Udayavni Special

ಮೂಲಸೌಕರ್ಯ ಕಾಣದ ಸಾದರಹಳ್ಳಿ ಗ್ರಾಮ


Team Udayavani, Mar 2, 2021, 3:38 PM IST

ಮೂಲಸೌಕರ್ಯ ಕಾಣದ ಸಾದರಹಳ್ಳಿ ಗ್ರಾಮ

ಚನ್ನಪಟ್ಟಣ: ಸ್ವಚ್ಛತೆ ಕಾಣದ ನೀರಿನ ಟ್ಯಾಂಕ್‌, ಹುಳು ಬಿದ್ದ ಕುಡಿಯುವ ನೀರು, ನೀರಿನ ತೊಂಬೆ ಬಳಿ ಹರಿಯದೆ ನಿಂತಿರುವ ಚರಂಡಿ ನೀರು, ಸೊಳ್ಳೆ ಗಳ ವಾಸಸ್ಥಾನವಾದ ಹೂಳು ತುಂಬಿದ ಚರಂಡಿ ಗಳು, ನರಕಕ್ಕೆ ಮೂರೇ ಗೇಣು ಎಂಬ ಭಾವನೆಭಾಸವಾಗುತ್ತಿದೆ ತಾಲೂಕಿನ ಅಕ್ಕೂರು ಗ್ರಾಪಂ ವ್ಯಾಪ್ತಿಯ ಕುಗ್ರಾಮ ಸಾದರಹಳ್ಳಿ.

ಹೌದು…ಈ ಎಲ್ಲ ಕಲುಷಿತ ವಾತಾವರಣವನ್ನು ಒಮ್ಮೆ ಸಾದರಹಳ್ಳಿ ಗ್ರಾಮಕ್ಕೆ ಹೋದರೆ ನೋಡ ಬಹುದಾಗಿದೆ. ಹೇಳುವವರು, ಕೇಳುವವರು ಯಾರು ಇಲ್ಲವಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳಬೇಜವಾಬ್ದಾರಿ ಕಾರಣದಿಂದ, ಗ್ರಾಮ ಪಂಚಾಯ್ತಿಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿರುವ ಗ್ರಾಮದ ಜನರು, ನಮ್ಮ ಸಮಸ್ಯೆ ಆಲಿಸುವವರು ಯಾರು ಇಲ್ಲವೇ ಎಂದು ತಮಗೆ ತಾವೇ ಶಪಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.

ಗಬ್ಬು ವಾಸನೆ: ಗ್ರಾಮದಲ್ಲಿರುವ ನೀರಿನ ಟ್ಯಾಂಕ್‌ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಒಮ್ಮೆ ಟ್ಯಾಂಕ್‌ ಪರಿಶೀಲನೆ ಮಾಡಿದರೆ ಹುಳು ಬಿದ್ದ ನೀರಿನ ದರ್ಶನ ವಾಗುತ್ತದೆ. ಅದೇ ನೀರನ್ನು ಗ್ರಾಮದಮಂದಿ ಸೇವನೆ ಮಾಡುತ್ತಿದ್ದಾರೆ. ನೀರಿನ ತೊಂಬೆಬಳಿ ಇರುವ ಚರಂಡಿಗಳ ನೀರು ಮುಂದಕ್ಕೆ ಚಲಿಸದೆ, ಇದ್ದ ಸ್ಥಳದಲ್ಲಿಯೇ ಚರಂಡಿ ನೀರು ಶೇಖರಣೆ ಯಾಗಿ ಹುಳು, ಹುಪ್ಪಟೆಗಳು ಹರಿದಾಡುತ್ತಿವೆ.ಸೊಳ್ಳೆಯ ವಾಸಸ್ಥಾನ ಆಗಿರುವುದರಿಂದ ಹುಳುಬಿದ್ದ ನೀರು ಶೇಖರಣೆ ಮಾಡಲು ಬರುವ ಜನರು,ಗಬ್ಬು ವಾಸನೆಯಲ್ಲೇ ನೀರು ಹಿಡಿದು ಮನಗೆಹೋಗುವುದು ಅನಿವಾರ್ಯವಾಗಿದೆ.

ಮೂಲಸೌಕರ್ಯ ಮರೀಚಿಕೆ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಬೀದಿ ದೀಪ ಗಳು ಹಾಗೂ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ, ಚುನಾಯಿತ ಪ್ರತಿನಿಧಿಯಾಗಲಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸ ದಿರುವುದು ಈ ಜನರ ದೌರ್ಭಾಗ್ಯ ವಾಗಿದೆ. ನೂತನವಾಗಿ ಆಯ್ಕೆಯಾಗಿರುವ ಅಕ್ಕೂರುಗ್ರಾಮ ಪಂಚಾಯ್ತಿಯ ಅಧ್ಯಕ್ಷ ಅಶೋಕ್‌ ಗ್ರಾಮದಲ್ಲಿ ನಿರ್ಮಾಣವಾಗಿರುವ ಈ ಜ್ವಲಂತ ಸಮಸ್ಯೆಯನ್ನು ವೀಕ್ಷಣೆ ಮಾಡಿ, ಗ್ರಾಮದ ಜನರಿಗೆ ಅನು ಕೂಲ ಮಾಡಿಕೊಡುವರೇ ಕಾದು ನೋಡಬೇಕಿದೆ.

ಮನವಿ ಮಾಡಿದರೂ ಪ್ರಯೋಜನವಿಲ್ಲ  :  ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಐದು ಟ್ಯಾಂಕ್‌ಗಳಿದ್ದು, ಎಲ್ಲ ಟ್ಯಾಂಕ್‌ಗಳಲ್ಲಿಯೂ ಇದೇ ಪರಿಸ್ಥಿತಿ ಇರುವುದರಿಂದ, ಶುದ್ಧ ಕುಡಿಯುವ ನೀರು ಗ್ರಾಮದ ಜನರಿಗೆ ಇಲ್ಲವಾಗಿದೆ. ಟ್ಯಾಂಕ್‌ಗಳಲ್ಲಿ ದೊರೆಯುವನೀರನ್ನೇ ಕುಡಿಯುವುದು ಈ ಜನರ ಹಣೆಬರಹಎನ್ನುವಂತಾಗಿದೆ. ಟ್ಯಾಂಕ್‌ ಸ್ವಚ್ಛತೆ,  ಹೂಳು ತುಂಬಿದ ಚರಂಡಿಗಳ ಸ್ವಚ್ಛತೆ ವಿಚಾರವಾಗಿ ಅಕ್ಕೂರು ಗ್ರಾಮ ಪಂಚಾಯ್ತಿಗೆ ಹಲವಾರು ಬಾರಿ ಮನವಿ ಮಾಡಿದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಜಯಲಕ್ಷಮ್ಮ, ಜಯಮ್ಮ, ಲಕ್ಷ್ಮಮ್ಮ, ಸುನಿತಾ, ಶಾರದಾ, ಪದ್ಮಾ, ತುಳಸಮ್ಮ ಹಾಗೂ ಹಲವಾರು ಮಂದಿ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಕಿಡಿಕಾರಿದ್ದಾರೆ.

ಟಾಪ್ ನ್ಯೂಸ್

Oppo F19

ಒಪ್ಪಬಹುದಾದ ಒಪ್ಪೋ ಎಫ್19

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deputy Superintendent’s Office seal down

ಉಪನೋಂದಣಾಧಿಕಾರಿ ಕಚೇರಿ ಸೀಲ್‌ ಡೌನ್‌

Bed on the floor

ನೆಲದ ಮೇಲೆ ಬೆಡ್‌, ಬಿಸಿ ನೀರಿಗೂ ಗೋಗರಿಯಬೇಕು

Destroy the banana crop

ಬಿರುಗಾಳಿ ಮಳೆಗೆ ಬಾಳೆ ಫ‌ಸಲು ನಾಶ

Observation by the Minister

ಜಿಲ್ಲೆಯ ಪರಿಸ್ಥಿತಿ ಸಚಿವರಿಂದ ಅವಲೋಕನ

The disappearance of the rules

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

Oppo F19

ಒಪ್ಪಬಹುದಾದ ಒಪ್ಪೋ ಎಫ್19

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

Mallikarjuna Temple

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

“All cooperation for village development”

“ಗ್ರಾಮದ ಅಭಿವೃದ್ಧಿಗೆ ಸರ್ವ ಸಹಕಾರ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.