ಮಾದರಿ ಕಾಲೇಜು ನಿರ್ಮಾಣ ಮಾಡಿ; ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಾ?

ಕವಿ ಸಿದ್ದಲಿಂಗಯ್ಯ ಓದಿದ ಕಾಲೇಜಿಗೆ ಇದೆಂಥಾ ದುಸ್ಥಿತಿ

Team Udayavani, Sep 25, 2021, 5:27 PM IST

ಮಾದರಿ ಕಾಲೇಜು ನಿರ್ಮಾಣ ಮಾಡಿ; ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಾ?

ಮಾಗಡಿ: ಮಾಗಡಿ ಪಿಯು ಕಾಲೇಜಿನ ಕಾಯಕಲ್ಪಕ್ಕೆ ಸಿದ್ಧವಾಗಿದ್ದು, ಅನುದಾನ ಮಂಜೂರಾಗಿದೆ.1948ರಲ್ಲಿ ಮಾಗಡಿ ತಾಲೂಕಿಗೆ ಪ್ರಪ್ರಥಮವಾಗಿ ಈ ಸರ್ಕಾರಿ ಹೈಸ್ಕೂಲ್‌ ಮತ್ತು ಕಾಲೇಜು ಸ್ಥಾಪನೆಯಾಗಿರುತ್ತದೆ. ಈ ಕಾಲೇಜಿನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದಾರೆ. ನೂರಾರು ಮಂದಿ ಗಣ್ಯರನ್ನು, ಸಹಸ್ರಾರು ಮಂದಿ ಅಧಿಕಾರಿಗಳನ್ನು, ಸಾಹಿತಿಗಳನ್ನು, ವೈದ್ಯರನ್ನು ಎಂಜಿನಿಯರ್‌ಗಳನ್ನ ಸೃಷ್ಠಿಸಿದೆ. ಈಗಲೂ ಸಹಸ್ರಾರು ಮಂದಿ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ವಿದ್ಯೆ ಕಲಿಯುತ್ತಿರುವ ಪ್ರತಿಷ್ಠಿತ ಈ ಸರ್ಕಾರಿ ಪಿಯು ಕಾಲೇಜು ಈಗ ದನದ ದೊಡ್ಡಿಯಂತಾಗಿದ್ದು ದುಸ್ಥಿತಿ ಯಲ್ಲಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕೂಡ ಇದೇ ಜಿಲ್ಲೆಯವರಾಗಿರುವುದರಿಂದ ಈ ಕಾಲೇಜಿಗೆ ಶೀಘ್ರದಲ್ಲಿಯೇ ಕಾಯಕಲ್ಪ ಒದಗಿಸುವರಾ ಎಂದು ವಿದ್ಯಾರ್ಥಿಗಳು ಆಸೆಗಣ್ಣನಿಂದ ಎದುರು ನೋಡುತ್ತಿದ್ದಾರೆ.

10 ಎಕೆರೆ ವಿಶಾಲವಾದ ಮೈದಾನ: ಸರ್ಕಾರಿ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವಿದ್ಯಾರ್ಥಿಗಳು ಬರುತ್ತಿ ರುವುದು. ಸುಮಾರು 10ಎಕರೆಗೂ ಹೆಚ್ಚು ವ್ಯಾಪ್ತಿಯಲ್ಲಿ ಕಾಲೇಜು ಆವರಣವಿದೆ. ಪ್ರೌಢಶಾಲೆ ಹಾಗೂ ಪಿಯು ಕಾಲೇಜುವರೆಗಿದ್ದು, ಇಂದಿಗೂ ಈ ಕಾಲೇಜಿ ನಲ್ಲಿ ಪ್ರತಿಭಾವಂತ ಬಡ, ಮಧ್ಯಮ ವರ್ಗದ ಸಹ ಸ್ರಾರು ಮಂದಿ ವಿದ್ಯಾರ್ಥಿಗಳಿಗೆ ವಿದ್ಯೆ ನೀಡುತ್ತಿದೆ. ನುರಿತ ಶಿಕ್ಷಕರು ಪ್ರಾಧ್ಯಾಪಕರು ಸಹ ಮಕ್ಕಳಿಗೆ ಬೋಧನೆ ನೀಡು ತ್ತಿದ್ದಾರೆ. ಈ ಕಾಲೇಜಿನಲ್ಲಿ ತಾಲೂಕಿಗೆ ಬಹು ದೊಡ್ಡ ಆಟದ ಮೈದಾನವಿರುವುದು ವಿಶೇಷ. ಇದರಿಂದಲೇ ಈ ಶಾಲೆ ಮತ್ತು ಕಾಲೇಜಿಗೆ ತುಂಬ ಹೆಸರಿದೆ. ಇದರ ಅಳಿವು ಉಳಿವು ಜನಪ್ರತಿನಿಧಿಗಳ ಕೈಯಲ್ಲಿದೆ.

ಶಿಥಿಲಾವಸ್ಥೆಯಲ್ಲಿ ಕಾಲೇಜು: ಇತಿಹಾಸರುವ ಈ ಕಾಲೇಜಿನ ಚಾವಣೆ ಮಳೆ ಬಂದರೆ ಸೋರುತ್ತಿರುತ್ತಿದೆ. ಮುರಿದ ಕಿಟಕಿ ಬಾಗಿಲು, ಬಿರುಕು ಬಿಟ್ಟ ಗೋಡೆಗಳು, ಮಳೆ ನೀರಿನಿಂದ ಬಹುತೇಕ ಗೋಡೆಗಳು ಪಾಚಿ ಕಟ್ಟಿದೆ. ಕಪ್ಪು ಬಣ್ಣದ ಬೋರ್ಡ್‌ಗಳು ಬಿಳಿ ಬಣ್ಣಕ್ಕೆ ತಿರುಗಿವೆ. ಇಂಥ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕುಳಿತು ಕೊಂಡು ಪಾಠ ಪ್ರವಚನ ಕೇಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಾಲೇಜು ಆವರಣದಲ್ಲಿನ ಮರದ ನೆರಳನ್ನೇ ಆಶ್ರಯ ದಡಿಯೇ ಸಾಂಸ್ಕೃತಿಕ ಹಾಗೂ ವಿಚಾರ ಸಂಕಿರ್ಣ, ವಾರ್ಷಿಕೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಇದನ್ನೂ ಓದಿ:‘ಭಾರತ್ ಬಂದ್’:ಐಟೆಕ್ ಸಮೀತಿಯಿಂದ ವಿವಿಧ ಕಂಪನಿಗಳ ಪ್ರವೇಶದ್ವಾರದಲ್ಲಿ ಪ್ರತಿಭಟನೆಗೆ ನಿರ್ಧಾರ

ಸಭಾಂಗಣಕ್ಕೆ ಗುದ್ದಲಿ ಪೂಜೆ: ಆಧುನಿಕತೆಯ ಯಾಂತ್ರಿಕ ಯುಗದಲ್ಲೂ ಕನಿಷ್ಠ ಪಕ್ಷ ಇಂದಿಗೂ ಒಂದು ಸಭಾಂಗಣ ಇಲ್ಲದಿರುವುದನ್ನು ಮನಗಂಡ ಶಾಸಕರು ಡಾ.ಶಿವಕುಮಾರಸ್ವಾಮೀಜಿ ಅವರ ಹೆಸರಿನಲ್ಲಿ ಕೋಟ್ಯಾಂತರ ರೂ.ವೆಚ್ಚದಲ್ಲಿ ಸುಂದರ ಸಭಾಂಗಣಕ್ಕೆ ಈಗಾಗಲೇ ಕಾಲೇಜು ಆವರಣದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ್ದಾರೆ.

ಕಾರ್ಯಕ್ರಮಗಳಿಗೆ ಬಳಕೆ: ಆಗಿನ ಕಾಲದಲ್ಲಿ ಮುಂದಾಲೋಚಯಿಂದಲೇ ವಿಶಾಲವಾದ ಜಾಗದಲ್ಲಿ ಕಾಲೇಜು ಹಾಗೂ ಅಗತ್ಯ ಮೈದಾನವನ್ನು ನಿರ್ವಿಸಿದ್ದರು. ಚುನಾವಣೆಗಳ ಮತ ಏಣಿಕೆಗೂ ಇದೇ ಕಾಲೇಜನ್ನು ಸರ್ಕಾರ ಬಳಸಿಕೊಳ್ಳುವುದು ಸರ್ವೇ ಸಾಮಾನ್ಯ. ಶಿಕ್ಷಣ ಇಲಾಖೆಯ ಸರ್ಕಾರಿ ಕಾರ್ಯಕ್ರಮಗಳಿರಬಹುದು, ಕ್ರೀಡಾ ಸ್ಪರ್ಧೆಯ ಚಟುವಟಿಕೆಗಳಿರಬಹುದು ಇದೇ ಮೈದಾನದಲ್ಲೇ ಈಗಲೂ ನಡೆಯುವುದು. ತಾಲೂಕಿಗೆ ಯಾರೇ ಗಣ್ಯರು ಹೆಲಿಕಾಪ್ಟರ್‌ನಲ್ಲಿ ಬಂದರೂ ಇದೇ ಮೈದಾನವೇ ಬೇಕು. ಇಂಥ ಸುಂದರವಾದ ಕಾಲೇಜು ಹಾಗೂ ಮೈದಾನ ಈಗ ದುಸ್ಥಿತಿ ತಲುಪಿದೆ.

ಪ್ರತ್ಯೇಕ ಶೌಚಾಲಯವಿಲ್ಲ: ವಿಶಾಲವಾದ ಸ್ಥಳವಿದ್ದರೂ ಸಹ ಎಡವಟ್ಟಿನ ಎಂಜಿನಿಯರ್‌ ತಾಳಕ್ಕೆ ಕುಣಿದ ಗಣ್ಯರು ಇಂಥ ಸರ್ಕಾರಿ ಮಾದರಿ ಕಾಲೇಜಿನ ಮೈದಾನವನ್ನು ಸಮರ್ಪಕವಾಗಿ ಉಳಿಸಿಕೊಳ್ಳುವ ಚಿಂತನೆಯೂ ಇಲ್ಲದೆ ಕೆಲವು ಕೊಠಡಿಗಳನ್ನು ಮೈದಾನದಲ್ಲೇ ಎಲ್ಲಂದರಲ್ಲಿ ನಿರ್ಮಿಸುವ ಮೂಲಕ ಕಾಲೇಜಿನ ಅಂದ ಕೆಡಿಸಿದ್ದಾರೆ. ಈ ಕಾಲೇಜಿನಲ್ಲಿ ಗಂಡು ಮಕ್ಕಳು, ಹೆಣ್ಣುಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೂ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿಲ್ಲ. ಆದಷ್ಟು ಬೇಗ ಮಾದರಿ ಕಾಲೇಜು ಕಟ್ಟಡ ನಿರ್ಮಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಡಬೇಕಿದೆ.

ನಾನಾ ರಂಗದಲ್ಲಿ ಸೇವೆ
ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಸೆ.26, 1948ರಲ್ಲಿ ಆಗಿನ ಮೈಸೂರು ಪ್ರಧಾನ ಸಚಿವರಾಗಿದ್ದ ಕೆ. ಚಂಗಲ್‌ರಾಯರೆಡ್ಡಿ ಈ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಲ್ಲಿಯವರೆಗೂ ಈ ಪ್ರೌಢಶಾಲೆ ಮತ್ತು ಕಾಲೇಜಿ ನಲ್ಲಿ ಲಕ್ಷಾಂತರ ಮಂದಿ ವಿದ್ಯೆ ಕಲಿತಿದ್ದಾರೆ. ಎಂಎಲ್‌ಸಿ ಎಚ್‌.ಎಂ.ರೇವಣ್ಣ, ದಿ.ಜವರಪ್ಪ, ಸೇರಿದಂತೆ ಅನೇಕ ರಾಜಕೀಯ ಮುತ್ಸದಿಗಳು, ಸಾಹಿತಿ ದಲಿತ ಕವಿ ಸಿದ್ದಲಿಂಗಯ್ಯ, ಅನೇಕ ಕ್ರೀಡಾಪಟು ಗಳು ಇನ್ನೂ ಅನೇಕರು ರಂಗಗಳಲ್ಲಿ ಸೇವೆ ಸಲ್ಲಿಸಿದ ಅಗ್ರಗಣ್ಯರ ಕೀರ್ತಿ ಈ ಕಾಲೇಜಿಗಿದೆ. ಈಗಲೂ ಸಹಸ್ರಾರು ಮಂದಿ ಸರ್ಕಾರದಲ್ಲಿ ಸೇವಾನಿರತರಾಗಿ ಕರ್ತವ್ಯ ನಿರ್ವಸುತ್ತಿರುವುದು ಹೆಮ್ಮೆಯ ವಿಷಯ.

ಕಾಲೇಜು ಕಾಯ ಕಲ್ಪಕ್ಕೆ ಸಕಲ ಸಿದ್ಧತೆ ನಡೆದಿದೆ. ತಾನು ಶಾಸಕನಾದ ಮೇಲೆ ಶಿಥಿಲ ಶಾಲಾ ಕಾಲೇಜುಗಳ ಪುನರ್‌ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮಂಜೂರು ಮಾಡಲಾಗಿದೆ. ಅಗತ್ಯ ಯೋಜನೆ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಚಾಲನೆ ನೀಡಲಾಗುವುದು.
– ಎ.ಮಂಜುನಾಥ್‌ ಶಾಸಕ

ವಜ್ರಮಹೋತ್ಸವ ಆಚರಿಸಿಕೊಳ್ಳ ಬೇಕಾದ ಇಂಥ ಪ್ರತಿಷ್ಠಿತ ಸರ್ಕಾರಿ ಪದವಿ ಪೂರ್ವ ಕಾಲೇಜು ನವೀಕರಿಸಿ ವಜ್ರಮಹೋತ್ಸವ ಆಚರಿಸಬೇಕಿದೆ. ಉಸ್ತವಾರಿ ಸಚಿವ ಡಾ. ಸಿ.ಎನ್‌.ಅಶ್ವತ್ಥ ನಾರಾಯಣ ಅವರಲ್ಲಿ ಒತ್ತಡ ಏರಿ ಶಾಸಕರು ಹಣ ಮಂಜೂರು ಮಾಡಿಸಿದ್ದಾರೆ.
– ರಾಮಚಂದ್ರಯ್ಯ,
ನಿವೃತ್ತ ಪ್ರಾಧ್ಯಾಪಕ

ದುಸ್ಥಿತಿಯಲ್ಲಿರುವ ಈ ಕಾಲೇಜಿನ ಕಟ್ಟಡವನ್ನು ತೆರವುಗೊಳಿಸಿ ಇಲ್ಲೊಂದು ಜಿಲ್ಲೆಗೆ ಮಾದರಿಯಾದ ಸುಂದರ ಸುಸಜ್ಜಿತವಾದ ಕಾಲೇಜು ನಿರ್ಮಿಸಲು ಶಾಸಕರು ಮುಂದಾಗಿರುವುದಕ್ಕೆ ಮೆಚ್ಚುಗೆವ್ಯಕ್ತಪಡಿಸಿದರು.
– ಪಾನ್ಯಂ ನಟರಾಜು, ಸಾಹಿತಿ

– ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: 405 ಸೂಕ್ಷ್ಮ ಮತಗಟ್ಟೆ : ಕೆ. ವಿದ್ಯಾಕುಮಾರಿ

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Loksabha election; ಕಾಂಗ್ರೆಸ್‌ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.