Udayavni Special

ಓಟ್‌ ಬ್ಯಾಂಕ್‌ಗಾಗಿ ಬಿಜೆಪಿ ವಿರುದ್ಧ ಅಪಪ್ರಚಾರ


Team Udayavani, Feb 24, 2021, 12:21 PM IST

ಓಟ್‌ ಬ್ಯಾಂಕ್‌ಗಾಗಿ ಬಿಜೆಪಿ ವಿರುದ್ಧ ಅಪಪ್ರಚಾರ

ಕನಕಪುರ: ಬಿಜೆಪಿ ಸರ್ಕಾರ ಮೀಸಲಾತಿ ರದ್ದುಗೊಳಿಸಿ ಸಂವಿಧಾನವನ್ನು ತೆಗೆದುಹಾಕಲಿದೆ ಎಂದು ಕೆಲವರು ತಮ್ಮ ಓಟ್‌ ಬ್ಯಾಂಕ್‌ ಉಳಿಸಿ ಕೊಳ್ಳಲು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ತಾಲೂಕಿನ ಶಿವನಹಳ್ಳಿ ಸಮೀಪ ನಡೆದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂಬೇಡ್ಕರ್‌ ಅವರನ್ನು ಬಿಜೆಪಿ ಎಲ್ಲಿಯೂ ವಿರೋಧಿಸಿಲ್ಲ. ಸಂವಿಧಾನ ಮತ್ತು ಮೀಸಲಾತಿ ತೆಗೆಯುವುದಾಗಿ ಬಿಜೆಪಿ ಎಲ್ಲೂ ಹೇಳಿಲ್ಲ. ಬಿಜೆಪಿ ದಲಿತ ಮತ್ತು ಮುಸ್ಲಿಮರ ವಿರೋಧಿಯಲ್ಲ. ಆದರೆ, ಇಡೀ ರಾಷ್ಟ್ರದಲ್ಲಿ ಬಿಜೆಪಿ ಅಲೆ ಕಂಡು ತಮ್ಮ ಓಟ್‌ ಬ್ಯಾಂಕ್‌ ಉಳಿಸಿಕೊಳ್ಳಲು ಕೆಲವರು ಕುತಂತ್ರದಿಂದ, “ಬಿಜೆಪಿ ಪಕ್ಷ ದಲಿತ ಮತ್ತು ಅಂಬೇಡ್ಕರ್‌ ವಿರೋಧಿ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ಮೀಸಲಾತಿ ರದ್ದುಗೊಳಿಸುವುದಿಲ್ಲ: ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವ ಪ್ರಶ್ನೆಯಿಲ್ಲ. ಇಂದು ದೇಶದಲ್ಲಿ ಮುಸ್ಲಿಮರು ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ ಎಂದರೆ ಅದಕ್ಕೆ ಬಿಜೆಪಿ ಕಾರಣ. ಈವರೆಗೂ ಒಂದು ವ್ಯವಸ್ಥೆಯನ್ನು ಕಂಡಿದ್ದೇವೆ. ಮತ್ತೆ ಅದೇ ವ್ಯವಸ್ಥೆಯಲ್ಲಿ ನಮ್ಮ ಬದಲಾವಣೆ ಸಾಧ್ಯವಿಲ್ಲ. ಕಾಂಗ್ರೆಸ್‌ ನಮ್ಮನ್ನು ಸಂಪೂರ್ಣವಾಗಿ ಸರ್ವನಾಶ ಮಾಡಿದೆ. ರಾಮನಗರ ಜಿಲ್ಲೆಯಿಂದ ಒಬ್ಬ ದಲಿತ ಮುಖಂಡ ಜಿಲ್ಲಾ ಮತ್ತು ರಾಜ್ಯಮಟ್ಟದ ನಾಯಕರಾಗಿ ಬೆಳೆದಿಲ್ಲ ಎಂದರು.

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ: ಕಾಂಗ್ರೆಸ್‌ ಅಧಿಕಾರದಿಂದ ದೂರ ಉಳಿದಾಗ ದೇಶದಲ್ಲಿಗಲಭೆಗಳು ಸೃಷ್ಟಿಯಾಗುತ್ತವೆ. ಕನಕಪುರದ ನಾಯ ಕರು ತಮ್ಮ ಭೂಮಿಯಲ್ಲಿ ಚಿನ್ನ ಬೆಳೆಯುತ್ತಾರಂತೆ ಹೌದಾ?. ಎಲ್ಲ ಸುಳ್ಳು. ರಸ್ತೆ ಕಾಮಗಾರಿಗೆ ಬರಬೇಕಾದ ಹಣ ನೇರವಾಗಿ ಅವರ ಮನೆ ಸೇರಿ, ಸಿಕ್ಕಿಬಿದ್ದಿದ್ದಾರೆಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‌ ಮತ್ತು ಡಿ.  ಕೆ.ಸುರೇಶ್‌ ವಿರುದ್ಧ ಹರಿಹಾಯ್ದರು. ಬಿಜೆಪಿ ಎಸ್ಸಿ ಮೊರ್ಚಾ ವಿಭಾಗ ಸಂಘಟನಾ ಕಾರ್ಯದರ್ಶಿ ಕಾಂತರಾಜ್‌, ಜಿಲ್ಲಾಧ್ಯಕ್ಷ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಲೆ ರಾಜು, ಅಚ್ಚಲುರಾಜು, ಶೇಖರ್‌, ತಾಲೂಕು ಅಧ್ಯಕ್ಷ ಶಿವಮುತ್ತು, ಉಪಾಧ್ಯಕ್ಷಮದೆಶ್‌, ವೆಂಕಟೆಶ್‌, ನಂಜುಂಡ, ದೇವರಾಜು, ಚಂದ್ರಕಾಂತ್‌ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ :

ದಲಿತ ಸಂಘಟನೆಗಳು ದಾರಿ ತಪ್ಪುತ್ತಿವೆ. ನಮ್ಮನ್ನು ವಿರೋಧಿಸಲೆಂದೇ ಕೆಲವು ಸಂಘಟನೆಗಳು ಕೆಲಸ ಮಾಡುತ್ತಿವೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅರಿತುಕೊಂಡಿದ್ದಾರೆ. ಕೆಲವರು ಸಮಯ, ಸಂದರ್ಭ ಬಳಸಿಕೊಂಡು ಅಪಪ್ರಚಾರ ಮಾಡುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ನಾರಾಯಣ ಸ್ವಾಮಿ ಕರೆ ನೀಡಿದರು.

ಟಾಪ್ ನ್ಯೂಸ್

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಕರ್ನಾಟಕ, ಮಹಾರಾಷ್ಟ್ರ, ಕೇರಳ, ಪಂಜಾಬ್ ನಲ್ಲಿ ಕೋವಿಡ್ ಪ್ರಕರಣಗಳ ಏರಿಕೆ..!

ಕೊವ್ಯಾಕ್ಸಿನ್‌ ಲಸಿಕೆ ಶೇ 81ರಷ್ಟು ಪರಿಣಾಮಕಾರಿ : ಭಾರತ್ ಬಯೋಟೆಕ್

sslc-examination-there-will-be-small-changes-in-question-paper-pattern

ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷಾ ಮಾದರಿಯಲ್ಲಿ ಕೊಂಚ ಬದಲಾವಣೆ : ಅನ್ಬು ಕುಮಾರ್

ಯುವರತ್ನದ ‘ಪಾಠಶಾಲಾ’ ಹಾಡು ರಿಲೀಸ್ : ಹಾಡಿನಲ್ಲಿ ಕಾಣಿಸಿಕೊಂಡ ಅಣ್ಣಾವ್ರು..!

Good news for Vi users! Vodafone Idea subscribers to get health insurance benefit on mobile recharges

ವೊಡಾಫೋನ್ ಐಡಿಯಾ ರಿಚಾರ್ಜ್ ನಲ್ಲಿ ಸಿಗಲಿದೆ ಹೆಲ್ತ್ ಇನ್ಸುರೆನ್ಸ್..?!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಅನುದಾನ ಮೀಸಲಿಟ್ಟು ಕಲೆ ಪ್ರೋತ್ಸಾಹಿಸಿ

ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಲೇಔಟ್‌ ನಿರ್ಮಾಣ

ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಲೇಔಟ್‌ ನಿರ್ಮಾಣ

ಮೂಲಸೌಕರ್ಯ ಕಾಣದ ಸಾದರಹಳ್ಳಿ ಗ್ರಾಮ

ಮೂಲಸೌಕರ್ಯ ಕಾಣದ ಸಾದರಹಳ್ಳಿ ಗ್ರಾಮ

ಪಂಡಿತೋತ್ತಮರಿಂದ ಕನ್ನಡ ಸಾಹಿತ್ಯ ಶ್ರೀಮಂತ

ಪಂಡಿತೋತ್ತಮರಿಂದ ಕನ್ನಡ ಸಾಹಿತ್ಯ ಶ್ರೀಮಂತ

ಸೂಸುತ್ರವಾಗಿ ನಡೆದ ಎಫ್ ಡಿಎ ಪರೀಕ್ಷೆ

ಸೂಸುತ್ರವಾಗಿ ನಡೆದ ಎಫ್ ಡಿಎ ಪರೀಕ್ಷೆ

MUST WATCH

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

udayavani youtube

ಮಂಗಳೂರು: ನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ನೂತನ ಮೇಯರ್ ಪ್ರೇಮಾನಂದ ಶೆಟ್ಟಿ

ಹೊಸ ಸೇರ್ಪಡೆ

Monkey

ಮಕ್ಕಳು ಸೇರಿ 10 ಮಂದಿ ಕಚ್ಚಿದ್ದ ಮಂಗ ಸೆರೆ  

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಈ ಬಾರಿ ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆ ಸರಳ : ಹೊರಗಿನವರಿಗೆ ಪ್ರವೇಶ ಇಲ್ಲ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

ಲಂಚ ಸ್ವೀಕಾರ : ಕೊಪ್ಪಳ BEO ಉಮಾದೇವಿ ಸೊನ್ನದ್, SDA ಅರುಂಧತಿ ಎಸಿಬಿ ಬಲೆಗೆ

DCM Govind Karajola

ಛತ್ರಪತಿ ಶಿವಾಜಿ ಕರ್ನಾಟಕದ ಹೊಯ್ಸಳ ವಂಶಸ್ಥ : ಕಾರಜೋಳ

MP Ramesh Jigajinagai

ರೈಲ್ವೆ ಯೋಜನೆಗೆ 36 ಸಾವಿರ ಕೋಟಿ ರೂ.

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.