ವೆಂಕಟೇಶ್‌ಗೆ ಬುದ ಪ್ರಶಸ್ತಿ ಪ್ರದಾನ

Team Udayavani, Oct 9, 2019, 5:22 PM IST

ಮಾಗಡಿ: ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಟಿ.ವೆಂಕಟೇಶ್‌ ಅವರಿಗೆ ಭಗವಾನ್‌ ಬುದ್ಧ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರಿನ ಸಮಾರಂಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಪ್ರದಾನ ಮಾಡಿದರು.

ತಾಲೂಕಿನ ಸೋಲೂರು ಹೋಬಳಿ ಬಿಟ್ಟಸಂದ್ರಪಾಳ್ಯದ ರೈತ ತಿಮ್ಮಸಿದ್ದಯ್ಯ ಅವರ ಪುತ್ರ ಟಿ.ವೆಂಕಟೇಶ್‌ ಗ್ರಾಮೀಣ ಭಾಗದಲ್ಲಿ ಪ್ರಯೋಗ ಶೀಲ ಟ್ರಸ್ಟ್‌ ಎಂಬ ಸಂಸ್ಥೆ ಸ್ಥಾಪಿಸಿ, ಸಂಸ್ಥೆಯಿಂದ ಕನ್ನಡ ನಾಡು, ನುಡಿಯ ಸೇವೆ ಜೊತೆಗೆ ಸಮಾಜಮುಖೀ ಸೇವೆಯಲ್ಲಿ ತೊಡಗಿಸಿಕೊಂಡು, ಸಾವಿರಾರು ಮಂದಿಗೆ ಟ್ರಸ್ಟ್‌ ಯಿಂದ ಸಹಾಯ ಮಾಡಿದ್ದಾರೆ.

ಟ್ರಸ್ಟ್‌ನ ಟಿ.ವೆಂಕಟೇಶ್‌ ಅವರ ಸಮಾಜಮುಖೀ ಸೇವೆಯನ್ನು ಪರಿಗಣಿಸಿ, ಬುದ್ಧ ನ್ಯಾಷನಲ್‌ ಎಜುಕೇಷನ್‌ ಮತ್ತು ಕಲ್ಚರಲ್‌ ಅಕಾಡಮಿ ಮೈಸೂರು ವತಿಯಿಂದ ಟಿ.ವೆಂಕಟೇಶ್‌ಗೆ ಭಗವಾನ್‌ ಬುದ್ಧ ರಾಷ್ಟ್ರೀಯ ಪ್ರಶಸ್ತಿಯನ್ನು ಮೈಸೂರಿನ ಪ್ಲವರ್‌ ಗಾರ್ಡನ್‌ ಸಿಟಿಯಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ ಕುವೆಂಪು ವಿವಿಯ ಪಿ.ವೆಂಕಟರಾಮಯ್ಯ, ಎಸ್‌.ಬಿ.ಸಂಪತ್ತು ಇತರರು ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ