ಗಬ್ಬೆದ್ದು ನಾರುತ್ತಿದೆ ರೇಷ್ಮೆ ನಗರಿ ರಾಮನಗರ


Team Udayavani, Sep 13, 2022, 1:30 PM IST

ಗಬ್ಬೆದ್ದು ನಾರುತ್ತಿದೆ ರೇಷ್ಮೆ ನಗರಿ ರಾಮನಗರ

ರಾಮನಗರ: ಹೆಸರಿಗಿದು ಸ್ವಚ್ಛ ನಗರ. ಆದರೆ, ಇದೀಗ ಗಬ್ಬೆದ್ದು ನಾರುತ್ತಿರುವ ಗಾಬೇìಜ್‌ ಸಿಟಿ. ಇದು ಮೊಂಡ ಚರ್ಮದ ನಗರಸಭೆಯ ಅಧಿಕಾರಿಗಳು ರೇಷ್ಮೆ ನಗರ ಸ್ವತ್ಛನಗರ ಸಪ್ತಗಿರಿಗಳ ನಾಡು ರಾಮನಗರಕ್ಕೆ ನೀಡುತ್ತಿರುವ ಕೊಡುಗೆ. ಈ ಸಂಬಂಧ ಖುದ್ದು ಜಿಲ್ಲಾಧಿಕಾರಿಗಳೇ ಕೂಡಲೇ ನಗರದ ಕಸ ವಿಲೇವಾರಿ ಮಾಡಿ ಎಂದು ಸೂಚಿಸಿದ್ದರೂ ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದ್ದು, ಇದು ನಗರಸಭೆಯೋ ನರಕಸಭೆಯೋ ಎಂದು ಸ್ಥಳೀಯರೇ ಪ್ರಶ್ನೆ ಮಾಡುವಂತಾಗಿದೆ.

ಮಳೆಗೆ ನಗರ ವಾಸಿಗಳ ಬದುಕು ಕೊಚ್ಚುಹೋಗಿದೆ. ಇದೀಗ ಮಳೆ ಕಡಿಮೆಯಾಗಿದ್ದು, ಮಳೆ ಸೃಷ್ಟಿಸಿದ ಅವಾಂತರ ಸರಿ ಮಾಡುವಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ. ಮಳೆ ನೀರು ನಗರದ ಮನೆ ಮನೆಗಳಿಗೂ ನುಗ್ಗಿದ್ದರಿಂದ ಕೊಚ್ಚಿ ತಂದಿದ್ದ ಕಸ ಕೊಳೆಯಲಾರಂಭಿಸಿತ್ತು. ನಗರ ಸಭೆಯ ಪೌರ ಕಾರ್ಮಿಕರ ಕಾರ್ಯಕ್ಷಮತೆಯಿಂದ ಕ್ಷಿಪ್ರವಾಗಿ ತೆಗೆಯುವ ಪ್ರಯತ್ನ ನಡೆಯಿತಾದರೂ ತೆಗೆದಷ್ಟೂ, ಕಸ ಕಂಡಿದ್ದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿತ್ತು.

ಕೂಡಲೇ ಎಚ್ಚೆತ್ತ ಜಿಲ್ಲಾಡಳಿತ ಹೆಲ್ತ್‌ ಕ್ಯಾಂಪ್‌ಗಳನ್ನು ನಡೆಸಿ, ಸಾಮೂಹಿಕವಾಗಿ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿತ್ತು. ಆದರೆ, ನೆರೆ ಪ್ರದೇಶದ ಏಳು ವಾರ್ಡ್‌ಗಳಲ್ಲಿ ಅಂತಹ ಕಾರ್ಯ ನಡೆಯುತ್ತಿದ್ದರೆ, ಇತ್ತ ನಗರ ವ್ಯಾಪ್ತಿಯ ಉಳಿದ 24 ವಾರ್ಡ್‌ಗಳಲ್ಲಿ ಕಸ ತೆಗೆಯದೆ ರಾಶಿ ರಾಶಿ ಬಿದ್ದಿದ್ದು ವಿಶೇಷವಾಗಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹಾಗೂ ಪ್ರಮುಖ ವಾರ್ಡ್‌ಗಳಲ್ಲೇ ಕಸದ ರಾಶಿ ಬಿದ್ದು ಕೊಳೆತು ನಾರಲಾರಂಭಿಸಿದೆ. ಇದರ ಜೊತೆಗೆ ಸೊಳ್ಳೆಗಳ ಕಾಟ ಜೋರಾಗಿದೆ. ಇದರಿಂದಾಗಿ ಸ್ಥಳೀಯರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಡೀಸಿ ಮಾತಿಗೂ ಕಿಮ್ಮತ್ತಿಲ್ಲ: ನಗರದಲ್ಲಿ ಕಸದ ದರ್ಬಾರ್‌ ಮುಂದುವರಿದಿದೆ. ಒಂದೆಡೆ ದಿನನಿತ್ಯ ಸುರಿಯುತ್ತಿದ್ದ ಮಳೆಯ ಅವಾಂತರದಿಂದಾಗಿ ನಗರದಲ್ಲಿ ಕಸದ ರಾಶಿ ಬಿದ್ದಿದ್ದು, ತೆಗೆಯುವಲ್ಲಿ ನಗರಸಭೆ ಅಧಿಕಾರಿಗಳಿಗೆ ಜಾಣ ಕಿವುಡು ಪ್ರಾರಂಭ ವಾಗಿದೆ. ಇತ್ತೀಚಿಗಷ್ಟೇ ಜಿಲ್ಲಾಧಿಕಾರಿ ಸಭೆಯಲ್ಲಿ ಕಸ ತೆರವುಗೊಳಿಸುವಂತೆ ಖಡಕ್‌ ಸೂಚನೆ ನೀಡಿದ್ದರು. ಆದರೂ ಕೂಡ ಲೆಕ್ಕಕ್ಕಿಲ್ಲಾ ಎನ್ನುವಂತಾ ಗಿದ್ದು, ನಗರಸಭೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮಾತಿಗೂ ಕಿಮ್ಮತ್ತು ನೀಡುತ್ತಿಲ್ಲ ಎನ್ನುವುದು ಸ್ಪಷ್ಟವಾಗಿದೆ.

ಮೂಗು ಮುಚ್ಚಿಕೊಂಡೆ ವಾಯು ವಿಹಾರ: ನಗರಕ್ಕೆ ಇರುವುದು ಒಂದೇ ಒಂದು ಜಿಲ್ಲಾ ಕ್ರೀಡಾಂಗಣ. ಆದರೆ, ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕ್ರೀಡಾಂಗಣದ ಒಳ ಭಾಗದಲ್ಲೇ ಕಸ ಸುರಿದು, ಜೊತೆಗೆ ಕಸದ ವಾಹನಗಳು ನಿಲುಗಡೆ ಮಾಡಿದ್ದಾರೆ. ಇದು ಬೆಳಗ್ಗೆ, ಸಂಜೆ ವೇಳೆ ವಾಯು ವಿಹಾರಕ್ಕೆಂದು ಬರುವವರು ಇಲ್ಲಿ ಗಬ್ಬುನಾರುತ್ತಿರುವ ಕಸದ ಅವಾಂತರ ಕಂಡು ಮೂಗು ಮುಚ್ಚಿಕೊಂಡೆ ವಿಹಾರ ನಡೆಸುವಂತಾಗಿದೆ.

ಕಸ ತೆರವಿಗೆ ಮೀನಮೇಷ: ಜಿಲ್ಲಾ ಕ್ರೀಡಾಂಗಣ ದಲ್ಲೇ ಯುವಜನ ಕ್ರೀಡಾ ಇಲಾಖೆಯ ವಸತಿ ಗೃಹ ಇದೆ. ಇನ್ನೊಂದು ಪಾರ್ಶ್ವಕ್ಕೆ ಆದಿಚುಂಚನಗಿರಿ ವಿದ್ಯಾರ್ಥಿಗಳ ವಸತಿಗೃಹ. ಅಲ್ಲದೆ, ಹೋಟೆಲ್‌ ಗಳು, ಬೇಕರಿಗಳು ಇಲ್ಲೇ ಇವೆ. ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು ವ್ಯಾಯಾಮ ಮತ್ತಿತರ ಚಟುವಟಿಕೆಗಳಿಗೆ ಇಲ್ಲಿಗೆ ಬರುತ್ತಾರೆ. ಅವರಿಗೂ ಸೇರಿದಂತೆ ನಗರದ ಸಾರ್ವಜನಿಕರಿಗೆ ದುರ್ವಾಸನೆಯಿಂದಾಗಿ ತೀವ್ರ ತೊಂದರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಕಸ ತೆರವಿಗೆ ಜಿಲ್ಲಾಧಿಕಾರಿಗಳೇ ಖಡಕ್‌ ಸೂಚನೆ ನೀಡಿದ್ದರು. ಕಸ ತೆಗೆಯಲು ಮೀನಾಮೇಷ ಎಣಿಸುತ್ತಿದ್ದಾರೆ. ಇದು ನಗರ ಸಭೆಯೋ ಅಥವಾ ನರಕ ಸಭೆಯೋ ಎನ್ನುವಂತಹ ಪ್ರಶ್ನೆ ಉದ್ಬವವಾಗಿದೆ. ನಗರಸಭೆ ಅಧಿಕಾರಿಗಳ ಈ ವರ್ತನೆ ಅವರ ದಪ್ಪ ಚರ್ಮಕ್ಕೆ ಹಿಡಿದ ಕನ್ನಡಿಯಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಚೇರಿ ಮುಂಭಾಗವೇ ಕಸದ ರಾಶಿ : ನಗರದ ಮಂಜುನಾಥನಗರ ಮುಖ್ಯರಸ್ತೆ, ಎಪಿಎಂಸಿ ಮುಂಭಾಗ, ಡಾ.ಬಿ.ಆರ್‌ಅಂಬೇಡ್ಕರ್‌ ಭವನದ ಎದುರು ಹಾಗೂ ತಾಲೂಕು ಕಚೇರಿ ಮುಂಭಾಗ ಕೂಡ ಕಸದ ರಾಶಿ ಜೋರಾಗಿದ್ದು, ಅದರಮೇಲೆ ಮಳೆ ನೀರು ಬಿದ್ದಿದ್ದರಿಂದ ಕೊಳೆತ ಕಸದ ರಸ ರಸ್ತೆಯಲ್ಲೇ ಹರಿಯಲಾರಂಭಿಸಿದೆ. ಹೇಳಿಕೇಳಿ ಕೊರೊನಾ ಭೀತಿಯಲ್ಲಿರುವ ಜನತೆಗೆ ಸ್ವಚ್ಛತೆ ಕಾಪಾಡಿ ಎಂದು ಅರಿವು ಮೂಡಿಸಬೇಕಿದ್ದ ನಗರಸಭೆಯ ಅಧಿಕಾರಿಗಳ ವರ್ತನೆ, ಇಡೀ ನಗರಕ್ಕೆ ಕೆಟ್ಟ ಹೆಸರಿನ ಜೊತೆಗೆ ರೋಗದ ಕೊಡುಗೆ ನೀಡುವ ಸಾಧ್ಯತೆ ಹೆಚ್ಚಾಗಿದ್ದು, ಕೂಡಲೇ ಸಂಬಂಧಪಟ್ಟ ನಗರಸಭೆಯ ಅಧಿಕಾರಿಗಳು ಕಸ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ, ನಗರವಾಸಿಗಳು ಪ್ರತಿಭಟನೆ ಹಾದಿ ಹಿಡಿಯಬೇಕಾಗುತ್ತದೆ ಎಂದು ವರ್ತಕ ಸಿದ್ದರಾಜಯ್ಯ.ಎಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಸ ತೆರವಿಗೆ ಕ್ರಮ: ಪಾರ್ವತಮ್ಮ : ಕಸ ಸುರಿಯುವುದಕ್ಕಾಗಿಯೇ ತಿಂಗಳ ಬಾಡಿಗೆಗೆ ಜಾಗ ಮಾಡಲಾಗಿದೆ. ಅಲ್ಲಿ ರಸ್ತೆ ತೊಂದರೆ ಆಗಿತ್ತು. ರಿಪೇರಿ ಮಾಡಲು ಕೌನ್ಸಿಲ್‌ ಬಾಡಿ ಯಲ್ಲಿ ತೀರ್ಮಾನಿಸ ಲಾಗಿದೆ. ಆದರೆ, ಮಳೆಯಿಂದ ನೆರೆ ಬಂದಿದೆ. ಅದರಲ್ಲಿ ಪೌರ ಕಾರ್ಮಿ ಕರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಕಸ ಎಲ್ಲಾ ಕಡೆ ಇದೆ ನಿಜ, ಅದನ್ನ ತೆರವು ಮಾಡುವುದಕ್ಕೆ ತೊಂದರೆ ಆಗಿದೆ. ಕೂಡಲೇ ಅಧಿಕಾರಿಗಳಿಗೆ ಸೂಚಿಸಿ, ಕಸ ತೆರವಿಗೆ ಕ್ರಮ ಕೈಗೊಳ್ಳುತ್ತೇನೆ ಎಂದು ರಾಮನಗರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಬಿ.ಸಿ. ತಿಳಿಸಿದ್ದಾರೆ.

ನಗರದಲ್ಲಿ ಕಸದ ರಾಶಿ ಬಿದ್ದಿರುವು ದಲ್ಲದೆ, ಮಳೆ ನೀರಿಗೆ ಕೊಳೆತು ಗಬ್ಬುನಾರುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗಿದ್ದು, ಕೂಡಲೇ ಕಸ ತೆರವು ಮಾಡಬೇಕು. ಇಲ್ಲವಾದರೆ ನಗರ ವಾಸಿ ಗಳು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. – ರಾಜೀವ, ನಿವಾಸಿ, ಹನುಮಂತನಗರ

ಮನೆ ಮನೆ ಕಸ ತೆಗೆದುಕೊಳ್ಳಲು ಬರಬೇಕಿದ್ದ ವಾಹನಗಳು ಕಳೆದ ಒಂದು ತಿಂಗಳಿನಿಂದ ಬರುತ್ತಿಲ್ಲ. ಮನೆಯಲ್ಲಿ ಕಸ ಇಟ್ಟುಕೊಳ್ಳಲಾಗದೆ ನಾವೇ ತೆಗೆದುಕೊಂಡು ಹೋಗಿ ರಸ್ತೆ ಬದಿ ದೊಡ್ಡ ದೊಡ್ಡ ರಾಶಿಗಳಲ್ಲೇ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲೂ ಕೂಡ ಕೊಳೆತು ನಾರುತ್ತಿದೆ. ಕೂಡಲೇ ಕಸ ಸಂಪೂರ್ಣ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.– ಎಸ್‌.ಸಿದ್ದರಾಜು, ರಾಮನಗರ

 

-ಎಂ.ಎಚ್‌.ಪ್ರಕಾಶ್‌ ರಾಮನಗರ

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Getting good response from people in constituency: D.K. Suresh

Ramanagar; ಕ್ಷೇತ್ರದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ: ಡಿ.ಕೆ. ಸುರೇಶ್

1-aaaa

Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Channapatna ಉಪಚುನಾವಣೆಗೆ ಅಭ್ಯರ್ಥಿ ಯಾರು? ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಸುಳಿವು

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Lok Sabha elections: ಕೈಗೆ ಚನ್ನಪಟ್ಟಣ, ಮೈತ್ರಿಗೆ ಕನಕಪುರ‌ ಕಬ್ಬಿಣದ ಕಡಲೆ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

Ramanagara ದೇವೇಗೌಡ ಕುಟುಂಬದ ವಿರುದ್ಧ ಡಿ.ಕೆ. ಸುರೇಶ್‌ ವಾಗ್ಧಾಳಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.