ಆನೆಗಳ ದಾಳಿಗೆ ತೆಂಗು, ಬಾಳೆ ನಾಶ


Team Udayavani, Jun 18, 2020, 6:47 AM IST

destroy banabna

ಚನ್ನಪಟ್ಟಣ: ಕಾಡಾನೆಗಳ ಗುಂಪೊಂದು ದಾಳಿ ನಡೆಸಿ, ರೈತರ ಬೆಳೆಗಳನ್ನು ನಾಶಪಡಿಸಿರುವ ಘಟನೆ ತಾಲೂಕಿನ ವಿರುಪಾಕ್ಷಿಪುರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಗ್ರಾಮದ ಲೇಟ್‌ ನಾಥೇಗೌಡ ಎಂಬುವರ ಪುತ್ರ  ಶಿವಲಿಂಗಯ್ಯ, ತಮ್ಮಣ್ಣಗೌಡ ಎಂಬುವರ ಪುತ್ರ ಶ್ರೀನಿವಾಸ್‌, ತಿಮ್ಮೇಗೌಡ ಎಂಬುವರ ಪುತ್ರ ಗೋವಿಂದೇಗೌಡ ಬೆಳೆದಿದ್ದ ಬಾಳೆತೋಟ, ಮಾವು, ಅಡಿಕೆ, ತೆಂಗನ್ನು ನಾಶಪಡಿಸಿವೆ.

ಸುಮಾರು 7 ಆನೆಗಳಿದ್ದ ಗುಂಪು ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದಿವೆ ಎನ್ನಲಾಗಿದೆ. ಕೆಲ ದಿನಗಳಲ್ಲಿ ಗೊನೆ ಬಿಡಲಿದ್ದ ಸಾವಿರಾರು ಬಾಳೆ ಗಿಡಗಳನ್ನು ಕಿತ್ತು ತಿಂದು ನಂತರ ತುಳಿದು ನಾಶಪಡಿಸಿವೆ. ಮಾವಿನ ಮರದ ರೆಂಬೆಗಳು ಹಾಗೂ ಮಾವಿನ ಗಿಡಗಳನ್ನು ಬುಡ ಸಹಿತ ಕಿತ್ತಿರುವ  ಆನೆಗಳು, ಹತ್ತಾರು ತೆಂಗಿನ ಮರಗಳನ್ನು ಉರುಳಿಸಿವೆ.

ಕೋವಿಡ್‌ 19 ಸಂಕಷ್ಟದ ಸಂದರ್ಭದಲ್ಲಿ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಬಾಳೆ, ಅಡಿಕೆ, ಮಾವು ಫಸಲನ್ನು ಕಾಡಾನೆಗಳ ಗುಂಪು ಈ ರೀತಿ ದಾಳಿ ಮಾಡಿ ಹಾಳು ಮಾಡಿರುವುದರಿಂದ  ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಕಳೆದ ವಾರದಿಂದಲೂ ಈ ಜಾಗದಲ್ಲಿ ಆನೆಗಳ ಕಾಟ ಹೇಳತೀರದ್ದಾಗಿದ್ದು, ರೈತರು ಬೆಳೆದ ಫಸಲನ್ನು ರಕ್ಷಣೆ ಮಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬೇಸಾಯ  ರಕ್ಷಣೆ ಜೊತೆಗೆ ಪ್ರಾಣಗಳನ್ನು ಪಣಕ್ಕಿಡಬೇಕಾಗಿದೆ. ದಿನದಿನಕ್ಕೂ ದಾಳಿ ಹೆಚ್ಚಾಗುತ್ತಿರುವುದರಿಂದ ಹತ್ತಾರು ಗ್ರಾಮದ ಜನರು ಮನೆಯಿಂದ ತಮ್ಮ ತೋಟ ತುಡಿಕೆಗಳಿಗೆ ತೆರಳಲು ಭಯ ಪಡುತ್ತಿದ್ದಾರೆ. ಕಾಡಾನೆಗಳು ಸ್ಥಳೀಯ ಅರಣ್ಯ  ಪ್ರದೇಶದಲ್ಲಿಯೇ ವಾಸವಿದ್ದು, ರಾತ್ರಿಯ ಸಂದರ್ಭದಲ್ಲಿ ರೀತಿ ದಾಳಿ ಮಾಡುತ್ತಿವೆ ಎಂದಿರುವ ರೈತರು ಅರಣ್ಯ ಇಲಾಖೆಯವರು ಗಮನಹರಿಸಿ ಆನೆಗಳ ಹಾವಳಿಯನ್ನು ನಿಯಂತ್ರಣ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

nalin

ಬಿಜೆಪಿಯ ಅಸಮಾಧಾನಿತ ಶಾಸಕರಿಗೆ ರಾಜ್ಯಾಧ್ಯಕ್ಷ ಕಟೀಲ್ ಶಾಕ್

ಕಾಮಗಾರಿ ವಿಳಂಬ: ನವಯುಗ ಕಂಪೆನಿಗೆ ಬೀಗ ಜಡಿದು,ಮುತ್ತಿಗೆ; ಗ್ರಾ. ಪಂ.ನಿಂದ ಪ್ರತಿಭಟನೆ

ಕಾಮಗಾರಿ ವಿಳಂಬ: ನವಯುಗ ಕಂಪೆನಿಗೆ ಬೀಗ ಜಡಿದು,ಮುತ್ತಿಗೆ; ಗ್ರಾ. ಪಂ.ನಿಂದ ಪ್ರತಿಭಟನೆ

bjp-congress

ಎಂ.ಬಿ.ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ!: ಡಿಕೆಶಿ, ಸಿದ್ದುಗೆ ಸವಾಲು

ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಬಂಧನ; ಕ್ರಿಪ್ರ ಕ್ರಾಂತಿಯಲ್ಲಿ ದೇಶ ಮಿಲಿಟರಿ ವಶಕ್ಕೆ

ಬುರ್ಕಿನಾ ಪಾಸೊ ಅಧ್ಯಕ್ಷ ರೋಚ್ ಬಂಧನ; ಕ್ರಿಪ್ರ ಕ್ರಾಂತಿಯಲ್ಲಿ ದೇಶ ಮಿಲಿಟರಿ ವಶಕ್ಕೆ

ಮಗಳು ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಾಳೆಂದು ಅತ್ಯಾಚಾರ ಎಸಗಿದ ತಂದೆ!

ಮಗಳು ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಾಳೆಂದು ಅತ್ಯಾಚಾರ ಎಸಗಿದ ತಂದೆ!

12tanker1

ಕುಮಟಾದಲ್ಲಿ  ಟ್ಯಾಂಕರ್ ಪಲ್ಟಿ: ಗ್ಯಾಸ್ ಸೋರಿಕೆ  

siddaramaiah

ಪಕ್ಷಾಂತರ ಪಕ್ಕಾ?:ಶಾಸಕರು ಸಂಪರ್ಕದಲ್ಲಿರುವುದು ಸತ್ಯ ಎಂದ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರೇಮ ಪ್ರಕರಣ: ಕುಡುಗೋಲಿನಿಂದ ಕೊಲೆ

ಪ್ರೇಮ ಪ್ರಕರಣ: ಕುಡುಗೋಲಿನಿಂದ ಕೊಲೆ

ವಾರಾಂತ್ಯ ಕರ್ಫ್ಯೂ ತೆರವಾದ್ರೂ ಹೊರಬಾರದ ಜನ

ವಾರಾಂತ್ಯ ಕರ್ಫ್ಯೂ ತೆರವಾದ್ರೂ ಹೊರಬಾರದ ಜನ

ಭಣಗುಟ್ಟಿದ ಪ್ರವಾಸಿ ತಾಣಗಳು

ಭಣಗುಟ್ಟಿದ ಪ್ರವಾಸಿ ತಾಣಗಳು

ಒಮಿಕ್ರಾನ್‌ ಪ್ರಕರಣಗಳ ಸ್ಪಷ್ಟೀಕರಣ ಕಷ್ಟಸಾಧ್ಯ

ಒಮಿಕ್ರಾನ್‌ ಪ್ರಕರಣಗಳ ಸ್ಪಷ್ಟೀಕರಣ ಕಷ್ಟಸಾಧ್ಯ

ಅಭಿವೃದ್ಧಿ ಪ್ರಾಧಿಕಾರ ಸ್ಥಾನಕ್ಕೆ ಹೆಚ್ಚಿದ ಲಾಬಿ!

ಅಭಿವೃದ್ಧಿ ಪ್ರಾಧಿಕಾರ ಸ್ಥಾನಕ್ಕೆ ಹೆಚ್ಚಿದ ಲಾಬಿ!

MUST WATCH

udayavani youtube

ಹುಟ್ಟಿದ ನಂತ್ರ ಹೋರಾಟ ಮನೋಭಾವ ಬೇಕು

udayavani youtube

ಕುಮಟಾ : ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆ, ತಪ್ಪಿದ ಭಾರಿ ದುರಂತ…

udayavani youtube

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

udayavani youtube

₹500 ವಿಷಯದಲ್ಲಿ ಜಡೆ ಎಳೆದು ಜಗಳವಾಡಿದ ಆರೋಗ್ಯ ಕಾರ್ಯಕರ್ತೆಯರು

udayavani youtube

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ಯತ್ನಾಳ್

ಹೊಸ ಸೇರ್ಪಡೆ

nalin

ಬಿಜೆಪಿಯ ಅಸಮಾಧಾನಿತ ಶಾಸಕರಿಗೆ ರಾಜ್ಯಾಧ್ಯಕ್ಷ ಕಟೀಲ್ ಶಾಕ್

19balki

ನೀರಾವರಿ ಪ್ರದೇಶ ವೃದ್ದಿಸಲು ಆದ್ಯತೆ

ಕಾಮಗಾರಿ ವಿಳಂಬ: ನವಯುಗ ಕಂಪೆನಿಗೆ ಬೀಗ ಜಡಿದು,ಮುತ್ತಿಗೆ; ಗ್ರಾ. ಪಂ.ನಿಂದ ಪ್ರತಿಭಟನೆ

ಕಾಮಗಾರಿ ವಿಳಂಬ: ನವಯುಗ ಕಂಪೆನಿಗೆ ಬೀಗ ಜಡಿದು,ಮುತ್ತಿಗೆ; ಗ್ರಾ. ಪಂ.ನಿಂದ ಪ್ರತಿಭಟನೆ

eshwarappa

ಪಲ್ಲಕಿ‌ ಹೊರುವವರಿಗೆ ಹಿಂದಾದರೇನು, ಮುಂದಾದರೇನು?:ಈಶ್ವರಪ್ಪ ಪ್ರಶ್ನೆ

18anubhava-mantapa

ಅನುಭವ ಮಂಟಪ ನಿರ್ಮಾಣ ಶೀಘ್ರ ಆರಂಭಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.