ಸಹಕಾರ ಸಂಘದಲಿ 5 ಲಕ್ಷ ಉಳಿತಾಯ

Team Udayavani, Sep 25, 2019, 5:08 PM IST

ಮಾಗಡಿ: ನಾಯಕನಪಾಳ್ಯದ ಹಾಲು ಉತ್ಪಾದಕರ ಸಹಕಾರ ಸಂಘವು 45,39,755 ರೂ. ಹಾಲು ಉತ್ಪಾದಕರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗಿದೆ. 5 ಲಕ್ಷ ರೂ. ಉಳಿತಾಯ ಮಾಡಲಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಾಹಕ ಎ.ವಿ.ಪಂಚಾಕ್ಷರಿ ತಿಳಿಸಿದರು.

ತಾಲೂಕಿನ ನಾಯಕನಪಾಳ್ಯದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕಮಹಾಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯ ಹಾಲು ಮಾರಾಟದಿಂದ 6,70,506 ರೂ. ಬಂದಿದೆ. ಮಾದರಿಹಾಲು 47,496 ರೂ. ಆಗಿದೆ. ತುಪ್ಪ ಮಾರಾಟದಿಂದ 51,480 ರೂ. ಬಂದಿದೆ. ಬೋನಸ್‌ 1.69 ಲಕ್ಷ ರೂ. ವಿತರಣೆ ಮಾಡಲಾಗುವುದು. ಒಟ್ಟಾರೆ 4.1 ಲಕ್ಷರೂ. ನಿವ್ವಳ ಲಾಭ ಬಂದಿದೆ ಎಂದು ವಿವರಿಸಿದರು. ನಿವೇಶನ ಖರೀದಿಗೆ ಈಗಾಗಲೇ ಮಾರಾಟಗಾರರಿಗೆ 2 ಲಕ್ಷ ರೂ. ನೀಡಲಾಗಿದೆ. ಎಸ್‌ಸಿ ಜಮೀನು ಆಗಿರುವುದರಿಂದ ಡೀಸಿಯಿದ ಅನುಮತಿ ಪಡೆಯಬೇಕಿದೆ. ಆದ್ದರಿಂದ ಬೇರೆ ನಿವೇಶನ ಗುರುತಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹಾಲು ಶಿಬಿರದ ವಿಸ್ತರಣಾಧಿಕಾರಿ ಆನಂದ್‌ಕುಮಾರ್‌ ಅಂಕಿ ಅಂಶಗಳ ಕುರಿತು ಚರ್ಚಿಸಿದರು. ಸಂಘದ ಅಧ್ಯಕ್ಷ ಸಿ.ಎಲ್‌.ದೇವರಾಜು ಅಧ್ಯಕ್ಷತೆ ವಹಿಸಿದ್ದು, ಗುಣಮಟ್ಟದ ಹಾಲು ಪೂರೈಕೆ ಮಾಡಿ, ಸಂಘದ ಬೆಳವಣಿಗೆಗೆ ಸಹಕರಿಸುವಂತೆ ಮನವಿ ಮಾಡಿದರು.  ಸಂಘದ ಉಪಾಧ್ಯಕ್ಷ ಮಹಾಲಿಂಗಯ್ಯ, ನಿರ್ದೇಶಕರಾದ ಎಸ್‌.ಕೆ. ರಾಧಕೃಷ್ಣಪ್ಪ, ಜಿ.ಗಂಗಣ್ಣ, ಕೃಷ್ಣಮೂರ್ತಿ, ಶಂಕರ್‌, ಕೆ.ಎಲ್‌.ಗಂಗಯ್ಯ, ಹನುಮಂತಪ್ಪ, ದ್ರಾಕ್ಷಾಯಣಮ್ಮ, ಭೈಲಮ್ಮ, ದೇವಿಬಾಯಿ, ಹಾಲು ಪರೀಕ್ಷಕ ಲಕ್ಷ್ಮೀಕಾಂತ್‌ ಉಪಸ್ಥಿತರಿದ್ದರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ