Udayavni Special

ಶಿಕ್ಷಣ ಸಚಿವರಿಂದ ವಸತಿ ಶಾಲೆ ಪರಿಶೀಲನೆ


Team Udayavani, Aug 30, 2019, 1:01 PM IST

rn-tdy-2

ರಾಮನಗರ ತಾಲೂಕು ಕೈಲಾಂಚ ಗ್ರಾಮದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮಾತನಾಡಿದರು.

ರಾಮನಗರ: ತಾಲೂಕಿನ ಕೈಲಾಂಚ ಗ್ರಾಮದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ ಮಕ್ಕಳಿಗೆ ತುರಿಕೆ, ಕಜ್ಜಿ ಕಾಡುತ್ತಿದ್ದ ಸುದ್ದಿ ಬಯಲಾದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಕ್ಕಳು, ವಸತಿ ನಿಲಯದ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸಿದರು.

ಬೆಳಗ್ಗೆ 7.30ಕ್ಕೆ ಹಾಸ್ಟೆಲ್ಗೆ ಬಂದ ಸಚಿವರು, ಮೊದಲು ಮಾತನಾಡಿಸಿದ್ದು ವಿದ್ಯಾರ್ಥಿಗಳ ಹತ್ತಿರ. ಕಜ್ಜಿ, ತುರಿಕೆ ಇದ್ದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಔಷಧಿ ಕೊಟ್ಟಿರುವ ಬಗ್ಗೆ ಖಾತರಿ ಪಡಿಸಿಕೊಂಡರು. ನಂತರ ಕೆಲವು ಪೋಷಕರ ಬಳಿಯೂ ಮಾಹಿತಿ ಕಲೆ ಹಾಕಿದರು.

ತರಗತಿಯಲ್ಲಿ ಡೆಸ್ಕ್ ಇಲ್ಲ, ಬರೆಯಲು ಪುಸ್ತಕವಿಲ್ಲ: ಬಾಡಿಗೆಗೆ ಪಡೆದ ಕಟ್ಟಡವೊಂದರಲ್ಲಿ ತೀರಾ ಚಿಕ್ಕದಾದ ಕೊಠಡಿಗಳಲ್ಲಿ ನಡೆಯುವ ತರಗತಿಗಳು, ಮಕ್ಕಳು ತಮ್ಮ ಟ್ರಂಕ್‌, ಬ್ಯಾಗ್‌ಗಳ ಜೊತೆಗೆ ಮಲಗಬೇಕಾದ ಸ್ಥಿತಿಯನ್ನು ಕಂಡರು. ತರಗತಿಯಲ್ಲಿ ಡೆಸ್ಕ್ ಇಲ್ಲದನ್ನು ಕಂಡು ಅವರು, ಅಧಿಕಾರಿಗಳನ್ನು ಪ್ರಶ್ನಿಸಿದರು. ಬರೆದುಕೊಳ್ಳಲು ನೋಟ್ ಪುಸ್ತಕದ ಕೊರತೆ ಇದೆ ಎಂದು ವಿದ್ಯಾರ್ಥಿಗಳು ಸಚಿವರ ಗಮನ ಸೆಳೆದರು. ಪುಸ್ತಕದ ಬ್ಯಾಗ್‌ ಕೊಡಿಸಿದ್ದು, ತಮ್ಮ ಪೋಷಕರು ಎಂದರು. ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ (ಕೆಆರ್‌ಇಐ) ಅಧಿಕಾರಿಗಳಿಗೆ ಡೆಸ್ಕ್ಗಳು, ನೋಟ್ ಪುಸ್ತಕಗಳನ್ನು ಪೂರೈಸಬೇಕು. ಕಿಷ್ಕಿಂದ ಕೊಠಡಿಗಳಲ್ಲಿ ಮಕ್ಕಳು ಮಲಗಲು ವ್ಯವಸ್ಥೆ ಮಾಡಿರುವ ಬಗ್ಗೆ ಜಿಲ್ಲಾಡಳಿತವನ್ನು ಪ್ರಶ್ನಿಸಿದರು.

ಅಪೂರ್ಣಗೊಳ್ಳಬೇಕಿದೆ ಕಟ್ಟಡ ಕಾಮಗಾರಿ: ಜಿಪಂ ಸಿಇಒ ಜಯ ವಿಭವ ಸ್ವಾಮಿ ಮಾತನಾಡಿ, ಸುಸಜ್ಜಿತ ವಸತಿ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಅಲ್ಲಿಯವರೆಗೆ ಪರ್ಯಾಯವಾಗಿ ಸರ್ಕಾರಿ ಸಾರ್ವಜನಿಕ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬಾಲಕರಿಗೆ ತಂಗಲು ಅವಕಾಶ ನೀಡುವುದು ಮತ್ತು ಗ್ರಾಮದಲ್ಲಿರುವ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕೊಠಡಿಗಳಲ್ಲಿ ತರಗತಿಗಳು ನಡೆಯಲು ಅವಕಾಶ ನೀಡುವ ಕುರಿತು ಚಿಂತನೆ ನಡೆದಿದೆ ಎಂದರು. ಸಚಿವರ ನಂತರ ಪರ್ಯಾಯ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳಿಗೆ ಅನುಮತಿ ನೀಡಿದರು.

ಮತ್ತೆ ಬರ್ತೀನಿ ಎಂದ ಸಚಿವರು: ಪರ್ಯಾಯ ವ್ಯವಸ್ಥೆ ತಕ್ಷಣವೇ ಕೈಗೆತ್ತಿಕೊಳ್ಳಬೇಕು. ಸೆಪ್ಟಂಬರ್‌ 4 ಅಥವಾ 6ರಂದು ಮತ್ತೆ ಭೇಟಿ ಕೊಡುವುದಾಗಿ ತಿಳಿಸಿ ಅಧಿಕಾರಿಗಳನ್ನು ಎಚ್ಚರಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ತಾಪಂ ಅಧ್ಯಕ್ಷ ಗಾಣಕಲ್ ನಟರಾಜು, ಕೈಲಾಂಚ ಗ್ರಾಮ ಪಂಚಾಯ್ತಿ ಅಧ್ಯಕ್ಷ ಆರ್‌.ಪಾಂಡುರಂಗ, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಡಿಡಿಪಿಐ ಗಂಗಮಾರೇಗೌಡ, ಬಿಇಒ ಮರೀಗೌಡ, ಡಿಡಿಪಿಐ ಕಚೇರಿಯ ವಿಷಯ ಪರೀವೀಕ್ಷಕ ಸೋಮಲಿಂಗಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

US-ELECTION

ಹೇಗಿದೆ ಅಮೆರಿಕನ್‌ ಚುನಾವಣ ಕಣ?

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಥಾರ್‌ ಮರುಭೂಮಿಯಲ್ಲೂ ನದಿ: 1,72,000 ವರ್ಷಗಳ ಹಿಂದೆ ಹರಿಯುತ್ತಿದ್ದ ನದಿ ಕುರುಹು ಪತ್ತೆ

ಥಾಣೆಯ 45 ಗ್ರಾ.ಪಂ.ಗಳಲ್ಲಿ ಕೋವಿಡ್ ಪ್ರಕರಣಗಳೇ ಇಲ್ಲ

ಥಾಣೆಯ 45 ಗ್ರಾ.ಪಂ.ಗಳಲ್ಲಿ ಕೋವಿಡ್ ಪ್ರಕರಣಗಳೇ ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rn-tdy-1

ಚಿಯಾ ವಿದೇಶಿ ಸಿರಿಧ್ಯಾನ

rn-tdy-02

ಕಪಾಲ ಬೆಟ್ಟ: ತಾರ್ಕಿಕ ಅಂತ್ಯದ ವರೆಗೂ ಹೋರಾಟ

ಆರೋಗ್ಯ ಕೇಂದ್ರಕ್ಕೆ ಮತ್ತೆ ಜಲಗಂಡಾಂತರದ ಆತಂಕ

ಆರೋಗ್ಯ ಕೇಂದ್ರಕ್ಕೆ ಮತ್ತೆ ಜಲಗಂಡಾಂತರದ ಆತಂಕ

rn-tdy-3

ನೆರೆ ಜಿಲ್ಲೆಗಳಿಗೆ ಪ್ರಧಾನಿ ಬರಲಿ

rn-tdy-2

ರಾಮನಗರ: ಕೋವಿಡ್ ಗೆ ಮೂವರು ವಾರಿಯರ್ಸ್ ಬಲಿ

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಪರೀಕ್ಷೆ ಬಿಡಿ; ಪಠ್ಯಕ್ರಮವೇ ಬಂದಿಲ್ಲ ! ಎಸೆಸೆಲ್ಸಿ ಇನ್ನೂ ಗೊಂದಲದ ಗೂಡು

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಉದಯವಾಣಿ ಸಂದರ್ಶನ : ನಾನು ಮಾಸ್‌ ಲೀಡರ್‌ ಆಗಲು ಬಂದವನಲ್ಲ !

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಕೋವಿಡ್ ಲಸಿಕೆಗೆ 50,000 ಕೋಟಿ ರೂ.?

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

ಅಂಚೆಯಲ್ಲೇ ಭಾಗ್ಯಲಕ್ಷ್ಮೀ, ಸುಕನ್ಯಾ ಸಮೃದ್ಧಿ ಜತೆ ವಿಲೀನಕ್ಕೆ ಸಂಪುಟ ಅಸ್ತು

US-ELECTION

ಹೇಗಿದೆ ಅಮೆರಿಕನ್‌ ಚುನಾವಣ ಕಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.