Udayavni Special

ದಂಡಕ್ಕೆ ಹೆದರಿದ ಬಿಸಿಲೂರು ಸವಾರರು

ನಿತ್ಯ ನೂರಾರು ಪ್ರಕರಣ ದಾಖಲು •ಐದು ದಿನಗಳಲ್ಲಿ 1.38 ಲಕ್ಷ ರೂ. ದಂಡ ಸಂಗ್ರಹ

Team Udayavani, Sep 11, 2019, 4:42 PM IST

11-Sepctember–25

ರಾಯಚೂರು: ಸೆ.3ರಿಂದ ರಾಜ್ಯದಲ್ಲಿ ಮೋಟಾರ್‌ ವಾಹನ ಕಾಯ್ದೆ ಅನುಸಾರ ಟ್ರಾಫಿಕ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದ್ದು, ವಾಹನ ಸವಾರರು ಆತಂಕದಲ್ಲೇ ಓಡಾಡುವಂತಾಗಿದೆ. ಇದರಿಂದ ಇಲಾಖೆಗೂ ಭರ್ಜರಿ ಆದಾಯ ಬರುತ್ತಿದ್ದು, ಪೊಲೀಸರು ಸವಾರರ ಮಧ್ಯೆ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

ಈ ಮುಂಚೆ ಸವಾರರು ಬೇಕಾಬಿಟ್ಟಿ ವಾಹನ ಚಲಾಯಿಸುತ್ತಿದ್ದರೂ ಪೊಲೀಸರು ಕೂಡ ನಾಮಕಾವಾಸ್ತೆ ಕೆಲವೊಂದು ವಾಹನಗಳನ್ನು ಹಿಡಿದು ದಂಡ ವಿಧಿಸುತ್ತಿದ್ದರು. ಆದರೆ, ಪೊಲೀಸ್‌ ಇಲಾಖೆ ಸಿಬ್ಬಂದಿ ಮಾಹಿತಿ ಪ್ರಕಾರ ಪ್ರತಿಯೊಬ್ಬ ಸಿಬ್ಬಂದಿ ಇಂತಿಷ್ಟು ಕೇಸ್‌ ಹಾಕಲೇಬೇಕು ಎಂಬ ಷರತ್ತು ಒಡ್ಡಿದ್ದು, ಪರ್ಯಾಯ ಮಾರ್ಗವಿಲ್ಲದಂತಾಗಿದೆ. ಹೀಗಾಗಿ ಸಣ್ಣ ತಪ್ಪು ಮಾಡಿದರೂ ದಂಡ ಖಚಿತ ಎನ್ನುವಂತಾಗಿದೆ. ಈ ಮುಂಚೆ ನಿತ್ಯ ಬೆರಳೆಣಿಕೆ ಪ್ರಕರಣ ದಾಖಲಾಗುತ್ತಿದ್ದರೆ, ಈಗ ನೂರರ ಗಡಿ ದಾಟುತ್ತಿವೆ.

1.38 ಲಕ್ಷ ರೂ. ಸಂಗ್ರಹ: ಸೆ.4ರಿಂದ ಸೆ.8ರವರೆಗೆ ಜಿಲ್ಲೆಯಲ್ಲಿ ವಿವಿಧ ನಿಯಮಗಳ ಉಲ್ಲಂಘನೆಯಡಿ 718 ಪ್ರಕರಣಗಳನ್ನು ದಾಖಲಿಸಲಾಗಿದೆ. 1,38,200 ರೂ. ದಂಡ ವಿಧಿಸಿ ಹಣ ಸಂಗ್ರಹಿಸಲಾಗಿದೆ. ಈ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಸಿಗ್ನಲ್ ಜಂಪ್‌, ನೋ ಪಾರ್ಕಿಂಗ್‌, ಪರವಾನಗಿ ರಹಿತ ಚಾಲನೆ, ತ್ರಿಬಲ್ ರೈಡಿಂಗ್‌, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಓಡಿಸುವುದು, ಹೆಲ್ಮೆಟ್ ಇಲ್ಲದೆ ಸಂಚಾರ, ವಿಮೆ ಇಲ್ಲದ ವಾಹನಗಳು ಹೀಗೆ ನಾನಾ ಕಾರಣಗಳಿಂದ ಪೊಲೀಸರು ಸವಾರರಿಗೆ ದಂಡ ಹಾಕುತ್ತಿದ್ದು, ಜನ ಆತಂಕಗೊಂಡಿದ್ದಾರೆ.

ಪ್ರಭಾವಕ್ಕಿಲ್ಲ ಮಣೆ: ಮುಂಚೆ ಪೊಲೀಸರು ವಾಹನ ಹಿಡಿದರೆ ಸಾಕು ಸವಾರರು ಅವರಿವರಿಂದ ಫೋನ್‌ ಮೂಲಕ ಮಾತನಾಡಿಸಿ ವಾಹನ ಬಿಡಿಸಿಕೊಂಡು ಹೋಗುತ್ತಿದ್ದರು. ಪೊಲೀಸರು ಕೂಡ ಯಾಕೆ ಬೇಕು ಸಹವಾಸ ಎಂದು ಬಿಟ್ಟು ಬಿಡುತ್ತಿದ್ದರು. ಆದರೆ, ಈಗ ಪೊಲೀಸರೇ ಪ್ರಭಾವಿಗಳಿಗೆ ಮಣೆ ಹಾಕುತ್ತಿಲ್ಲ. ಫೋನ್‌ ಮಾಡಿಕೊಟ್ಟರೂ ದಂಡದ ರಶೀದಿ ಹರಿದ ಬಳಿಕವೇ ಫೋನ್‌ನಲ್ಲೇ ಮಾತನಾಡುತ್ತಿದ್ದಾರೆ. ಇದರಿಂದ ಸದ್ಯದ ಮಟ್ಟಿಗಂತೂ ಯಾವ ಪ್ರಭಾವಗಳು ಪೊಲೀಸರನ್ನು ನಿಯಂತ್ರಿಸುವಂತೆ ಕಾಣುತ್ತಿಲ್ಲ. ಆದರೂ ಕೆಲ ಜನ ಜನಪ್ರತಿನಿಧಿಗಳ ಕಡೆಯಿಂದ ಕರೆ ಮಾಡಿಸಿ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ.

ಪರಿಷ್ಕೃತ ದರ ಅನ್ವಯ: ಸೆ.5ರಿಂದಲೇ ದಂಡದಲ್ಲಿ ಪರಿಷ್ಕೃತ ದರ ಅನ್ವಯವಾಗಿದೆ. ವಿವಿಧ ನಿಯಮ ಉಲ್ಲಂಘನೆ ಪ್ರಕರಣಗಳಿಗೆ 500 ರೂ.ದಿಂದ 25 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತಿದೆ. ಹಳ್ಳಿಗಳಿಂದ ಬಂದ ಸವಾರರಿಗೆ ಈ ವಿಚಾರ ಮನವರಿಕೆ ಮಾಡುವಷ್ಟರಲ್ಲಿ ಪೊಲೀಸರು ಹೈರಾಣಾಗುತ್ತಿದ್ದಾರೆ. ಮೊದಲೆಲ್ಲ 100-200 ರೂ. ಕೊಟ್ಟು ಹೋಗುತ್ತಿದ್ದ ಜನ ಈಗ ಸಾವಿರಾರು ಹಣ ನೀಡಬೇಕು ಎನ್ನುತ್ತಿರುವುದಕ್ಕೆ ಕಂಗಾಲಾಗಿದ್ದಾರೆ. ಇದರಿಂದ ಪೊಲೀಸರ ಜತೆಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ.

ಪೊಲೀಸರ ಅಳಲು
ಸರ್ಕಾರದ ಈ ನಿಯಮದಿಂದ ಸವಾರರಿಗಿಂತ ಪೊಲೀಸರೇ ಕಂಗಾಲಾದಂತೆ ಕಾಣುತ್ತಿದೆ. ಸಣ್ಣ ಸಣ್ಣ ತಪ್ಪುಗಳಿಗೆ ಸಾವಿರಾರು ರೂ. ದಂಡ ಯಾರು ಕಟ್ಟುತ್ತಾರೆ ಎನ್ನುತ್ತಾರೆ ಇಲಾಖೆ ಸಿಬ್ಬಂದಿಯೊಬ್ಬರು. ಜನ ತಪ್ಪು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಈ ವಿಚಾರ ಮೇಲಧಿಕಾರಿಗಳಿಗೆ ತಿಳಿಯಬೇಕು. ಹೆಲ್ಮೆಟ್ ಇಲ್ಲದಿದ್ದರೆ ಸಾವಿರ ರೂ. ದಂಡ ಹಾಕಿದರೆ ಯಾವ ಸವಾರನೂ ಕಟ್ಟಲು ಒಪ್ಪುವುದಿಲ್ಲ ಬದಲಿಗೆ ನಮ್ಮೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ಇದು ಹೀಗೇ ಆದರೆ ಜನ ನಮ್ಮ ಜತೆ ಕೈ ಮಿಲಾಯಿಸಿದರೂ ಅಚ್ಚರಿ ಇಲ್ಲ. ಕೋರ್ಟ್‌ ನೋಟಿಸ್‌ ಕೊಡಿ ಅಲ್ಲೇ ಕಟ್ಟುತ್ತೇವೆ ಎನ್ನುತ್ತಾರೆ. ನೋಟಿಸ್‌ ಕೊಟ್ಟರೆ ಅವರ ವಾಹನ ಸೀಜ್‌ ಮಾಡಿ ದಂಡ ಕಟ್ಟುವವರೆಗೂ ಕಾಯಬೇಕು. ಅದು ಕೂಡ ತಲೆನೋವಿನ ಕೆಲಸ ಎನ್ನುವುದು ಸಿಬ್ಬಂದಿ ವಾದ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ BSY ಕುಮ್ಮಕ್ಕು : ಸಿದ್ದರಾಮಯ್ಯ ಆರೋಪ

BSY ಕುಮ್ಮಕ್ಕಿನಿಂದಲೇ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ : ಸಿದ್ದರಾಮಯ್ಯ ಆರೋಪ

2021ರ ಮಾರ್ಚ್ ನಂತರ 100, 10 ಹಾಗೂ 5 ರೂಪಾಯಿ ನೋಟುಗಳ ಚಲಾವಣೆ ರದ್ದು?: ಆರ್ ಬಿಐ

2021ರ ಮಾರ್ಚ್ ನಂತರ 100, 10 ಹಾಗೂ 5 ರೂಪಾಯಿ ನೋಟುಗಳ ಚಲಾವಣೆ ರದ್ದು?: ಆರ್ ಬಿಐ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ಹುಣಸೋಡು ದುರಂತ : ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ನಿಶ್ಚಿತ : ಸಿಎಂ

ashwath

ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ

ಚಿಕ್ಕಮಗಳೂರು ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಗೌಪ್ಯಸಭೆ

ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರ ಗೌಪ್ಯಸಭೆ: ಸಚಿವರಿಂದ ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನುದಾನ ಹೆಚ್ಚಿಸಿ ತಾಪಂ ವ್ಯವಸ್ಥೆ ಬಲಗೊಳಿಸಿ

The first PU class that has not yet started

ಇನ್ನೂ ಶುರುವಾಗದ ಪ್ರಥಮ ಪಿಯು ತರಗತಿ

ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ; ತೀವ್ರ ಆಕ್ರೋಶ

ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ; ತೀವ್ರ ಆಕ್ರೋಶ

Shree Ramam mandira

ರಾಮನ ಜೀವನ ಮೌಲ್ಯ ನೆಲೆಗೊಳ್ಳಲಿ: ರಂಭಾಪುರಿ ಶ್ರೀ

Road Safety rally

ರಸ್ತೆ ಸುರಕ್ಷತಾ ಸಪ್ತಾಹ-ಜಾಥಾ

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಅನುದಾನ ಹೆಚ್ಚಿಸಿ ತಾಪಂ ವ್ಯವಸ್ಥೆ ಬಲಗೊಳಿಸಿ

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ

ಗೋಲ್ಡನ್‌ ಟೆಂಪಲ್… ಇಂಥ “ಅಮೃತ’ವನ್ನು ಸವಿಯಲು ಹಿಂದೆಮುಂದೆ ನೋಡಬೇಕಿಲ್ಲ!

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

ಜ.25ಕ್ಕೆ ಕಲ್ಯಾಣ್‌ – ಡೊಂಬಿವಿಲಿ ಸಂಪರ್ಕ ಕಲ್ಪಿಸುವ ಪತ್ರಿ ಪೂಲ್‌ ಸೇತುವೆ ಲೋಕಾರ್ಪಣೆ 

The first PU class that has not yet started

ಇನ್ನೂ ಶುರುವಾಗದ ಪ್ರಥಮ ಪಿಯು ತರಗತಿ

ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ; ತೀವ್ರ ಆಕ್ರೋಶ

ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ; ತೀವ್ರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.