸ್ ಆ್ಯಪ್

Bairapura Gram Panchayat

ಗ್ರಾಪಂ ಅಧ್ಯಕ್ಷ, ಪಿಡಿಒ ಅಧಿಕಾರ ದುರುಪಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.