ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ಮೋಸಗಾರ

ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿಯವರಿಂದ ಗಂಭೀರ ಆರೋಪ

Team Udayavani, Jul 22, 2019, 1:02 PM IST

ಮಾಗಡಿ ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಸುದ್ದಿಗಾರರಿಗೆ ತನ್ನ ಸಹೋದರ ನರಸಿಂಹಮೂರ್ತಿ ಯ ಮೋಸ ,ವಂಚನೆಗೆ ಸಂಬಂಧಿಸಿದಂತೆ ದಾಖಲೆ ತೋರಿಸುತ್ತಿರುವುದು.

ಮಾಗಡಿ: ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ನಯವಂಚಕ, ಮೋಸಗಾರ. ನನ್ನ ವಿರುದ್ಧ ಆರೋಪ ಮಾಡುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಕಲ್ಲುದೇವನಹಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ, ನರಸಿಂಹಮೂರ್ತಿಗೆ ನಾನು ವಂಚಕ, ಮೋಸಗಾರ ಎಂಬುದು ಈಗ ಗೊತ್ತಾಗಿದೆ. ನರಸಿಂಹಮೂರ್ತಿ ಮಗ ನನ್ನು ಜೈಲಿನಿಂದ ಬಿಡಿಸಿದ್ದಾಗ, ಮಗನ ಅಪಘಾತದ ಸಂದರ್ಭದಲ್ಲಿ, ಮದುವೆಗೆ ಹಣ ಕೊಟ್ಟಾಗ ಮೋಸಗಾರನಾಗಿರಲಿಲ್ಲ. ನನ್ನಿಂದ ಕೋಟ್ಯಂತರ ರೂ. ಸಹಕಾರ ಪಡೆದು, ಈಗ ನನ್ನನ್ನು ಮೋಸ ಗಾರ ಎಂದು ಹೇಳುವ ನರಸಿಂಹಮೂರ್ತಿಗೆ ನಾಚಿಕೆಯಾಗಬೇಕು ಎಂದು ವಿರುದ್ಧ ಕೆ. ಕೃಷ್ಣಮೂರ್ತಿ ಹರಿಹಾಯ್ದರು.

ಶೀಘ್ರ ಮೋಸಗಾರ ಯಾರೆಂದು ತಿಳಿಯುತ್ತದೆ: ನರಸಿಂಹಮೂರ್ತಿ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಅವರ ಮಗನ ಭವಿಷ್ಯಕ್ಕೆ ಧಕ್ಕೆಯಾಗಬಾರದು ಎಂಬ ಉದ್ದೇಶದಿಂದ ಸುಮ್ಮ ನಿದ್ದೇವು. ಈಗಲೂ ನರಸಿಂಹ ಮೂರ್ತಿ ವಿರುದ್ಧ ಗಂಭೀರ ಆರೋಪವು ಕೋರ್ಟ್‌ ಕಟಕಟೆ ಯಲ್ಲಿದೆ. ಕೆಲದಿನಗಳಲ್ಲೇ ಹೈಕೋರ್ಟ್‌ ಮೆಟ್ಟಿ ಲೇರುವ ಸಾಧ್ಯತೆಗಳೂ ಇವೆ. ಅಲ್ಲದೆ ಅನ್ಯಾಯ ಕ್ಕೊಳಗಾಗಿರುವವರು ಶೀಘ್ರದಲ್ಲೇ ಮಾಧ್ಯಮ ಮುಂದೆ ಬರಲಿದ್ದಾರೆೆ. ಆಗಲೇ ಜನರಿಗೆ ಮೋಸಗಾರ, ನಯವಂಚಕ ಯಾರು ಎಂದು ತಿಳಿಯುತ್ತದೆ ಎಂದು ಆರೋಪಿಸಿದರು.

ಸಂಸ್ಥೆಯಿಂದ ವಜಾಗೊಂಡವರು: ಬಿಡಿಸಿಸಿ ಬ್ಯಾಂಕ್‌ ಹಗರಣದಲ್ಲಿ ನನ್ನ ಪಾತ್ರವಿದೆ ಎಂಬ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ಅಪರಾಧಿ ಯಲ್ಲ. ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಆದರೆ ನನ್ನ ವಿರುದ್ಧ ಮಾತನಾಡುತ್ತಿರುವ ಎಚ್.ಎನ್‌.ಅಶೋಕ್‌ ಮತ್ತು ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ, ಈ ಇಬ್ಬರು ಸಂಸ್ಥೆಯಿಂದ ವಜಾ ಗೊಂಡಿರುವವರಾಗಿದ್ದಾರೆ. 2016ರಲ್ಲಿ ಆಗಲ ಕೋಟೆ ಡೇರಿಯಲ್ಲಿ ಮೋಸದ ಪ್ರಕರಣದಲ್ಲಿರುವ ನರಸಿಂಹಮೂರ್ತಿ ವಿರುದ್ಧ 29 ಅಡಿ ನೋಟಿಸ್‌ ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.

ನಾನು ಕೇಸು ಹಾಕಿಸಿಲ್ಲ: ರಂಗನಾಥಸ್ವಾಮಿ ಮತ್ತು ಕಲ್ಲುದೇವನಹಳ್ಳಿ ಮಹಾದೇಶ್ವರ ಸ್ವಾಮಿ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ನರಸಿಂಹ ಮೂರ್ತಿಯವರ ದೊಡ್ಡ ಮಗನೇ, ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು. ಇದರಲ್ಲಿ ನನ್ನ ಪಾತ್ರ ವೇನೂ ಇಲ್ಲ. ಕಾರ್ಯದರ್ಶಿ ನಿವೃತ್ತಿಯಾಗಿದ್ದಾಗ ಆ ಹುದ್ದೆಗೆ ಪದವೀಧರ ಅಂಗವಿಕಲ ಹಾಗೂ ಎಸ್‌ಸಿ ಯುವಕ ಅರ್ಜಿಸಲ್ಲಿಸಿದ್ದರು. ಆದರೆ ಇವರಿ ಬ್ಬರ ಅರ್ಜಿ ತಿರಸ್ಕಾರವಾಗಿ, ಅನರ್ಹ ವ್ಯಕ್ತಿಯೊಬ್ಬನ ಹುದ್ದೆಗೆ ತಾತ್ಕಾಲಿಕವಾಗಿ ನೇಮಕವಾಗುತ್ತದೆ. ಬಳಿಕ ಯುವಕನನ್ನು ವಜಾಗೊಳಿಸಿ, ಮರು ನೇಮಕ ಗೊಳಿಸಿ ಕಾಯಂಗೊಳಿಸಲಾಗುತ್ತದೆ. ಇದು ಎಂತಹ ನಿಯಮ ಎಂದು ತಿಳಿದಿಲ್ಲ. ಈ ಕೃತ್ಯದ ವಿರುದ್ಧ ಅವರ ಪುತ್ರನೇ ಪ್ರಕರಣ ದಾಖಲಿಸಿದ್ದಾರೆ. ಡೇರಿ ಯಲ್ಲಿ ಹೊಂದಾಣಿಕೆ ಬಳಿಸ ಸುಮ್ಮನಾಗಿದ್ದರು.

ಅನ್ಯಾಯಕ್ಕೊಳಗಾದವರ ಪರವಾಗಿದ್ದೇನೆ: ನರಸಿಂಹ ಮೂರ್ತಿಯಿಂದ ಸಾಕಷ್ಟು ಯುವಕರು ಮೋಸ ಹೋಗಿದ್ದಾರೆ. ನಾನು ಅವರ ಪರವಾಗಿ ನಿಂತಿದ್ದು, ನರಸಿಂಹ ಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿದ್ದೇನೆ. ಏಕ ಪೀಠದ ನ್ಯಾಯದಲ್ಲಿ ನರಸಿಂಹ ಮೂರ್ತಿಗೆ ನ್ಯಾಯ ದೊರೆತರೆ, ದ್ವಿಪೀಠ ನ್ಯಾಯದಲ್ಲಿ ನಮಗೆ ಜಯ ದೊರಕಿತು. ಆದರೆ ಪ್ರಕರಣವನ್ನು ಡಿ.ಆರ್‌.ಕೋರ್ಟ್‌ನಲ್ಲಿ ಇತ್ಯರ್ಥ ಗೊಳಿಸಿಕೊಳ್ಳಲು ಪೀಠ ತಿಳಿಸಿದೆ. ಈಗಲೂ ಪ್ರಕರಣ ಕೋರ್ಟ್‌ನಲ್ಲಿದ್ದು, ಇತ್ಯರ್ಥವಾಗದಿದ್ದರೆ ಸುಪ್ರೀಂ ನಲ್ಲಿ ಪ್ರಕರಣ ದಾಖಲಿಸುತ್ತೇನೆ. ಅಲ್ಲದೆ ನರಸಿಂಹ ಮೂರ್ತಿ ಮೋಸಗಾರರು ಯಾರು ಎಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಆಗಲಕೋಟೆ, ಲವ, ಬಾಳೇನಹಳ್ಳಿ ಶಿವಲಿಂಗಯ್ಯ, ಮಲ್ಲಿಕಪ್ಪ, ಜಗದೀಶ್‌, ಪ್ರಸನ್ನಕುಮಾರ್‌ ಗೌಡ, ಬೋಗೇಶ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಪಟ್ಟಣ: ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಲೇಬೇಕೆಂಬ ನಿಯಮವನ್ನು ಸಂಚಾರ ಪೊಲೀಸರು ಜಾರಿಗೊಳಿಸಿರುವ ಬೆನ್ನಲ್ಲೇ, ಹೆಲ್ಮೆಟ್ ಮಾರಾಟಗಾರರು ಕಳಪೆ...

  • ರಾಮನಗರ: ಹೆದ್ದಾರಿ ರಸ್ತೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳಿಗೆ ತಾಕೀತು ಮಾಡಿದರು. ರಾಮನಗರ ಪ್ರಾದೇಶಿಕ...

  • ಚನ್ನಪಟ್ಟಣ: ರಂಗಭೂಮಿ ಕಲೆ ತನ್ನದೇ ಆದ ಮಹತ್ತರ ಇತಿಹಾಸ ಹೊಂದಿದೆ. ಇತ್ತೀಚಿನ ದೂರದರ್ಶನದಲ್ಲಿ ಪ್ರದರ್ಶನವಾಗುವ ಯಾವ ಕಾರ್ಯಕ್ರಮಗಳೂ ಇದಕ್ಕೆ ಸರಿಸಾಟಿಯಾಗಲಾರದು...

  • ರಾಮನಗರ: ರಾಜ್ಯದಲ್ಲಿ ಉಗ್ರರ ದಾಳಿ ನಡೆಯಬಹುದು ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್‌ ಘೋಷಿಸಿದ್ದು, ಜಿಲ್ಲಾ...

  • ರಾಮನಗರ: ದೇಶದ ಹಲವು ರಾಜ್ಯಗಳಲ್ಲಿ ನೆರೆ ಹಾವಳಿ ಕಾಡಿದೆ. ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಕೇಂದ್ರ ಸರ್ಕಾರ ತಕ್ಷಣ ರಾಷ್ಟ್ರೀಯ ವಿಪತ್ತು...

ಹೊಸ ಸೇರ್ಪಡೆ