ದಾಖಲೆಗಳಿಲ್ಲದೇ ಸಭೆಗೆ ಹಾಜರು: ತರಾಟೆ


Team Udayavani, Mar 18, 2021, 8:31 AM IST

ದಾಖಲೆಗಳಿಲ್ಲದೇ ಸಭೆಗೆ ಹಾಜರು: ತರಾಟೆ

ಕನಕಪುರ: ಏಳು ವರ್ಷಗಳ ನಂತರ ನಡೆದ ಮೊದಲ ಪರಿಶಿಷ್ಟ ಜಾತಿ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಅಗತ್ಯ ದಾಖಲೆಗಳಿಲ್ಲದೆ ಸಭೆಗೆ ಹಾಜರಾಗಿದ್ದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಮುದಾಯದ ಮುಖಂಡರು ಬೆವರಿಳಿಸಿದ್ದಾರೆ.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಹಶೀಲ್ದಾರ್‌ ವರ್ಷಾ ಅವರ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿ,ಎಸ್ಟಿ ಗಳ ಕುಂದುಕೊರತೆ ಸಭೆಯಲ್ಲಿ ಪರಿಶಿಷ್ಟಜಾತಿ ಪಂಗಡದ ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಗತ್ಯದಾಖಲೆಗಳಿಲ್ಲದೆ ಸಭೆಗೆ ಹಾಜರಾದ ಅಧಿಕಾರಿಗಳಿಗೆ ಮತ್ತು ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ

ನೀಡಿದೆ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ರಾಧಾಕೃಷ್ಣಮತ್ತು ಮೀನುಗಾರಿಕೆ ಇಲಾಖೆ ಮುನಿವೆಂಕಟಪ್ಪಅವರನ್ನು ಶೀಘ್ರವೇ ವರ್ಗಾವಣೆ ಮಾಡಬೇಕೆಂದು ಪಟ್ಟು ಹಿಡಿದ ಪ್ರಸಂಗ ನಡೆಯಿತು.

ಎಷ್ಟು ಪರಿಹಾರ ನೀಡಿದ್ದೀರಿ ದಾಖಲೆ ನೀಡಿ: ಸಭೆಆರಂಭವಾಗುತ್ತಿದ್ದಂತೆ ಮೊದಲಿಗೆ ಸಮುದಾಯದ ಮುಖಂಡ ಶಿವಲಿಂಗಯ್ಯ ಮಾತನಾಡಿ, ದಲಿತಸಮುದಾಯಗಳ ಮೇಲೆ ನಡೆದ ದೌರ್ಜನ್ಯಅಟ್ರಾಸಿಟಿ ಕೊಲೆಯಂಥ ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಷ್ಟು ಕುಟುಂಬಗಳಿಗೆಪರಿಹಾರ ಕೊಟ್ಟಿದ್ದೀರಿ, ನಿಮ್ಮ ಇಲಾಖೆಯಲ್ಲಿ ದಲಿತ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡದೆ ವಂಚಿಸಿದ್ದೀರಿ ನಿಮ್ಮ ಇಲಾಖೆಯಲ್ಲಿ ನಡೆದಿರುವಷ್ಟು ವಂಚನೆ ಬೇರ್ಯಾವುದೇ ಇಲಾಖೆಯಲ್ಲೂ ನಡೆದಿಲ್ಲ. ನಿಮ್ಮ ಇಲಾಖೆಯಲ್ಲಿಸೌಲಭ್ಯ ಪಡೆದಿರುವ ಫ‌ಲಾನುಭವಿಗಳ ಪಟ್ಟಿ ಹಾಗೂಇಲಾಖೆಗೆ ಸರ್ಕಾರದಿಂದ ಬಂದಿರುವ ಅನುದಾನದಬಗ್ಗೆ ಸಂಪೂರ್ಣ ದಾಖಲೆ ನೀಡಿ ಎಂದು ಪಟ್ಟುಹಿಡಿದರು.

ಬಿಎಸ್ಪಿ ಮುಖಂಡ ನೀಲಿ ರಮೇಶ್‌ ಮಾತನಾಡಿ, ಎಂಟು ದಶಕಗಳಿಂದ ಪೌರಕಾರ್ಮಿಕರ ಮನೆಗಳಿಗೆ ಹಕ್ಕುಪತ್ರ ವಿತರಣೆ ಮಾಡಿಲ್ಲ ಕಳೆದ ಸಭೆಯಲ್ಲಿ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂಬ ಮಾಹಿತಿ ನೀಡಿದ್ದರು. ಆದರೆ, ಈವರೆಗೂ ಹಕ್ಕು ಪತ್ರ ಕೊಟ್ಟಿಲ್ಲ ಒಂದು ತಲೆಮಾರು ಕಳೆದರೂ ಮನೆಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗದಿದ್ದ ಮೇಲೆ ನೀವಿದ್ದು ಪ್ರಯೋಜನವೇನು ಎಂದರು.

ದಮ್ಮ ದೀವಿಗೆ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಗಣಿಗಾರಿಕೆ ಕ್ರಷರ್‌ ಮರಳುಗಾರಿಕೆಉದ್ಯಮಗಳಲ್ಲಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿಲ್ಲ ಸಣ್ಣಪುಟ್ಟ ಉದ್ಯಮಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೂರೈಸುವ ಗರ್ಭಿಣಿ, ಬಾಣಂತಿಯರ ಆಹಾರ ಸಾಮಗ್ರಿಗಳನ್ನು ದಲಿತ ಸಮುದಾಯದ ಮಹಿಳಾ ಸಂಘಗಳು ಪೂರೈಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಆಧಿಕಾರಿಗಳ ಎತ್ತಂಗಡಿಗೆ ಒತ್ತಾಯ: ಬಳಿಕ ಮೀನುಗಾರಿಕೆ ಇಲಾಖೆ ಮುನಿವೆಂಕಟಪ್ಪ ಇಲಾಖೆಯ ಮಾಹಿತಿ ನೀಡಿ 50 ಲಕ್ಷ ರೂ. ಕಾಮಗಾರಿ ಕೈಗೊಳ್ಳದೆ ಸರ್ಕಾರಕ್ಕೆ ವಾಪಸ್ಸಾಗಿದೆ ಎಂದು ಮಾಹಿತಿ ನೀಡುತ್ತಿದ್ದಂತೆ ಗೋಪಿ ಮಲ್ಲಿಕಾರ್ಜುನ್‌ ನಾಗೇಶ್‌ ಶಿವಲಿಂಗಯ್ಯ ಸೇರಿದಂತೆ ಅನೇಕ ದಲಿತ ಮುಖಂಡರು ಧ್ವನಿಗೂಡಿಸಿ, ಕೃಷಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಯಾವುದೇ ಸವಲತ್ತು ಜನರಿಗೆ ಸರಿಯಾಗಿ ಸೇರುತ್ತಿಲ್ಲ. ಕೃಷಿ ಇಲಾಖೆ ರಾಧಾಕೃಷ್ಣ ಮತ್ತು ಮೀನುಗಾರಿಕೆ ಇಲಾಖೆ ಮುನಿವೆಂಕಟಪ್ಪ ಇಬ್ಬರು ಅಧಿಕಾರಿಗಳನ್ನು ಕೂಡಲೇ ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ವರ್ಷ ಒಡೆಯರ್‌, ಎಲ್ಲರೂ ಸೇರಿ ಮನವಿ ಪತ್ರ ಕೊಡಿ ಮೇಲಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಥಳಾವಕಾಶ ಕಲ್ಪಿಸಿ: ಗುರುಮೂರ್ತಿ ಮಾತನಾಡಿ, 50 ವರ್ಷಗಳಿಂದಲೂ ಜಿಲ್ಲಾಡಳಿತದಿಂದ ಅನುಮತಿ ಪಡೆದು ಚಮ್ಮಾರಿಕೆ ಮಾಡುತ್ತಿದ್ದ ವೃದ್ಧರನ್ನು ನಗರಸಭೆ ಅಧಿಕಾರಿಗಳು ಮತ್ತು ಅಧ್ಯಕ್ಷರು ಏಕಾಏಕಿ ತೆರವುಗೊಳಿಸಿ ಅವರ ಬದುಕನ್ನು ಬೀದಿಗೆ ತಳ್ಳಿದ್ದಾರೆ.ಕೂಡಲೇ ಅವರಿಗೆ ಸ್ಥಳಾವಕಾಶ ಕಲ್ಪಿಸಬೇಕು ಎಂದು ಎಚ್ಚರಿಸಿದರು.

ರಾಂಪುರ ನಾಗೇಶ್‌ ಮಾತನಾಡಿ. ಸಭೆಯಲ್ಲಿ ನಮಗೆ ಪೂರ್ಣ ಪ್ರಮಾಣದ ಮಾಹಿತಿ ನೀಡಿಲ್ಲ ಹಾಗಾಗಿಸಭೆಯನ್ನು ಮುಂದೂಡಿ ಮುಂದಿನ ಸಭೆಯ ವೇಳೆಗೆ ಇಲಾಖಾವಾರು ಅಗತ್ಯ ದಾಖಲೆಗ ಳೊಂದಿಗೆ ಹಾಜರಿರಬೇಕು ಎಂದು ಮನವಿ ಮಾಡಿದರು.  ತಹಶಿಲ್ದಾರ್‌ ವರ್ಷ ಒಡೆಯರ್‌ ಮಾತನಾಡಿ,ಇನ್ನು 15 ದಿನಗಳ ಒಳಗಾಗಿ ಎಲ್ಲ ಇಲಾಖೆಯ ಅಧಿಕಾರಿಗಳು ಅಗತ್ಯ ದಾಖಲಾತಿಗಳನ್ನುಕ್ರೋಢೀಕರಿಸಿ ಸಮುದಾಯದ ಮುಖಂಡರಿಗೆತಲುಪಿಸಬೇಕು ನಂತರ ನಡೆಯುವ ಸಭೆಯಲ್ಲಿ ಎಲ್ಲರೂ ಹಾಜರಿರಬೇಕು ಎಂದರು.

ಶಿರಸ್ತೇದಾರ ರಘು, ಇಒ ಮೋಹನ್‌ ಬಾಬುಸಮಾಜ ಕಲ್ಯಾಣ ಇಲಾಖೆಯ ಸಹಾಯಕನಿರ್ದೇಶಕ ಜಯಪ್ರಕಾಶ್‌, ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆಯ ಮಂಜುನಾಥ್‌, ಮೀನುಗಾರಿಕೆಇಲಾಖೆಯ ಮುನಿವೆಂಕಟಪ್ಪ, ರೇಷ್ಮೆ ಇಲಾಖೆಯಮುತ್ತುರಾಜ್‌, ಕೃಷಿ ಇಲಾಖೆಯ ರಾಧಾಕೃಷ್ಣ ಹಾಗು ಸರ್ಕಾರಿ ವಿವಿಧ ಇಲಾಖೆಯ ಅಧಿಕಾರಿಗಳು ದಲಿತಸಮುದಾಯದ ರಾಂಪುರ ನಾಗೇಶ್‌ ಮಲ್ಲಿಕಾರ್ಜುನ್‌ ಶಿವಲಿಂಗಯ್ಯ ಗುರುಮೂರ್ತಿಚಂದ್ರು ಶಿವ ಇತರರು ಇದ್ದರು.

ಪ್ರಭಾವಿಗಳ ಹೆಸರು ಹೇಳಿದರೆ ಸವಲತ್ತು :

ಸಭೆಯಲ್ಲಿ ಹಾಜರಿದ್ದ ವಿವಿಧ ಇಲಾಖೆಯಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡು ವಾಗ ಕೃಷಿ ಇಲಾಖೆ ಮತ್ತು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇಲಾಖೆಯ ಮಾಹಿತಿ ನೀಡಲು ಮುಂದಾದಾಗ ಶಿವಮುತ್ತು ಮಧ್ಯಪ್ರವೇಶಿಸಿ ನಿಮ್ಮ ಇಲಾಖೆಯಲ್ಲಿ ಸಿಗುವ ಸೌಲತ್ತುಗಳನ್ನು ಪಡೆಯ ಬೇಕಾದರೆ ಜಿಪಂ, ತಾಪಂ ಸದಸ್ಯರಿಂದ ಅನುಮತಿಪತ್ರ ತರಬೇಕು ಎಂದು ಹೇಳುತ್ತೀರಿ, ರಾಜಕಾರಣಿ ಗಳು ಹೆಸರು ಹೇಳಿಕೊಂಡು ಬಂದವರಿಗೆ ಮೀಸಲಾತಿ ಇಲ್ಲದಿದ್ದರೂ ಸವಲತ್ತುಗಳನ್ನು ಕೊಟ್ಟಿದ್ದೀರಿ.ಸರಿಯಾಗಿಮಾಹಿತಿ ನೀಡದೆ ಇಲಾಖೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Getting good response from people in constituency: D.K. Suresh

Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.