ಸ್ಪರ್ಧಾತ್ಮಕ ಪರೀಕ್ಷೆ ಮಕ್ಕಳಿಗೆ ದಾರಿದೀಪ


Team Udayavani, Feb 14, 2019, 12:13 PM IST

ra-m.jpg

ಚನ್ನಪಟ್ಟಣ: ಕಾಲೇಜು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಲು ಸ್ಪರ್ಧಾತ್ಮಕ ಪರೀಕ್ಷೆಗಳು ದಾರಿದೀಪವಾಗಿದೆ ಎಂದು ನಗರ ಜೆ.ಡಿ.ಎಸ್‌. ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಆದಿತ್ಯ ಬಿರ್ಲಾ ಗ್ರೂಪ್‌ ಆಶ್ರಯದ ಜ್ಞಾನಾರ್ಜನ್‌ ಸಂಸ್ಥೆಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆಯ ಉಚಿತ ಬೋಧನ ತರಗತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ತಂತ್ರಜ್ಞಾನ ಯುಗದಲ್ಲಿ ಅದರಲ್ಲೂ ಬಡತನದಲ್ಲೇ ಹುಟ್ಟಿಬೆಳೆದು ಶಿಕ್ಷಣವನ್ನು ಪಡೆಯುವ ಬಡ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ನಂತರ ಮೆಡಿಕಲ್‌ ಹಾಗೂ ಎಂಜಿನಿಯರ್‌ ಕೋರ್ಸ್‌ಗಳಿಗೆ ಹೋಗಲು ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಬೇಕಿದೆ. ಅದಕ್ಕೆ ಲಕ್ಷಾಂತರ ರೂ. ತೆತ್ತು ಕೋಚಿಂಗ್‌ಗೆ ಹೋಗಬೇಕಾಗಿದೆ.

ಇದನ್ನು ಮನಗಂಡು ಉಚಿತವಾಗಿ ಜ್ಞಾನಾರ್ಜನ್‌ ಕೋಚಿಂಗ್‌ ನಡೆಸಲಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪರೀಕ್ಷೆಗೆ ಪೂರಕ ತರಬೇತಿ: ಜ್ಞಾನಾರ್ಜನ್‌ ಶೈಕ್ಷಣಿಕ ಯೋಜನೆ ಈ ಬಾರಿ ಸಾಮಾನ್ಯ ಪ್ರವೇಶ ಪರೀಕ್ಷೆಗಳ ಪೂರಕ ತರಬೇತಿಯನ್ನು ನೀಡಲು ರಾಜ್ಯಮಟ್ಟದಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಪದವಿ ಪೂರ್ವ ಕಾಲೇಜು ಹಾಗೂ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆಯ್ಕೆಯಾಗಿದೆ. ಸಾಮಾನ್ಯವಾಗಿ ಎಸ್‌ಎಸ್‌ ಎಲ್‌ಸಿ ಮುಗಿದ ತಕ್ಷಣ ಬಡ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಮಂದಿ ಜ್ಞಾನ, ಪಿಸಿಎಂಬಿ ಕೋರ್ಸ್‌ ತಗೆದುಕೊಂಡರೆ ಲಕ್ಷಾಂತರ ರೂ. ಅವಶ್ಯಕವಾಗಿರುತ್ತದೆ ಎಂದು ಬೇರೆ ಕೋರ್ಸಗಳಿಗೆ ಹೋಗುವುದನ್ನು ನೋಡಿದ್ದೇವೆ. ಇದಕ್ಕೆ ಕಾರಣ ಆರ್ಥಿಕ ಸಮಸ್ಯೆಗಳೇ ಆಗಿವೆ.

ಈ ರೀತಿಯ ಆರ್ಥಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಮ್ಮ ಭವಿಷ್ಯವನ್ನು ಚಿವುಟುಕೊಳ್ಳುವ ವಿದ್ಯಾರ್ಥಿಗಳಿಗೆ ನೆರವಾಗಲು ಆದಿತ್ಯ ಬಿರ್ಲಾ ಗ್ರೂಪ್‌ ತನ್ನದೇ ಆದ ಉಚಿತ ಶೈಕ್ಷಣಿಕೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.
 
ಅಭ್ಯಾಸದಲ್ಲಿ ಶ್ರದ್ಧೆ ಇರಲಿ: ಕಾಲೇಜಿನ ಪ್ರಾಂಶುಪಾಲ ಸದಾನಂದ ಮಾತನಾಡಿ, ಜ್ಞಾನಾರ್ಜನ್‌ ಶೈಕ್ಷಣಿಕ ಯೋಜನೆ ಜ್ಞಾನ, ಪಿಸಿಎಂಬಿ ಬಡ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಉಚಿತ ತರಬೇತಿ ನೀಡುತ್ತಿದ್ದು ವಿದ್ಯಾರ್ಥಿಗಳು ಶ್ರದ್ಧೆªಯಿಂದ ಅಭ್ಯಾಸ ಮಾಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಿ: ಯುವ ಸಾಹಿತಿ ಶ್ರೀನಿವಾಸ ರಾಂಪುರ ಮಾತನಾಡಿ, ಕಾಲೇಜು ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಅದರಲ್ಲೂ ಬಡವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲ ಮಾಡಲು ಶೈಕ್ಷಣಿಕೆ ಸೇವೆಯನ್ನು ನೀಡುತ್ತಿರುವ ಜ್ಞಾನಾರ್ಜನ್‌ ಶೈಕ್ಷಣಿಕ ಸೇವೆ ಅಗಾಧವಾಗಿದೆ. ಇದರ ಸದುಪಯೋಗ ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯ ಎಂದರು. ಈ ಸಂದರ್ಭದಲ್ಲಿ ಜ್ಞಾನಾರ್ಜನ್‌ ಸಂಯೋಜಕಿ ಎಚ್‌.ಜೆ.ಕಾವ್ಯ, ಉಪನ್ಯಾಸಕರಾದ ಅವಿನಾಶ್‌, ಲೋಹಿತ್‌. ಆರ್‌, ಪ್ರತಾಪ್‌ ಕುಮಾರ್‌, ಎಂ.ಶಿಕ್ಷಕ ಹರೀಶ್‌ ಹಾಜರಿದ್ದರು. 

ಟಾಪ್ ನ್ಯೂಸ್

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

congress

ಗೃಹಸಚಿವರ ತವರಿನಲ್ಲಿ ಪಟ್ಟಣ ಪಂಚಾಯತಿ ಕಾಂಗ್ರೆಸ್ ಪಾಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

ಪ್ರತಿಮೆ ಅನಾವರಣಕ್ಕೆ ಡಿ.26ರ ಗಡುವು

15 ವರ್ಷಗಳಿಂದ ರಾಮನ ಪರಿವಾರ ಅನಾಥ 

15 ವರ್ಷಗಳಿಂದ ರಾಮನ ಪರಿವಾರ ಅನಾಥ 

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

15

ಸುವರ್ಣಮುಖೀ ನದಿಗೆ ವಿಷ

ಕಲ್ಯಾ ಬೆಟ್ಟದಲ್ಲಿರುವ ನಂದಿ ವಿಗ್ರಹ

ಪ್ರವಾಸೋದ್ಯಮ ಇಲಾಖೆಗೆ ಕೈಗೆಟುಕದ ಕಲ್ಯಾ ಬೆಟ್ಟ

MUST WATCH

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

udayavani youtube

ಕಬಿನಿ ಹಿನ್ನೀರಿನಲ್ಲಿ ಈಜಿದ ಹುಲಿ

ಹೊಸ ಸೇರ್ಪಡೆ

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

shivamogga news

ಸರ್ಕಾರದಿಂದ ಕುಡಿಯುವ ನೀರೂ ಮಾರಾಟ: ಆರೋಪ-ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.