Udayavni Special

ಸಿರಿಗೌರಿ ಕಲ್ಯಾಣಿಯಲ್ಲಿ ಗಣಪನ ಮೂರ್ತಿ ವಿಸರ್ಜನೆ


Team Udayavani, Sep 13, 2018, 4:32 PM IST

ram.jpg

ರಾಮನಗರ: ವಿನಾಯಕ ಮೂರ್ತಿಗಳ ವಿಸರ್ಜನೆಗೆಂದೇ ವಿಶೇಷವಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿನ ಹೂಳೆತ್ತುವ ಹಾಗೂ ಸ್ವತ್ಛಗೊಳಿಸುವ ಕಾರ್ಯವನ್ನು ಕೈಗೊಂಡ ನಗರಸಭೆಯ ಪೌರಕಾರ್ಮಿಕರು, ಗಣಪನ
ಮೂರ್ತಿಗಳ ವಿಸರ್ಜನೆಗೆ ಕಲ್ಯಾಣಿಯನ್ನು ಸಿದ್ಧಪಡಿಸಿದ್ದಾರೆ.

 ವಿಸರ್ಜನೆ ಸಿರಿಗೌರಿ ಕಲ್ಯಾಣಿಯಲ್ಲಿ ಮಾತ್ರ: ಈ ಬಾರಿ ಸಿರಿಗೌರಿ ಕಲ್ಯಾಣಿಯಲ್ಲೇ ಗಣಪತಿ ಮೂರ್ತಿಗಳನ್ನು ನಾಗರಿಕರು ವಿಸರ್ಜಿಸಬೇಕಾಗಿದ್ದು, ಮಲ್ಲೇಶ್ವರ ಕೆರೆ, ಶ್ರೀರಾಮದೇವರ ಬೆಟ್ಟದ ಬಳಿಯ ಕೆರೆಯಲ್ಲಿ ವಿಸರ್ಜನೆಗೆ ಅವಕಾಶ ಇಲ್ಲ ಎಂದು ನಗರಸಭೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ನಗರಾದ್ಯಂತ ಸಂಚಾರ: ಮೂರು ಮೊಬೈಲ್‌ ವಾಹನಗಳು ನಗರಾದ್ಯಂತ ಸಂಚರಿಸಲಿದ್ದು, ಭಕ್ತರು ಗಣೇಶನ ಮೂರ್ತಿಯನ್ನು ಮನೆಬಾಗಿಲಿನಲ್ಲೇ ವಿಸರ್ಜಿಸಬಹುದು. ಅಲ್ಲದೆ, ನಗರಸಭೆ ಕಾಂಪ್ಲೆಕ್ಸ್‌, ಅಂಬೇಡ್ಕರ್‌ ಭವನ, ವಿಜಯನಗರ ಆರ್ಚ್‌ ಮತ್ತು ರೋಟರಿ ಆಸ್ಪತ್ರೆಯ ಬಳಿ ವಿಸರ್ಜನೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸಕಲ ವ್ಯವಸ್ಥೆಯೊಂದಿಗೆ ಸಿದ್ಧ: ನಗರದ ರಂಗರಾಯರದೊಡ್ಡಿ ಕೆರೆ ಬಳಿಯಲ್ಲಿ ನಗರಸಭೆ ಹಾಗೂ ರಾಮನಗರ ಅಭಿವೃದ್ಧಿ ಪ್ರಾಧಿಕಾರಗಳು ಜಂಟಿಯಾಗಿ ನಿರ್ಮಿಸಿರುವ ಸಿರಿಗೌರಿ ಕಲ್ಯಾಣಿಯಲ್ಲಿ ಕಳೆದ ಮೂರು ವರ್ಷಗಳಿಂದ ಗಣಪತಿ ಹಾಗೂ ಗೌರಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಗಿದೆ. ಯಾವುದೇ ಅನಾಹುತಗಳಿಗೆ ಅವಕಾಶವಾಗದಂತೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಈ ಬಾರಿಯೂ ಗಣೇಶ ವಿಸರ್ಜನೆ ಕಾರ್ಯವನ್ನು ನಾಗರಿಕರು ಸುಸೂತ್ರವಾಗಿ ನೆರವೇರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಯಾರಿ ನಡೆಸಿದರು.

ಬೆಳಕಿನ ವ್ಯವಸ್ಥೆ: ಉದಯವಾಣಿಯೊಂದಿಗೆ ಮಾತನಾಡಿದ ನಗರಸಭೆ ಪ್ರಭಾರ ಪರಿಸರ ಅಧಿಕಾರಿ ಜಿ.ಶ್ರೀನಿವಾಸ್‌, ಸಿರಿಗೌರಿ ಕಲ್ಯಾಣಿಯ ಆವರಣದಲ್ಲಿ ರಾತ್ರಿ ವೇಳೆಯಲ್ಲೂ ವಿಸರ್ಜನೆಗೆ ಅವಕಾಶವಾಗುವಂತೆ ಧಾರಾಳ ಬೆಳಕಿನ ವ್ಯವಸ್ಥೆ, ವಿದ್ಯುತ್‌ ಸರಬರಾಜಿಗೆ ಯೂಪಿಎಸ್‌, ಜನರೇಟರ್‌ ವ್ಯವಸ್ಥೆ, ಕ್ರೇನ್‌ ವ್ಯವಸ್ಥೆ, ನುರಿತ ಈಜುಗಾರರು ಗಣಪನ ಮೂರ್ತಿಯ ವಿಸರ್ಜನೆಗೆ ಸಹಕರಿಸಲಿದ್ದಾರೆ. ಸಿಕ್ಯಾಮೆರಾಗಳ ಕಣ್ಗಾವಲು, ಪೊಲೀಸ್‌ ಕಾವಲು ಹೀಗೆ ಪ್ರತಿಯೊಂದು ವಿಚಾರದಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಹಿರಿಯ ಆರೋಗ್ಯ ಅಧಿಕಾರಿ ವಿಜಯ್‌ ಕುಮಾರ್‌, ಪ್ರಭಾರ ಎಇಇ ರಾಜೇಗೌಡ ಹಾಜರಿದ್ದರು.
 
ಮಳಿಗೆಗಳ ಮೇಲೆ ಅಧಿಕಾರಿಗಳ ದಾಳಿ: ನಗರದಲ್ಲಿ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವನ್ನು ನಿಷೇಧಿಸಿರುವ ಸ್ಥಳಿಯ ನಗರಸಭೆಯ ಅಧಿಕಾರಿಗಳು, ಬುಧವಾರ ನಗರ ಸಂಚಾರ ನಡೆಸಿ ಪಿಒಪಿ ಗಣಪತಿ ಮೂರ್ತಿಗಳ ಮಾರಾಟವಾಗುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡರು. ನಗರ ಸಭೆಯ ಆಯುಕ್ತರಾದ ಶುಭಾ, ಪ್ರಭಾರ ಪರಿಸರ
ಅಧಿಕಾರಿ ಜಿ.ಶ್ರೀನಿವಾಸ್‌, ಹಿರಿಯ ಆರೋಗ್ಯ ನಿರೀಕ್ಷಕ ವಿಜಯ ಕುಮಾರ್‌ ಸೇರಿದಂತೆ ನಗರಸಭೆಯ ಅಧಿಕಾರಿಗಳು ಎರಡು ತಂಡಗಳಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಗಣಪತಿ ಮೂರ್ತಿ ಮಾರಾಟಗಾರರ ಮಳಿಗೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಮಾರಾಟಗಾರರಿಗೆ ತಿಳುವಳಿಕೆ ಪತ್ರ ಕೊಟ್ಟು ಕಾನೂನು ಉಲ್ಲಂ ಸಿದರೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಸೂಚನೆಯನ್ವಯ ಮತ್ತು ಜಲ ಮಾಲಿನ್ಯ ಕಾಯ್ದೆ 1974ರ ಕಲಂ 33ಬಿ ಪ್ರಕಾರ ಸದರಿ ಕಾಯ್ದೆಯ ಕಲಂ 45ರ ಪ್ರಕಾರ 10 ಸಾವಿರ ರೂ. ದಂಡ ಹಾಗೂ ಶಿಕ್ಷೆ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಗಣಪತಿ ಮಾರಾಟಕ್ಕೆ ಪರವಾನಿಗೆ ಪಡೆಯದವರಿಗೂ ಅಧಿಕಾರಿಗಳು ಎಚ್ಚರಿಗೆ ನೀಡಿದ್ದಾರೆ. 

ಟಾಪ್ ನ್ಯೂಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

JDS activist outrage

ಮಾಜಿ ಸಚಿವ ಜಮೀರ್‌ ವಿರುದ್ಧ ಜೆಡಿಎಸ್‌ ಕಾರ್ಯಕರ್ತ ಆಕ್ರೋಶ

The servant of the people

ಜನ ನಾಯಕನಲ್ಲ, ಜನರ ಸೇವಕ

ramanagara news

ಸಹಾಯ ಮಾಡುವುದೇ ಧರ್ಮ

ramanagara news

ಸಮಾಜದ ಬಗ್ಗೆ  ಕಾಂಗ್ರೆಸ್ ಗೆ ಕಾಳಜಿ ಇದೆ: ಸುರೇಶ್

ramanagara news

ಸಾವಯವ  ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಶಂಕರ್

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

15-19

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.