ಕಣ್ಮನ ಸೆಳೆಯುತ್ತಿರುವ ನಿಶಬ್ದನಗರದ ಚಿಣ್ಣರ ಎಕ್ಸ್‌ಪ್ರೆಸ್‌


Team Udayavani, Nov 16, 2021, 4:38 PM IST

ಕಣ್ಮನ ಸೆಳೆಯುತ್ತಿರುವ ನಿಶಬ್ದನಗರದ ಚಿಣ್ಣರ ಎಕ್ಸ್‌ಪ್ರೆಸ್‌

ಕುದೂರು: ರೈಲು ಭೋಗಿಯಲ್ಲಿ ಪಾಠ ಹೇಳುವ ಟೀಚರ್‌, ರೈಲಿನಲ್ಲಿಕುಳಿತು ಪಾಠ ಕೇಳುವ ಪುಟಾಣಿ ಮಕ್ಕಳು, ಆಟದೊಂ ದಿಗೆ ಪಾಠ, ಪಾಠದೊಂದಿಗೆ ಆಟ. ಆದರೆ, ಇದು ರೈಲಲ್ಲ. ಬದಲಿಗೆಕುದೂರಿನ ನಿಶಬ್ದ ನಗರದಲ್ಲಿರುವ ಅಂಗನವಾಡಿ ಕಟ್ಟಡ!.

ಇಲ್ಲಿನ ಅಂಗನವಾಡಿ ಕಟ್ಟಡದ ಕೊಠಡಿಗಳಿಗೆ ರೈಲಿನ ಚಿತ್ರ ಬಿಡಿಸಿದ್ದುಕಣ್ಮನ ಸೆಳೆಯುತ್ತಿದೆ. ರೈಲಿನ ಎಂಜಿನ್‌, ಬೋಗಿಗಳು,ಕಿಟಕಿ ಹಾಗೂ ಚಕ್ರಗಳು ಎಲ್ಲವೂ ಥೇಟ್‌ ರೈಲಿನಂತೆಯೇ ಭಾಸವಾಗುತ್ತದೆ. ಮಕ್ಕಳು ಅಂಗನವಾಡಿ ಕಟ್ಟಡದ ಬಾಗಿಲಿನಲ್ಲಿ ನಿಂತು ಇಣುಕಿ ನೋಡಿದರೆ, ರೈಲು ಬೋಗಿಯಿಂದ ಇಣುಕಿದಂತೆಯೇಕಾಣುತ್ತದೆ. ದೂರದಿಂದ ನೋಡಿದರೆ ಇಲ್ಲೊಂದು ರೈಲೇ ಬಂದು ನಿಂತಿರುವ ಮಟ್ಟಿಗೆಕಲಾವಿದರು ತಮ್ಮಕೈಚಳಕ ತೋರಿಸಿದ್ದಾರೆ. ಇದಕ್ಕೆ ಚಿಣ್ಣರ ಎಕ್ಸ್‌ಪ್ರೆಸ್‌ ಎಂದೂ ಹೆಸರಿಡಲಾಗಿದೆ.

ಕ್ರಿಯಾಶೀಲ ಅಧಿಕಾರಿಯಕಾರ್ಯಕ್ಷಮತೆ: ಈಗಿರುವ ಕಟ್ಟಡ ಅರ್ಧಕ್ಕೆಕಾಮಗಾರಿ ನಿಂತು ಹೋಗಿ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈ ಕುರಿತು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಪಂ ಸಿಇಒ ಇಕ್ರಂ ಅವರ ಶ್ರಮದಿಂದ ಅಪೂರ್ಣಗೊಂಡು ನನೆಗುದಿಗೆ ಬಿದ್ದಿದ್ದ ಅಂಗನವಾಡಿ ಕಟ್ಟಡವನ್ನು ನರೇಗಾ ಯೋಜನೆಯಡಿ ಕೆಲಸ ಪೂರ್ಣಗೊಳಿಸಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸುಂದರ ವಿನ್ಯಾಸಗೊಳಿಸಿ ರೂಪಿಸಿದ್ದಾರೆ.

ಇವರ ಕಾರ್ಯ ವೈಖರಿಗೆ ತಾಲೂಕಿನ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾಗಡಿ ತಾಲೂಕಿನಲ್ಲಿ ಒಟ್ಟು12 ಮಾದರಿ ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ8 ಕಟ್ಟಡ ಅಪೂರ್ಣಗೊಂಡಿದ್ದವು. ಒಟ್ಟು369 ಅಂಗನವಾಡಿ ಕೇಂದ್ರಗಳಿವೆ. ಅದರಲ್ಲಿ ಇಲಾಖೆಗೆ ಸೇರಿದ258 ಅಂಗನವಾಡಿ ಸ್ವಂತಕಟ್ಟಡಗಳಿದ್ದು ಅವುಗಳಿಗೆಲ್ಲಾ ಸ್ಥಳೀಯ ಗ್ರಾಪಂಕಡೆಯಿಂದ ಬಣ್ಣ ಬಳಿಸಲಾಗಿದೆ. ಇನ್ನುಳಿದ ಅಂಗನವಾಡಿ ಕಟ್ಟಡಗಳ ಕಾಮಗಾರಿಯೂ ನಡೆಯುತ್ತಿದೆ. ಮಕ್ಕಳ ಕಲಿಕೆ ಖುಷಿ ಹೆಚ್ಚಿಸುವ ಉಪಾಯ: ಕೊಠಡಿ ಬಾಗಿಲಿಗೆ ಬೋಗಿಗಳ ಬಾಗಿಲಿನ ಬಣ್ಣ ಬಳಿಯಲಾಗಿದೆ.

ಮಕ್ಕಳು ಬಾಗಿಲು ತೆಗೆದು ಕೊಠಡಿಯೊಳಕ್ಕೆ ಹೋದಾಗ ರೈಲಿನ ಒಳಗಡೆ ಹೋದ ಅನುಭವ ಬರುವಂತೆ ಮಾಡಲಾಗಿದೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈ ಪ್ರಯತ್ನ ಮಾಡಲಾಗಿದೆ. ಮಕ್ಕಳ ಕಲಿಕೆ ಖುಷಿಯನ್ನು ಹೆಚ್ಚಿಸುವ ಜತೆಗೆ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆಕಂಡು ಕೊಂಡಿರುವ ಉಪಾಯವಿದು. ಇನ್ನು ಕಟ್ಟಡದ ಹಿಂದೆ ತುಂಬಿದಕೆರೆ, ಅದರ ಹಿಂದೆ ಭೈರವನದುರ್ಗದ ಬೆಟ್ಟ, ಎದುರು ಮತ್ತು ಪಕ್ಕದಲ್ಲಿ ದೇವಾಲಯಗಳು ಇಂತಹ ಪರಿಸರದ ನಡುವೆ ರೈಲು ಬೋಗಿ ರೀತಿಯಲ್ಲಿಕಟ್ಟಡಕ್ಕೆ ಬಣ್ಣ ಬಳಿದಿದ್ದು ಉದ್ಘಾಟನೆಗೆ ಮಕ್ಕಳು ಮತ್ತು ಪೋಷಕರು ಎದುರು ನೋಡುತ್ತಿದ್ದಾರೆ.

ಜಿಪಂ ಸಿಇಒ ದೂರ ದೃಷ್ಟಿತನ : ಅಂಗನವಾಡಿ ಕಟ್ಟಡಗಳು ಅತ್ಯಂತ ಆಕರ್ಷಣೀಯವಾಗಿ ರೂಪುಗೊಳ್ಳುವುದಕ್ಕೆ ನಮ್ಮ ಸಿಇಒ ಅವರ ದೂರ ದೃಷ್ಟಿತನ ಪ್ರಮುಖಪಾತ್ರ ವಹಿಸಿವೆ. ಅಂಗನವಾಡಿ ಶಿಕ್ಷಕಿಯರಿಗೆ ಟೊಯೋಟೋದವರ ಸಹಯೋಗದೊಂದಿಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತೇವೆ. ಆಕರ್ಷಕ ಶಾಲಾ ಕಟ್ಟಡದಲ್ಲಿ ಪ್ರತಿಭಾವಂತ ಶಿಕ್ಷಕಿಯರನ್ನು ರೂಪಿಸುವ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಇದರಿಂದ ಸರ್ಕಾರಿ ಶಾಲೆಗಳ ಕಡೆಗೆ ಪೋಷಕರನ್ನು ಮತ್ತು ಮಕ್ಕಳನ್ನು ಸೆಳೆಯಲು ಸುಲಭವಾಗುತ್ತದೆ ಎಂದು ಮಾಗಡಿ ಸಿಡಿಪಿಒಸುರೇಂದ್ರ ತಿಳಿಸಿದರು.

ಇದುವರೆಗೂ ಹಲವಾರು ಸರ್ಕಾರಿ ಶಾಲೆಗಳಿಗೆ ಬಣ್ಣ ಬಣ್ಣದ ಚಿತ್ತಾರ ಬಿಡಿಸಿದ್ದೇನೆ. ಅಂಗನವಾಡಿ ಕಟ್ಟಡದಲ್ಲಿ ಒಂದು ರೈಲಿನ ಚಿತ್ರ ಬರೆದು ಸುಂದರವಾಗಿ ಕಟ್ಟಡ ರೂಪಿಸಿ ಎಂದು ಇಲಾಖೆ ಎಂಜಿನಿಯರ್‌ ನನಗೆ ಹೇಳಿದ್ದರು. ತುಂಬಾ ಶ್ರಮವಹಿಸಿ ಚಿತ್ರ ನೈಜವಾಗಿರುವಂತೆ ಚಿತ್ರಿಸಿದ್ದೇನೆ. ● ಶಿವಲಿಂಗಯ್ಯ, ಕಲಾವಿದ ಕುದೂರು

-ಕೆ.ಎಸ್‌.ಮಂಜುನಾಥ್‌, ಕುದೂರು

ಟಾಪ್ ನ್ಯೂಸ್

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯ

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

new library

2.5 ಲಕ್ಷ ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ನಿರ್ಮಾಣ

medical college

ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ: ಪ್ರೊ.ನಾರಾಯಣಗೌಡ

ಆಸ್ಪತ್ರೆ ಪ್ಲಾನ್

56 ಕೋಟಿ ರೂ.ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಬಿಜೆಪಿಗೆ 15ಕ್ಕೆ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ

ಬಿಜೆಪಿಗೆ 15ಕ್ಕೆ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.