ಚಿಯಾ ವಿದೇಶಿ ಸಿರಿಧ್ಯಾನ

ಪೌಷ್ಟಿಕಾಂಶ ಹೊಂದಿರುವ ಬೆಳೆಗೆ ಅಧಿಕ ಬೇಡಿಕೆ

Team Udayavani, Oct 22, 2020, 3:38 PM IST

rn-tdy-1

ಮಾಗಡಿ: ಪೌಷ್ಟಿಕತೆ ಹೊಂದಿರುವ “ಚಿಯಾ’ ಎಂಬ ವಿದೇಶಿ ಸಿರಿಧಾನ್ಯ ಬೆಳೆ ಜಿಲ್ಲೆಗೆ ಪರಿಚಯವಾಗಿದ್ದು, ಮೊದಲ ಬಾರಿಗೆ ಬೇಸಾಯ ಕೈಗೊಳ್ಳಲಾಗಿದೆ. ವಿಶೇಷ ಪೌಷ್ಟಿಕ ಚಿಯಾ ಸಿರಿಧಾನ್ಯಕ್ಕೆ ಅಧಿಕ ಬೇಡಿಕೆ ಇದ್ದು, ಇದೊಂದು ಶಕ್ತಿಯುತ ಬೆಳೆಯಾಗಿದೆ. ಮೆಕ್ಸಿಕೊ, ದಕ್ಷಿಣ ಅಮೆರಿಕದಿಂದ ಬಂದ ಚೀನಾ ಸಿರಿಧಾನ್ಯದ ಗುಂಪಿಗೆ ಸೇರಿದೆ.

ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲ: ರೋಗ ನಿರೋಧಕ ಶಕ್ತಿ ಹೊಂದಿರುವ ಚಿಯಾ ವಾರ್ಷಿಕ ಬೆಳೆಯಾಗಿದ್ದು, ಮುಂಗಾರು, ಮಧ್ಯಮ, ಹಿಂಗಾರು ಬೆಳೆಯಾಗಿಯೂ ಬೆಳೆಯಬಹುದು. ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಬಿತ್ತನೆಗೆ ಸೂಕ್ತಕಾಲವಾಗಿದೆ. ಹೆಚ್ಚಿನ ನೀರಿನ ಅವಶ್ಯಕತೆ ಇಲ್ಲದೇ, ಶೂನ್ಯ ಕೃಷಿ ನೈಸರ್ಗಿಕ ಬೆಳೆಯಾಗಿ ಬೆಳೆಯಬಹುದು.

ರೋಗ ನಿರೋಧಕ ಶಕ್ತಿ: ಹೇರಳ ಪೌಷ್ಟಿಕಾಂಶವುಳ್ಳ ಚಿಯಾ ಬೆಳೆಯಲ್ಲಿಒಮೇಗಾ 3 ಪ್ಯಾಟಿ ಆ್ಯಸಿಡ್‌ ಪ್ರೋಟಿನ್‌ ಮೀನಿನಲ್ಲಿ ಬಿಟ್ಟರೆ, ಚಿಯಾದಲ್ಲಿ ಮಾತ್ರ ಸಿಗುತ್ತದೆ. ಕ್ಯಾನ್ಸರ್‌, ಸಕ್ಕರೆ ರೋಗ, ರಕ್ತದೊತ್ತಡ, ಹೃದಯ ಸಂಬಧಿ ಕಾಯಿಲೆ ಸೇರಿದಂತೆ ಹಲವು ಕಾಯಿಲೆಗಳಿಗೆ ಔಷಧಿ ಯಾಗಿ ಬೆಳಸಲಾಗುತ್ತಿದೆ. ಸ್ವಾಲೀನ್‌ ಅಂಶಇದ್ದು, ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದೆ. ರಾಗಿಯಿಟ್ಟಿನಂತೆ ದಿನ ನಿತ್ಯ ಆಹಾರದಲ್ಲಿ ಸೇವಿಸಬಹುದು.

ಕಾಡು ಪ್ರಾಣಿಗಳು ತಿನ್ನುವುದಿಲ್ಲ: 1.5 ಮೀಟರ್‌ ಎತ್ತರಕ್ಕೆ ಬೆಳೆಯುವ ಚಿಯಾ ಬೆಳೆಯಲು ರಾಜ್ಯದಲ್ಲಿ ರೈತರ ಆಸಕ್ತರಾಗಿದ್ದು, ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ಯಲ್ಲಿ ಹೆಚ್ಚು  ಚಿಯಾಬೆಳೆ ಬೆಳೆಯಲಾಗುತ್ತಿದೆ. ದನ, ಕರು, ಕುರಿ, ಮೇಕೆ ಸೇರಿದಂತೆ ಇತರೆ ಕಾಡು ಪ್ರಾಣಿಗಳು ಈ ಬೆಳೆಯನ್ನು ತಿನ್ನುವುದಿಲ್ಲ. ಪುದೀನಾ ಜಾತಿಗೆ ಸೇರಿದ ಚಿಯಾ ಕಪ್ಪು, ಬೂದು ಬಣ್ಣ ಹೊಂದಿರುತ್ತದೆ. ಬೀಜವನ್ನು ಪುಡಿ ಮಾಡಿ ಅಥವಾ ಎಣ್ಣೆ ಕಾಳಿನ ಬೀಜವಾಗಿಯೂ ಬಳಸಬಹುದು. ನೈಸರ್ಗಿಕವಾಗಿಬೆಳೆಯುವಚಿಯಾಬೆಳೆಗೆ ರಾಸಾಯನಿಕ ಗೊಬ್ಬರ ಬೇಕಿಲ್ಲ, ಔಷಧ ಸಿಂಪಡಿಸುವಂತಿಲ್ಲ. ಈ ಬೆಳೆಯನ್ನು ಯಾವ ಕಾಡು ಪ್ರಾಣಿಗಳು ತಿಂದಿಲ್ಲ. ಈಗಾಗಲೇ ಮುಸುಕು ಬಂದಿದೆ. ಸುಮಾರು ಎಕರೆಗೆ 5 ರಿಂದ 6 ಕ್ವಿಂಟಲ್‌ ಚಿಯಾ ಬೀಜ ನಿರೀಕ್ಷಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ 20 ರಿಂದ 25 ಸಾವಿರ ರೂ. ಮಾರುಕಟ್ಟೆ ದರವಿದೆ ಎಂದು ರೈತರು ತಳಿಸಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ಸಮರ್ಥ ಬೆಳೆ ಯೋಜನೆಯಡಿ ಚಿಯಾ ಬೀಜ ಮಾರಾಟ ಮಾಡುತ್ತಿದೆ. ರೈತರು ಬರೀ ರಾಗಿ ಬೆಳೆಯುವುದಕ್ಕಿಂತ ಉಪಬೆಳೆಯಾಗಿ ಚಿಯಾ ಬೆಳೆ ಬೆಳೆದರೆ ಅಧಿಕ ಆದಾಯ ಗಳಿಸಬಹುದು ಎಂದು ಗುಡೇಮಾರನಹಳ್ಳಿ ರಸ್ತೆ ತಿಮ್ಮಸಂದ್ರದ ಗೇಟ್‌ ಬಳಿ ಚಿಯಾ ಬೆಳೆದ ಎಂಜಿನಿಯರ್‌ ಪದವೀಧರ ಎಂ.ಆರ್‌.ರಂಗನಾಥ್‌ ತಿಳಿಸಿದ್ದಾರೆ.

ಕೆಲವು ವಿದೇಶಿ ಸಿರಿಧಾನ್ಯಗಳಿಗೆ ಬೇಡಿಕೆ ಇದ್ದು, ಚಿಯಾ ವಿದೇಶಿ ಸಿರಿಧಾನ್ಯ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಮಾರುಕಟ್ಟೆಯಲ್ಲಿಕೆ.ಜಿ.ಗೆ ಸಾವಿರ ರೂ. ಬೆಲೆ ಇದೆ. ದೇಶಿಯ ರೈತರಿಗೂ ಚಿಯಾ ಬೆಳೆ ವರವಾಗಬಹುದು. -ಆರ್‌.ಸುಂದರೇಶ್‌, ಸಹಾಯಕಕೃಷಿ ಪ್ರಭಾರ ನಿರ್ದೇಶಕ

 

ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

death of soldeir

ನಿಂತಿದ್ದ ಕಾರಲ್ಲಿ ಮಾಜಿ ಸೈನಿಕ ಶವಪತ್ತೆ!

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

ಬೆಳಗಾವಿಗೆ ಆಗಮಿಸಿದ ಸಿಎಂ ಬೊಮ್ಮಾಯಿ

Untitled-1

ಸಿದ್ದರಾಮಯ್ಯ – ಜಿ.ಟಿ ದೇವೇಗೌಡ ದೋಸ್ತಿ ಹಾಸ್ಯಾಸ್ಪದ: ಸಂಸದ ವಿ. ಶ್ರೀನಿವಾಸಪ್ರಸಾದ್

mantri mall

ಆಸ್ತಿ ತೆರಿಗೆ ಬಾಕಿ: ಮಂತ್ರಿಮಾಲ್‌ಗೆ ಬೀಗ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್‌ ಕೊರತೆ ನೀಗಿಸಲು ಕ್ರಮ: ಕಳಸದ್‌ 

ಬಸ್‌ ಕೊರತೆ ನೀಗಿಸಲು ಕ್ರಮ: ಕಳಸದ್‌ 

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

ಮೇಲ್ಮನೆ ಚುನಾವಣೆ: ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಿ

onion

ಈರುಳ್ಳಿ ಮೂಟೆ ತಿಪ್ಪೆ ಸೇರಿದೆ ..!

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

new library

2.5 ಲಕ್ಷ ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ನಿರ್ಮಾಣ

MUST WATCH

udayavani youtube

ದಾಂಡೇಲಿ : ಅರಣ್ಯ ಇಲಾಖೆಯಿಂದ ಏಕಾಏಕಿ ಬ್ರಿಟಿಷ್ ರಸ್ತೆ ಬಂದ್, ವ್ಯಾಪಕ ಆಕ್ರೋಶ

udayavani youtube

‘ಮರದ ಅರಶಿನ’ದ ವಿಶೇಷತೆ !

udayavani youtube

ಪುನೀತ್ ರಾಜ್ ಕುಮಾರ್ ಕನಸಿನ ‘ಗಂಧದಗುಡಿ’ ಟೀಸರ್ ಬಿಡುಗಡೆ

udayavani youtube

ತಾಯಿ, ಮಗ ಆರಂಭಿಸಿದ ತಿಂಡಿ ತಯಾರಿ ಘಟಕ ಇಂದು 65 ಮಂದಿಗೆ ಉದ್ಯೋಗ !

udayavani youtube

ಕಳವಾದ ವೈದ್ಯರ ನಾಯಿಯನ್ನು ಗಂಟೆಗಳೊಳಗೆ ಪತ್ತೆ ಹಚ್ಚಿದ ಶಿವಮೊಗ್ಗ ಪೊಲೀಸರು

ಹೊಸ ಸೇರ್ಪಡೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ:  ಹೆಚ್ ಡಿಕೆ ಸ್ಪಷ್ಟನೆ

ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವಿಲ್ಲ: ಹೆಚ್ ಡಿಕೆ ಸ್ಪಷ್ಟನೆ

19protection

ಬೇಡಿಕೆ ಈಡೇರಿಕೆಗೆ ಗುತ್ತಿಗೆದಾರರ ಆಗ್ರಹ

18election

ಪ್ರಥಮ ಪ್ರಾಶಸ್ತ್ಯದ ಮತ ನೀಡಲು ಮಲ್ಲಿಕಾರ್ಜುನ ಲೋಣಿ ಮನವಿ

rAmbhat

ಸಕಲ ಸರಕಾರಿ ಗೌರವಗಳೊಂದಿಗೆ ರಾಮ ಭಟ್ಟರ ಅಂತಿಮ ಯಾತ್ರೆ

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

ಒಂದು ಮತಕ್ಕೆ 50 ಸಾವಿರ ಆಮಿಷ: ಪರಿಷತ್ ಕಣದಲ್ಲಿ ಕಾಂಚಾಣದ ಕಾರುಬಾರು ಜೋರು; ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.