Udayavni Special

17ರಂದು ಉಸ್ತುವಾರಿ ಸಚಿವರಿಗೆ ಘೇರಾವ್‌ ಹಾಕಿ ಹೋರಾಟ


Team Udayavani, Sep 14, 2020, 4:40 PM IST

17ರಂದು ಉಸ್ತುವಾರಿ ಸಚಿವರಿಗೆ ಘೇರಾವ್‌ ಹಾಕಿ ಹೋರಾಟ

ರಾಯಚೂರು: ಕೋವಿಡ್ ಲಾಕ್‌ಡೌನ್‌ ನೆಪವೊಡ್ಡಿ ಕಾರ್ಮಿಕರು ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವ ಸರ್ಕಾರಗಳ ಧೋರಣೆ ಖಂಡಿಸಿ ಸೆ.17ರಂದು ನಡೆಯುವ ಕ-ಕ ಉತ್ಸವ ದಿನಾಚರಣೆಯಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ತೋರಿಸಿ ಘೇರಾವ್‌ ಹಾಕುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಟಿಯುಸಿಐ ಸಂಘಟನೆ ರಾಜ್ಯಾಧ್ಯಕ್ಷ ಆರ್‌. ಮಾನಸಯ್ಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸಚಿವ ಲಕ್ಷ್ಮಣ ಸವದಿಗೆ ನಗರದಅಂಬೇಡ್ಕರ್‌, ಬಸವೇಶ್ವರ ಹಾಗೂ ಟಿಪ್ಪು  ಸುಲ್ತಾನ್‌ ವೃತ್ತದಲ್ಲಿ ಪ್ರತಿಭಟನಾನಿರತಕಾರ್ಮಿಕರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರುತ್ತಿವೆ. ರೈತ, ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿವೆ. ಕೋವಿಡ್  ಲಾಕ್‌ಡೌನ್‌ ನೆಪವೊಡ್ಡಿ ಶ್ರೀಮಂತರು, ಬಂಡವಾಳಶಾಹಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಯ್ದೆಗಳನ್ನು ತಿದ್ದುಪಡಿ ಮಾಡುತ್ತಿವೆ. ಸರ್ಕಾರದ ಈ ಕಾರ್ಮಿಕ, ರೈತ ವಿರೋಧಿ  ನೀತಿ ಖಂಡನೀಯ ಎಂದರು.

ಕೋವಿಡ್‌ನಿಂದ ಬದುಕು ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಯಾವುದೇ ನೆರವು ನೀಡಿಲ್ಲ. ಸರ್ಕಾರ ಘೋಷಿಸಿದ ವಿಶೇಷಪ್ಯಾಕೇಜ್‌ ಕೂಡ ಮೂಗಿಗೆ ತುಪ್ಪ ಸವರುವ ಕೆಲಸವಾಗಿದ್ದು, ಅದರಲ್ಲೂ ಭಾರಿ ಭ್ರಷ್ಟಾಚಾರ ಎಸಗಲಾಗಿದೆ. ವಲಸೆ ಕಾರ್ಮಿಕರಿಗೆ ಸೂಕ್ತ ನೆರವು ನೀಡಿ ಕೋವಿಡ್‌ ನಿರ್ವಹಣಾ ವೆಚ್ಚದ ಮೇಲೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕಳೆದ ಆರು ತಿಂಗಳಿಂದ ಕಾರ್ಮಿಕರಿಗೆ ಕೆಲಸವಿಲ್ಲ. ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ತಲುಪಿಲ್ಲ. ಇದರಿಂದ ಬಡವರ್ಗದ ಜನ ಜೀವನ ನಡೆಸುವುದೇ ಕಷ್ಟ ಎನ್ನುವಂತಾಗಿದೆ.

ಜಿಲ್ಲೆಯ ವಸತಿ ನಿಲಯ ಹಾಗೂ ವಸತಿ ಶಾಲೆಗಳ ಕಾರ್ಮಿಕರಿಗೆ ಕೂಡಲೇ ವೇತನ ಪಾವತಿಸಬೇಕು. ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಅಡುಗೆ ಅನಿಲ ಹಾಗೂ ಟಿವಿ ಭತ್ಯೆಗಳನ್ನು ಕಡಿತ ಮಾಡುವ ನಿರ್ಧಾರ ಕೈಬಿಡಬೇಕು, ಶೀಘ್ರ ಐದು ವರ್ಷಗಳ ಅರಿಯರ್ ಪಾವತಿಸಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಕಾರ್ಮಿಕರ 14 ತಿಂಗಳ ಬಾಕಿ ವೇತನ ಪಾವತಿಸಬೇಕು, ಆರ್‌ಟಿಪಿಎಸ್‌ನಲ್ಲಿ ಒಂದು ಸಾವಿರಕ್ಕೂ ಅಧಿ ಕ ಕಾರ್ಮಿಕರನ್ನು ಕಾರಣವಿಲ್ಲದೇ ಕೆಲಸದಿಂದ ತೆಗೆದು ಹಾಕಿದ್ದು, ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿ. ಅಮರೇಶ, ಕಾರ್ಮಿಕ ಮುಖಂಡರಾದ ಅಮೀರ್‌ ಅಲಿ, ಜಿ. ಅಡವಿರಾವ್‌, ಶಿವಯ್ಯ ಸೇರಿದಂತೆ ಇತರರಿದ್ದರು.

ಟಾಪ್ ನ್ಯೂಸ್

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ನರೇಗಾ ಕೆಲಸದ‌ ವಿಷಯದಲ್ಲಿ ಎರಡು ಗುಂಪಿನ ಮಧ್ಯೆ ಘರ್ಷಣೆ : 10 ಜನರ ಬಂಧನ

ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಸರಕಾರಿ ಶಾಲೆಗಳಿಗೆ ಬಂತೀಗ ಹೊಸ ಕಳೆ

ಶಾಲಾರಂಭಕ್ಕೂ ಮುನ್ನವೇ ಪಠ್ಯ ಸರಬರಾಜು

ಶಾಲಾರಂಭಕ್ಕೂ ಮುನ್ನವೇ ಪಠ್ಯ ಸರಬರಾಜು

ಖೋ ಖೋ ಉಸಿರಾಗಿಸಿಕೊಂಡ ಯರಮರಸ್‌

ಖೋ ಖೋ ಉಸಿರಾಗಿಸಿಕೊಂಡ ಯರಮರಸ್‌

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಿರಿ: ಕೋಡಿಹಳ್ಳಿ

ಜಾನುವಾರು ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಿರಿ: ಕೋಡಿಹಳ್ಳಿ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

ಒತ್ತಿನೆಣೆ ತಿರುವು: ಹೆಚ್ಚಿದ ಅಪಘಾತ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

 ಕೊಕ್ಕಡ-ಗೋಳಿತೊಟ್ಟು ಸಂಪರ್ಕ ರಸ್ತೆ: ಕಾಂಕ್ರೀಟ್‌ಗೆ 2 ಕೋಟಿ ರೂ. ಪ್ರಸ್ತಾವನೆ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

ಚಿನ್ನದ ಹುಡುಗಿ ಕೆರ್ವಾಶೆಯ ಅಕ್ಷತಾ ಪೂಜಾರಿಗೆ ಅದ್ದೂರಿ ಸ್ವಾಗತ

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

“ಲಡಾಖ್‌’ನಿಂದ “ಲಾಡಿ’ಗೆ ಮರಳಿದ ಆರಿಫ್‌

ಕೆನರಾ ಎಂಜಿನಿಯರಿಂಗ್‌ ಕಾಲೇಜ್‌ ಕಾಕುಂಜೆ ಸಾಫ್ಟ್‌ವೇರ್‌ ಜತೆ ಒಪ್ಪಂದ

ಕೆನರಾ ಎಂಜಿನಿಯರಿಂಗ್‌ ಕಾಲೇಜ್‌ ಕಾಕುಂಜೆ ಸಾಫ್ಟ್‌ವೇರ್‌ ಜತೆ ಒಪ್ಪಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.