ಡಿಕೆಶಿ ಸಹೋದರರ ಆಸ್ತಿ ದಾಖಲೆ ಪರಿಶೀಲನೆ

Team Udayavani, Mar 29, 2019, 1:06 PM IST

ಕನಕಪುರ: ಕಳೆದ ಎರಡು ವರ್ಷಗಳ ಹಿಂದೆ ಸಚಿವ ಡಿಕೆಶಿ ಕುಟುಂಬ ಮತ್ತು ಆಪ್ತರ ಮನೆಗಳ ಮೇಲೆ ದಾಳಿ ರಾಜ್ಯದಲ್ಲಿ ಸದ್ದು ಮಾಡಿತ್ತು. ಈ ಸಂಬಂಧ ಮುಂದುವರಿದ ತನಿಖೆಯಾಗಿ ತಾಲೂಕು ಕಚೇರಿಗೆ ಭೇಟಿ ನೀಡಿದ ಆದಾಯ ತೆರಿಗೆ ಅಧಿಕಾರಿಗಳ ತಂಡ ಡಿಕೆಶಿ ಕುಟುಂಬದ ಆಸ್ತಿಗಳ ದಾಖಲೆಗಳು ಮತ್ತು ಆದಾಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದೆ.

ನಗರದ ಸಂಗಮ ರಸ್ತೆಯಲ್ಲಿನ ತಾಲೂಕು ಕಚೇರಿಗೆ ಬೆಳಗ್ಗೆ 11 ಗಂಟೆ ಆಗಮಿಸಿದ ಆದಾಯ ತೆರಿಗೆ ಅಧಿಕಾರಿಗಳ ನಾಲ್ಕು ಜನರ ತಂಡ, ತಹಶೀಲ್ದಾರ್‌ ಕುನಾಲ್‌ ಅವರನ್ನು ಭೇಟಿ ಮಾಡಿ ಪ್ರಕರಣವೊಂದರ ಸಂಬಂಧ ಲಿಖೀತ ಮನವಿ ನೀಡಿ, ಪ್ರಕರಣಕ್ಕೆ ಅಗತ್ಯವಾದ ಜಮೀನಿನ ದಾಖಲೆಗಳನ್ನು ಕಲೆ ಹಾಕಿದರು ಎಂದು ತಿಳಿದು ಬಂದಿದೆ.

ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಿಗೆ ಅಧಿಕಾರಿಗಳು ಲಿಖೀತವಾಗಿ ತಾಲೂಕಿನ ಕೋಡಿಹಳ್ಳಿ, ಉಯ್ಯಂಬಹಳ್ಳಿ, ಸಾತನೂರು ಹೋಬಳಿಗಳ ವ್ಯಾಪ್ತಿಯಲ್ಲಿನ ಸರ್ವೆ ನಂಬರ್‌ಗಳ ಸಚಿವ ಡಿಕೆಶಿ ಕುಟುಂಬದ ಆಸ್ತಿಗೆ ಸಂಬಂಧಿಸಿದ ಜಮೀನಿನ ದಾಖಲೆಗಳನ್ನು ಪಡೆಯಲು ಮನವಿ ನೀಡಿ, ನಂತರ ತಹಶೀಲ್ದಾರ್‌ ಅವರಿಂದ ಹಲವು ವಿಷಯಗಳನ್ನು ಕಲೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ಯಾರಿಗೂ ಅವಕಾಶ ನೀಡದ್ದರಿಂದ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಡಿಕೆಶಿ ರಾಜಕೀಯ ಓಟಕ್ಕೆ ಕಡಿವಾಣ: ಲೋಕಸಭಾ ಚುನಾವಣೆಗೆ ಹತ್ತಿರದಲ್ಲಿ ಡಿಕೆಶಿಯನ್ನು ಬಂಧಿಸಲು ಪ್ರಕರಣ ತನಿಕೆ ಮೂಲಕ ಕಾನೂನಿನ ಕುಣಿಕೆಯನ್ನು ಗಟ್ಟಿಗೊಳಿಸುತ್ತಿದ್ದಾರೆ ಎನ್ನುವ ಮಾತುಗಳು ಅಲ್ಲಲ್ಲಿ ಹರಿದಾಡುತ್ತಿತ್ತು. ಕೆಲವು ಸಭೆಗಳಲ್ಲಿ ಆಪ್ತರ ಬಳಿ ತಮ್ಮ ನೋವನ್ನು ಸಚಿವ ಡಿ.ಕೆ. ಶಿವಕುಮಾರ್‌ ಹೊರಹಾಕಿದ್ದರು. ಈ ಹಿಂದೆ ಘರ್ಜಿಸುತ್ತಿದ್ದ ಡಿಕೆಶಿ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಂತರ ಶಾಂತವಾಗಿದ್ದರು ಎನ್ನಲಾಗುತ್ತಿದ್ದು, ದಿನ ಕಳೆದಂತೆ ಕಾನೂನಿನ ಕುಣಿಕೆ ಗಟ್ಟಿಯಾಗುತ್ತಿದ್ದು, ಗುರುವಾರದ ತನಿಖೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ. ಡಿಕೆಶಿ ರಾಜಕೀಯದ ಓಟಕ್ಕೆ ಕಡಿವಾಣ ಹಾಕಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ದಾಖಲೆಗಳಲ್ಲಿ ಸಿಕ್ಕಿಬಿದ್ದರಾ?: ಐಟಿ ದಾಳಿ ನಂತರ ದೇಶದ ಪ್ರತಿಷ್ಠಿತ ಕಾನೂನು ಪಂಡಿತರು, ಅಕೌಂಟೆಂಟ್‌ಗಳು ಹಾಗೂ ವಕೀಲರು ಸೇರಿದಂತೆ ಹತ್ತಾರು ನ್ಯಾಯಾಲಯಗಳನ್ನು ಅಲೆಯುವಂತೆ ಮಾಡಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಒಪ್ಪಿಕೊಂಡಿದ್ದರು ಡಿಕೆಶಿ. ಅಂದು ತಾತ್ಕಾಲಿಕವಾಗಿ ಕೃಷಿ ಆದಾಯ ಎಂದು ಘೋಷಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿದಾಗ ತಾವೇ ದೃಢೀಕರಿಸಿದ್ದರು. ತಾಲೂಕು ದಂಡಾಧಿಕಾರಿಗಳಿಂದ ಕೃಷಿ ಆದಾಯದ ದಾಖಲೆಗಳನ್ನು ನೀಡಿ, ಆದಾಯ ತೆರಿಗೆ ಅಧಿಕಾರಿಗಳ ತನಿಖೆಯಲ್ಲಿ ಸಿಕ್ಕಿಬಿದ್ದರಾ ಎನ್ನುವ ಅನುಮಾನಗಳು ಕಾಡುತ್ತಿದೆ. ನಗದು ರೂಪದಲ್ಲಿ ಸಿಕ್ಕಿದ್ದ ಹಣದ ಮೂಲವನ್ನು ಹುಡುಕಾಟದಲ್ಲಿರುವ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ಮಾಹಿತಿ ಆಧಾರದಲ್ಲಿ ಆದಾಯ ಪ್ರಮಾಣ ಪತ್ರ: ಈ ಹಿಂದೆ ಪ್ರತಿ ವರ್ಷ ಡಿಕೆಶಿ ಸಹೋದರರ ಕೃಷಿ ಆದಾಯದ ಮೂಲವನ್ನು ಇವರ ಸರ್ವೆ ನಂಬರ್‌ಗಳಲ್ಲಿ ಯಾವ ಜಮೀನಿನಲ್ಲಿ ಯಾವ ಬೆಳೆ ಹಾಕಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನಿನ ಪ್ರಕಾರವೇ ಕೃಷಿ ಆದಾಯದ ದಾಖಲೆಗಳನ್ನು ನೀಡಲಾಗಿದೆ. ಕೃಷಿ , ತೋಟಗಾರಿಕೆ ಸೇರಿದಂತೆ ಯಾವ ಬೆಳೆ ಎಂದು ಅರ್ಜಿಯಲ್ಲಿ ಕೇಳಿರುತ್ತಾರೆಯೋ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯ ಆಧಾರದಲ್ಲಿ ಆದಾಯಪ್ರಮಾಣ ಪತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಗಡಿ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಜೀವ ತೆತ್ತ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ರಾಜ್ಯ...

  • ಚನ್ನಪಟ್ಟಣ: ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ತಿದ್ದುಪಡಿ ಮಾಡಿರುವುದರ ಹಿಂದೆ ಭಾರೀ ಕುತಂತ್ರ ಅಡಗಿದೆ. ದೇಶದಲ್ಲಿ ಸಹೋದರರಂತೆ ಇರುವ ಹಿಂದೂ-ಮುಸ್ಲಿಮರ ನಡುವೆ...

  • ಚನ್ನಪಟ್ಟಣ: ಪ್ರಸಕ್ತ ಸಾಲಿನ ಆಯವ್ಯಯ ಸಂಬಂಧ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಸಾರ್ವಜನಿಕರು ಬೆವರಿಳಿಸಿದ ಪ್ರಸಂಗ ನಗರಸಭೆ ಸಭಾಂಗಣದಲ್ಲಿ...

  • ರಾಮನಗರ: ದಕ್ಷಿಣ ಭಾರತದಲ್ಲಿ ಖ್ಯಾತಿಯಾಗಿರುವ ರಾಮನಗರ ಮ್ಯಾರಥಾನ್‌ 2020 ಇದೇ ಫೆಬ್ರವರಿ 2ರಂದು ಆಯೋಜನೆಯಾಗಿದೆ ಎಂದು ಯಲ್ಲೋ ಆಂಡರ್‌ ರೆಡ್‌ ಫೌಂಡೇಷನ್‌ನ ಅಧ್ಯಕ್ಷ...

  • ದೇವನಹಳ್ಳಿ: ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಅಪಘಾತ ತಡೆಯಲು ಸಾಧ್ಯ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರಿ ಪೊಲೀಸ್‌...

ಹೊಸ ಸೇರ್ಪಡೆ