ಕಾಡಿನಲ್ಲಿ ಬೀಜ ಬಿತ್ತುವ ತಂದೆ-ಮಗ

ಶಿವಗಂಗೆ ಬೆಟ್ಟದಿಂದ ಅದರಂಗಿ ಗ್ರಾಮದವರೆಗಿನ ಕುರುಚಲು ಕಾಡಿನಲ್ಲಿ ವಿವಿಧ ಜಾತಿಯ ಬೀಜ ಬಿತ್ತನೆ

Team Udayavani, Jul 21, 2020, 7:40 AM IST

ಕಾಡಿನಲ್ಲಿ  ಬೀಜ ಬಿತ್ತುವ ತಂದೆ-ಮಗ

ಕುದೂರು: ಪ್ರಕೃತಿ ಉಳಿಸಿ ಬೆಳೆಸಿ ಎಂಬುದು ಕಾರ್ಯಕ್ಕಿಂತ ಘೋಷಣೆಯೇ ಹೆಚ್ಚು ಶಬ್ದ ಮಾಡುತ್ತಿದೆ. ಆದರೆ ಅದರಂಗಿ ಗ್ರಾಮದ ತಂದೆ-ಮಗ, ಸದ್ದಿಲ್ಲದೇ ಅರಣ್ಯೀಕರಣದಲ್ಲಿ ತೊಡಗಿದ್ದಾರೆ. ಶಿವಗಂಗೆ ಬೆಟ್ಟದಿಂದ ಅದರಂಗಿ ಗ್ರಾಮದವರೆ ಗಿರುವ ಕುರುಚಲು ಕಾಡಿನಲ್ಲಿ ವಿವಿಧ ಜಾತಿಯ ಹಣ್ಣುಗಳನ್ನು ಬಿಡುವ ಗಿಡಗಳ ಬೀಜಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಅದರಂಗಿ ಗ್ರಾಮದ ಬಸವರಾಜಯ್ಯ 75 ವರ್ಷದ ವೃದ್ಧ ಹಾಗೂ ಪುತ್ರ ರುದ್ರೇಶ್‌ ಎಂಬುವರು ಬೆಂಗಳೂರಿನ ಕಲಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಈ ಇಬ್ಬರೂ ಕಾಡಿಗೆ ಹೋಗಿ ಮಾವು, ಪುತ್ರಂಜೆ, ಅಂಟುವಾಳದಂತಹ ಬೀಜಗಳನ್ನು ಬಿತ್ತಿ ಬರುತ್ತಿದ್ದಾರೆ.

ಬೇಸಿಗೆಯಲ್ಲಿ ಜನರ ವಿಕೃತ ಆನಂದಕ್ಕೆ ಕಾಡಿಗೆ ಬೆಂಕಿಯಿಟ್ಟು ನೂರಾರು ಎಕ್ಕರೆ ಕಾಡನ್ನು ಸುಟ್ಟು ಹಾಕಿದರು. ಇದರಿಂದ ವಿರಳವಾಗಿರುವ ಕಾಡು ಮೆತ್ತೆ ಬೆಳೆಯುವಂತಾಗಬೇಕು. ಅದಕ್ಕಾಗಿ ಗಿಡ ನೆಡೋಣ, ಕಾಡು ಬೆಳೆಸೋಣ ಎಂದು ಘೋಷಣೆ ಕೂಗುತ್ತ ಹೋದರೆ ಕೆಲಸವಾಗುವುದಿಲ್ಲ ಎಂದು ಸ್ವಯಂ ತಂದೆ-ಮಗ, ಬೀಜ ಬಿತ್ತನೆ ಕಾರ್ಯಕ್ಕೆ ಮುಂದಾದರು.

ಲಾಲ್‌ಬಾಗ್‌ನಿಂದ ಮಾವಿನ ಬೀಜ: ದೊಡ್ಡದಾಗಿ ಬೆಳೆಯುವ ಮಾವಿನ ಮರ ಬೆಳೆಸಲು ಅದರಂಗಿ ಗ್ರಾಮದ ಮಲ್ಲಿಕಾರ್ಜುನ ಬೆಟ್ಟಕ್ಕೆ ಗಿಡ ಹೊತ್ತುಕೊಂಡು ಹೋಗಿ ಗಿಡ ಬೆಳೆಸುವುದು ಕಷ್ಟ. ಅದಕ್ಕಾಗಿ ಪ್ರಕೃತಿ ಸಹಜ ಬೀಜ ಬಿತ್ತನೆ ಮಾಡಿದರೆ ಹೆಚ್ಚಿನ ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂದು ರುದ್ರೇಶ್‌, ಬೆಂಗಳೂರಿನ ಲಾಲ್‌ಭಾಗ್‌ಗೆ ಹೋಗಿ ಅಲ್ಲಿನ ಪರಿಣಿತರಿಂದ ಮಾವಿನ ಬೀಜ ಪಡೆದು ಬೆಟ್ಟದ ಕಾಡಿನಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ಪುತ್ರಂಜೆ ಬೀಜಗಳಿಂದ ಪಕ್ಷಿ ಸಂತತಿ ವೃದ್ಧಿ: ಪುತ್ರಂಜೆ ಎನ್ನುವುದು ಹಣ್ಣಿನ ಜಾತಿಯ ಗಿಡ. ಈ ಗಿಡ ಸಣ್ಣ ಹಣ್ಣುಗಳನ್ನು ಕೊಡುತ್ತದೆ. ಇದರಿಂದಾಗಿ ಪಕ್ಷಿ ಸಂಕುಲ ಈ ಹಣ್ಣುಗಳನ್ನು ತಿನ್ನಲು ತಂಡೋಪತಂಡವಾಗಿ ಬರುತ್ತವೆ. ಚಿಕ್ಕ ಗಾತ್ರದ ಪಕ್ಷಿಗಳ ಸಂತತಿಯೇ ಹೆಚ್ಚಾಗಿರುತ್ತದೆ. ಪಕ್ಷಿಗಳು ಹೆಚ್ಚು ಪಕ್ಷಿಗಳು ಇರುವ ಕಡೆಗೆ ಕಾಡು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತದೆ ಎಂದು ರುದ್ರೇಶ್‌ ವಿವರಿಸಿದರು.

ಒತ್ತುವರಿಯಾಗುತ್ತಿರುವ ಕಾಡು : ಶಿವಗಂಗೆ ಬೆಟ್ಟ, ಕವುಚುಕಲ್‌ ಮುನೇಶ್ವರ ಸ್ವಾಮಿ ಬೆಟ್ಟವನ್ನು ವಿಸ್ತರಿಸಿದಂತೆ ಸಾವಿರಾರು ಹೆಕ್ಟೇರ್‌ ಕಾಡು ವಿಸ್ತಾರಗೊಂಡು ಅದರಂಗಿಯಲ್ಲಿ ಮುಕ್ತಾಯವಾಗುತ್ತದೆ. ಈ ಅರಣ್ಯ ಪ್ರದೇಶ ನಮ್ಮ ಸ್ವತ್ತು ಎಂದು ನೂರಾರು ಎಕ್ಕರೆ ಪ್ರದೇಶವನ್ನು ಪ್ರತಿ ವರ್ಷ ಒತ್ತುವರಿಯಾಗುತ್ತಲೇ ಇದೆ. ಅದನ್ನು ಕಂಡು ಕಾಣದಂತೆ ಅರಣ್ಯ ಇಲಾಖೆಯವರು ವರ್ತಿಸುತ್ತಿರುವುದು ಪ್ರಕೃತಿ ಪ್ರೇಮಿಗಳಿಗೆ ಬೇಸರದ ವಿಷಯವಾಗಿದೆ

ಮನುಷ್ಯ ಸ್ವಾರ್ಥಿಯಾಗಬೇಕು. ಆದರೆ ನಮಗೆ ಆಶ್ರಯ ನೀಡಿದ ಈ ಭೂತಾಯಿಯ ಒಡಲನ್ನೇ ಬರಿದು ಮಾಡುವಷ್ಟು ದುಷ್ಟನಾಗಬಾರದು. ಮುಂದಿನ ತಲೆಮಾರಿಗೆ ನಾವು ಉತ್ತಮ ವಾತಾವರಣ ಒದಗಿಸದಿದ್ದರೆ ಅವರು ಬದುಕಿರುವಷ್ಟು ದಿನ ನಮ್ಮನ್ನು ಶಪಿಸುತ್ತಿರುತ್ತಾರೆ.  ಬಸವರಾಜಯ್ಯ, ರೈತ ಅದರಂಗಿ

-ಕುದೂರು ಮಂಜುನಾಥ್‌

ಟಾಪ್ ನ್ಯೂಸ್

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಕಾರು ತಡೆದಿದ್ದಕ್ಕೆ ಸಸ್ಪೆಂಡ್‌ಗೆ ಪಟ್ಟು!

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jeju gudu theft

ರೈತರ ನಿದ್ದೆಗೆಡಿಸಿದ ರೇಷ್ಮೆಗೂಡು ಕಳವು ಪ್ರಕರಣ

new library

2.5 ಲಕ್ಷ ವೆಚ್ಚದಲ್ಲಿ ಡಿಜಿಟಲ್‌ ಲೈಬ್ರರಿ ನಿರ್ಮಾಣ

medical college

ಜಿಲ್ಲೆಯಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆ: ಪ್ರೊ.ನಾರಾಯಣಗೌಡ

ಆಸ್ಪತ್ರೆ ಪ್ಲಾನ್

56 ಕೋಟಿ ರೂ.ವೆಚ್ಚದಲ್ಲಿ ತಾಯಿ ಮಗು ಆಸ್ಪತ್ರೆ

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಆಸ್ಪತ್ರೆಯಿಂದ ಡಿಸ್ಚಾರ್ಜ್

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ದೆಹಲಿ: ಶಾಲೆಗಳಿಗೆ ಮತ್ತೆ ಬೀಗ! ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರ ಹಿಂದೇಟು

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಜೋಹರ್‌ ಕಣಿವೆ ರಸ್ತೆ 2023ರಲ್ಲಿ ಮುಕ್ತಾಯ

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.