Udayavni Special

ಪಿಂಚಣಿ ವಿತರಿಸುವಲ್ಲಿ ವಿಳಂಬ: ಸಂಸದ ಆಕ್ರೋಶ

ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಂಚೆ ಇಲಾಖೆ ಅಧಿಕಾರಿಗಳ ತರಾಟೆಗೆ ತೆಗೆದುಕೊಂಡ ಡಿ.ಕೆ.ಸುರೇಶ್‌

Team Udayavani, Jun 7, 2019, 8:15 AM IST

ramanagar-tdy-1..

ಜಿಪಂ ಸಭಾಂಗಣದಲ್ಲಿ ನಡೆದ ಅಂಚೆ ಇಲಾಖೆ, ಖಜಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಸಂಸದ ಸುರೇಶ್‌ ಮಾತನಾಡಿದರು.

ರಾಮನಗರ: ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಕಳೆದ ಐದು ತಿಂಗಳಿಂದ ಪಿಂಚಣಿ ವಿತರಣೆಯಾಗದಿರುವುದು, ಸರ್ಕಾರಿ ಖಜಾನೆ ನೀಡಿದ ಅಂಕಿ – ಅಂಶಗಳಿಗೂ ಅಂಚೆ ಇಲಾಖೆ ನೀಡುವ ಅಂಕಿ ಅಂಶಗಳಿಗೂ ತಾಳೆಯಾಗುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್‌ ಅಂಚೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗುರುವಾರ ಸಂಜೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಂಚೆ ಇಲಾಖೆ, ಖಜಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಇನ್ನೊಂದು ವಾರದಲ್ಲಿ ಈ ಬಗ್ಗೆ ವರದಿ ಕೊಡಿ ಎಂದು ಸಂಸದರು ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಕಳೆದ ಐದು ತಿಂಗಳಿಂದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಪಿಂಚಣಿ ವಿತರಣೆಯಾಗುತ್ತಿಲ್ಲ. ಅದನ್ನೇ ನಂಬಿ ಜೀವನ ನಡೆಸುವ ಅವರು ಜೀವನ ನಡೆಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ವೃದ್ದರು ಇದೇ ಹಣದಲ್ಲಿ ಔಷಧಿ ಕೊಳ್ಳು ಕಾಯುತ್ತಿರುತ್ತಾರೆ ಅವರ ಬಗ್ಗೆ ಕಾಳಜಿ ವಹಿಸಿ, ಇನ್ನೊಂದು ವಾರದಲ್ಲಿ ಪಿಂಚಣಿ ವಿತರಸಿ ತಮಗೆ ಮಾಹಿತಿ ಕೊಡುವಂತೆ ಸೂಚಿಸಿದರು.

ಈ ವೇಳೆ ಪೋಸ್ಟ್‌ ಮಾಸ್ಟರ್‌ಗಳು, ಪೋಸ್ಟ್‌ ಮನ್‌ಗಳು ತಮಗೆ ಸಮಯದ ಅಭಾವವಿದೆ. ಕಚೇರಿಯಲ್ಲಿ ಕಡ್ಡಾಯವಾಗಿ ಇರಬೇಕಾದ ಸಮಯವನ್ನು ಮೊಟಕುಗೊಳಿಸಿದರೆ ಪಿಂಚಣಿ ವಿತರಣೆ ಬಗ್ಗೆ ಗಮನಹರಿಸಲು ಸಾಧ್ಯ ಎಂದು ಇಲಾಖಾಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಜಿಲ್ಲಾ ಪಂಚಾಯತ್‌ನ ಸಿಇಓ ಎಂ.ಪಿ.ಮುಲ್ಲೈ ಮುಹಿಲನ್‌, ಅಪರ ಜಿಲ್ಲಾಧಿಕಾರಿಗಳಾದ ಬಿ.ಪಿ.ವಿಜಯ್‌ ಹಾಜರಿದ್ದರು.

ಅಂಚೆ ಇಲಾಖೆ ಅಂಕಿ ಅಂಶಗಳು ತಾಳೆ ಆಗುತ್ತಿಲ್ಲ: ಡಿ.ಕೆ.ಸುರೇಶ್‌ ಗರಂ

 ಸಾಮಾಜಿಕ ಭದ್ರತೆಯಡಿ ವಿವಿಧ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದ ಅನುದಾನ ಖಜಾನೆಯಿಂದ ಅಂಚೆ ಇಲಾಖೆಗೆ ವರ್ಗಾವಣೆ ಆಗುತ್ತಿದೆ. ಆದರೆ ಖಜಾನೆಯ ಮಾಹಿತಿ ಮತ್ತು ಅಂಚೆ ಇಲಾಖೆಯ ಮಾಹಿತಿಯನ್ನು ತಾಳೆ ಹಾಕಿದರೆ ಸುಮಾರು 2 ಕೋಟಿ ರೂ ವ್ಯತ್ಯಾಸ ವ್ಯಕ್ತವಾಗುತ್ತಿದೆ. ಈ ಬಗ್ಗೆ ವರದಿ ಕೊಡುವಂತೆ ಸೂಚಿಸಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಾಸಿಕ 18 ಕೋಟಿ ರೂ ಪಿಂಚಣಿ ರೂಪದಲ್ಲಿ ಫ‌ಲಾನುಭವಿಗಳಿಗೆ ವಿತರಣೆಯಾಗಬೇಕು. ಈ ಪೈಕಿ ಖಜಾನೆ ಅಧಿಕಾರಿಗಳು ತಾವು 8 ಕೋಟಿ ರೂ ಹಣವನ್ನು ಅಂಚೆ ಇಲಾಖೆಗೆ ವರ್ಗಾಯಿಸುತ್ತಿರುವುದಾಗಿ ಮಾಹಿತಿ ಕೊಟ್ಟಿದ್ದಾರೆ. ಆದರೆ ಅಂಚೆ ಇಲಾಖೆಯ ಅಧಿಕಾರಿಗಳು ತಮಗೆ 6 ಕೋಟಿ ರೂ ಮಾತ್ರ ಸಿಗುತ್ತಿದೆ ಎಂದು ಮಾಹಿತಿ ನೀಡಿದ್ಧಾರೆ. ಈ ವಿಚಾರದಲ್ಲಿ ವರದಿ ಕೇಳಿರುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ ವಿವಿಧ ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ 2.85 ಲಕ್ಷ ಪಿಂಚಣಿದಾರರಿದ್ದಾರೆ. ಈ ಪೈಕಿ 111509 ಪಿಂಚಣಿದಾರರಿಗೆ ಬ್ಯಾಂಕ್‌ ಖಾತೆಗೆ ನೇರ ಜಮಾವಣೆ ಆಗುತ್ತಿದೆ. ಅಂಚೆ ಇಲಾಖೆಯ ಮೂಲಕ 97 ಸಾವಿರ ಫ‌ಲಾನುಭವಿಗಳಿಗೆ ವಿತರಣೆಯಾಗುತ್ತಿದೆ. ಈ ಪೈಕಿ ಸುಮಾರು 40 ಸಾವಿರ ಪಿಂಚಣಿದಾರರಿಗೆ ಅಂಚೆ ಇಲಾಖೆಯಲ್ಲಿ ಆರಂಭವಾಗಿರುವ ಬ್ಯಾಂಕ್‌ನಲ್ಲಿ ಖಾತೆಗಳು ಸೃಜನೆಯಾಗಿದ್ದು, ಪಿಂಚಣಿ ಈ ಖಾತೆಗಳಿಗೆ ಜಮಾವಣೆ ಆಗಿವೆ. ಉಳಿದವರಿಗೆ ಮನಿಯಾರ್ಡ್‌ರ್‌ ಮೂಲಕ ವಿತರಣೆಯಾಗುತ್ತಿದೆ ಎಂದು ಸಂಸದರು ಮಾಹಿತಿ ಕೊಟ್ಟರು.

ಟಾಪ್ ನ್ಯೂಸ್

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ESI Hospital

ಬಿಡದಿಯಲ್ಲಿ  ಇಎಸ್ಐ ಆಸ್ಪತ್ರೆ: ಕೇಂದ್ರಕ್ಕೆ  ಮನವಿ

ramanagara news: harohalli

ಹಾರೋಹಳ್ಳಿ ದೊಡ್ಡಕೆರೆಗೆ ಬೇಕಿದೆ ಕಾಯಕಲ್ಪ

Bridge works

ವಡರಕುಪ್ಪೆ ಚೆಕ್‌ಡ್ಯಾಂ, ಸೇತುವೆ ಕಾಮಗಾರಿ ಕಳಪೆ

Experiment in agriculture

ಕೃಷಿಯಲ್ಲಿ ನೂತನ ಪ್ರಯೋಗ ಮಾಡಿ: ಶಾಸಕಿ ಅನಿತಾ

ramanagara news

ಶ್ರೀ ಬನ್ನಿ ಮಹಾಕಾಳಿ  ಅಮ್ಮನವರ ಕರಗ ಮಹೋತ್ಸವ

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.