ಕಾವೇರಿ ನದಿಯಲ್ಲಿ ಪ್ರವಾಹ ಭೀತಿ: ಸುರಕ್ಷಿತ ಸ್ಥಳಗಳಿಗೆ ತೆರಳಲು ಸ್ಥಳಿಯರಿಗೆ ಸೂಚನೆ
Team Udayavani, Aug 18, 2020, 8:37 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ರಾಮಬಗರ: ಜಿಲ್ಲೆಯ ಕನಕಪುರ ತಾಲೂಕು ಉಯ್ಯಂಬಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಗಳ ಮೂಲಕ ಕಾವೇರಿ ನದಿ ಹಾದು ಹೋಗಿದೆ.
ಕಾವೇರಿ ನದಿಯಲ್ಲಿ ಪ್ರವಾಹ ಸ್ಥಿತಿ ಉಂಟಾಗಿರುವುದರಿಂದ ಯಾವುದೇ ಸಂದರ್ಭದಲ್ಲೂ ಕಾವೇರಿ ತುಂಬಿ ಹರಿಯುವ ಸಂಭವವಿರುತ್ತದೆ.
ಕಬಿನಿ, ಹಾರಂಗಿ ಮತ್ತು ಕೆ.ಆರ್.ಎಸ್ ಜಲಾಶಯಗಳಿಂದ ಸಹ ನೀರನ್ನು ಹೊರಗೆ ಬಿಡುವುದರಿಂದ ಕನಕಪುರ ತಾಲೂಕಿನ ವ್ಯಾಪ್ತಿಯ ಕಾವೇರಿ ನದಿ ದಡದಲ್ಲಿ ಬರುವ ಜನವಸತಿ ಗ್ರಾಮಗಳಾದ ಬೊಮ್ಮಸಂದ್ರ, ಕುಪ್ಪೆದೊಡ್ಡಿ ಸಂಗಮ ಗ್ರಾಮಸ್ಥರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಾಳಂತರಗೊಳ್ಳಲು ಹಾಗೂ ನದಿಯಲ್ಲಿ ಯಾರು ಇಳಿಯಬಾರದು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ಈ ಮೂಲಕ ಸೂಚನೆ ಕೊಟ್ಟಿದ್ದಾರೆ.