ಓದುಗರ ಅಭಿರುಚಿಗೆ ತಕ್ಕ ಕೃತಿ ಬಹುಕಾಲ ಉಳಿಯುತ್ತದೆ


Team Udayavani, Oct 27, 2020, 2:47 PM IST

ಓದುಗರ ಅಭಿರುಚಿಗೆ ತಕ್ಕ ಕೃತಿ ಬಹುಕಾಲ ಉಳಿಯುತ್ತದೆ

ಚನ್ನಪಟ್ಟಣ: ಪ್ರತಿ ವರ್ಷ ಸಾವಿರಾರು ಕೃತಿಗಳು ಲೋಕಾರ್ಪಣೆಗೊಳ್ಳುತ್ತಿವೆ. ಆದರೆ, ಓದುಗರ ಅಭಿರುಚಿ, ಪದಸಂಪತ್ತು, ಭಾಷೆಯ ಮೇಲಿನಹಿಡಿತ, ಪದಗಳನ್ನು ದುಡಿಸಿಕೊಳ್ಳುವ ಚಾಕಚಕ್ಯತೆಇರುವ ಕೃತಿಗಳು ಬಹುಕಾಲ ಸಾಹಿತ್ಯ ಕ್ಷೇತ್ರದಲ್ಲಿ ಉಳಿಯುತ್ತವೆ ಎಂದು ಹಿರಿಯ ಸಾಹಿತಿ ಎಲೆಕೇರಿ ಶಿವರಾಂ ಅಭಿಪ್ರಾಯಪಟ್ಟರು.

ತಾಲೂಕಿನ ಎಲೆಕೇರಿ ಹೊಸ ಬಡಾವಣೆಯಸಾಧನ ಸಂಭ್ರಮ ಪೂರ್ವ ಪ್ರಾಥಮಿಕ ಶಾಲೆ ಆವ ರಣದಲ್ಲಿ, ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕಟ್ರಸ್ಟ್‌ ವತಿಯಿಂದ ಏರ್ಪಡಿಸಿದ್ದ ಎಲೆಕೇರಿ ಡಿ. ರಾಜಶೇಖರ್‌ ಅವರ ತುಳಸಿದಾಸ್‌ ಕಾದಂಬರಿ ಬಿಡುಗಡೆ, ದಸರಾ ಕವಿಗೋಷ್ಠಿ ಹಾಗೂ ಗೀತಗಾಯನಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕವಿಯಾದವನು ಭಾವನಾತ್ಮಕ ಜೀವಿ, ವಾಸ್ತವಿಕ ಸತ್ಯದ ಶೋಧಕ ಹಾಗೂ ಸಾಮಾಜಿಕವಾಗಿ ಸ್ಪಂದಿಸುವ ಗುಣಗಳನ್ನು ಹೊಂದಿರಬೇಕು. ತನ್ನ ಬರಹಗಳ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬದ್ಧರಾಗಿರಬೇಕು ಎಂದರು.

ಪುಸ್ತಕ ಕುರಿತು ಸಾಹಿತಿ ವಿಜಯ್‌ ರಾಂಪುರ ಮಾತನಾಡಿ, ಲೇಖಕ ತನ್ನ ಜೀವನಾನುಭವ ಹಾಗೂ ಕಲ್ಪನೆಗೆ ಸಾಹಿತ್ಯದ ರೂಪ ಕೊಡುತ್ತಾನೆ. ತನ್ಮೂಲಕಸಾಮಾಜಿಕ ಸಂಘರ್ಷ ಮತ್ತು ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಫಲನಾಗುತ್ತಾನೆ. ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಸೂಕ್ಷ್ಮ ಪ್ರಜ್ಞೆಯನ್ನು ತುಳಸಿದಾಸ್‌ ಕಾದಂಬರಿಯಲ್ಲಿ ಕಾಣಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಶಿವಮಾದು ಮಾತ ನಾಡಿ, ತಂತ್ರಜಾnನ ಯುಗದಲ್ಲೂ, ಕನ್ನಡ ಸಾಹಿತ್ಯ ಕ್ಷೇತ್ರ ವಿಸ್ತಾರಗೊಳ್ಳುತ್ತಿರುವುದು ಸಂತಸದ ಸಂಗತಿ. ಪುಸ್ತಕಗಳನ್ನು ಕೊಂಡು ಓದುವ ಔದಾರ್ಯವನ್ನು ಓದುಗರು ಮೆರೆದಾಗ ಮಾತ್ರವೇ ಸಾಹಿತಿ ಮತ್ತು ಸಾಹಿತ್ಯದ ಮುನ್ನೆಲೆಗೆ ಬರಲು ಸಾಧ್ಯ. ಕಡಿಮೆ ಬೆಲೆಗೆ ಹೆಚ್ಚಿನ ಮಾಹಿತಿ ಒದಗಿಸುವ ಕನ್ನಡ ದಿನಪತ್ರಿಕೆಗಳನ್ನು ಕೊಂಡು, ಸಾಹಿತ್ಯ ಪ್ರಜ್ಞೆ ಬೆಳೆಸಿಕೊಳ್ಳಿ ಎಂದು ಯುವ ಬರಹಗಾರರಿಗೆ ಕಿವಿಮಾತು ಹೇಳಿದರು.

ಸಾಧನ ಸಂಭ್ರಮ ಪೂರ್ವ ಪ್ರಾಥಮಿಕ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ನರಸಿಂಹ ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಎಲೆಕೇರಿ ಡಿ. ರಾಜಶೇಖರ್‌, ಎನ್‌.ಟಿ.ಟಿ. ಪ್ರಾಂಶುಪಾಲ ದಶವಾರ ಮಲ್ಲೇಶ್‌ ಮಾತನಾಡಿದರು.

ಶೈಲಾ ಯೋಗೇಶ್‌, ಹೆಚ್‌.ಕೆ.ಸಂಧ್ಯಾಶ್ರೀ, ಐಶ್ವರ್ಯ ಮಳೂರುಪಟ್ಟಣ, ಅಬ್ಬೂರು ಶ್ರೀನಿ ವಾಸ್‌, ಸಚಿನ್‌ ನಾರಾಯಣ್‌ ಕೆಲಗೆರೆ, ಅಭಿಷೇಕ್‌ಹನಿಯೂರು, ತುಂಬೇನಹಳ್ಳಿ ಕಿರಣ್‌ ರಾಜ್‌,ಲಕ್ಷ್ಮೀ ಕಿಶೋರ್‌ ಅರಸ್‌, ದರ್ಶನ್‌ ಮತ್ತೀಕೆರೆ, ಕಿರಣ್‌ ಕುಮಾರ್‌, ತುಳಸೀಧರ ಎಂ.ಎಸ್‌. ಸ್ವರಚಿತ ಕವಿತೆಗಳನ್ನು ವಾಚಿಸಿದರು. ಗಾಯಕರಾದ ಮುತ್ತು ರಾಜ್‌, ಉಪನ್ಯಾಸಕ ಜಗದೀಶ್‌ ಜಾನಪದ ಗೀತ ಗಾಯನ ನಡೆಸಿಕೊಟ್ಟರು. ಯುವ ರೈತ ನಂಜುಂಡ ಹಾಗೂ ಸಾಹಿತಿ ಎಲೆಕೇರಿ ಡಿ ರಾಜಶೇಖರ್‌ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಯುವಕವಿ ಯೋಗೇಶ್‌ ದ್ಯಾವಪಟ್ಟಣ, ಯುವ ರೈತ ನಂಜುಂಡ ಅರಳಕುಪ್ಪೆ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

death

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ

h d kumaraswamy

ನಕಲಿ ಜಾತ್ಯತೀತ ಶೂರನ ಅಸಲಿರೂಪ ಕಳಚಿದೆ.. ಆಟ ಈಗ ಆರಂಭ..!: ಎಚ್ ಡಿಕೆ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಪಾಕಿಸ್ತಾನ: ನಾಲ್ವರು ಯುವತಿಯರನ್ನು ನಗ್ನಗೊಳಿಸಿ ಮೆರವಣಿಗೆ, ಹಲ್ಲೆ; ಐವರ ಬಂಧನ

ಸಿಎಂ ಬೊಮ್ಮಾಯಿ

ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಮಾರ್ಗಸೂಚಿ: ಸಿಎಂ ಬೊಮ್ಮಾಯಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನಗರ ಡೊಂಬರ

“ದೊಂಬರಾಟ’ ಪದ ಬಳಸಿ ಸಮುದಾಯಕ್ಕೆ ಅಪಮಾನ

ಬಸ್‌ ಕೊರತೆ ನೀಗಿಸಲು ಕ್ರಮ: ಕಳಸದ್‌ 

ಬಸ್‌ ಕೊರತೆ ನೀಗಿಸಲು ಕ್ರಮ: ಕಳಸದ್‌ 

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

onion

ಈರುಳ್ಳಿ ಮೂಟೆ ತಿಪ್ಪೆ ಸೇರಿದೆ ..!

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

death

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

omicron

ದುಬೈನಿಂದ ಬಂದ ವ್ಯಕ್ತಿಗೆ ಕೊರೊನಾ:ಒಮಿಕ್ರಾನ್‌ ಭೀತಿ; ಮಾಸ್ಕ್ ಧರಿಸದಿದ್ದರೆ ದಂಡ

muddy

ಆರು ಭಾಷೆಗಳಲ್ಲಿ ತೆರೆಕಾಣುತ್ತಿದೆ ‘ಮಡ್ಡಿ’

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ನಗರಸಭೆ ಹೊರಗುತ್ತಿಗೆ ಸಿಬ್ಬಂದಿಗಳಿಂದ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

ಸಂಘದಿಂದ ಸಮಾಜ ಬಾಂಧವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ: ಮುರಳಿ ಕೆ. ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.