ಪ್ರವಾಸೋದ್ಯಮ ಇಲಾಖೆಗೆ ಕೈಗೆಟುಕದ ಕಲ್ಯಾ ಬೆಟ್ಟ

ವಿನಾಶದ ಅಂಚಿನಲ್ಲಿರುವ ಕಲಾವತಿ ಪಟ್ಟಣ „ ಕಲ್ಯಾಬೆಟ್ಟ ಫ‌ಲಪುಷ್ಪ ವನವಾಗಿ ಮಾರ್ಪಡುತ್ತಾ?

Team Udayavani, Oct 20, 2021, 6:39 PM IST

ಕಲ್ಯಾ ಬೆಟ್ಟದಲ್ಲಿರುವ ನಂದಿ ವಿಗ್ರಹ

ಮಾಗಡಿ: ಪ್ರಕೃತಿಯ ಮಡಿಲಿನಲ್ಲಿರುವ ಐತಿಹಾಸಿಕ ಕಲ್ಯಾಬೆಟ್ಟ ಪ್ರವಾಸಿಗರ ಆಕರ್ಷಕ ತಾಣ. ಇಲ್ಲಿನ ಕಲ್ಲುಗಳು ಒಂದೊಂದು ಕಥೆ ಹೇಳುತ್ತಿವೆ. ಆದರೂ ಚಾರಿತ್ರಿಕ ಕಲ್ಯಾಬೆಟ್ಟ ಮಾತ್ರ ಪ್ರವಾಸೋದ್ಯಮ ಇಲಾಖೆಗೆ ಸೇರದೆ ಇರುವುದು ವಿಪರ್ಯಾಸ. ಕಾಲನ ಲೀಲೆಗೆ ಕಳೆಗುಂದುತ್ತಾ, ದಿನೇ ದಿನೇ ವಿನಾಶದ ಅಂಚು ತಲುಪುತ್ತಿರುವ ಕಲಿಗಣನಾಥನ ಗುಹೆ ಸಂರಕ್ಷಿಸಬೇಕಿದೆ.

ಕಲ್ಲುಗಳೇ ಇತಿಹಾಸ ಸಾರುತ್ತಿದೆ: ಮಾಗಡಿ ತಾಲೂಕಿನ ಚಾರಿತ್ರಿಕ ಕಲ್ಯಾಬೆಟ್ಟವನ್ನು ದೂರದಿಂದ ನೋಡಿದರೆ ಬರೀ ಕಲ್ಲುಗಳಿಂದ ಕೂಡಿರುವ ಕಲ್ಲುಬಂಡೆಗಳು ಎಂದು ಬಾಸವಾಗುತ್ತದೆ. ಹತ್ತಿರಕ್ಕೆ ಹೋಗಿ ನೋಡಿದರೆ ಅಲ್ಲಿನ ಒಂದೊಂದು ಕಲ್ಲುಗಳ ಒಂದೊಂದು ಕತೆಯ ಇತಿಹಾಸದ ಪುಟ ತೆರೆದುಕೊಳ್ಳುತ್ತದೆ. ಕಲ್ಯಾ ಕೆರೆ, ಗ್ರಾಮ, ಬೆಟ್ಟ ಮತ್ತಿತರೆ ಸ್ಮಾರಕಗಳು ಮಾಗಡಿಯ ಹಿರಿಮೆ ಸಾರುತ್ತದೆ. ಬೌದ್ಧ, ಜೈನ, ವೈಷ್ಣವ ಹಾಗೂ ಶೈವರ ಪವಿತ್ರವಾದ ಸ್ಥಳವಾಗಿ ಮೆರೆದಿದ್ದ ಕಲ್ಯಾಗ್ರಾಮ ಮತ್ತು ಬೆಟ್ಟ ಇಂದಿಗೂ ಅಭಿವೃದ್ಧಿ ಕಂಡಿಲ್ಲ.

ಸರ್ವಶೀಲೆ ಚೆನ್ನಮ್ಮನ ಗದ್ದುಗೆ: ಕ್ರಾಂತಿಕಾರಿ ಬಸವಣ್ಣನವರ ಪ್ರಭಾವಕ್ಕೆ ಒಳಗಾದ ಅನೇಕ ಮಂದಿ ಶಿವಶರಣರು ಈ ಕಲ್ಯಾಬೆಟ್ಟದಲ್ಲಿ ತಂಗಿದ್ದರು. ಇದರಲ್ಲಿ ಸಕಲ ಕಲಾ ವಿದ್ಯಾ ಪಾರಂಗತಳಾದ ಸರ್ವಶೀಲೆ ಚೆನ್ನಮ್ಮ ಕೂಡ ಇದ್ದರು. ಆಂಧ್ರಪ್ರದೇಶದ ಪ್ರಖ್ಯಾತ ಪಂಚಭಾಷಾ ಮಹಾಕವಿ ಪಾಲ್ಕುರಿಕೆ ಸೋಮನಾಥ, ಚೆನ್ನಮ್ಮನನ್ನು ನೋಡಲು ಆಂಧ್ರಪ್ರದೇಶದಿಂದ ಎತ್ತಿನಗಾಡಿಯಲ್ಲಿ ಒಂದಿದ್ದ, ಚೆನ್ನಮ್ಮ ಪಾಂಡಿತ್ಯಕ್ಕೆ ಮನಸೋತ ಪಾಲ್ಕುರಿಕೆ ಸೋಮನಾಥ ಇಲ್ಲೇ ಉಳಿದುಕೊಂಡಿದ್ದರು. ಕೊನೆಗೆ ಇಲ್ಲೇ ಐಕ್ಯರಾದರು.

ಇದಕ್ಕೆ ಸಾಕ್ಷಿಯಾಗಿ ಪಾಲ್ಕುರಿಕೆ ಸೋಮನಾಥನ ಗದ್ದುಗೆ ಮತ್ತು ಸರ್ವಶೀಲೆ ಚೆನ್ನಮ್ಮನ ಗದ್ದುಗೆಯೂ ಸಹ ಬೆಟ್ಟದಲ್ಲಿದೆ. ಈ ಗದ್ದುಗೆ ಬಳಿ ಬಿಲ್ವಪತ್ರೆ ಮರವಿದ್ದು, ನಿತ್ಯ ಬಿಲ್ವಪತ್ರೆ ಎಲೆಗಳು ಈ ಸಮಾಧಿಯ ಮೇಲೆ ಬೀಳುತ್ತಿರುವುದು ಇಲ್ಲಿನ ವೈಶಿಷ್ಟ.

 ಕಲಿಗಣನಾಥ ದೇವಾಲಯವಿದೆ: ಈ ಕಲ್ಯಾಬೆಟ್ಟದಲ್ಲಿ ದೊಡ್ಡದೊಡ್ಡ ಬಂಡೆಗಳಿದ್ದು, ಪ್ರಾಚೀನ ಕಾಲದ ಕಲಿಗಣನಾಥ ದೇಗುಲವಿದೆ. ದೇಗುಲದಲ್ಲಿರುವ ಕಲ್ಲೇಶ್ವರಸ್ವಾಮಿ ನಿತ್ಯ ಪೂಜೆ ನಡೆದುಕೊಂಡುಬಂದಿದೆ. ಕಲ್ಯಾಗ್ರಾಮ ವಿವಿಧ ಧರ್ಮ ಸಾಹಿತ್ಯ, ಸಂಸ್ಕೃತಿಯ ನೆಲೆಯಾಗಿತ್ತು.

ಸಾತ್ವಿಕರು, ಜಾnನಿಗಳು, ಸಾಹಿತಿಗಳು, ಕವಿಗಳ, ತವರೂರಾಗಿದ್ದ ಕಲ್ಯಾ ಗ್ರಾಮ ಪ್ರಾಚೀನ ಕಾಲದಲ್ಲಿ ಕಲಾವತಿ ಪಟ್ಟಣವೆಂದೇ ಖ್ಯಾತಿ ಪಡೆದಿದ್ದು, ಇದೊಂದು ವಾಣಿಜ್ಯ ವ್ಯಾಪಾರದ ಕೇಂದ್ರವಾಗಿತ್ತು ಎಂದು ಇತಿಹಾಸದಿಂದ ತಿಳಿಯುತ್ತದೆ. ಇಲ್ಲಿನ ವಿವಿಧ ಶಿಲಾಶಾಸನಗಳು, ಸಂಸ್ಕೃತಿ, ವೀರಗಲ್ಲುಗಳು ಇತಿಹಾಸ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಕಲ್ಲಿನ ಬೆಟ್ಟ ಹೂವಿನ ಬೆಟ್ಟವಾಗಲಿ: ಇಂಥ ಅಮೂಲ್ಯವಾದ ಕಲಾ ಸಂಪತ್ತು, ಸಾಂಸ್ಕೃತಿಕ ಪರಂಪರೆ ಹಿರಿಮೆ ಹೊಂದಿರುವ ಕಲ್ಯಾಬೆಟ್ಟಕ್ಕೆ ಅನೇಕ ಸಾಹಿತಿಗಳು, ಚಿಂತಕರು, ಕಲಾವಿದರು ಈ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಹಿರಿಯ ಸಾಹಿತಿ ಡಾ.ಚಿದಾನಂದಮೂರ್ತಿ ಅವರು ಒಂದೆರಡು ಬಾರಿ ಭೇಟಿ ನೀಡಿದ್ದು ಪ್ರಕೃತಿ ಸೊಬಗಿಗೆ ಮನಸೋತಿದ್ದಾರೆ.

ಕಲ್ಯಾ ಬೆಟ್ಟದಲ್ಲಿ ಪಂಚಭಾಷಾ ಕವಿ ಪಾಲ್ಕುರಿಕೆ ಸೋಮನಾಥನ ಮನೆಯಿದೆ ಎಂದು ಲೇಖನ ಬರೆದು ಮಾಧ್ಯಮಗಳಿಗೂ ವಿಷಯ ತಿಳಿಸಿದ್ದರು. ಹಿಂದೆ ಸಚಿವೆಯಾಗಿದ್ದ ರಾಣಿಸತೀಶ್‌ ಅವರು ಕಲ್ಯಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಈ ಕಲ್ಯಾಬೆಟ್ಟವನ್ನು ನೋಡಿ ಇದೊಂದು ಹೂವಿನ ಬೆಟ್ಟವನ್ನಾಗಿ ಪರಿವರ್ತಿಸಲು ಸರ್ಕಾರ ಅಗತ್ಯ ಕ್ರಮ ವಹಿಸುವುದಾಗಿ ಹೇಳಿದ್ದರು. ಅವರ ಚಿಂತನೆ ಇನ್ನೂ ಕಾರ್ಯರೂಪಕ್ಕೆ ಬಾರದೆ ಇರುವುದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.

ಪ್ರಾಕೃತಿಕ ಸಂಪತ್ತನ್ನು ಉಳಿಸಿ: ಕಲ್ಯಾಬೆಟ್ಟವನ್ನು ಕಡೆಗಣಿಸದೆ ಇಲ್ಲಿನ ಪ್ರಾಕೃತಿ ಸಂಪತ್ತು, ಶಾಸನ, ಪ್ರಾಚೀನ ಪರಂಪರೆ ಉಳಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಕಲ್ಯಾಬೆಟ್ಟ ಫ‌ಲ-ಪುಷ್ಪಗಳ ವನವಾಗಿ ಪ್ರಕೃತಿ ಒಡಲಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ತುಂಬಲಿ. ಸರ್ಕಾರದ ನಿರ್ಲಕ್ಷ್ಯ, ನಿರ್ವಹಣೆ ಕೊರತೆಯಿಂದ ವಿನಾಶದ ಅಂಚಿನಲ್ಲಿರುವ ಈ ಬೆಟ್ಟವನ್ನು ಸಂರಕ್ಷಿಸಬೇಕಿದೆ. ಕಲ್ಯಾಬೆಟ್ಟ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ ಇತ್ತ ಗಮನಹರಿಸಬೇಕಿದೆ ಎಂಬುದು ಸಾಹಿತಿ ಕುಂ. ವೀರಭದ್ರಪ್ಪ ಹಾಗೂ ಕಲಾ ಆಸಕ್ತರ ಆಶಯವಾಗಿತ್ತು.

  • – ತಿರುಮಲೆ ಶ್ರೀನಿವಾಸ್‌

ಟಾಪ್ ನ್ಯೂಸ್

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

1-ffdfdf

ಖ್ಯಾತ ಪತ್ರಕರ್ತ, ಪದ್ಮಶ್ರೀ ವಿನೋದ್ ದುವಾ ವಿಧಿವಶ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

ವಿಧಾನಪರಿಷತ್ ಚುನಾವಣೆ : ಸೇಡು ತೀರಿಸಿಕೊಳ್ಳಲು ಜೆಡಿಎಸ್‌ ತವಕ

Prawn-Biryani-750

ಕರಾವಳಿ ಸ್ಪೆಷಲ್; ರುಚಿಕರವಾದ ಸಿಗಡಿ ಬಿರಿಯಾನಿ ಮನೆಯಲ್ಲೇ ಸಿದ್ಧ ಪಡಿಸಿ

1-sadsd

‘SEX’ ಸಮಸ್ಯೆ :ದೆಹಲಿ ಸಾರಿಗೆ ಇಲಾಖೆಗೆ ನೋಟಿಸ್ ಕಳುಹಿಸಿದ ಮಹಿಳಾ ಆಯೋಗ

ದೇಹದ ತೂಕ ಹೆಚ್ಚಳ ಇದೆ ಹಲವು ಕಾರಣ

ದೇಹದ ತೂಕ ಹೆಚ್ಚಳವಾಗಲು ಇದೆ ಹಲವು ಕಾರಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

new library

2.5 ಲಕ್ಷ ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ನಿರ್ಮಾಣ

medical college

ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ: ಪ್ರೊ.ನಾರಾಯಣಗೌಡ

ಆಸ್ಪತ್ರೆ ಪ್ಲಾನ್

56 ಕೋಟಿ ರೂ.ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

MUST WATCH

udayavani youtube

ನಮ್ಮ ನೌಕಾಪಡೆ ಎಲ್ಲದಕ್ಕೂ ಸನ್ನದ್ಧ !

udayavani youtube

ಸರ್ಕಾರ ಹೇಗೆಲ್ಲಾ ರೈತರ ಬೆಂಬಲಕ್ಕೆ ನಿಂತಿದೆ ?

udayavani youtube

ಬಂಟ್ವಾಳ : ಬೇಟೆಗಾಗಿ ಬಂದು ಹೆದರಿ ಓಡಿದ ಚಿರತೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಚಿಕ್ಕಮಗಳೂರು : ಕಾಫಿ ತೋಟದೊಳಗೆ ನುಗ್ಗಿದ ಮಾಜಿ ಸಿಎಂ ಸಿದ್ದರಾಮಯ್ಯ ಬೆಂಗಾವಲು ವಾಹನ

udayavani youtube

ನೆರೆ ಪರಿಹಾರ ಸಿಗಲಿಲ್ಲ: ಅವಶೇಷಗಳ ಅಡಿಯಲ್ಲೇ ಸಾಗುತ್ತಿದೆ ಬದುಕು

ಹೊಸ ಸೇರ್ಪಡೆ

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

ಕೋಟಿ ರೂ.ಬಿಡುಗಡೆಯಾದರೂ ಬಿಳಿಗಿರಿರಂಗನ ದೇಗುಲದಲ್ಲಿ ಕಳಪೆ ನೆಲಹಾಸು

1-ffdfdf

ಖ್ಯಾತ ಪತ್ರಕರ್ತ, ಪದ್ಮಶ್ರೀ ವಿನೋದ್ ದುವಾ ವಿಧಿವಶ

ಲಕ್ಷ ಲಕ್ಷ ಕೋಟಿ ಲೂಟಿ; ಜನರ ನಂಬಿಕೆ ಕಳೆದುಕೊಂಡ ಕಾಂಗ್ರೆಸ್‌; ಹಾಲಪ್ಪ ಆಚಾರ್‌

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಮತ್ತೆ ಮಳೆ ಅರ್ಭಟ, ನೆಲಕಚ್ಚಿದ ಬೆಳೆ : ರಾಗಿ ತೆನೆ ಕೊಯ್ಲು ಮಾಡಲಾಗದೇ ರೈತರ ಪರದಾಟ

ಕಂದಾಯ ಇಲಾಖೆ ಸಿಬ್ಬಂದಿ ವರ್ತನೆಗೆ ಆಕ್ರೋಶ

ಕಂದಾಯ ಇಲಾಖೆ ಸಿಬ್ಬಂದಿ ವರ್ತನೆಗೆ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.