Udayavni Special

ಚಿರತೆ ಹಾವಳಿಗೆ ಜಿಲ್ಲೆಯ ನಾಗರಿಕರು ತಲ್ಲಣ

ಬೀದಿ ನಾಯಿ, ಮಂಗಗಳ ಕಾಟದಿಂದ ಹೈರಾಣಾಗಿರುವ ಜನತೆಗೀಗ ಚಿರತೆ ಭೀತಿ • ಹೆಬ್ಟಾವು ಪತ್ತೆ

Team Udayavani, Jun 30, 2019, 1:34 PM IST

rn-tdy-1..

ರಾಮನಗರದ ರಾಘವೇಂದ್ರ ಕಾಲೋನಿಯಲ್ಲಿ ಚಿರತೆ ಸೆರೆ ಹಿಡಿಯಲು ಇರಿಸಿರುವ ಬೋನು.

ರಾಮನಗರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕಾಡುತ್ತಿದ್ದ ಚಿರತೆ ಹಾವಳಿ ಇದೀಗ ಜಿಲ್ಲಾ ಕೇಂದ್ರದ ನಾಗರಿಕರನ್ನು ಕಾಡುತ್ತಿದೆ. ಬೀದಿ ನಾಯಿಗಳ ಕಾಟದೊಂದಿಗೆ ಚಿರತೆ, ಹಾವುಗಳ ಕಾಟವನ್ನು ನಾಗರಿಕರು ಸಹಿಸಿಕೊಳ್ಳಬೇಕಾಗಿದೆ.

ಬಿಟ್ಟು ಬಿಡದೆ ಕಾಡುತ್ತಿದೆ ಚಿರತೆ: ಕಳೆದ ಜೂನ್‌ 10ರಂದು ಖಾಸಗಿ ಬಸ್‌ ನಿಲ್ದಾಣದ ಬಳಿ ಮುಂಜಾನೆ ನಾಯಿಯನ್ನು ಸಾಯಿಸಿರುವ ಚಿರತೆ, ಜೂನ್‌ 23ರ ರಾತ್ರಿ ನಗರದ ಹೃದಯಭಾಗ ರಾಘವೇಂದ್ರ ಕಾಲೋನಿಯಲ್ಲಿ ನಾಯಿಯೊಂದನ್ನು ಹೊತ್ತೂಯ್ದಿದೆ. ಇದೀಗ ಶುಕ್ರವಾರ ರಾತ್ರಿ ಮತ್ತೆ ರಾಘವೇಂದ್ರ ಕಾಲೋನಿಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ನಗರದ ನಾಗರಿಕರು ತಲ್ಲಣಗೊಂಡಿದ್ದಾರೆ.

ಜೂನ್‌ 28 ಶುಕ್ರವಾರ ರಾತ್ರಿ 9.30ರ ವೇಳೆ ರಾಘವೇಂದ್ರ ಕಾಲೋನಿಯಲ್ಲಿ ಮಂಜುನಾಥ್‌ ಎಂಬುವರ ಮನೆಯ ಹಿತ್ತಲಿನಲ್ಲಿರುವ ಕಟ್ಟಡದ ಮೇಲೆ ಚಿರತೆಯನ್ನು ಕಂಡ ನೆರೆಯ ಮನೆಯ ಅನಂತ ಕೃಷ್ಣ ಹೇರ್ಳೆ ಕುಟುಂಬ ಆತಂಕದ್ದಲ್ಲಿದ್ದಾರೆ. ಅರಣ್ಯ ಸಿಬ್ಬಂದಿಗೆ ಫೋನಾಯಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಕೂಡ ಚಿರತೆ ತಪ್ಪಿಸಿಕೊಳ್ಳುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.

ಬೋನಿಗೆ ಸೆರೆ ಸಿಕ್ಕಿಲ್ಲ: ಪತ್ರಿಕೆಯೊಂದಿಗೆ ಮಾತನಾಡಿದ ಅರಣ್ಯ ಸಿಬ್ಬಂದಿ ಚಂದ್ರು, ಜೂನ್‌ 23ರಂದು ಸಹ ಅನಂತ ಕೃಷ್ಣ ಹೇರ್ಳೆ ಅವರ ಮನೆಯ ಹಿತ್ತಲಿನಲ್ಲಿ ಕಟ್ಟಿಹಾಕಿದ್ದ ನಾಯಿಯನ್ನು ಹೊತ್ತು ಹೊಯ್ದಿದೆ. ಈ ಪ್ರಕರಣದ ನಂತರ ಇಲ್ಲಿ ಬೋನೊಂದನ್ನು ಇರಿಸಲಾಗಿದೆ. ಆದರೆ, ಚಿರತೆ ಪುನಃ ಇದೇ ಸ್ಥಳದಲ್ಲಿ ಶುಕ್ರವಾರ ರಾತ್ರಿ ಕಾಣಿಸಿಕೊಂಡಿದೆ. ಆದರೆ ಬೋನಿಗೆ ಸೆರೆ ಸಿಕ್ಕಿಲ್ಲ ಎಂದು ಮಾಹಿತಿ ನೀಡಿದ್ದಾರೆ. ತೀರಾ ಇತ್ತೀಚೆಗೆ ಷರೀಪ್‌ ಕಾಂಪ್ಲೆಕ್ಸ್‌ನ ಹಿಂಭಾಗ ರಾತ್ರಿ 8 ಗಂಟೆ ವೇಳೆಗೆ ಚಿರತೆ ಓಡಾಡುತ್ತಿರುವುದನ್ನು ಕೆಲವರು ಸ್ಪಷ್ಟ ಪಡಿಸಿದ್ದಾರೆ.

ನದಿಯಲ್ಲಿ ಬೀಡು ಬಿಟ್ಟಿರುವ ಚಿರತೆ: ನಗರದ ಮೂಲಕ ಹಾದು ಹೋಗಿರುವ ಅರ್ಕಾವತಿ ನದಿಯಲ್ಲಿ ಲಾಳದ ಕಡ್ಡಿ, ಜೊಂಡು ಮುಂತಾದ ಗಿಡಗಳು 10 ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ಶ್ರೀರಾಮ ದೇವರ ಬೆಟ್ಟ, ಹಂದಿಗೊಂದಿ ಅರಣ್ಯ ಪ್ರದೇಶದಿಂದ ಚಿರತೆಗಳು ಆಹಾರ ಅರಸಿ, ನದಿ ಪಾತ್ರವನ್ನು ಸೇರಿಕೊಂಡಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಾಮನಗರ ಬೈಪಾಸ್‌ ನಿರ್ಮಾಣ ಕಾಮಗಾರಿ ನಗರಕ್ಕೆ ಅತಿ ಸಮೀಪ ಬಿಳಗುಂಬ-ಅರೇಹಳ್ಳಿ ಗ್ರಾಮಗಳ ನಡುವೆ ನಡೆಯುತ್ತಿದ್ದು, ಅಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಡು ಪ್ರಾಣಿಗಳೀಗ ನಗರದ ಗಡಿ ಪ್ರದೇಶದ ಪೊದೆಗಳು, ಹೊಲ, ಗದ್ದೆಗಳಲ್ಲಿ ಆಶ್ರಯ ಪಡೆದುಕೊಂಡಿವೆ. ಅರ್ಕಾವತಿ ನದಿ ಪಾತ್ರದಲ್ಲಿ ಬೆಳದಿರುವ ರಾಶಿ, ರಾಶಿ ಗಿಡಗಳ ನಡುವೆ ಚಿರತೆ ಕೂಡ ಬೀಡು ಬಿಟ್ಟಿದೆ.

 

● ಬಿ.ವಿ.ಸೂರ್ಯ ಪ್ರಕಾಶ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಳೆ ಬಿಲ್ಲು ಕರಗದೆ ಉಳಿದ ಬಣ್ಣ

ಮಳೆ ಬಿಲ್ಲು ಕರಗದೆ ಉಳಿದ ಬಣ್ಣ

horoscope

ನಿಮ್ಮ ಗ್ರಹಬಲ: ಈ ರಾಶಿಯವರಿಂದು ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ!

ಈಗ ಆಸ್ಟ್ರೇಲಿಯಾ ಎಲ್ಲಿಗೆ ಹೋಗುತ್ತದೋ!

ಈಗ ಆಸ್ಟ್ರೇಲಿಯಾ ಎಲ್ಲಿಗೆ ಹೋಗುತ್ತದೋ!

ಜೋ ಬೈಡೆನ್‌ ವಲಸೆ ನೀತಿಗೆ ಸುಂದರ್‌ ಪಿಚೈ ಮೆಚ್ಚುಗೆ

ಜೋ ಬೈಡೆನ್‌ ವಲಸೆ ನೀತಿಗೆ ಸುಂದರ್‌ ಪಿಚೈ ಮೆಚ್ಚುಗೆ

ಬೆದರಿಸುವ ಆಸ್ಟ್ರೇಲಿಯಾವನ್ನು ಬೆಚ್ಚಿಬೀಳಿಸಿದ ಭಾರತ!

ಬೆದರಿಸುವ ಆಸ್ಟ್ರೇಲಿಯಾವನ್ನು ಬೆಚ್ಚಿಬೀಳಿಸಿದ ಭಾರತ!

ಸರ್ವೇಕ್ಷಣೆ ಹೆಸರಲ್ಲಿ ಚೀನ ಮ್ಯಾಪಿಂಗ್‌!

ಸರ್ವೇಕ್ಷಣೆ ಹೆಸರಲ್ಲಿ ಚೀನ ಮ್ಯಾಪಿಂಗ್‌!

ಕೇಂದ್ರ ಬಜೆಟ್‌ ಆ್ಯಪ್‌ ಅನಾವರಣ

ಕೇಂದ್ರ ಬಜೆಟ್‌ ಆ್ಯಪ್‌ ಅನಾವರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Millet and cattle fodder are the cause of the fire.

ರಾಗಿ ಮೆದೆಗೆ ಬೆಂಕಿ

THALUK-PANCHAYATH

ತಾಪಂ ಇರಲಿ, ಗ್ರಾಪಂಗೆ ಮಾರ್ಗದರ್ಶಕವಾಗಲಿ

Ambedkar Bhavan to be held tomorrow: Kumaraswamy

ನಾಳೆ ಅಂಬೇಡ್ಕರ್‌ ಭವನ ಲೋಕಾರ್ಪಣೆ: ಕುಮಾರಸ್ವಾಮಿ

ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ

ವಿಸಿಟಿಂಗ್‌ ಕಾರ್ಡ್‌ಗಾಗಿ ಅವಕಾಶ ಕೊಡಬೇಕಿತ್ತಾ : ಜಿ.ಟಿ ದೇವೇಗೌಡ ಅವರಿಗೆ HDK ಪ್ರಶ್ನೆ

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

ಉದ್ಧವ್‌ ಠಾಕ್ರೆ ಹೇಳಿಕೆ ಹಿಂಪಡೆಯಬೇಕು : ಸಾಮ್ರಾಟ್‌ ಗೌಡ ಎಚ್ಚರಿಕೆ

MUST WATCH

udayavani youtube

ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ

udayavani youtube

ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್

udayavani youtube

ತಲೆಕೂದಲು, ಮೀಸೆ ಬೋಳಿಸುವಂತೆ ರಾಗಿಂಗ್: ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳ ಬಂಧನ

udayavani youtube

ನೇತಾಜಿಯವರ ಜನ್ಮ ದಿನದಂದು ಅವರ ಆಪ್ತರ ಪುತ್ರಿಯಾದ ಜೊತೆ ಉಡುಪಿಯಲ್ಲಿ ಮಾತುಕತೆ,

udayavani youtube

ಮಂಗಳೂರು ಪೊಲೀಸರ ಭರ್ಜರಿ ಬೇಟೆ: 44 ಕೆಜಿ ಗಾಂಜಾ ವಶ, ಏಳು ಆರೋಪಿಗಳ ಬಂಧನ

ಹೊಸ ಸೇರ್ಪಡೆ

ಮಳೆ ಬಿಲ್ಲು ಕರಗದೆ ಉಳಿದ ಬಣ್ಣ

ಮಳೆ ಬಿಲ್ಲು ಕರಗದೆ ಉಳಿದ ಬಣ್ಣ

horoscope

ನಿಮ್ಮ ಗ್ರಹಬಲ: ಈ ರಾಶಿಯವರಿಂದು ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ!

ಈಗ ಆಸ್ಟ್ರೇಲಿಯಾ ಎಲ್ಲಿಗೆ ಹೋಗುತ್ತದೋ!

ಈಗ ಆಸ್ಟ್ರೇಲಿಯಾ ಎಲ್ಲಿಗೆ ಹೋಗುತ್ತದೋ!

ಜೋ ಬೈಡೆನ್‌ ವಲಸೆ ನೀತಿಗೆ ಸುಂದರ್‌ ಪಿಚೈ ಮೆಚ್ಚುಗೆ

ಜೋ ಬೈಡೆನ್‌ ವಲಸೆ ನೀತಿಗೆ ಸುಂದರ್‌ ಪಿಚೈ ಮೆಚ್ಚುಗೆ

ಮುಷ್ತಾಕ್‌ ಅಲಿ ಟಿ20: ಕ್ರಿಕೆಟಿಗರೆಲ್ಲರ ಫ‌ಲಿತಾಂಶ ನೆಗೆಟಿವ್‌

ಮುಷ್ತಾಕ್‌ ಅಲಿ ಟಿ20: ಕ್ರಿಕೆಟಿಗರೆಲ್ಲರ ಫ‌ಲಿತಾಂಶ ನೆಗೆಟಿವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.