Udayavni Special

ಉತ್ತಮ ಮಳೆ ನಿರೀಕ್ಷೇ; ಮುಂಗಾರು ಬಿತ್ತನೆಗೆ ಸಿದ್ಧತೆ


Team Udayavani, May 25, 2018, 2:59 PM IST

ray-2.jpg

ರಾಯಚೂರು: ಈ ಬಾರಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಕೃಷಿ ಇಲಾಖೆ ಮುಂಗಾರು ಬಿತ್ತನೆಗೆ ಬೇಕಾದ ಸಕಲ ಸಿದ್ಧತೆ ಮಾಡಿಕೊಳ್ಳುವಲ್ಲಿ ನಿರತವಾಗಿದೆ. 3.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಅದಕ್ಕೆ ಬೇಕಾದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಹೊಂದಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ.

ಕಳೆದ ವರ್ಷ ತೊಗರಿ ಮತ್ತು ಹತ್ತಿ ಬಿತ್ತನೆ ಜೋರಾಗಿತ್ತು. ಆದರೆ, ಈ ಬಾರಿ ಜಿಲ್ಲೆಯಲ್ಲಿ ಹತ್ತಿ ಬಿತ್ತನೆ ಕ್ಷೇತ್ರ ಹೆಚ್ಚಾಗಿ, ತೊಗರಿ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಮಳೆ ಅಭಾವ, ಕಾಲುವೆ ನೀರಿನ ಕೊರತೆಯಿಂದ ಬಿತ್ತನೆ ಕ್ಷೇತ್ರದ ಗುರಿ ತಲುಪಿದರೂ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ತರುವಲ್ಲಿ ಸಾಧ್ಯವಾಗಿರಲಿಲ್ಲ. ಹಿಂಗಾರಿನಲ್ಲಂತೂ ಬೆಳೆ ಬೆಳೆಯುವುದೇ ಕಷ್ಟ ಎನ್ನುವಂಥ ವಾತಾವರಣ ಸೃಷ್ಟಿಯಾಗಿ ರೈತರು ಕೋಟ್ಯಂತರ ರೂ. ನಷ್ಟಕ್ಕೆ ತುತ್ತಾಗಿದ್ದರು.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ 3,50,551 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ 85,090 ಹೆಕ್ಟೇರ್‌ ನೀರಾವರಿ, ಒಣ ಭೂಮಿಯಲ್ಲಿ ಹತ್ತಿ ಬಿತ್ತನೆ, 1,37,550 ಹೆಕ್ಟೇರ್‌ ಭತ್ತ, 47,905 ಹೆಕ್ಟೇರ್‌ನಲ್ಲಿ ತೊಗರಿ, 45,295 ಹೆಕ್ಟೇರ್‌ನಲ್ಲಿ ಸಜ್ಜೆ, 17,865 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 500 ಹೆಕ್ಟೇರ್‌ನಲ್ಲಿ ನವಣೆ, 1,210 ಹೆಕ್ಟೇರ್‌ನಲ್ಲಿ ಔಡಲ, 170 ಹೆಕ್ಟೇರ್‌ನಲ್ಲಿ ಹೆಸರು, 5,237 ಹೆಕ್ಟೇರ್‌ನಲ್ಲಿ ಶೇಂಗಾ ಸೇರಿ ಒಟ್ಟು 3,50,551 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಇದಲ್ಲದೇ ಏಕದಳ, ಎಣ್ಣೆಕಾಳು, ವಾಣಿಜ್ಯ ಬೆಳೆಗಳನ್ನು ಬೆಳೆಯುವ ಸಾಧ್ಯತೆಗಳಿವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

38,859 ಕ್ವಿಂಟಲ್‌ ಬೀಜ ಬೇಡಿಕೆ: ಸಬ್ಸಿಡಿ ದರದಲ್ಲಿ ರೈತರಿಗೆ ವಿತರಿಸಲು ಬೀಜ ನಿಗಮಕ್ಕೆ 38,859 ಕ್ವಿಂಟಲ್‌ ವಿವಿಧ ಬೀಜಗಳ ಬೇಡಿಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಿಯಾಯಿತಿ ದರದಲ್ಲೂ ರೈತರಿಗೆ ವಿತರಿಸಲು ಆಯಾ ರೈತ ಸಂಪರ್ಕ ಕೇಂದ್ರಕ್ಕೆ ನಿಗದಿಪಡಿಸಿದ ಬೀಜ ದಾಸ್ತಾನು ಕಾರ್ಯ ಪ್ರಗತಿಯಲ್ಲಿದೆ. ಈ ಬಾರಿ ಹತ್ತಿ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 30 ಅನುಮೋದಿತ ಸರಬರಾಜು ಸಂಸ್ಥೆಗಳೊಂದಿಗೆ ಚರ್ಚಿಸಿದ್ದು, 3,40,000 ಹತ್ತಿ ಬೀಜದ ಪ್ಯಾಕೇಟ್‌ಗಳನ್ನು ಪೂರೈಸುವಂತೆ ಸೂಚಿಸಲಾಗಿದೆ.

ಮಳೆಯಾದರೆ ಗುರಿ ಹೆಚ್ಚಳ ಸಾಧ್ಯತೆ ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಬಿತ್ತನೆ ಪ್ರಮಾಣ ಕುಂಠಿತಗೊಂಡಿತ್ತು. ಈ ಬಾರಿ ಇಲಾಖೆ ಅಧಿಕಾರಿಗಳು ನಿರೀಕ್ಷೆಗಿಂತ ಹೆಚ್ಚು ಮಳೆ ಬಂದಲ್ಲಿ ಬಿತ್ತನೆ ಪ್ರಮಾಣವೂ ಹೆಚ್ಚಾಗುವ ನಿರೀಕ್ಷೆಯಿದೆ. ಒಟ್ಟು 1,45,525 ಹೆಕ್ಟೇರ್‌ನಲ್ಲಿ ಭತ್ತ, 59,455 ಹೆಕ್ಟೇರ್‌ನಲ್ಲಿ ಸಜ್ಜೆ, 3,070 ಹೆಕ್ಟೇರ್‌ನಲ್ಲಿ ಹೆಸರು, 78,356 ಹೆಕ್ಟೇರ್‌ನಲ್ಲಿ ತೊಗರಿ, 55 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ, 20 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 1,500 ಹೆಕ್ಟೇರ್‌ನಲ್ಲಿ ನವಣೆ, 1,750 ಹೆಕ್ಟೇರ್‌ನಲ್ಲಿ ಔಡಲ ಬೆಳೆಯುವ ಸಾಧ್ಯತೆಗಳಿವೆ.

ರೈತರ ಬೇಡಿಕೆಗನುಸಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿ ಹತ್ತಿ ಬಿತ್ತನೆ ಪ್ರಮಾಣ ಹೆಚ್ಚಾಗುವ ನಿರೀಕ್ಷೆಯಿದ್ದು, ಕಾಯಿಕೊರಕ ರೋಗದ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ, ಮುಂಗಾರು ಮಳೆ ಕೂಡ ಉತ್ತಮವಾಗಿ ಬರಲಿದೆ ಎನ್ನುವ ಮಾಹಿತಿ ಇದೆ. ಅಧಿಕೃತ ಸಂಸ್ಥೆಗಳಿಗೆ ಬೀಜ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
 ಡಾ| ಚೇತನಾ ಪಾಟೀಲ್‌, ಜಂಟಿ ಕೃಷಿ ನಿರ್ದೇಶಕರು ರಾಯಚೂರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

0

ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಮಂತ್ರಾಲಯ ವಿದ್ಯಾಪೀಠದ ಮಕ್ಕಳ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

madhu

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೂ ಕೋವಿಡ್ ಸೋಂಕು ದೃಢ!






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂತ್ರಾಲಯ ವಿದ್ಯಾಪೀಠದ ಮಕ್ಕಳ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ: ಪ್ರೇಮಾ

ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅಗತ್ಯ: ಪ್ರೇಮಾ

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ಅಶೋಕ ಗಸ್ತಿ ಪಕ್ಷಕ್ಕಾಗಿ ಶ್ರಮಿಸಿದವರು, ಕುಟುಂಬದ ಸಹಾಯಕ್ಕಾಗಿ ಪಕ್ಷ ಜೊತೆಯಿರಲಿದೆ : ನಳಿನ್

ರಾಯಚೂರು ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ರಾಯಚೂರು ಜಿಲ್ಲೆಯಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ನಾಳೆ ಸಿಂಧನೂರು ಬಂದ್‌: ಕಂಬಳಿ

ನಾಳೆ ಸಿಂಧನೂರು ಬಂದ್‌: ಕಂಬಳಿ

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ



ಹೊಸ ಸೇರ್ಪಡೆ

isiri-tdy-1

ಗ್ರಾಮೀಣ ಯುವಕನ ಸಾಧನೆ : ರೈತ ಪರ ಡಂಪರ್‌

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

ಕೋವಿಡ್‌ ನಿಯಮ ಉಲ್ಲಂಘನೆ 2 ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ. ದಂಡ

ಕೋವಿಡ್‌ ನಿಯಮ ಉಲ್ಲಂಘನೆ 2 ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ. ದಂಡ

ಶಿವಮೊಗ್ಗದಲ್ಲಿ ದುಷ್ಮನ್‌ ಚಿತ್ರೀಕರಣಕ್ಕೆ ಚಾಲನೆ

ಶಿವಮೊಗ್ಗದಲ್ಲಿ ದುಷ್ಮನ್‌ ಚಿತ್ರೀಕರಣಕ್ಕೆ ಚಾಲನೆ

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.