ಹಂಸಲೇಖ ವಾಸ್ತವದ ಬಗ್ಗೆ ಮಾತನಾಡಿದ್ದಾರೆ; ಅವರ ಹೇಳಿಕೆಯಲ್ಲಿ ತಪ್ಪೇನಿದೆ?

Team Udayavani, Nov 18, 2021, 6:12 PM IST

ಹಂಸಲೇಖ ಹೇಳಿಕೆ ಸರಿ

ರಾಮನಗರ: ಭೇದದ ಪರವಾಗಿರುವ ಕೆಲವರು ಸಂಗೀತ ನಿರ್ದೇಶಕ ಹಂಸಲೇಖ ಅವರ ಮಾತು ಗಳನ್ನು ವಿವಾದ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ದಲಿತ ಪ್ರಗತಿಪರ ಚಿಂತಕರ ಒಕ್ಕೂಟ ಮತ್ತು ಸಮತಾ ಸೈನಿಕ ದಳದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.

ವಾಸ್ತವ ಬಿಚ್ಚಿಟ್ಟಿದ್ದಾರೆ: ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ ಪದಾಧಿಕಾರಿಗಳು ಸಂಗೀತ ನಿರ್ದೇಶಕ ಹಂಸಲೇಖ ಅವರ ಪರ ಘೋಷಣೆ ಕೂಗಿ ಬೆಂಬಲ ವ್ಯಕ್ತಪಡಿಸಿ ದರು. ಸಂಗೀತ ನಿರ್ದೇಶಕ ಹಂಸಲೇಖ ಅವರು ಅಸಮಾನತೆ, ತಾರತಮ್ಯ ಹಾಗೂ ವಾಸ್ತವಗಳ ಬಗ್ಗೆ ಮಾತನಾಡಿದ್ದಾರೆ. ಇದು ಒಂದು ವಿವಾದವಾಗಿರು ವುದು ಅಚ್ಚರಿಗೆ ಕಾರಣವಾಗಿದೆ ಎಂದರು. ಹೇಳಿಕೆಯಲ್ಲಿ ತಪ್ಪೇನಿದೆ..?

ಇದನ್ನೂ ಓದಿ:- ಕಲೆ-ಸಾಹಿತ್ಯ ಉಳಿವಿಗೆ ಪ್ರೋತ್ಸಾಹ ಅಗತ್ಯ

ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಬಹುದು. ಆದರೆ, ಮಾಂಸಹಾರ ಸೇವನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿರುವುದರಲ್ಲಿ ತಪ್ಪು ಎನಿಸುವ ಅಂಶ ಯಾವುದು ಎಂದು ಪ್ರಶ್ನಿಸಿದ ಪದಾಧಿಕಾರಿಗಳು, ಅವರ ಮಾತುಗಳಿಗೆ ವಿರೋಧವೇಕೆ ಎಂದರು. ಹಂಸಲೇಖ ಅವರು ಅಸ್ಪೃಶ್ಯತೆ ನಿರ್ಮೂಲನೆಗೆ ಸಂಬಂಧಿಸಿದಂತೆ ಆಡಿರುವ ಮಾತುಗಳಿಗೆ ತಮ್ಮ ಬೆಂಬಲವಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ದಿಕ್ಕು ತಪ್ಪಿಸಬೇಡಿ: ಹಂಸಲೇಖ ಹೇಳಿಕೆ ಸಾರ್ವತ್ರಿಕ ಸತ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೂ, ಕೆಲವರು ವಿವಾದ ಸೃಷ್ಟಿಸಿ ಪ್ರಚಾರಕ್ಕಾಗಿ ಹೇಳಿಕೆ ನೀಡಿದ್ದಾರೆ ಎಂದು ದಿಕ್ಕು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಜಾತಿ ವ್ಯವಸ್ಥೆ ವಿರುದ್ಧ ಮಾತನಾಡುವವರನ್ನು ಆರಂಭದಲ್ಲೇ ಹೊಸಕಿ ಹಾಕುವ ಪ್ರಯತ್ನ ಇನ್ನು ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಬೆಂಬಲಿಸುತ್ತೇವೆ: ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟದಲ್ಲಿ ನಾನೂ ಭಾಗಿ ಎಂದು ಹಂಸಲೇಖ ಅವರು ಹೇಳಿರುವುದು ಅವರ ಮಾತಿನಲ್ಲಿ ಅವರಿಗಿರುವ ಬದ್ಧತೆ ತೋರಿಸಿದೆ. ಹೀಗಾಗಿ ಅವರ ಬೆಂಬಲಕ್ಕೆ ತಾವೆಲ್ಲ ಇರುವುದಾಗಿ ತಿಳಿಸಿದರು.

ಮನುವಾದಿಗಳ ನಡೆಗೆ ಕಿಡಿ: ಮನುವಾದಿಗಳಿಗೆ ಅಪರೂಪಕ್ಕಾದರು ಸತ್ಯವನ್ನು ಸಹಿಸಿಕೊಳ್ಳುವ, ಸತ್ಯವನ್ನು ಒಪ್ಪಿಕೊಳ್ಳುವ ತಾವು ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ, ತಪ್ಪುಗಳನ್ನು ತಿದ್ದಿದವರಿಗೆ ಕೃತಜ್ಞತೆ ಸಲ್ಲಿಸುವ ದೊಡ್ಡ ಗುಣ ಇಲ್ಲಿಯವರೆವಿಗೂ ಬಾರದೇ ಇರುವುದು ದುರದೃಷ್ಟಕರ ಎಂದು ಪ್ರತಿಭಟನಾಕಾರರು ಟೀಕಿಸಿದರು.

ಪ್ರಗತಿಪರರಿಗೆ ಅಪಮಾನ: ಪ್ರಜಾಸತ್ತಾತ್ಮಕ ಸಂವಿಧಾನ ಜಾರಿಯಲ್ಲಿರುವ ಈ ನೆಲದಲ್ಲಿ ಕಾನೂನುಗಳು ಶ್ರೇಷ್ಠವೇ ಹೊರತು ಸಂಪ್ರದಾಯಗಳಲ್ಲ. ಜೀವ ವಿರೋಧಿ ಸಂಪ್ರದಾಯಗಳು, ಮೂಢನಂಬಿಕೆ ಮತ್ತು ಮೌಡ್ಯಗಳನ್ನು ತೊಲಗಿಸಲು ವೈಚಾರಿಕ ಮತ್ತು ವೈಜ್ಞಾನಿಕವಾಗಿ ಜಾಗೃತಿ ಮೂಡಿಸುತ್ತಿರುವ ಪ್ರಗತಿಪರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸೋಲಿಸಿ ಅಪಮಾನಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವ್ಯಂಗ್ಯ ಎಂದು ಬೇಸರ ವ್ಯಕ್ತಪಡಿಸಿದರು.

ಸಮತಾ ಸೈನಿಕಾ ದಳದ ಡಾ.ಜಿ.ಗೋವಿಂದಯ್ಯ ಮಾತನಾಡಿದರು. ಒಕ್ಕೂಟದ ಮುಖಂಡರಾದ ಶಿವಕುಮಾರಸ್ವಾಮಿ, ಎಸ್‌.ಜಯಕಾಂತ, ಕೂಡ್ಲೂರು ರವಿಕುಮಾರ್‌, ಅಪ್ಪಗೆರೆ ಪ್ರದೀಪ್‌, ಮರಳವಾಡಿ ಮಂಜು, ಶಿವರಾಜು, ಸುರೇಶ್‌, ಡಾ.ಜಯಸಿಂಹ, ಕೀರ್ತಿರಾಜ್‌, ಲಕ್ಷ್ಮಣ್‌, ಬಿವಿಎಸ್‌ ವೆಂಕಟೇಶ್‌, ಹರೀಶ್‌ ಬಾಲು, ಕುಮಾರಸ್ವಾಮಿ, ಜೆ.ಎಂ.ಶಿವಲಿಂಗಯ್ಯ, ನರಸಿಂಹಯ್ಯ, ಜಯಚಂದ್ರ, ಪುಟ್ಟಸ್ವಾಮಿ, ಭಾಸ್ಕರ್‌, ಶ್ರೀನಿವಾಸ್‌, ಸಿದ್ದರಾಮು, ಬ್ಯಾಡರಹಳ್ಳಿ ಶಿವಕುಮಾರ್‌, ಬನಶಂಕರಿ ನಾಗು, ಜಿ.ಗೋಪಾಲ್‌ , ಶಿವಲಿಂಗಯ್ಯ, ಸುರೇಂದ್ರ ಶ್ರೀನಿವಾಸ್‌, ಸುಜೀವನ್‌, ಚಾಂದ್‌ ಪಾಷ, ಸೈಯದ್‌ ಮತೀನ್‌ , ಅಬ್ದುಲ್ಲಾ ಮತ್ತಿ ತರರು ಭಾಗವಹಿಸಿದ್ದರು

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

ಮೊದಲಿನಿಂದಲೂ ಗೌಡರ ಕುಟುಂಬ ಡಿಕೆಶಿ ಮೇಲೆ ಹಗೆ ಸಾಧಿಸುತ್ತಿದೆ: ಸುರೇಶ್‌

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

Channapatana : ಬೆಳಗ್ಗೆ ಸತ್ತವನು ಮಧ್ಯಾಹ್ನ ಎದ್ದು ಕುಳಿತು ಸಂಜೆ ಕಣ್ಮುಚ್ಚಿದ!

ramangar

Ramanagara: ಬೈಕ್ ಅಪಘಾತ, ಕೆಎಸ್ಆರ್ ಟಿಸಿ ಕಂಡಕ್ಟರ್ ಸಾವು

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

Karnataka; ನೀರಿಲ್ಲ, ಬಿಸಿಲಿನ ಝಳ: ಎರಡು ಕಾಡಾನೆ ಸಾವು?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.