ಕ್ರಿಯಾಶೀಲಗೊಂಡ ಅಂಗನವಾಡಿ ಕೇಂದ್ರಗಳು

ಶಿಕ್ಷಕರು, ಸಿಬ್ಬಂದಿ ಕಾರ್ಯಕ್ಕೆ ಜಿಪಂ ಸಿಇಒ ಶ್ಲಾಘನೆ

Team Udayavani, Jul 27, 2020, 8:54 AM IST

ಕ್ರಿಯಾಶೀಲಗೊಂಡ ಅಂಗನವಾಡಿ ಕೇಂದ್ರಗಳು

ರಾಮನಗರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಿಗೆ ಆಹಾರ ಪದಾರ್ಥಗಳ ಪೊಟ್ಟಣಗಳನ್ನು ಅವರ ಮನೆಗೆ ತಲುಪಿಸಲು ಜಿಪಂ ವ್ಯವಸ್ಥೆ ಮಾಡುತ್ತಿದೆ. ಒಂದು ತಿಂಗಳಿಗಾಗುವಷ್ಟು ಒಟ್ಟು 13 ಆಹಾರ ಪದಾರ್ಥ ಇರುವ ಪೊಟ್ಟಣಗಳನ್ನು ಅಂಗನವಾಡಿ ಶಿಕ್ಷಕಿಯರು, ಸಿಬ್ಬಂದಿ ಸಿದ್ಧಪಡಿಸುತ್ತಿದ್ದಾರೆ. ಈ ಪೊಟ್ಟಣಗಳ ವಿತರಣಾ ಕಾರ್ಯ ಆರಂಭವಾಗಿದೆ.

ಅಂಗನವಾಡಿ ನಡೆಯುವ ಸಂದರ್ಭದಲ್ಲಿ ಮಕ್ಕಳಿಗೆ ಅಲ್ಲೇ ಪೌಷ್ಟಿಕ ಆಹಾರ ತಯಾರಿಸಿ ತಿನ್ನಿಸಲಾಗುತ್ತಿತ್ತು. ಕೊರೊನಾ ಕಾರಣ ಮಕ್ಕಳ ರಕ್ಷಣೆ ಹಿತ ದೃಷ್ಟಿಯಿಂದ ಅಂಗನವಾಡಿಗಳು ಸದ್ಯ ಬಂದ್‌ ಆಗಿವೆ. ಹೀಗಾಗಿ ನೇರವಾಗಿ ಮಕ್ಕಳ ಮನೆಗೆ ತಲುಪಿಸಲಿದ್ದು ಪೌಷ್ಟಿಕಾಂಶ ಆಹಾರಕ್ಕೆ ಕೊರತೆಯಾಗ ಬಾರದು ಎಂಬುದು ಪಂಚಾಯ್ತಿಯ ಉದ್ದೇಶ. ಅಕ್ಕಿ, ಬೆಲ್ಲ, ಹಾಲಿನ ಪುಡಿ ಸೇರಿ 13 ಪದಾರ್ಥಗಳನ್ನು ಪೊಟ್ಟಣ ಒಳಗೊಂಡಿದೆ. ಒಂದು ತಿಂಗಳಿಗೆ ಆಗುವಷ್ಟು ಪ್ರಮಾಣ ಕೊಡಲಾಗುವುದು. ಮೊಟ್ಟಯನ್ನು ವಾರಕ್ಕೊಮ್ಮೆ ತಲುಪಿಸುವ ವ್ಯವಸ್ಥೆ ಮಾಡಿಕೊಂಡಿವೆ.

ಸಿಇಒ ಮೆಚ್ಚುಗೆ: ಆಹಾರ ಪದಾರ್ಥ ಸಿದ್ಧಪಡಿಸುತ್ತಿರುವ ಅಂಗನವಾಡಿ ಕೇಂದ್ರದ ಶಿಕ್ಷಕಿಯರು ತಮ್ಮ ಕ್ರಿಯಾತ್ಮಕ ಕೌಶಲ್ಯ ಮರೆಯುತ್ತಿರುವುದು ವಿಶೇಷ. ಆಹಾರ ಪ್ಯಾಕ್‌ ಮಾಡುವ ಮುನ್ನ ಮತ್ತು ನಂತರ ಅದರ ಚಿತ್ರಗಳನ್ನು ಸಂಬಂಧಿಸಿದ ಅಧಿಕಾರಿಗಳ ಮೊಬೈಲ್‌ಗೆ ಅಪ್‌ಲೋಡ್‌ ಮಾಡ ಬೇಕು. ಹೀಗೆ ಅಪ್‌ಲೋಡ್‌ ಮಾಡುವ ಮುನ್ನ ಆಹಾರ ಪದಾರ್ಥ ಮತ್ತು ಪ್ಯಾಕೆಟ್‌ಗಳನ್ನು ಸುಂದರ ಆಕೃತಿ ಮೂಡುವಂತೆ ಜೋಡಿಸಿ ಫೋಟೋ ಕ್ಲಿಕ್ಕಿಸಿ ಕಳುಹಿಸಿದೆ. ಜಿಪಂ ಸಿಇಒ ಇಕ್ರಂ ಅವರ ಗಮನಕ್ಕೂ ಬಂದಿದೆ. ಟ್ವೀಟ್‌ಗಳ ಮೂಲಕ ಈ ಶಿಕ್ಷಕರು ಖುಷಿಯಿಂದ ಮಾಡುತ್ತಿರುವ ಕಾರ್ಯ ಶ್ಲಾ ಸಿದ್ದಾರೆ. ಟ್ವಿಟರ್‌ನಲ್ಲಿ ಫೋಟೋಶೇರ್‌ ಮಾಡಿಕೊಂಡಿದ್ದಾರೆ. ಶಿಕ್ಷಕಿಯರ ಸಕಾರಾತ್ಮಕ ಮನಸ್ಥಿತಿಗೆ ಶಹಬ್ಟಾಸ್‌ ಎಂದಿದ್ದಾರೆ.

ಅಂಗನವಾಡಿಗಳಲ್ಲಿ ನೆಲವೇ ಬೋರ್ಡು! :  ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಕ್ರಿಯಾತ್ಮಕತೆ ರೂಢಿಸಿಕೊಳ್ಳುತ್ತಿವೆ. ಅಕ್ಷರ ಕಲಿಸಲು ಹಸಿರು, ಕಪ್ಪು ಬೋರ್ಡುಗಳೇ ಬೇಕಂತೇನಿಲ್ಲ ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಶಿಕ್ಷಕಿಯರು ಕೇಂದ್ರಗಳ ನೆಲವನ್ನೇ ಬೋರ್ಡು ಮಾಡಿಕೊಂಡಿದ್ದಾರೆ. ನೆಲದ ಮೇಲೆ ಆಂಗ್ಲ ಭಾಷೆಯ ಅಕ್ಷರ, ಕನ್ನಡ ವರ್ಣಮಾಲೆ, ಸಂಖ್ಯೆ ಇತ್ಯಾದಿ ಅವಶ್ಯಕ ಮಾಹಿತಿಯನ್ನು ವರ್ಣಮಯವಾಗಿ ರಚಿಸಿದ್ದಾರೆ. ಅಂಗನವಾಡಿಗಳಲ್ಲಿ ಪುಟ್ಟ ಮಕ್ಕಳು ನೆಲದ ಮೇಲೆ ಕೂರುವುದು ಹೆಚ್ಚು. ಅವರನ್ನು ಅಕ್ಷರಗಳ ಕಡೆ ಆಕರ್ಷಿಸಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಜಿಲ್ಲೆಯ ಎಲ್ಲಾ 950 ಅಂಗನವಾಡಿಗಳಲ್ಲೂ ಇದನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 58000 ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳೆಲ್ಲರಿಗೂ ಆಹಾರ ಪದಾರ್ಥಗಳನ್ನು ಮನೆಗೆ ತಲುಪಿಸುವುದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದೇವೆ.  ಇಕ್ರಂ, ಜಿಪಂ ಸಿಇಒ

 

-ಬಿ.ವಿ.ಸೂರ್ಯ ಪ್ರಕಾಶ್‌

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.