Forest Department: ಅರಣ್ಯ ಇಲಾಖೆ ಸುಪರ್ದಿಗೆ 120 ಎಕರೆ ಭೂಮಿ


Team Udayavani, Jan 1, 2024, 1:15 PM IST

Forest Department: ಅರಣ್ಯ ಇಲಾಖೆ ಸುಪರ್ದಿಗೆ 120 ಎಕರೆ ಭೂಮಿ

ಕನಕಪುರ: ತನ್ನ ವ್ಯಾಪ್ತಿ ಮೀರಿ ಕಂದಾಯ ಇಲಾಖೆ ಮಂಜೂರು ಮಾಡಿದ್ದ ನೂರಾರು ಕೋಟಿ ಬೆಲೆ ಬಾಳುವ ನೂರು ಎಕರೆಗೂ ಹೆಚ್ಚು ಪ್ರಾದೇಶಿಕ ಅರಣ್ಯ ಭೂಮಿಯನ್ನು ಒತ್ತುವರಿ ಎಂದು ಪರಿ ಗಣಿಸಿ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಹಾರೋಹಳ್ಳಿ ತಾಲೂಕಿನ ಮರಳ ವಾಡಿ ಹೋಬ ಳಿಯ ಸಿಡಿ ದೇವರಹಳ್ಳಿ ಸರ್ವೆ ನಂ. 104ರಲ್ಲಿ ದುರ್ಗ ದಕಲ್ಲು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲಿ ಕಂದಾಯ ಇಲಾಖೆ ಉಪ ವಿಭಾಗಾಧಿ ಕಾರಿಗಳು ಮಂಜೂರು ಮಾಡಿದ್ದ ಹಾಗೂ ಸ್ಥಳೀಯರು ಒತ್ತುವರಿ ಮಾಡಿ ಕೊಂಡಿದ್ದ ಸುಮಾರು 120 ಎಕರೆಯಷ್ಟು ಭೂಮಿ ಯನ್ನು ಸರ್ಕಾರದ ಆದೇಶದ ಮೇರೆಗೆ ಕಾನೂನಾ ತ್ಮಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಿ ಪ್ರಾದೇಶಿಕ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ಮೈಸೂರು ಸರ್ಕಾರದ ಅವದಿಯ 1919ರಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಗೆ 336 ಎಕರೆ ನೋಟಿಫಿಕೇಷನ್‌ ಆಗಿತ್ತು, ಪ್ರಾದೇಶಿಕ ಅರಣ್ಯ ಇಲಾಖೆ 336 ಎಕರೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು, ಅರಣ್ಯ ಇಲಾಖೆಯಲ್ಲಿರುವ ಭೂಮಿಯನ್ನು ರೈತರಿಗೆ ಮಂಜೂರು ಮಾಡಿ ಕೊಡಲು ಅರಣ್ಯ ಇಲಾಖೆಗೂ ಅವಕಾಶ ಇಲ್ಲ. ಆದರೆ, ಕಂದಾಯ ಇಲಾಖೆ ತನ್ನ ವ್ಯಾಪ್ತಿಯನ್ನು ಮೀರಿ 1985 ರಲ್ಲಿ ಅಂದಿನ ಉಪ ವಿಭಾಗಾಧಿಕಾರಿಗಳು ಪ್ರಾದೇಶಿಕ ಅರಣ್ಯ ಇಲಾಖೆಗೆ ನೋಟಿಫಿಕೇಶನ್‌ ಆಗಿದ್ದ 336 ಎಕರೆ ಪೈಕಿ ನೂರು ಎಕ ರೆಗೂ ಹೆಚ್ಚು ಭೂಮಿಯನ್ನು 90ಕ್ಕೂ ಹೆಚ್ಚು ರೈತರಿಗೆ ಗ್ರಾಂಟ್‌ ಮಾಡಿ ಕೊಟ್ಟಿದ್ದರು.

ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸಬೇಡಿ: ಮೂರು ಎಕರೆ ಇರುವ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸ ಬೇಡಿ. ದೊಡ್ಡ ಹಿಡುವಳಿ ದಾರರ ಸುಪರ್ದಿ ಯಲ್ಲಿ ರುವ ಭೂಮಿಯನ್ನು ಕಾನೂನಾತ್ಮಕವಾಗಿ ತೆರವು ಗೊಳಿಸಿ ಎಂದು ಸರ್ಕಾರ ಆದೇಶ ಮಾಡಿತ್ತು. ಕೆಲವು ಸಣ್ಣ ರೈತರು ಈಗಲೂ ಉಳುಮೆ ಮಾಡಿ ಕೊಂಡು ಜೀವನ ಮಾಡುತ್ತಿದ್ದಾರೆ. ಆದರೆ, ಜೀವನೋ ಪಾಯಕ್ಕಾಗಿ ಮಂಜೂರು ಮಾಡಿದ್ದ ಈ ಭೂಮಿ ಯನ್ನು ಮಾರಾಟ ಮಾಡಿಕೊಳ್ಳಲು ಅವಕಾಶವಿಲ್ಲ ಆದರೂ ಭೂಮಿ ಮಂಜೂರಾಗಿದ್ದ 90 ರೈತರ ಪೈಕಿ ಬಹುತೇಕ ರೈತರು ಒಬ್ಬ ವ್ಯಕ್ತಿಗೆ 80 ಎಕರೆ, ಮತ್ತೋಬ್ಬ ವ್ಯಕ್ತಿಗೆ 20 ಎಕರೆ, 15 ಎಕರೆ, 6 ಎಕರೆಯಷ್ಟು ಭೂಮಿ ಯನ್ನು ಮಾರಾಟ ಮಾಡಿಕೊಂಡಿದ್ದರು ಇವರೆಲ್ಲರೂ ದೊಡ್ಡ ಹಿಡುವಳಿ ದಾರರು ಮತ್ತು ಒತ್ತುವರಿ ಭೂಮಿ ಎಂದು ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಪರಿಗಣಿಸಿದೆ.

ಪ್ರಾದೇಶಿಕ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿರುವುದು ಕಾಡುಪ್ರಾಣಿಗಳಿಗೂ ಒಂದು ರೀತಿಯ ಅನುಕೂಲವಾದಂತಾಗಿದೆ ತಾಲೂಕಿನಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿ ಸಾಕಷ್ಟು ಬೆಳೆ ಹಾನಿ, ಜೀವಾನಿಯು ನಡೆಯುತ್ತಲೇ ಇದೆ. ಪ್ರಾದೇಶಿಕ ಅರಣ್ಯ ಇಲಾಖೆಗೆ ನೂರು ಎಕರೆಗೂ ಹೆಚ್ಚು ಭೂಮಿ ಸೇರ್ಪಡೆಯಾಗಿರುವುದು ಈ ಜಾಗದಲ್ಲಿ ಕಾಡು ಪ್ರಾಣಿಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸಲು ಅನುಕೂಲವಾದಂತಾಗಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್‌, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ದಾಳೇಶ್‌, ಉಪ ವಲಯ ಅರಣ್ಯ ಅಧಿಕಾರಿ ರಮೇಶ್‌, ಯಂಕುಂಚಿ, ಚಂದ್ರನಾಯಕ್‌, ಮಣಿ, ಪುಷ್ಪಲತಾ, ಅರಣ್ಯ ಗಸ್ತು ಪಾಲಕರಾದ ಶಿವರಾಜು, ಚಂದ್ರ, ನರಸಿಂಹ, ಲೋಕೇಶ್‌ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯ ಇಲಾಖೆ ಭೂಮಿ ರಕ್ಷಣೆಗೆ ಕ್ರಮ : ಎಸಿಎಫ್ ಗಣೇಶ್‌ ನೇತೃತ್ವದಲ್ಲಿ ಆರ್‌ಎಫ್ಒ ದಾಳೇಶ್‌ ಹಾಗೂ ಸಿಬ್ಬಂದಿ ತೆರವು ಕಾರ್ಯಾ ಚರಣೆ ಕೈಗೊಂಡಿದ್ದರು. ಕಳೆದ ಮೂರು ದಿನಗಳಿಂದ ಒತ್ತುವರಿ ಕಾರ್ಯಾಚರಣೆ ಕೈಗೊಂಡಿ ರುವ ಅರಣ್ಯ ಇಲಾಖೆ ಅಧಿಕಾರಿಗಳು ಹಂತ ಹಂತವಾಗಿ 120ಎಕರೆಯಷ್ಟು ಭೂಮಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಗಡಿ ಗುರುತಿಸಿದೆ. ಒತ್ತುವರಿಯಾಗಿದ್ದ ಭೂಮಿ ಮತ್ತೆ ಒತ್ತುವರಿ ಯಾಗ ದಂತೆ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ಒತ್ತುವರಿ ತೆರವು ಮಾಡಿರುವ ಗಡಿಯಲ್ಲಿ ಈಗಾ ಗಲೇ ಟ್ರಂಚ್‌ ನಿರ್ಮಾಣ ಮಾಡುವ ಕಾರ್ಯ ಬರದಿಂದ ಸಾಗಿದೆ. ಆ ಜಾಗದಲ್ಲಿ ಮುಂದಿನ ಮುಂಗಾರು ಮಳೆ ಬೀಳುತ್ತಿದ್ದಂತೆ ಮರ ಗಿಡಗಳನ್ನು ಬೆಳೆಸಿ ಅರಣ್ಯ ಇಲಾಖೆ ಭೂಮಿಯ ರಕ್ಷಣೆ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಿದೆ.

ತೆರವು ಕಾರ್ಯಾಚರಣೆ: ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಪ್ರಾದೇಶಿಕ ಅರಣ್ಯ ಭೂಮಿಯನ್ನು ಖರೀದಿಸಿದ್ದ 3ಎಕರೆಗೂ ಹೆಚ್ಚು ಭೂಮಿ ಇರುವ ದೊಡ್ಡ ಹಿಡುವಳಿದಾರರ ವಿಚಾರಣೆ ನಡೆಸಿ ಕಾನೂನಾತ್ಮಕವಾಗಿ ಒತ್ತುವರಿ ಎಂದು ಪರಿಗಣಿಸಿತ್ತು. ಸಿಸಿಎಫ್ ನ್ಯಾಯಾಲಯದಲ್ಲಿ ಕೆಲವರು ಮೇಲ್ಮನವಿ ಸಲ್ಲಿಸಿದರು. ಅಲ್ಲಿಯು ಸಹ ಅರಣ್ಯ ಇಲಾಖ

ಸರ್ಕಾರದ ಆದೇಶದಂತೆ 3 ಎಕರೆ ಒಳಪಟ್ಟಿರುವ ರೈತರನ್ನು ತೆರವು ಮಾಡಿಲ್ಲ, ಒತ್ತುವರಿ ಮಾಡಿಕೊಂಡಿದ್ದ ದೊಡ್ಡ ಹಿಡುವಳಿದಾರರಿಗೆ ಕಾನೂನಾತ್ಮಕವಾಗಿ ಎಲ್ಲ ಅವಕಾಶಗಳನ್ನು ಕೊಟ್ಟು, ಅರಣ್ಯ ಇಲಾಖೆ ಕೋರ್ಟ್‌ ಆದೇಶದಂತೆ 120 ಎಕರೆಯಷ್ಟು ಭೂಮಿಯನ್ನು ಒತು ವರಿ ತೆರವು ಮಾಡಿದ್ದೇವೆ. ಅರಣ್ಯ ಭೂಮಿ ಸಂರಕ್ಷಣೆ ಇಲಾಖೆ ಜವಬ್ದಾರಿ ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. – ದಾಳೇಶ್‌, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕನಕಪುರ

– ಬಿ.ಟಿ.ಉಮೇಶ್‌ ಬಾಣಗಹಳ್ಳಿ

ಟಾಪ್ ನ್ಯೂಸ್

1-ssa-dasd

FIR ಕುರಿತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ: ಇದೊಂದು ಯಕ್ಷ ಪ್ರಶ್ನೆ!

Rajaysabha

Rajya Sabha: ಬಿಜೆಪಿ ಬಲ ಈಗ 86ಕ್ಕೆ ಕುಸಿತ, ಇನ್ಮುಂದೆ ಮಸೂದೆ ಪಾಸು ಅಷ್ಟು ಸುಲಭವಲ್ಲ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Sanketh-Film

Kannada Cinema: ವಿಭಿನ್ನ ಕಥಾನಕದ ‘ಸಾಂಕೇತ್’ ಚಿತ್ರ ಜು.26ಕ್ಕೆ ತೆರೆಗೆ

Dengue

Dengue fever :ಹಾಸನದಲ್ಲಿ ಮತ್ತೊಬ್ಬ ಬಾಲಕ ಬಲಿ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ

Bollywood: ಬರ್ಲಿನ್‌ನ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಂಡ ನಟಿ ಸುಚಿತ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta Raids: ಹಾರೋಹಳ್ಳಿ ತಹಸೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ

1-train

Train;ಬೆಂಗಳೂರು-ಮೈಸೂರು ಮಾರ್ಗದ ಎಲ್ಲಾ ರೈಲುಗಳು ಸ್ಥಗಿತ: ಪ್ರಯಾಣಿಕರಿಗೆ ಅನಾನುಕೂಲ

HD-Kumaraswamy

Bengaluru South; ನಾನು ಅಧಿಕಾರಕ್ಕೆ ಬಂದಾಗ ಇವರಿಟ್ಟ ಹೆಸರು ಕಿತ್ತೆಸೆಯುವೆ: ಎಚ್‌ಡಿಕೆ

Ramanagara

Ramanagara ಜಿಲ್ಲೆಯ ಬೆಂಗಳೂರು ದಕ್ಷಿಣವೆಂದು ಬದಲಿಸಿ

HD-Kumaraswamy

Channapattana; ಯೋಗೇಶ್ವರ್‌ ಹೆಸರು ಅಂತಿಮ ಅಲ್ಲ: ಎಚ್‌ಡಿಕೆ ಸ್ಪಷ್ಟನೆ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

1-ssa-dasd

FIR ಕುರಿತು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ: ಇದೊಂದು ಯಕ್ಷ ಪ್ರಶ್ನೆ!

Rajaysabha

Rajya Sabha: ಬಿಜೆಪಿ ಬಲ ಈಗ 86ಕ್ಕೆ ಕುಸಿತ, ಇನ್ಮುಂದೆ ಮಸೂದೆ ಪಾಸು ಅಷ್ಟು ಸುಲಭವಲ್ಲ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Heavy Rain: ತೀರ್ಥಹಳ್ಳಿ ತಾಲೂಕಿನಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ಜು.16ರಂದು ರಜೆ ಘೋಷಣೆ

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Bhatkal: ಒಂದೇ ದಿನ ತಾಯಿ, ಮಗಳು ನೇಣಿಗೆ ಶರಣು

Sanketh-Film

Kannada Cinema: ವಿಭಿನ್ನ ಕಥಾನಕದ ‘ಸಾಂಕೇತ್’ ಚಿತ್ರ ಜು.26ಕ್ಕೆ ತೆರೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.