ಗ್ರಾಪಂ ಚುನಾವಣೆ:ಯುವ ಸಮೂಹ ಬೆಂಬಲಿಸಿ
Team Udayavani, Dec 14, 2020, 4:39 PM IST
ಕನಕಪುರ: ರಾಜಕಾರಣದಲ್ಲಿ ಯುವ ಸಮೂಹಕ್ಕೆ ಮತದಾರರು ಹೆಚ್ಚು ಬೆಂಬಲ ನೀಡಿದರೆ ಭ್ರಷ್ಟಾಚಾರ ತಡೆಯಲು ಸಾಧ್ಯ ಎಂದು ಭೂಹಳ್ಳಿ ಸಮಾಜ ಸೇವಕ ಬಿ.ಎಂ. ಮಂಜುನಾಥ ಅಭಿಪ್ರಾಯಪಟ್ಟರು.
ತಾಲೂಕಿನ ಸಾತನೂರು ಹೋಬಳಿ ಕಾಡಹಳ್ಳಿ ಗ್ರಾಪಂ ವ್ಯಾಪ್ತಿಯ ಸಾಮಾನ್ಯ ಕ್ಷೇತ್ರಕ್ಕೆಮೀಸಲಾಗಿದ್ದಭೂಹಳ್ಳಿಗ್ರಾಮದಿಂದ ಗ್ರಾಪಂ ಚುನಾವಣೆಗೆ ಸ್ಪರ್ಧಿಸಲು ಗ್ರಾಮದ ಮುಖಂಡರೊಂದಿಗೆ ಕಾಡಹಳ್ಳಿ ಗ್ರಾಪಂನಲ್ಲಿ ಶುಕ್ರವಾರ ಚುನಾವಣಾಧಿಕಾರಿ ಶಿವರುದ್ರಪ್ಪಅವರಿಗೆ ನಾಮ ಪತ್ರ ಸಲ್ಲಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿಗೆಂದು ಸರ್ಕಾರದಿಂದ ಗ್ರಾಪಂಗಳಿಗೆ ಸಾಕಷ್ಟು ಅನುದಾನ ಹರಿದು ಬರುತ್ತಿದೆ. ಕೃಷಿ ಹೈನೋದ್ಯಮಗಳಲ್ಲಿಗ್ರಾಮೀಣ ಜನರು ತೊಡಗಿಕೊಂಡು ಸ್ವಾವಲಂಬನೆಸಾಧಿಸುವುದರಜತೆಗೆನಿರುದ್ಯೋಗ ಸಮಸ್ಯೆ ಹೋಗಲಾಡಿಸಿ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಸರ್ಕಾರನರೇಗಾ ಯೋಜನೆ ಜಾರಿಗೊಳಿಸಿದೆ. ಆದರೆ, ಸರ್ಕಾರದ ಯೋಜನೆಗಳು ಜನರಿಗೆ ತಲುಪದೆ ವಂಚಿತರಾಗುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉತ್ಸುಕನಾಗಿದ್ದು ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆಂದರು.
ಸ್ಪರ್ಧೆಗೆ ಸ್ವಯಂಘೋಷಿತ ಛಾಪಾಕಾಗದ ಬೇಡ :
ಚನ್ನಪಟ್ಟಣ: 2020ರ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಸಂದರ್ಭದಲ್ಲಿ ನಾಮ ಪತ್ರದ ಜತೆ ಛಾಪಾಕಾಗದದಲ್ಲಿ ನೋಟರಿ ಮಾಡಿದ ಸ್ವಯಂ ಘೋಷಿತ ಘೋಷಣಾ ಪತ್ರ ನೀಡಬೇಕೆಂಬುದು ಸುಳ್ಳು ಎಂದು ತಹಶೀಲ್ದಾರ್ ನಾಗೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ ವೇಳೆ ಉಮೇದುದಾರರು ಗೊಂದಲಕ್ಕೆ ಬಿದ್ದು, ಅನವಶ್ಯಕವಾಗಿ ಸಾವಿರಾರು ರೂ. ವ್ಯಯಮಾಡಿ, ಛಾಪಾ ಕಾಗದ ಖರೀದಿ ಮಾಡಿ ನೋಟರಿ ಮಾಡಿಸುತ್ತಿರುವುದರ ಬಗ್ಗೆ ಸಾಕಷ್ಟು ದೂರು ಬಂದಿವೆ ಎಂದು ತಿಳಿಸಿದ್ದಾರೆ.
ಗ್ರಾಪಂ ಚುನಾವಣೆಗೆ ಸ್ಪರ್ಧೆ ಮಾಡುವವರಿಗೆ, ಆಯಾ ಗ್ರಾಪಂನಲ್ಲಿಯೇ ನೀಡುವ ಬುಕ್‌ಲೆಟ್‌ನಲ್ಲಿ ಸ್ವಯಂ ಘೋಷಣಾ ಪತ್ರವಿದ್ದು ಅದರಲ್ಲಿಅಭ್ಯರ್ಥಿಗಳು ಭರ್ತಿ ಮಾಡಬೇಕಾಗಿದೆ. ಅಲ್ಲದೇಬಿಳಿ ಹಾಳೆ ಮೇಲೆ ಸ್ವಯಂ ಬರೆದು ಘೋಷಣೆ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಅನವಶ್ಯಕವಾಗಿ ಯಾರೋ ಹೇಳಿದರೆಂದು, ಅಲ್ಲದೆ ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ, ಸ್ವಯಂ ಘೋಷಣೆ ಮಾಡಿದ್ದಾರೆ, ಚುನಾವಣಾಧಿಕಾರಿಗಳು, ನಾಮಪತ್ರ ತಿರಸ್ಕೃತ ಮಾಡುತ್ತಾ ರೆಂಬ ಭಯದಿಂದ, ಹಣ ವೆಚ್ಚ ಮಾಡಿ ಛಾಪಾ ಕಾಗದ ಖರೀದಿಸಿ ನೋಟರಿ ಮಾಡಿಸಬಾರದೆಂದು ಮನವಿ ಮಾಡಿದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444