ರಾಮನಗರ ಜಿಲ್ಲಾ ಕುಸ್ತಿ ಸಂಘ ಸ್ಥಾಪನೆ
Team Udayavani, Nov 29, 2020, 11:26 AM IST
ರಾಮನಗರ : ಜಿಲ್ಲೆಯಲ್ಲಿ ಕುಸ್ತಿ ಕಲೆ ಮತ್ತು ಗರಡಿ ಮನೆಗಳ ಪುನಶ್ಚೇತನ, ಹಿರಿಯ ಪೈಲ್ವಾನರ ಜೀವನೋಪಾಯಕ್ಕೆ ಸಹಾಯ, ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಉದ್ದೇಶದಿಂದ ರಾಮನಗರ ಜಿಲ್ಲಾ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಜಾನಪದ ಲೋಕದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಸ್ತಿ ಭಾರತದ ಪ್ರಾಚೀನ ಕ್ರೀಡೆ. ರಾಜ- ಮಹಾರಾಜರ ಕಾಲದಲ್ಲಿ ಬಹಳ ಬೇಡಿಕೆಯಲ್ಲಿದ್ದ ಈ ಕ್ರೀಡೆ ಇಂದು ಪ್ರೋತ್ಸಾಹದ ಕೊರತೆಯಿಂದ ನಶಿಸುತ್ತಿದೆ. ಹಿರಿಯಉಸ್ತಾದರು,ಕುಸ್ತಿ ಪಟುಗಳನ್ನು ಒಂದೆಡೆಕಲೆಹಾಕಿ ಅವರ ಮಾರ್ಗದರ್ಶನ ಪಡೆದು ಜಿಲ್ಲೆಯಲ್ಲಿ ಈ ಕಲೆಪುನಶ್ಚೇತನಗೊಳಿಸುವ ಸದುದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ಆಸಕ್ತ ಯುವ ಪೀಳಿಗೆಗೆ ಕುಸ್ತಿ ಕಲೆಯಲ್ಲಿ ತರಬೇತಿ ನೀಡಲಾಗುವುದು ಎಂದರು.
ಶ್ರೀಮಂತರು ಕಲಿಯದ ಕಲೆ: ಕುಸ್ತಿ ಸಂಘದ ಗೌರವ ಅಧ್ಯಕ್ಷ ಬಿ.ನಾಗರಾಜ್ ಮಾತನಾಡಿ, ಕುಸ್ತಿ ಕಲೆ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳ ಅಭ್ಯರ್ಥಿಗಳು ಕಲಿಯುತ್ತಾರೆ. ಶ್ರೀಮಂತರು ಈ ಕಲೆ ಕಲಿಯೋಲ್ಲ. ಹೀಗಾಗಿ ಕುಸ್ತಿಕಲೆಯ ಪಟುಗಳದ್ದು ಸಂಕಷ್ಟದ ಜೀವನ, ಇಂತಹವರ ನೆರವಿಗೆ ಧಾವಿಸುವ ಉದ್ದೇಶದೊಂದಿಗೆ ಸಂಘಸ್ಥಾಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 8 ಗರಡಿ ಮನೆ: ಕುಸ್ತಿ ಭಾರತಿಯ ಪರಂಪರತೆಯ ಕಲೆ. ಮೈಸೂರು ದಸರಾದಲ್ಲಿ ಚನ್ನಪಟ್ಟಣದ ಮುಷ್ಠಿ ಕಾಳಗದ ಪೈಲ್ವಾನರ ಪ್ರದರ್ಶನವೆಂದರೆ ತುಂಬಾ ಖ್ಯಾತಿ. ರಾಮನಗರ ಜಿಲ್ಲೆಯಲ್ಲಿಯೂ ಕುಸ್ತಿ ಕಲೆಗೆ ಆಸಕ್ತಿ ಇತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಲೆಯ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಗರಡಿ ಮನೆ ಗಳು ಮುಚ್ಚಿವೆ, ಸದ್ಯ ಜಿಲ್ಲೆಯಲ್ಲಿ 8 ಗರಡಿ ಮನೆಗಳು ಮಾತ್ರ ಅಸ್ತಿತ್ವದಲ್ಲಿದೆ ಎಂದರು.
ರಾಷ್ಟ್ರ ಮಟ್ಟದ ಪಂದ್ಯಾವಳಿ: ಅಂತಾರಾಷ್ಟ್ರೀಯಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆ ಪ್ರಕ್ರಿಯೆಯನ್ನು ರಾಮನಗರ ಜಿಲ್ಲೆಯಲ್ಲಿ ಆಯೋಜಿಸುವ ಉದ್ದೇಶ ಸಂಘಕ್ಕಿದೆ. ದೇಶಾದ್ಯಂತ 800ಕ್ಕೂ ಹೆಚ್ಚು ಕುಸ್ತಿಪಟು ಗಳು ಭಾಗವಹಿಸುವ ಈ ಬೃಹತ್ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸಿ ಜಿಲ್ಲೆಯ ಕೀರ್ತಿಯನ್ನು ಬೆಳಗಿಸುವ ಸಂಘದ ಉದ್ದೇಶಕ್ಕೆ ಜಿಲ್ಲೆಯ ಜನತೆ ಸಹಕರಿಸಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯ ದರ್ಶಿ ಹಿರಿಯ ಪೈಲ್ವಾನ್ ವೇಣು, ಉಪಾಧ್ಯಕ್ಷಸುನಿಲ್, ಮಾಗಡಿಯ ಹಿರಿಯ ಕುಸ್ತಿಪಟು ಚನ್ನಪ್ಪಣ್ಣ, ಉಸ್ತಾದ್ ಮುನಿಸ್ವಾಮಪ್ಪ, ರಾಮನಗರದ ದಾಸಣ್ಣ, ಬಿಡದಿಯ ಮೊಗಪ್ಪಣ್ಣ ಹಾಜರಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444