ಯೂರಿಯಾಗೆ ಮಿತಿ; ರೈತರಿಗೆ ಫಜೀತಿ

ಡಿಎಪಿ, ಕಾಂಪ್ಲೆಕ್ಸ್‌ ಸೇರಿಸಿ ಹಾಕುವಂತೆ ರೈತರಿಗೆ ಒತ್ತಾಯ •ಖಾಸಗಿಯಲ್ಲಿ ಹೆಚ್ಚು ಹಣ ಕೊಟ್ಟು ಖರೀದಿಸುವ ಸ್ಥಿತಿ

Team Udayavani, Sep 5, 2019, 6:09 PM IST

ರಾಯಚೂರು: ಎಪಿಎಂಸಿಯ ಸಹಕಾರಿ ಸಂಘದಲ್ಲಿ ರಸಗೊಬ್ಬರ ಪಡೆಯಲು ಸರದಿಯಲ್ಲಿ ನಿಂತಿದ್ದ ರೈತರು.

ರಾಯಚೂರು: ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಕಡಿಮೆ ದರದಲ್ಲಿ ಸಿಗುತ್ತಿದ್ದ ಯೂರಿಯಾ ರಸಗೊಬ್ಬರ ಅಗತ್ಯದಷ್ಟು ವಿತರಿಸದ ಕಾರಣ ರೈತರು ದುಬಾರಿ ಹಣ ಕೊಟ್ಟು ಖಾಸಗಿಯಲ್ಲಿ ಖರೀದಿಸುವಂತಾಗಿದೆ.

ಈಗ ಎಲ್ಲೆಡೆ ಬಹುತೇಕ ಬಿತ್ತನೆಯಾಗಿದ್ದು, ರೈತರು ರಸಗೊಬ್ಬರಕ್ಕಾಗಿ ಸಹಕಾರಿ ಸಂಘಗಳು, ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ, ಈ ಮುಂಚಿನಂತೆ ಅಗತ್ಯದಷ್ಟು ರಸಗೊಬ್ಬರ ನೀಡದಿರಲು ಸೂಕ್ತ ನಿರ್ದೇಶನ ಬಂದಿರುವುದರಿಂದ ಸಣ್ಣ ರೈತರಿಗೆ ಕೇವಲ 45 ಕೆಜಿ ತೂಕದ ಆರು ಪ್ಯಾಕೆಟ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ, ಇಷ್ಟು ಕಡಿಮೆ ರಸಗೊಬ್ಬರ ಸಾಲುವುದಿಲ್ಲ. ಜಾಸ್ತಿ ನೀಡುವಂತೆ ರೈತರು ಪಟ್ಟು ಹಿಡಿಯುತ್ತಿರುವ ಕಾರಣ ಕೃಷಿ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಯೂರಿಯಾದಲ್ಲಿ ನೈಟ್ರೋಜನ್‌ ಅಂಶ ಮಾತ್ರ ಇದ್ದು, ಇದನ್ನು ಹೆಚ್ಚಾಗಿ ಬಳಸಿದರೆ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಯೂರಿಯಾಗೆ ಸಮನಾಗಿ ಕಾಂಪ್ಲೆಕ್ಸ್‌, ಡಿಎಪಿ ಗೊಬ್ಬರವನ್ನು ಬಳಸಿದರೆ ಬೆಳೆ ಹಸನಾಗಿ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರ ಯೂರಿಯಾ ವಿತರಣೆಗೆ ಕಡಿವಾಣ ಹಾಕಿದೆ. ಆದರೆ, ಕಡಿಮೆ ದರಕ್ಕೆ ಸಿಗುವ ಯೂರಿಯಾವನ್ನೇ ಬಳಸಿಕೊಂಡು ಬಂದಿರುವ ರೈತಾಪಿ ವರ್ಗಕ್ಕೆ ಇದು ಸಮಸ್ಯೆಯಾಗಿ ಪರಿಣಮಿಸಿದ್ದು, ನಮಗೆ ಅಗತ್ಯದಷ್ಟು ಯೂರಿಯಾವನ್ನೇ ನೀಡಬೇಕು ಎಂಬುದು ರೈತರ ವಾದ.

ದಾಸ್ತಾನಿಗಿಲ್ಲ ಕೊರತೆ: ಕೇಂದ್ರ ಸರ್ಕಾರ ಕಳೆದ ವರ್ಷದಿಂದ ರಸಗೊಬ್ಬರ, ಬಿತ್ತನೆ ಬೀಜ ಸೇರಿ ಯಾವುದೇ ಕೃಷಿ ಪರಿಕರ ಖರೀದಿಸಲು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಆಧಾರ್‌ ಕಾರ್ಡ್‌ಗೂ ಪಹಣಿಗೂ ಜೋಡಣೆ ಆಗಿರುವ ಕಾರಣ ಕೇಂದ್ರ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಸಗೊಬ್ಬರ ಸಬ್ಸಿಡಿಯಲ್ಲಿ ಸಿಗುವುದಿಲ್ಲ. ಆದರೆ, ಇಲಾಖೆ ಬಳಿ ಈಗಾಗಲೇ 70 ಸಾವಿರ ಮೆಟ್ರಿಕ್‌ ಟನ್‌ ರಸಗೊಬ್ಬರ ದಾಸ್ತಾನಿದ್ದು, ಜಿಲ್ಲೆಗೆ ಎಷ್ಟು ಅಗತ್ಯವೋ ಅಷ್ಟು ಸಂಗ್ರಹವಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ದೊಡ್ಡ ರೈತರಿಗೆ ಸಮಸ್ಯೆ: ಈಗ ಮುಖ್ಯವಾಗಿ ಸಣ್ಣ ರೈತರಿಗಿಂತ ದೊಡ್ಡ ರೈತರಿಗೆ ಇದು ಸಮಸ್ಯೆ ತಂದೊಡ್ಡಿದೆ. ಸರ್ಕಾರ ಸಬ್ಸಿಡಿ ದರದಲ್ಲಿ ನೀಡುವ ರಸಗೊಬ್ಬರಕ್ಕೆ ಮಿತಿ ಹಾಕಿರುವ ಕಾರಣ ದುಬಾರಿ ಹಣ ಕೊಟ್ಟು ಪಡೆಯುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಮಿತಿ ಸಡಿಲಿಸುವಂತೆ ರಸಗೊಬ್ಬರ ವಿತರಣೆ ಕೇಂದ್ರಗಳಲ್ಲಿ ರೈತರು ವಾದ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಕಾಂಪ್ಲೆಕ್ಸ್‌, ಡಿಎಪಿ ರಸಗೊಬ್ಬರದ ದರ ಹೆಚ್ಚಾಗಿದ್ದು, ರೈತರು ಅದನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಭೂಮಿ ಫಲವತ್ತತೆ ಹೆಚ್ಚಲು ಯೂರಿಯಾ ಜತೆಗೆ ಡಿಎಪಿ, ಕಾಂಪ್ಲೆಕ್ಸ್‌ ಕೂಡ ಸೇರಿಸಬೇಕು ಎಂಬುದು ಇಲಾಖೆ ಅಧಿಕಾರಿಗಳ ವಾದ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾಳಿ: ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥ ಸ್ವಾಮಿ ಹಾಗೂ ನರಸಿಂಹ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯ ಗುರುವಾರ ತಹಶೀಲ್ದಾರ್‌ ತುಷಾರ್‌...

  • ಚಿಕ್ಕಮಗಳೂರು: ಸಂತರು, ಶರಣರು ತಮ್ಮ ಬದುಕಿನ ಅವಧಿಯಲ್ಲಿ ಮುಂದಿನ ಪೀಳಿಗೆಯವರಿಗೆ ಬದುಕಲು ಸಹಾಯವಾಗುವಂತ ಸಾಹಿತ್ಯ, ತತ್ವಾದರ್ಶಗಳನ್ನು ನೀಡಿದ್ದಾರೆ ಎಂದು ಕರ್ನಾಟಕ...

  • ಬಳ್ಳಾರಿ: ಜಿಲ್ಲೆಯಲ್ಲಿ ಅಲ್ಲದೇ ವಿವಿಧ ಜಿಲ್ಲೆಗಳಲ್ಲಿಯು ಸಹ ಪ್ರವಾಹ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿ ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವ ಗೃಹರಕ್ಷಕರ...

  • ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರ ವಾರ್ಡ್‌ನಲ್ಲಿ ರಾಜುಗೌಡ ಗ್ರೌಂಡ್‌ ವರ್ಕ್‌ ಟೀಂ ವತಿಯಿಂದ ಉಚಿತವಾಗಿ ಆಯುಷ್ಮಾನ್‌ ಆರೋಗ್ಯ ಕಾರ್ಡ್‌ ಮಾಡಿಕೊಡಲಾಯಿತು. ಹಸನಾಪುರದ...

  • ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹೆಬ್ರೆ, ಹುಸೂರು, ಬುಗುಡಿ ಗ್ರಾಮಗಳ ಅರಣ್ಯವಾಸಿಗಳ ಪ್ರದೇಶವನ್ನು ಕೈಬಿಡುವಂತೆ ಆಗ್ರಹಿಸಿ ಜಿಲ್ಲಾ...

ಹೊಸ ಸೇರ್ಪಡೆ