Udayavni Special

ಶೀಘ್ರ ಕೋವಿಡ್‌ ಕೇರ್‌ ಆರಂಭಕ್ಕೆ ವ್ಯವಸ್ಥೆ


Team Udayavani, Jul 4, 2020, 6:56 AM IST

shigra-covid

ಚನ್ನಪಟ್ಟಣ: ತಾಲೂಕಿನಲ್ಲಿ 500 ಜನರಿಗಾಗುವಷ್ಟು ಕೋವಿಡ್‌-19 ಕೇರ್‌ ಆರಂಭಿಸಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಆರ್‌.ಅಶ್ವತ್ಥನಾರಾಯಣ  ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, ಜಿಲ್ಲೆ ಯಲ್ಲಿ ಎಷ್ಟೇ ಸಂಖ್ಯೆಯಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚಾದರೂ ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಇನ್ನು ಹೆಚ್ಚಿನ ಸೌಲಭ್ಯ ಕಲ್ಪಿಸಿ, ಉನ್ನತ ದರ್ಜೆಗೆ ಏರಿಸಲಾಗುವುದು. ಈ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆ ನೀಡಲು ಅನು ಕೂಲವಾಗುವಂತೆ ಸೌಕರ್ಯ ಮತ್ತು ಸೌಲಭ್ಯ ಒದಗಿಸಲಾಗುವುದು ಎಂದು  ತಿಳಿಸಿದರು. ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್‌-19 ಚಿಕಿತ್ಸೆಗೆ ಇಂತಿಷ್ಟೆ ಪ್ರಮಾಣದ ಹಾಸಿಗೆ ಮೀಸಲಿಟ್ಟು, ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದಲೇ ರೋಗಿಗಳನ್ನು ದಾಖಲಿಸಲಾಗುವುದು.

ಸ್ಥಳೀಯ ಆಡಳಿತದಿಂದ ಆಸ್ಪತ್ರೆಗೆ ದಾಖಲಿಸಲು ಕ್ರಮವಹಿಸಲಾಗುವು  ದರ ಜೊತೆಗೆ, ಬಡವರು ಶ್ರೀಮಂತರು ಎನ್ನದೆ ಎಲ್ಲರಿಗೂ ಸರ್ಕಾರದಿಂದಲೇ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು. ನೇರವಾಗಿ  ಖಾಸಗಿ ಆಸ್ಪತ್ರೆಗೆ ದಾಖಲಾಗುವವರು ಅವರೇ, ಆಸ್ಪತ್ರೆಯ ಖರ್ಚು ವೆಚ್ಚ ಭರಿಸಬೇಕಾಗುತ್ತದೆ. ಸರ್ಕಾರದ ಮೀಸಲು ಖೋಟಾದ ಹಾಸಿಗೆ ಹೊರತು ಪಡಿಸಿ, ಖಾಸಗಿ ಆಸ್ಪತ್ರೆಯ ವೆಚ್ಚದ ಹಾಸಿಗೆಗಳನ್ನು ಚಿಕಿತ್ಸೆಗೆ ಬಳಸಿಕೊಂಡಲ್ಲಿ, ಅದರ  ವೆಚ್ಚವನ್ನು ಸಂಬಂಧಿಸಿದ ರೋಗಿಯೇ ಭರಿಸಬೇಕಾಗುತ್ತದೆ.

ಎಲ್ಲರಿಗೂ ಚಿಕಿತ್ಸೆ ದೊರೆಯಬೇಕು ಎಂಬ ಸದುದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದರು. ಕೋವಿಡ್‌-19ರ ರೋಗ ಲಕ್ಷಣವಿಲ್ಲದವ ರಿಗೆ ಆಸ್ಪತ್ರೆ ಬದಲು ಮನೆಯಲ್ಲೇ ಚಿಕಿತ್ಸೆ ನೀಡಲು ನಿಯಮ ರೂಪಿಸಲಾಗಿದೆ. ಮನೆಯಲ್ಲಿಯೇ ಸೌಲಭ್ಯಗಳಿದ್ದರೆ, ಇಂತಹವರು ಮನೆಯಿಂದಲೇ ಚಿಕಿತ್ಸೆ ಪಡೆದುಕೊಳ್ಳ ಬಹುದು. ಕೋವಿಡ್‌- 19 ಇನ್ನು ನಿಯಂತ್ರಣ ದಲ್ಲಿದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆ ಲಭ್ಯವಾಗಲಿದೆ. ಹೀಗಾಗಿ ಭಯಪಡುವ ಅಗತ್ಯವಿಲ್ಲ. ಕೋವಿಡ್‌-19 ಅನ್ನು ನಿಯಂತ್ರಿಸಲು ಸರ್ಕಾರ ಅಗತ್ಯವಿರುವ ಕ್ರಮ ಕೈಗೊಂಡಿದೆ.

ಹಾಗೆಯೇ ಶಕ್ತಿಮೀರಿ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು. ಶಂಕೆ ಇರುವವರಿಗೆಲ್ಲರಿಗೂ  ಕೋವಿಡ್‌-19 ಪರೀಕ್ಷೆ ಮಾಡಲಾಗು ತ್ತದೆ. ವಿದೇಶದಿಂದ ಬಂದವರು, ಹೊರರಾಜ್ಯ ದಿಂದ ಬಂದವ ರಿಗೂ ಪರೀಕ್ಷೆ ಮಾಡಲಾಗು ತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೋವಿಡ್‌ ಮಾದರಿಗಳ ಪರೀಕ್ಷೆಯ ಪ್ರಮಾಣ ದಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.  ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಜರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತಂದೆಯನ್ನು ಕೊಂದ 16ವರ್ಷದ ಪುತ್ರಿ, ಪೊಲೀಸರಿಗೆ ಕರೆ ಮಾಡಿ ಶರಣಾದಳು! ಏನಿದು ಘಟನೆ

ತಂದೆಯನ್ನು ಕೊಂದ 16ವರ್ಷದ ಪುತ್ರಿ, ಪೊಲೀಸರಿಗೆ ಕರೆ ಮಾಡಿ ಶರಣಾದಳು! ಏನಿದು ಘಟನೆ

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಬಿಹಾರ ಚುನಾವಣೆ 2020: ಬಿಜೆಪಿ ಪ್ರಣಾಳಿಕೆ ಬಿಡುಗಡೆ, 19 ಲಕ್ಷ ಉದ್ಯೋಗ, ಕೋವಿಡ್ ಲಸಿಕೆ ಉಚಿತ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಅವಹೇಳನಕಾರಿ ಫ್ಲೆಕ್ಸ್ ಅಳವಡಿಕೆ: ಕಿಡಿಗೇಡಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಸರ್ಜಿಕಲ್ ದಾಳಿ ನಡೆದು 18 ತಿಂಗಳ ಬಳಿಕ ಬಾಲಾಕೋಟ್ ನಲ್ಲಿ ಮತ್ತೆ ತಲೆಎತ್ತಿದ ಉಗ್ರರ ಶಿಬಿರ

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಚರಣೆಯ ವಿಡಿಯೋ ವೈರಲ್ !

ಭೀಮಾ ನದಿ ಪ್ರವಾಹದಲ್ಲಿ ಪಿಎಸ್ಐಯ ನಕಲಿ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ !

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

ಉಡುಪಿ : ಅಂಗಡಿ ಬಾಗಿಲು ಮುರಿದು ಪಾಲಿಶ್ ಮಾಡಲು ತಂದಿಟ್ಟ 15 ಗ್ರಾಂ ಚಿನ್ನ ಕಳ್ಳತನ

irani

ಪೊಲೀಸರೆಂದು ನಂಬಿಸಿ, ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್ ನ ನಾಲ್ವರ ಬಂಧನ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rn-tdy-1

ಚಿಯಾ ವಿದೇಶಿ ಸಿರಿಧ್ಯಾನ

rn-tdy-02

ಕಪಾಲ ಬೆಟ್ಟ: ತಾರ್ಕಿಕ ಅಂತ್ಯದ ವರೆಗೂ ಹೋರಾಟ

ಆರೋಗ್ಯ ಕೇಂದ್ರಕ್ಕೆ ಮತ್ತೆ ಜಲಗಂಡಾಂತರದ ಆತಂಕ

ಆರೋಗ್ಯ ಕೇಂದ್ರಕ್ಕೆ ಮತ್ತೆ ಜಲಗಂಡಾಂತರದ ಆತಂಕ

rn-tdy-3

ನೆರೆ ಜಿಲ್ಲೆಗಳಿಗೆ ಪ್ರಧಾನಿ ಬರಲಿ

rn-tdy-2

ರಾಮನಗರ: ಕೋವಿಡ್ ಗೆ ಮೂವರು ವಾರಿಯರ್ಸ್ ಬಲಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್



ಹೊಸ ಸೇರ್ಪಡೆ

cm-tdy-1

ಪೊಲೀಸರಿಗೆ ನಾಗರಿಕರ ನೆರವು ಅಗತ್ಯ

vegetable-spring-roll-a

ಮನೆಯಲ್ಲೇ ಮಾಡಿ ನೋಡಿ ರುಚಿಕರವಾದ ವೆಜಿಟೆಬಲ್‌ ಸ್ಪ್ರಿಂಗ್‌ ರೋಲ್ಸ್‌

ಆಡಳಿತ ಪಕ್ಷ ವಿರುದ್ಧ ಬೇಸತ್ತ ಜನ ಕಾಂಗ್ರೆಸ್‌ ಪಕ್ಷದತ್ತ ಒಲವು ತೋರುತ್ತಿದ್ದಾರೆ : ಕೋಳಿವಾಡ

ಆಡಳಿತ ಪಕ್ಷ ವಿರುದ್ಧ ಬೇಸತ್ತ ಜನ ಕಾಂಗ್ರೆಸ್‌ ಪಕ್ಷದತ್ತ ಒಲವು ತೋರುತ್ತಿದ್ದಾರೆ : ಕೋಳಿವಾಡ

Ballary-tdy-2

ಪೊಲೀಸರ ಕಾಯಕ ನಿಷ್ಠೆ ಶ್ಲಾಘನೀಯ

BALLARY-TDY-1

9-10ನೇ ತರಗತಿವರೆಗೂ ಆರ್‌ಟಿಇ ಕಾಯ್ದೆ ವಿಸ್ತರಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.