ಒಮ್ಮಿಂದೊಮ್ಮೆಲೆ ಕುಸಿದ ಹಾಲು ಉತ್ಪಾದನೆ


Team Udayavani, Jun 4, 2023, 3:31 PM IST

ಒಮ್ಮಿಂದೊಮ್ಮೆಲೆ ಕುಸಿದ ಹಾಲು ಉತ್ಪಾದನೆ

ರಾಮನಗರ: ಕಳೆದೊಂದು ದಶಕದಿಂದ ಲಕ್ಷಾಂ ತರ ರೈತ ಕುಟುಂಬಗಳ ಆದಾಯದ ಮೂಲವಾ ಗಿದ್ದ ಹೈನೋದ್ಯಮಕ್ಕೆ ರೈತರು ಬೆನ್ನು ತೋರುತ್ತಿದ್ದಾರಾ..?

ಹೌದು…, ಇತ್ತೀಚಿಗೆ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಗಣನೀಯ ಪ್ರಮಾಣ ದಲ್ಲಿ ಹಾಲು ಉತ್ಪಾದನೆ ಕುಸಿತಗೊಂಡಿರುವುದೇ ಈ ಪ್ರಶ್ನೆಗೆ ಸಾಕ್ಷಿಯಂತಿದೆ. ಬೆಂಗಳೂರು ಹಾಲು ಒಕ್ಕೂಟಕ್ಕೆ ಪ್ರತಿದಿನ ಪೂರೈಕೆಯಾಗುತ್ತಿದ್ದ ಹಾಲಿನ ಪ್ರಮಾಣದಲ್ಲಿ ಶೇ.30 ಕಡಿಮೆಯಾಗಿದ್ದು, ಲಕ್ಷಾಂತರ ಲೀಟರ್‌ ಹಾಲು ಒಮ್ಮಿಂದೊಮ್ಮೆಲೆ ಕಡಿಮೆಯಾಗಿರುವು ದರ ಹಿಂದೆ ರೈತರು ಹೈನೋದ್ಯಮದಿಂದ ಹೊರ ನಡೆಯುತ್ತಿರುವುದೇ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. 3-6 ಲಕ್ಷ ಲೀಟರ್‌ನಷ್ಟು ಕುಸಿತ: ಬೆಂಗಳೂರು ಹಾಲು ಒಕ್ಕೂಟ 2022ರ ಜೂನ್‌ನಲ್ಲಿ 19 ಲಕ್ಷ ಲೀಟರ್‌ ಹಾಲು ಉತ್ಪಾದನೆ ಮಾಡಿ ದಾಖಲೆ ನಿರ್ಮಿಸಿದ್ದ ಬೆಂಗಳೂರು ಹಾಲು ಒಕ್ಕೂಟದಲ್ಲಿ ಇದೀಗ ಪ್ರತಿದಿನ 15 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ.

ಕಳೆದ ಏಪ್ರಿಲ್‌ನಲ್ಲಿ ಹಾಲಿನ ಉತ್ಪಾದನೆ 13 ಲಕ್ಷ ಲೀಟರ್‌ಗೆ ಕುಸಿದಿತ್ತು. ಮುಂಗಾರು ಆರಂಭಗೊಂಡ ಹಿನ್ನೆಲೆ ಹಾಲು ಉತ್ಪಾದನೆ ತುಸು ಹೆಚ್ಚಳ ಕಂಡಿದೆಯಾ ದರೂ, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಮತ್ತೆ ಹಾಲು ಸಂಗ್ರಹಣೆ ಪ್ರಮಾಣ ಕಡಿಮೆಯಾಗಲಿದೆ ಎಂದು ಬಮೂಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

50 ಸಾವಿರಕ್ಕೂ ಹೆಚ್ಚು ಹಸು ಕಡಿಮೆ: ರಾಜ್ಯದ ಅತಿದೊಡ್ಡ ಹಾಲು ಒಕ್ಕೂಟ ಎನಿಸಿರುವ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದಿಸುವ, ಗರ್ಭ ಧರಿಸಿರುವ, ಸಣ್ಣ ಕರು ಸೇರಿ 4.75 ಲಕ್ಷ ರಾಸುಗಳಿವೆ ಎಂದು ಗಣನೆ ಮಾಡಲಾಗಿದೆ. ಕಳೆದ 6 ತಿಂಗಳಿಂದ ರಾಸು ಮಾರಾಟ ಮಾಡಲು ರೈತರು ಮುಂದಾಗಿ ದ್ದು, ಸರಿ ಸುಮಾರು 50 ರಿಂದ 60 ಸಾವಿರ ರಾಸು ಮಾರಿದ್ದಾರೆಂಬ ಮಾಹಿತಿ ಬಮೂಲ್‌ ಅಧಿಕಾರಿಗಳದ್ದಾಗಿದೆ. ಪ್ರತಿವರ್ಷ ಹಾಲು ಕರೆ ಯುವ ಹಸುಗಳಿಗೆ ಬೆಂಗಳೂರು ಹಾಲು ಒಕ್ಕೂಟ ವಿಮೆ ಮಾಡಿಸುತ್ತಿದ್ದು, 2022-23ನೇ ಸಾಲಿನಲ್ಲಿ 2.75 ಲಕ್ಷ ವಿಮೆ ಮಾಡಿಸಲಾಗಿತ್ತು. ಆದರೆ, 2023-24 ನೇ ಸಾಲಿನಲ್ಲಿ ಈ ಸಂಖ್ಯೆ 2.40 ಲಕ್ಷಕ್ಕೆ ಕುಸಿದಿದ್ದು, ವಿಮೆ ಮಾಡಿಸದೇ ಇರುವ ರಾಸು ಸೇರಿ ಸುಮಾರು 50-60 ಸಾವಿರ ರಾಸುಗಳನ್ನು ರೈತರು ಮಾರಾಟ ಮಾಡಿದ್ದಾರೆ.

15 ಸಾವಿರ ಮಂದಿ ವಿದಾಯ: ರಾಸು ಮಾರುವ ಜತೆಗೆ ಹೈನೋದ್ಯಮಕ್ಕೆ ವಿದಾಯ ಹೇಳುವ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ 1.23 ಲಕ್ಷ ಮಂದಿ ಸಕ್ರಿಯ ಸದಸ್ಯರಿದ್ದು, ಇದೀಗ ಈಸಂಖ್ಯೆ 1.8 ಲಕ್ಷಕ್ಕೆ ಕುಸಿದಿದೆ. 15 ಸಾವಿರ ಮಂದಿ ಹೈನು ಗಾರಿಕೆ ಬಿಟ್ಟು ಬೇರೆ ಉದ್ಯೋಗ ಹುಡುಕಿಕೊಂಡಿ ದ್ದಾರೆ. ಇದರೊಂದಿಗೆ ಈ ಹಿಂದೆ 5 ರಿಂದ 10 ಹಸು ಸಾಕಾಣಿಕೆ ಮಾಡಿ ಜೀವನ ಸಾಗಿ ಸುತ್ತಿದ್ದ ವರು ಇದೀಗ ಅರ್ಧದಷ್ಟು ಕಡಿಮೆ ಮಾಡಿದ್ದು ಒಂದೋ ಎರಡೋ ಹಸು ಸಾಕುತ್ತಿದ್ದಾರೆ.

ಆದಾಯ ಕಡಿಮೆ ಕಾರಣ: ಹಾಲು ಉತ್ಪಾದನೆ ಪ್ರಮಾಣ ಕುಸಿಯುತ್ತಿರುವುದಕ್ಕೆ ಮುಖ್ಯ ಕಾರಣ, ಮೇವಿನ ಕೊರತೆ, ಪಶು ಆಹಾರದ ಬೆಲೆ ಹೆಚ್ಚಳ, ರಾಸುಗಳಿಗೆ ಕಾಡುತ್ತಿರುವ ಖಾಯಿಲೆ, ತಜ್ಞರ ಲೆಕ್ಕಾಚಾರದ ಪ್ರಕಾರ ಪ್ರತಿ ಲೀಟರ್‌ ಹಾಲು ಉತ್ಪಾದನೆಗೆ 22 ರೂ.ಗಳಿಂದ 24 ರೂ. ಖರ್ಚು ಬೀಳುತ್ತದೆ. ಸ್ವಂತ ಮೇವಿಲ್ಲದೆ ಬೇರೆ ಯವರ ಬಳಿ ಮೇವು ಖರೀದಿ ಮಾಡಿದರೆ ಈ ಬೆಲೆ 28 ರಿಂದ 30 ರೂ. ದಾಟುತ್ತದೆ. ಇನ್ನು ಹಸು ಖರೀದಿ ಮಾಡಲು ಹಾಕಿದ ಬಂಡವಾಳ, ಹಸು ಆರೋಗ್ಯ ತಪ್ಪಿದಾಗ ಮಾಡುವ ಪಶುವೈದ್ಯ ಕೀಯ ಖರ್ಚುನ್ನು ಲೆಕ್ಕ ಹಾಕಿದರೆ ಸಿಗುವ ಬೆಲೆ ಯಲ್ಲಿ ಏನೇನೂಆದಾಯ ಉಳಿದುಕೊಳ್ಳು ವುದಿಲ್ಲ. ಸರ್ಕಾರ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತದೆಯಾದರೂ ಅದು 6 ತಿಂಗಳಿಗೋ ಮೂರು ತಿಂಗಳಿಗೋ ಸಿಗುವುದ ರಿಂದ ರೈತರಿಗೆ ಏನೂ ಪ್ರಯೋಜನವಾಗುತ್ತಿಲ್ಲ ಈ ಕಾರಣದಿಂದ ಹೈನೋದ್ಯಮದಿಂದ ವಲಸೆ ಹೋಗುತ್ತಿದ್ದಾರೆ.

ಬೆಂಗಳೂರಿಗೆ ಎದುರಾಗುತ್ತಾ ಹಾಲಿನ ಸಮಸ್ಯೆ : ಕೇವಲ ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಮಾತ್ರವಲ್ಲಿ ರಾಜ್ಯದ ಪ್ರತಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲೂ ಶೇ.25 ರಿಂದ 30ರಷ್ಟು ಹಾಲು ಉತ್ಪಾದನೆ ಕಡಿಮೆಯಾಗಿದೆ. ಕೆಎಂಎಫ್‌ ವ್ಯಾಪ್ತಿಯ ಹಾಲು ಒಕ್ಕೂಟಗಳಲ್ಲಿ ಉತ್ಪಾದನೆ ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರಕ್ಕೆ ಹಾಲಿನ ಕೊರತೆ ಎದುರಾಗಲಿದೆಯಾ ಎಂಬ ಆತಂಕ ಶುರುವಾಗಿದೆ. ಬೆಂಗಳೂರು ಮಹಾನಗರಕ್ಕೆ ಮಂಡ್ಯ, ಬೆಂಗಳೂರು, ಕೋಲಾರ, ತುಮಕೂರು ಮತ್ತು ಕೆಎಂಎಫ್‌ ವ್ಯಾಪ್ತಿಯ ಮದರ್‌ ಡೇರಿ ಹೀಗೆ 5 ಹಾಲು ಒಕ್ಕೂಟಗಳಿಂದ ಹಾಲು ಪೂರೈಕೆಯಾಗುತ್ತಿದೆ. ಇದರಲ್ಲಿ ಬಮೂಲ್‌ ಒಂದೇ 12 ಲಕ್ಷ ಲೀಟರ್‌ ಹಾಲನ್ನು ಪೂರೈಕೆ ಮಾಡುತ್ತಿದ್ದು, ಉಳಿದ 4 ಒಕ್ಕೂಟ ಸೇರಿ ಪ್ರತಿದಿನ ಸುಮಾರು 25 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುತ್ತಿವೆ. ಇದರೊಂದಿಗೆ ಅಮೂಲ್‌, ಆರೋಗ್ಯ, ಗೋವರ್ಧನ್‌, ದೊಡ್ಲಾ ಸೇರಿ 12 ಬೇರೆ ಬ್ರಾಂಡ್‌ಗಳ ಹಾಲು, ಡಬ್ಟಾಗಳಲ್ಲಿ ಮಾರಾಟ ಮಾಡುವ ಹಾಲಿನ ಪ್ರಮಾಣ 10 ಲಕ್ಷ ಲೀಟರ್‌ನಷ್ಟಿದೆ. ನಂದಿನಿ ಹಾಲಿನ ಉತ್ಪಾದನೆ ಕಡಿಮೆ ಆದಲ್ಲಿ ಬೆಂಗಳೂರು ನಗರದ ಗ್ರಾಹಕರಿಗೆ ಹಾಲು ಪೂರೈಕೆ ಸವಾಲಿನ ಕೆಲಸವಾಗಲಿದೆ.

ಮನೆಗೆ ಹಾಲು ಖರೀದಿಸುವವರು ಹಾಗೂ ಪ್ರಮುಖ ಹೋಟೆಲ್‌ ಗುಣಮಟ್ಟ ಹಾಗೂ ಸುರಕ್ಷತೆ ಕಾರಣದಿಂದಾಗಿ ನಂದಿನಿ ಹಾಲನ್ನೇ ಖರೀದಿ ಮಾಡುತ್ತಿದ್ದಾರೆ. ಆದರೆ, ರಸ್ತೆ ಬದಿ ಚಹಾ ವ್ಯಾಪಾರಿಗಳು ಸೇರಿ ಕೆಲ ವ್ಯಾಪಾರಿ ದೃಷ್ಟಿಯಿಂದ ಹಾಲು ಬಳಕೆ ಮಾಡುವವರು ಖಾಸಗಿ ಹಾಲನ್ನು ಬಳಕೆ ಮಾಡುತ್ತಿದ್ದಾರೆ. ನಂದಿನಿ ಹಾಲಿನ ಕೊರತೆ ಉಂಟಾದಲ್ಲಿ ಖಾಸಗಿ ಹಾಲನ್ನೇ ಗೃಹಬಳಕೆಗೂ ಉಪಯೋಗಿಸಬೇಕಿದೆ. ಇನ್ನು ಖಾಸಗಿಯವರು ಈ ಸಂದರ್ಭ ಬಳಸಿ ಹಾಲಿನ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಯೂ ಇದೆ. ಬೆಂಗಳೂರಿಗೆ ಹೆಚ್ಚು ಹಾಲು ಪೂರೈಕೆ ಮಾಡುವ ಬಮೂಲ್‌ಗೆ ಪ್ರತಿದಿನ ಹಾಲು ಮತ್ತು ಮೊಸರಿಗೆ 12ಲಕ್ಷ ಲೀಟರ್‌ ಹಾಲು ಬೇಕಿದೆ.

ಇನ್ನು ಆಂಧ್ರ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದ್ದು, ಆ ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಮತ್ತು ಅಂಗನವಾಡಿಗಳಿಗೆ ಟೆಟ್ರಾಪ್ಯಾಕ್‌ನಲ್ಲಿ ಪ್ರತಿದಿನ 50 ಲಕ್ಷ ಲೀಟರ್‌ ಹಾಲು ಪೂರೈಕೆ ಮಾಡುತ್ತಿದೆ. 1 ಲಕ್ಷ ಲೀಟರ್‌ ಹಾಲನ್ನು ಪುಡಿಯಾಗಿ ಪರಿವರ್ತನೆ ಮಾಡುತ್ತಿದ್ದು, ಉಳಿದ ಹಾಲಿನಲ್ಲಿ ಚೀಸ್‌ ಹಾಗೂ ತುಪ್ಪ ಸೇರಿ ಉಪ ಉತ್ಪನ್ನಗಳಿಗೆ ಬಳಕೆ ಮಾಡಲಾಗುತ್ತಿದೆ. ಈಗ ಸಂಗ್ರಹವಾಗುತ್ತಿರುವ ಹಾಲಿಗಿಂತ ಕಡಿಮೆ ಪ್ರಮಾಣ ಹಾಲು ಸಂಗ್ರಹಣೆಯಾದಲ್ಲಿ ಹಾಲು ಪೂರೈಕೆ ವ್ಯತ್ಯಯವಾಗಲಿದೆ.

-ಸು.ನಾ.ನಂದಕುಮಾರ್‌

ಟಾಪ್ ನ್ಯೂಸ್

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

Tourist Place: ಪ್ರವಾಸೋದ್ಯಮ ಇಲಾಖೆಯ ಪ್ರೋತ್ಸಾಹವಿಲ್ಲದೆ ಸ್ವರಗುತ್ತಿರುವ ಪ್ರವಾಸಿ ತಾಣಗಳು

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

ಜಲಪ್ರಳಯದ ಮನಕಲಕುವ ಕಥಾಹಂದರದ “2018” ನಮ್ಮ ಬದುಕಿನ ಚಿತ್ರ!

tdy-13

Damadan Purva: ಈ ಗ್ರಾಮದ ಯುವತಿಯರನ್ನು ಮದುವೆಯಾದರೆ ಸಿಗುತ್ತೆ ಮನೆ, ಜಮೀನು, ಆಸ್ತಿ.!

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು

Mysore ದಸರಾ ಗಜಪಡೆಯ ತೂಕ ಪರೀಕ್ಷೆ… ತೂಕ ಹೆಚ್ಚಿಸಿಕೊಂಡ ಅಭಿಮನ್ಯು, ಭೀಮ

World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ

World Tourism Day: ಭೂಲೋಕದ ಸ್ವರ್ಗ…ಪಾಂಡವರು ಸ್ಥಾಪಿಸಿದ ಬೆಟ್ಟದ ಭೈರವೇಶ್ವರ ದೇವಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Karnataka Politics: ಜೆಡಿಎಸ್ ಕೊನೆಯ ಹಂತ ತಲುಪಿದೆ: ದಿನೇಶ್ ಗುಂಡೂರಾವ್

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

Ramanagara: ಚುನಾವಣಾಧಿಕಾರಿಗಳ ಕಾರು ತಡೆದು ದಾಖಲೆಗಳನ್ನು ದೋಚಿದ ದುಷ್ಕರ್ಮಿಗಳು

Ramanagara: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಗೆ ಬಾಲಗ್ರಹಣ

Ramanagara: ಬಿಡದಿ ಸ್ಮಾರ್ಟ್‌ಸಿಟಿ ಯೋಜನೆಗೆ ಬಾಲಗ್ರಹಣ

ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

Channapatna: ಕಳೆದ ವರ್ಷ ಅತಿವೃಷ್ಟಿ; ಈ ಬಾರಿ ಅನಾವೃಷ್ಟಿ!

Channapatna: ಕಳೆದ ವರ್ಷ ಅತಿವೃಷ್ಟಿ; ಈ ಬಾರಿ ಅನಾವೃಷ್ಟಿ!

MUST WATCH

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

udayavani youtube

ಪೆಂಡಾಲ್ ಹಾಕುವ ವಿಚಾರಕ್ಕೆ ಗಲಾಟೆ; ನೆರೆಮನೆಯಾತನ ರಿಕ್ಷಾಕ್ಕೆ ಬೆಂಕಿಯಿಟ್ಟ ವ್ಯಕ್ತಿ

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

ಹೊಸ ಸೇರ್ಪಡೆ

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

Thirthahalli ಮೀನು ಹಿಡಿಯಲು ಹೋದ ಯುವಕ ತುಂಗಾ ನದಿಗೆ ಬಿದ್ದು ಸಾವು !

1-sdsad

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ

tdy-17

Sandalwood: ‘ಟಿಆರ್‌ಪಿ ರಾಮ’ನಿಗಾಗಿ ಮತ್ತೇ ಬಂದ್ರು ಮಹಾಲಕ್ಷ್ಮೀ

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

World Tourism Day: ಚಾರಣದ ಹುಚ್ಚು ಆರೋಗ್ಯಕ್ಕೆ ಒಳ್ಳೆಯದೇ…ಆದರೆ ಮೈಮರೆಯಬೇಡಿ!

tdy-16

ಪೊಲೀಸ್‌ ವಿಜಯ: ‘ಮರೀಚಿʼ ಟೀಸರ್‌ ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.