ಸಹಕಾರ ಸಂಘದಿಂದ ರೈತರ ಏಳಿಗೆ

Team Udayavani, Sep 25, 2022, 1:22 PM IST

ಸಹಕಾರ ಸಂಘದಿಂದ ರೈತರ ಏಳಿಗೆ

ಮಾಗಡಿ: ಸಹಕಾರ ಸಂಘಗಳು ರೈತರ ಏಳಿಗೆಗೆ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಬಿಸ್ಕೂರು ವಿಎಸ್‌ಎಸ್‌ಎನ್‌ ಅಧ್ಯಕ್ಷ ಧನ್ಯಕುಮಾರ್‌ ತಿಳಿಸಿದರು.

ತಾಲೂಕಿನ ಬಿಸ್ಕೂರು ವಿಎಸ್‌ಎಸ್‌ಎನ್‌ ನಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾ ಡಿದ ಅವರು, ಗ್ರಾಮೀಣ ಭಾಗದ ರೈತರ ಆರ್ಥಿಕವಾಗಿ ಸಬಲೀಕರಣಕ್ಕೆ ನಿರಂತರವಾಗಿ ಸೇವೆಯಲ್ಲಿ ಸಂಘ ಮಾದರಿಯಾಗಿದೆ.

ಇದಕ್ಕೆ ಸರ್ವ ಸದಸ್ಯರು ಸಹ ಸಹಕಾರ ಪ್ರೋತ್ಸಾಹ ನೀಡುತ್ತಿರುವುದರಿಂದ ಸಂಘವು ಉತ್ತಮವಾಗಿ ಆಡಳಿತ ನಡೆಸುತ್ತಿದೆ ಎಂದರು. ಸದಸ್ಯರ ಮಹಾಸಭೆಯಲ್ಲಿ ಭಾಗವಹಿಸಿದ ಸದಸ್ಯರು ಲೆಕ್ಕಪತ್ರಗಳನ್ನು ಓದಿ ಹೇಳಲಾಗು ತ್ತದೆ. ಈ ವೇಳೆ ಸಮಸ್ಯೆ, ಲೋಪದೋಷಗಳು ಕಂಡುಬಂದರೆ ಸದಸ್ಯರು ಅದರ ಬಗ್ಗೆ ಅರಿತು, ಸಮಸ್ಯೆ ತಮ್ಮಲ್ಲಿರುವ ಅನುಮಾನ ಬಗೆಹರಿಸಿ ಕೊಳ್ಳಬೇಕಿದೆ. ಸಂಘದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.

ಕಾರ್ಯದರ್ಶಿ ಎಸ್‌.ಗಂಗಣ್ಣ ಮಾತನಾಡಿ, ಸಂಘದ ವ್ಯಾಪ್ತಿಗೆ 10 ಗ್ರಾಮ ಸೇರುತ್ತದೆ. ಒಟ್ಟು 1,190 ಸದಸ್ಯರಿದ್ದಾರೆ. 40 ಲಕ್ಷ ರೂ. ಷೇರು ಬಂಡವಾಳ, ಸರ್ಕಾರದ ಷೇರು 82 ಸಾವಿರ ರೂ. ಕೆಸಿಸಿ ಸಾಲವಾಗಿ 499 ಮಂದಿಗೆ 3.58 ಕೋಟಿ ರೂ. ನೀಡಲಾಗಿದೆ. ಕೃಷಿ ಯೇತರ ಸಾಲವಾಗಿ 16 ಮಂದಿಗೆ 8 ಲಕ್ಷ, ಚಿನ್ನಾಭರಣ ಸಾಲವನ್ನಾಗಿ 4 ಲಕ್ಷ, ಅಂಗಡಿ ಸಾಲವನ್ನಾಗಿ 8 ನೀಡಲಾಗಿದೆ ಎಂದರು.

ಕೃಷಿ ಸಲಕರಣೆ ಮಾರಾಟ: ವ್ಯಾಪಾರ ಲಾಭವಾಗಿ 2.92 ಲಕ್ಷ ರೂ. ಲಾಭದಲ್ಲಿದೆ. ಕಳೆದ 30 ವರ್ಷಗಳಿಂದ ನಷ್ಟದಲ್ಲಿದ್ದ ಸಂಘವು ಇತ್ತೀಚಿನ ವರ್ಷದಲ್ಲಿ ಲಾಭಾಂಶದಲ್ಲಿ ನಡೆಯುತ್ತಿದ್ದು, ಇದಕ್ಕೆಲ್ಲ ಸಂಘದ ಸದಸ್ಯರ ಸಹ ಕಾರವೇ ಪ್ರಗತಿ ಸಾಧಿಸುತ್ತಿದೆ. ರಸಗೊಬ್ಬರ, ಪಡಿತರ ಆಹಾರ, ಕೃಷಿ ಸಲಕರಣೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪಶು ಆಹಾರ ಮಾರಾಟ ಮಾಡಲು ಆಡಳಿತ ಮಂಡಲಿ ಚಿಂತಿಸಿದೆ ಎಂದು ತಿಳಿಸಿದರು.

ಉಪಾಧ್ಯಕ್ಷೆ ಜಯಲಕ್ಷಮ್ಮ, ನಿರ್ದೇಶಕ ಡಿ.ಜಿ. ವೆಂಕಟೇಶ್‌, ಗೋವಿಂದಯ್ಯ, ಡಿ. ಸುರೇಶ್‌, ಬಿ.ಟಿ. ವೆಂಕಟೇಶ್‌, ಬಿ.ಕೆಂಪಯ್ಯ, ಸಂಜೀವಯ್ಯ, ಆರ್‌.ನಾರಾಯಣ, ರಂಗ ಸ್ವಾಮಯ್ಯ, ನರಸಿಂಹಮೂರ್ತಿ, ಬಸವ ರಾಜು, ಟಿ.ಎಸ್‌.ರಮ್ಯಾ, ಮುನಿರಾಜಮ್ಮ, ಭಾಗ್ಯಮ್ಮ, ಮುಖಂಡ ಕುಮಾರ್‌, ಬಿ.ಎಸ್‌. ಸುಹೇಲ್‌ ಹಾಗೂ ಇತರರು ಇದ್ದರು.

ಟಾಪ್ ನ್ಯೂಸ್

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌

ಕ್ರಿಮಿನಲ್‌ ಚಟುವಟಿಕೆ, ಗೂಂಡಾ ರಾಜಕೀಯ ನಾವು ಒಪ್ಪಲ್ಲ: ಕಟೀಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

ಚಕ್ರಬಾವಿ ಕೆರೆ ಮಣ್ಣಿಗೆ ಕನ್ನ: ಕ್ರಮಕ್ಕೆ ಆಗ್ರಹ

ಬೊಂಬೆಯಾಟ ಪರಿಚಯಿಸುವ ಪ್ರಯತ್ನ

ಬೊಂಬೆಯಾಟ ಪರಿಚಯಿಸುವ ಪ್ರಯತ್ನ

ಡಿ.8ರಿಂದ ಚನ್ನಪಟ್ಟಣ ತಾಲೂಕು ಮಟ್ಟದ ಕನಕೋತ್ಸವ

ಡಿ.8ರಿಂದ ಚನ್ನಪಟ್ಟಣ ತಾಲೂಕು ಮಟ್ಟದ ಕನಕೋತ್ಸವ

tdy-9

ಬಾಕಿಯಿರುವ ಕೃಷಿ ಗಣತಿ ಪೂರ್ಣಗೊಳಿಸಿ

tdy-8

ಸಂವಿಧಾನದಲ್ಲಿ ವಿವಿಧ ಸಂಸ್ಕೃತಿ ಆಚರಣೆಗೆ ಅವಕಾಶ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

accident

ಮುದ್ದೇಬಿಹಾಳ: ಘನ ವಾಹನದ ಚಕ್ರ ಹರಿದು ಬೈಕ್ ಸವಾರನ ದಾರುಣ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.