ರಕ್ತದ ಕೊರತೆ ನೀಗಿಸಲಿದೆ ಬೆಳ್ಳಿ ರಕ್ತನಿಧಿ ಕೇಂದ್ರ

Team Udayavani, Apr 24, 2019, 2:24 PM IST

ರಾಮನಗರ: ಅಪಘಾತ ಮುಂತಾದ ತುರ್ತು ಸ್ಥಿತಿಯಲ್ಲಿ ರಕ್ತಕ್ಕಾಗಿ ಜಿಲ್ಲೆಯ ಜನತೆ ಬೆಂಗಳೂರು ಅಥವಾ ಮಂಡ್ಯಕ್ಕೆ ಹೋಗಬೇಕಾಗಿತ್ತು. ಈ ಕೊರತೆಯನ್ನು ನೀಗಿಸಲುವಾಗಿ ಬೆಳ್ಳಿ ರಕ್ತ ನಿಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದಿ ಬೆಳ್ಳಿ ಹೆಲ್ತ್ ಸರ್ವೀಸ್‌ ಫೌಂಡೇಷನ್‌ ಅಧ್ಯಕ್ಷ ವಿನೋದ್‌ ತಿಳಿಸಿದರು.

ನಗರದ ರಾಮಕೃಷ್ಣ ಆಸ್ಪತ್ರೆಯ ಬಳಿ ನೂತನವಾಗಿ ಆರಂಭವಾಗಿರುವ ಬೆಳ್ಳಿ ರಕ್ತ ನಿಧಿ ಕೇಂದ್ರಕ್ಕೆ ಚಾಲನೆ ನೀಡಿದ ಅವರು ಮಾತನಾಡಿ, ಈಗಾಗಲೇ ರೆಡ್‌ ಕ್ರಾಸ್‌ ಸಂಸ್ಥೆ ನೇತೃತ್ವದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ಸಂಗ್ರಹ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದ ರಕ್ತ ಸಂಗ್ರಹಿಸಲು ಅಸಾಧ್ಯ. ನಿರ್ವಹಣೆ ಕೊರತೆಯಿಂದ ಹೆಚ್ಚಿನ ಸೇವೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕೊರತೆಯನ್ನು ನೀಗಿಸಲು ರಕ್ತನಿಧಿಯನ್ನು ಸ್ಥಾಪಿಸಿರುವುದಾಗಿ ತಿಳಿಸಿದರು.

ತಾಲೂಕು ಕೇಂದ್ರದಲ್ಲಿ ರಕ್ತನಿಧಿಗಳಿಲ್ಲ: ಜಿಲ್ಲೆಯ ಚನ್ನಪಟ್ಟಣ, ಕನಕಪುರ, ಮಾಗಡಿಯಲ್ಲೂ ರಕ್ತನಿಧಿಗಳಿಲ್ಲ. ವಿವಿಧ ಸಂದರ್ಭಗಳಲ್ಲಿ ಅಗತ್ಯವಾಗಿ ಬೇಕಾಗಿರುವ ರಕ್ತಕ್ಕಾಗಿ ಜನ ಬೆಂಗಳೂರು, ಮಂಡ್ಯ ಎಂದು ಅಲೆದಾಡಬೇಕಿತ್ತು. ಇದೀಗ ತಮ್ಮಲ್ಲೇ ಈ ವ್ಯವಸ್ಥೆ ಸಿಗಲಿದೆ. ರಕ್ತನಿಧಿಯಲ್ಲಿ ರಕ್ತದಿಂದ ಪ್ಲೇಟ್ಲೆಟ್, ಪ್ಲಾಸ್ಮ ಮುಂತಾದ ಕಾಂಪೋನೆಂಟ್‌ಗಳನ್ನು ವಿಭಜಿಸುವ ವ್ಯವಸ್ಥೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ರಕ್ತನಿಧಿಯಲ್ಲಿ ಈ ವ್ಯವಸ್ಥೆ ಇರಲಿಲ್ಲ. ಹೀಗಾಗಿ ತಮ್ಮ ಸಂಸ್ಥೆ ಸ್ಥಾಪಿಸಿರುವ ಬೆಳ್ಳಿ ರಕ್ತ ನಿಧಿ ಸಾರ್ವಜನಿಕರಿಗೆ ತುರ್ತುಸ್ಥಿತಿಯಲ್ಲಿ ಉಪಯೋಗವಾಗಲಿದೆ ಎಂದರು.

850 ರೂ.ಗೆ ಒಂದು ಯೂನಿಟ್ ರಕ್ತ: ಬೆಳ್ಳಿ ರಕ್ತನಿಧಿ ಕೇಂದ್ರ ಟೆಕ್ನಿಕಲ್ ಸೂಪರ್‌ವೈಸರ್‌ ರಾಮು ಮಾತನಾಡಿ, ಸರ್ಕಾರದ ನಿಯಮದ ಪ್ರಕಾರವೇ ತಮ್ಮಲ್ಲಿ ಒಂದು ಯೂನಿಟ್ ರಕ್ತ 850 ರೂ. ಗೆ ದೊರೆಯಲಿದೆ. ಆರೋಗ್ಯವಂತ ವ್ಯಕ್ತಿಗಳಿಂದ ಸಂಗ್ರಹಿಸಿದ ರಕ್ತವನ್ನು ಎಚ್ಐವಿ, ಜಾಂಡಿಸ್‌, ಮಲೇರಿಯಾ ಮುಂತಾದ ಸೋಂಕು ಇಲ್ಲ ಎಂದು ದೃಢಪಡಿಸಿಕೊಳ್ಳಲು ನಡೆಸುವ ಪರೀಕ್ಷೆಗಳಿಗೆ ಆಗುವ ವೆಚ್ಚವನ್ನು ಮಾತ್ರ ಪಡೆದು ರಕ್ತವನ್ನು ನೀಡಲಾಗುತ್ತದೆ ಎಂದರು.

ಸುಸಜ್ಜಿತ ರಕ್ತಕೇಂದ್ರ ಸ್ಥಾಪನೆ: ಕೇಂದ್ರದ ವೈದ್ಯ ಡಾ.ಅನುಪಮ ಮಾತನಾಡಿ, ಸಂಗ್ರಹದಲ್ಲಿರುವ ರಕ್ತವನ್ನು ಸಾಮಾನ್ಯ ರೆಫ್ರಿಜರೇಟರ್‌ಗಳಲ್ಲಿ ಸಂಗ್ರಹಿಸುವುದು ಸರಿಯಲ್ಲ. ಇದಕ್ಕೆಂದ ವಿಶೇಷ ರೆಫ್ರಿಜರೇಟರ್‌ಗಳನ್ನು ಬಳಸಬೇಕಾಗಿದೆ. ಬೆಳ್ಳಿ ರಕ್ತನಿಧಿಯಲ್ಲಿ ಈ ಎಲ್ಲಾ ಸೂಕ್ಷ್ಮ ಅಂಶಗಳನ್ನು ಗಮನಿಸಿ ಸುಸಜ್ಜಿತವಾಗಿ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಆರಂಭ ಸಂತಸದ ವಿಚಾರ: ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ತಮ್ಮ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳು ರಕ್ತದಾನ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುತ್ತಿವೆ. ತಮ್ಮ ಸಂಸ್ಥೆ ಆಯೋಜಿಸಿದ್ದ ರಕ್ತದಾನ ಶಿಬಿರಗಳಲ್ಲಿ ಇಲ್ಲಿಯವರೆಗೆ 1 ಸಾವಿರಕ್ಕೂ ಅಧಿಕ ಯೂನಿಟ್ ರಕ್ತವನ್ನು ಸಂಗ್ರಹಿಸಲಾಗಿತ್ತು. ಆದರೆ, ಈ ರಕ್ತವನ್ನು ಸಂಗ್ರಹಿಸಿಡುವ ವ್ಯವಸ್ಥೆ ರಾಮನಗರದಲ್ಲಿ ಇಲ್ಲದ ಕಾರಣ ಬೆಂಗಳೂರು ರಕ್ತ ನಿಧಿಯ ಮೊರೆ ಹೋಗಬೇಕಾಗಿತ್ತು. ಇದೀಗ ಸುಸಜ್ಜಿತ ರಕ್ತ ನಿಧಿ ಕೇಂದ್ರ ಆರಂಭವಾಗಿರುವುದು ಸಂತಸದ ವಿಚಾರ ಎಂದು ತಿಳಿಸಿದರು.

ಅನ್ನದಾನೇಶ್ವರ ಸಾಮೀಜಿಗಳಿಂದ ಉದ್ಘಾಟನೆ: ರಕ್ತನಿಧಿ ಕೇಂದ್ರವನ್ನು ಆದಿಚುಂಚನಗಿರಿ ಮಠದ ರಾಮನಗರ ಶಾಖೆಯ ಮುಖ್ಯಸ್ಥ ಶ್ರೀ ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಕನಕಪುರದ ಲಯನ್‌ ಮರಸಪ್ಪ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸಹಕಾರಕ್ಕಾಗಿ ಸಂಪರ್ಕಿಸಿ: ರಕ್ತದಾನ ಶಿಬಿರ ಆಯೋಜಿಸುವ ಸಂಘ-ಸಂಸ್ಥೆಗಳು ಸಹಕಾರಕ್ಕಾಗಿ 080-29782345, 9845235648, 7892215917 ಸಂಪರ್ಕಿಸಬಹುದು ಎಂದು ಕೇಂದ್ರದ ಆಡಳಿತ ಮಂಡಳಿ ತಿಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

 • ಮಾಗಡಿ: ನಾನು ಬಮೂಲ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು, ನಿಮ್ಮಿಂದ ಸಹಾಯ ಸಹಕಾರದ ಅಗತ್ಯವಿದೆ ಎಂದು ಬೆಂಗಳೂರು ಹಾಲು ಒಕ್ಕೂಟ ನಿರ್ದೇಶಕ ನರಸಿಂಹಮೂರ್ತಿ,...

 • ರಾಮನಗರ: ತಾಲೂಕಿನಲ್ಲಿ ಸ್ಥಳೀಯ ಸಂಸ್ಥೆಗಳು ಕೆರೆ, ಕಟ್ಟೆಗಳನ್ನು ನಿರ್ಲಕ್ಷಿಸಿದ್ದು, ಈ ಸಾಲಿಗೆ ನಗರದ ಐಜೂರು ಬೆಟ್ಟದ(ಐಜೂರು ಗುಡ್ಡದ ಸ್ಥಳೀಯರು ಕೆರೆಯುವುದು...

 • ಕನಕಪುರ: ನಗರದ ಹೃದಯಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಮಿನಿ ವಿಧಾನಸೌಧದಲ್ಲಿ ಭಾನುವಾರ ಕಾರ್ಯಾರಂಭ ಮಾಡಲಾಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ...

 • ರಾಮನಗರ: ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ಮ್ಯಾಂಗೋ ಪಿಕ್ಕಿಂಗ್‌ ಟೂರಿಸಿಂಗೆ ಬೆಳೆಗಾರರು ಹಾಗೂ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕಾರ್ಯಕ್ರಮ...

 • ಮಾಗಡಿ: ಪ್ರತಿಯೊಬ್ಬ ಮನುಷ್ಯ ಆರೋಗ್ಯ ದಿಂದ ಬದುಕಲು ಪಂಚೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಕ್ರಿಯಾತ್ಮಕವಾಗಿರಬೇಕು ಎಂದು ಗುಮ್ಮಸಂದ್ರದ ಮಠಾಧೀಶ ಚಂದ್ರಶೇಖರ...

ಹೊಸ ಸೇರ್ಪಡೆ

 • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

 • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

 • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

 • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

 • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...

 • ನೆಲಮಂಗಲ: ಕಾರು ಶೋಕಿಗಾಗಿ ಚಾಲಕನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಗಳ ಬಂಧನದ ವೇಳೆ ಪೊಲೀಸರ ಬಂದೂಕುಗಳು ಸದ್ದು ಮಾಡಿರುವ ಘಟನೆ ಮಂಗಳವಾರ ಬೆಳ್ಳಂಬೆಳ್ಳಗ್ಗೆ...