ಕನ್ನಡ ಭಾಷೆ ಕಡೆಗಣನೆ ಬೇಡ

Team Udayavani, Jul 8, 2019, 1:20 PM IST

ಸ್ಪೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಮ್ಮಿ ಕೊಂಡಿದ್ದ ಚಿಂತನಾ ಗೋಷ್ಠಿಯಲ್ಲಿ ಸಹ ಪ್ರಾಧ್ಯಾಪಕ ಡಾ.ಮಧುಸೂದನಾಚಾರ್ಯ ಜೋಷಿ ಮಾತನಾಡಿದರು.

ರಾಮನಗರ: ವ್ಯವಹಾರಿಕವಾಗಿ ಇಂಗ್ಲಿಷ್‌ ಭಾಷೆ ಅವಶ್ಯವಿದ್ದರೂ ಇಂಗ್ಲಿಷ್‌ ಹೆಸರಿ ನಲ್ಲಿ ಮಾತೃಭಾಷೆ ಕಡೆಗಣನೆ ಸರಿಯಲ್ಲ ಎಂದು ಚನ್ನಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮಧುಸೂದನಾಚಾರ್ಯ ಜೋಷಿ ಹೇಳಿದರು.

ನಗರದ ಸ್ಪೂರ್ತಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಮ್ಮಿ ಕೊಂಡಿದ್ದ ‘ಸರ್ಕಾರಿ ಶಾಲೆಗಳ ವಿಲೀನ ಹಾಗೂ ಇಂಗ್ಲಿಷ್‌ ಮಾಧ್ಯಮ ಶಾಲೆಗಳ ಆರಂಭ- ಪರಿಣಾಮಗಳು’ ಎಂಬ ವಿಷಯದಲ್ಲಿ ನಡೆದ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಶೇ.80 ಮಂದಿ ಕನ್ನಡ ಭಾಷೆಯಲ್ಲೇ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ಅವರೆಲ್ಲರ ಮಕ್ಕಳು ಇಂಗ್ಲಿಷ್‌ ಮಾಧ್ಯಮ ಶಾಲೆಗ ಳಲ್ಲಿ ಕಲಿಯುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಜರ್ಮನಿ, ಜಪಾನ್‌, ಚೀನಾ, ರಷ್ಯಾ ದೇಶಗಳಲ್ಲಿ ಆಯಾ ದೇಶಗಳ ಮಾತೃ ಭಾಷೆಗಳಲ್ಲೇ ಶಿಕ್ಷಣ ನೀಡ ಲಾಗುತ್ತಿದೆ. ಈ ದೇಶಗಳಿಂದು ಅಭಿವೃದ್ಧಿ ವಿಚಾರ ದಲ್ಲಿ ಇತರ ದೇಶಗಳಿಗಿಂತ ಮುಂದಿವೆ. ಪೋಷಕರು ಇಂಗ್ಲಿಷ್‌ ಶ್ರೇಷ್ಠ ಎಂಬ ಭ್ರಮೆಯಿಂದ ಹೊರಬರಬೇಕೆಂದರು.

ಕಲಿಕೆ, ಶಿಕ್ಷಣ ನೀತಿ ಜಾರಿಯಾಗಲಿ: ಸಹ ಪ್ರಾಧ್ಯಾಪಕಿ ಡಾ.ಬಿ.ಟಿ.ನೇತ್ರಾವತಿ, 1 ರಿಂದ 8ನೇ ತರಗತಿವರೆಗೆ ಕಡ್ಡಾಯವಾಗಿ ಮಾತೃಭಾಷಾ ಮಾಧ್ಯಮ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಜಾರಿ ಮಾಡುವ ಅಗತ್ಯವಿದ್ದು ಸಂವಿಧಾನಕ್ಕೆ ತಿದ್ದುಪಡಿ ಆಗಲಿ ಎಂದರು.

ರೈತಪರ ಹೋರಾಟಗಾರ್ತಿ ಅನಸೂ ಯಮ್ಮ, ಇಂಗ್ಲಿಷ್‌ ಮಾಧ್ಯಮವನ್ನು ಸರ್ಕಾರವೇ ಉತ್ತೇಜನ ನೀಡಿದಂತಾಗಿದೆ ಎಂದು ವಿಷಾದಿಸಿದರು.

ಕರಳು ಬಳ್ಳಿಯ ಸಂಬಂಧ: ರಾಮನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ.ಎಚ್.ರಾಜಶೇಖರ್‌ ಮಾತನಾಡಿ, ಭಾಷೆ ಎನ್ನುವುದು ವ್ಯವಹಾರ ಮತ್ತು ಉದ್ಯೋಗಕ್ಕೆ ಸೀಮಿತವಲ್ಲ, ಇದು ಕರುಳು ಬಳ್ಳಿಯ ಸಂಬಂಧ ಎಂಬ ಭಾವನೆ ಮೂಡಬೇಕು. ಇಂಗ್ಲಿಷ್‌ ಒಂದು ಭಾಷೆಯಾಗಿಕಲಿಯು ವುದು ತಪ್ಪಲ್ಲ. ಆದರೆ ಇಂಗ್ಲಿಷ್‌ ಮಾಧ್ಯಮ ಪ್ರಾರಂಭ ಮಾಡುತ್ತಿರುವುದರಿಂದ ಮೊದಲೇ ಐಸಿಯುನಲ್ಲಿದ್ದ ಸರ್ಕಾರಿ ಶಾಲೆಗಳು ಸರ್ವನಾಶವಾಗಲಿವೆ ಎಂದರು.

ಖಾಸಗಿ ಶಾಲೆಗಳ ಆಮಿಷ: ಹಿರಿಯ ಪತ್ರಕರ್ತ ಸು.ತ.ರಾಮೇಗೌಡ ಮಾತನಾಡಿ, ಖಾಸಗಿ ಶಾಲೆಯಲ್ಲೂ ಸಾಕಷ್ಟು ಲೋಪದೋಷಗಳಿವೆ. ಆದರೆ, ಉತ್ತಮ ಶಾಲೆಯೆಂದು ಬಿಂಬಿಸಿಕೊಳ್ಳುವ ಜತೆಗೆ ವಿವಿಧ ಆಮಿಷ, ಭರವಸೆ ನೀಡುವ ಮೂಲಕ ಪಾಲಕರನ್ನು ಆಕರ್ಷಿಸುವ ಕಾರ್ಯ ಮಾಡುತ್ತಿವೆ ಎಂದು ದೂರಿದರು. ಅಲ್ಲದೇ, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭವಾಗು ತ್ತಿದ್ದಂತೆ ಖಾಸಗಿ ಶಾಲೆಗಳಿಗೆ ಆತಂಕ ಶುರು ಎಂದರು.

ಎಸ್‌ಡಿಎಂಸಿ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್, ಸಿ.ವಿ. ಜಯಣ್ಣ, ನರಸಿಂಹ ಸ್ವಾಮಿ, ಸೈಯದ್‌ ಮಹಮದ್‌, ವಸಂತಕುಮಾರ, ಡಾ.ಅಂಕನಹಳ್ಳಿ ಪಾರ್ಥ, ಎಚ್. ಪಿ.ನಂಜೇಗೌಡ ಮತ್ತಿತರರು ಮಾತನಾಡಿದರು.

ಸರ್ಕಾರ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆದಿರುವುದು ಬಡ-ಮಧ್ಯಮ ವರ್ಗಗಳ ಮಕ್ಕಳಿಗೆ ಅನುಕೂಲ ವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಭಾಷೆ ಅನಿವಾರ್ಯತೆ ಇರುವುದರಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವಿದೆ. ಆದರೆ ಕನ್ನಡದ ಬಗ್ಗೆ ತಾತ್ಸರ ಸಲ್ಲದು ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜ್‌, ಗೌರವ ಕಾರ್ಯ ದರ್ಶಿ ಎಚ್.ಎಸ್‌.ರೂಪೇಶ್‌ ಕುಮಾರ್‌, ಮಾಗಡಿ ಘಟಕದ ಅಧ್ಯಕ್ಷೆ ಕಲ್ಪನಾ, ಚನ್ನಪಟ್ಟಣ ಘಟಕದ ಅಧ್ಯಕ್ಷ ಮತ್ತಿಕೆರೆ ಚಲುವರಾಜು, ನಿವೃತ್ತ ಪ್ರಾಚಾರ್ಯ ಎಸ್‌.ಎಲ್.ವನರಾಜು, ವಿವಿಧ ಶಾಲೆಗಳ ಶಿಕ್ಷಕರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ