Udayavni Special

ದರ ನಿಗದಿ : ಕೆಐಎಡಿಬಿ-ಭೂಮಾಲಿಕರಸಭೆ ಮತ್ತೆ ವಿಫ‌ಲ


Team Udayavani, Nov 9, 2020, 3:37 PM IST

ದರ ನಿಗದಿ : ಕೆಐಎಡಿಬಿ-ಭೂಮಾಲಿಕರಸಭೆ ಮತ್ತೆ ವಿಫ‌ಲ

ರಾಮನಗರ: ಹಾರೋಹಳ್ಳಿ ಕೈಗಾರಿಕ ಪ್ರದೇಶದ 5ನೇ ಹಂತದ ಸ್ಥಾಪನೆಗೆ ಉದ್ದೇಶಿತ ಭೂಮಿಗೆ ದರ ನಿರ್ಧಾರ ಸಾಧ್ಯವಾಗದೆ ಕೆಐಎಡಿಬಿ ಹಾಗೂ ಭೂ ಮಾಲೀಕರ ನಡುವಿನ ಸಭೆ ಮತ್ತೂಮ್ಮೆ ವಿಫ‌ಲವಾಗಿದೆ.

ಇಲ್ಲಿನ ಜಿಲ್ಲಾ ಪಂಚಾಯ್ತಿ ಭವನದಲ್ಲಿ ಭೂ ನಿರ್ಧಾರ ಸಲಹಾ ಸಮಿತಿ ಅಧ್ಯಕ್ಷರೂ ಹಾಗೂ ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ ನೇತೃತ್ವದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಭೂಮಾಲಿಕರು ಮತ್ತು ರೈತರು ದರ ನಿರ್ಧರಣೆಗಾಗಿ ಮತ್ತೂಮ್ಮೆ ಸಭೆ ಸೇರಿದ್ದರು. ಆದರೆ, ದರ ನಿಗದಿ ಆಗದಕಾರಣ ಸಭೆ ವಿಫ‌ಲವಾಗಿದೆ.

ತಾಲೂಕಿನ ಕಂಚುಗಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಂಚುಗಾರನಹಳ್ಳಿ ಮತ್ತು ಕಂಚುಗಾರನಹಳ್ಳಿ ಕಾವಲ್‌ ಹಾಗೂ ಹಾರೋಹಳ್ಳಿ ಗ್ರಾಪಂಗೆ ಸೇರಿದ ಮುಡೇನಹಳ್ಳಿ ಮತ್ತು ಯರೇಹಳ್ಳಿ ಸೇರಿದಂತೆ ನಾಲ್ಕು ಗ್ರಾಮಗಳ 912.12 ಎಕರೆ ಪ್ರದೇಶವನ್ನು ಹಾರೋಹಳ್ಳಿ5ನೇ ಹಂತದ ಕೈಗಾರಿಕಾ ವಸಾಹತು ಸ್ಥಾಪನೆಗಾಗಿ ಕೆಐಎಡಿಬಿ ಭೂ ಸ್ವಾಧಿನಕ್ಕೆ ಮುಂದಾಗಿದೆ. ದರ ನಿರ್ಧಾರ ಸಮಿತಿ ಅಧಿಕಾರಿಗಳು ಮುಡೇನಹಳ್ಳಿ ಮತ್ತು ಯರೇಹಳ್ಳಿ ವ್ಯಾಪ್ತಿಯ ಪ್ರತಿ ಎಕರೆಗೆ ಭೂಮಿಗೆ 80 ಲಕ್ಷ ರೂ., ಕಂಚುಗಾರನಹಳ್ಳಿ ಮತ್ತು ಕಾವಲ್‌ ಗ್ರಾಮಗಳಲ್ಲಿ ಒಳಭಾಗದ ಭೂಮಿಗೆ 90 ಲಕ್ಷ ರೂ., ರಸ್ತೆ ಬದಿಯಿರುವ ಭೂಮಿಗೆ 1 ಕೋಟಿ ರೂ. ದರ ನೀಡುವುದಾಗಿ ತಿಳಿಸಿದರು.

ಸಮ್ಮಿತಿ ಇಲ್ಲ: ಈ ದರಗಳಿಗೆ ತಮ್ಮ ಒಪ್ಪಿಗೆಯಿಲ್ಲ ಎಂದು ಭೂ ಮಾಲಿಕರು ಸಹ ತಮ್ಮ ಪಟ್ಟು ಹಿಡಿದರು. ಸರ್ಕಾರದ ಮಾರ್ಗಸೂಚಿ ದರ ಎಕರೆಗೆ ಗರಿಷ್ಠ 1.20 ಕೋಟಿ ರೂ. ಇದೆ. ಪ್ರಸ್ತುತ ಮಾರುಕಟ್ಟೆ ಬೆಲೆ ಎಕರೆಗೆ 1.50 ಕೋಟಿ ರೂ. ಹೆಚ್ಚಿಗಿದೆ. ಪ್ರತಿ ಎಕರೆಗೆ ಕನಿಷ್ಠ 1.20 ಕೋಟಿ ರೂ.ನೀಡದ ಹೊರತು ಯಾವುದೇ ಕಾರಣಕ್ಕೂ ಭೂಮಿಕೊಡುವುದಿಲ್ಲ ಎಂದರು.

ಪರಿಹಾರ ಬೇಕು: ಮುಂದಿನ ಸಭೆ ವೇಳೆಗೆ ಅಧಿಕಾರಿ ಗಳು ಬಿಡದಿ ಟೌನ್‌ ಶಿಪ್‌ ನಿರ್ಮಾಣ ಸಂಬಂಧ ಗುರುತಿಸಿರುವ ಭೂ ಪ್ರದೇಶ ಹೊರತುಪಡಿಸಿ ಅದರ ಆಸುಪಾಸಿನ ಭೂಮಿಯ ಪ್ರಸಕ್ತ ಮಾರುಕಟ್ಟೆಯ ಬೆಲೆಯನ್ನು ಪರಿಗಣಿಸಬೇಕು. ದೇವನಹಳ್ಳಿಯಲ್ಲಿ ಪ್ರತಿ ಎಕರೆಗೆ ಸರ್ಕಾರ1.50ಕೋಟಿ,ಕೋಲಾರದಲ್ಲಿ1.20 ಕೋಟಿ ಪರಿಹಾರ ನೀಡಿದೆ. ಅದೇ ಮಾದರಿಯಲ್ಲಿ ಕಂಚುಗಾನಹಳ್ಳಿ ಮತ್ತು ಹಾರೋಹಳ್ಳಿ ಬಳಿ ಭೂ ಸ್ವಾಧೀನಕ್ಕೆ ಗುರುತಿಸಿರುವ ಫ‌ಲವತ್ತಾದ ಭೂಮಿಗೂ ಪರಿಹಾರ ಬೇಕು ಎಂದು ರೈತರು ತಮ್ಮ ಬೇಡಿಕೆಗಳನ್ನು ಸಭೆಯಲ್ಲಿಟ್ಟರು.

ಈ ಮಧ್ಯೆ ದನಿ ಗೂಡಿಸಿದ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಬಿ.ವೆಂಕಟೇಶ್‌ ಮಾತನಾಡಿ, ರೈತರಿಗೆ ಸ್ಟಾಂಪ್‌ ಡ್ನೂಟಿಯಲ್ಲಿ ರಿಯಾಯಿತಿ, ಭೂಮಿ ಕಳೆದುಕೊಂಡ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಮತ್ತಿತರ ಸೌಲಭ್ಯ ನೀಡುವುದಾಗಿ ತಿಳಿಸಿದರು. ಆದರೆ, ರೈತರು ಇದಕ್ಕೆ ಸೊಪ್ಪು ಹಾಕಲಿಲ್ಲ. ವ್ಯಾಪ್ತಿಗೆ ಬಾರದು: ಭೂ ಮಾಲೀಕರು ಆಗ್ರಹಿಸುತ್ತಿರುವ ದರ ನಿಗದಿ ಮಾಡುವುದು ತಮ್ಮ ವ್ಯಾಪ್ತಿಗೆ ಮೀರಿದ್ದು, ಬೇಡಿಕೆ ವರದಿಯನ್ನು ಕೇಂದ್ರ ಭೂ ದರ ನಿರ್ಧಾರ ಸಲಹಾ ಸಮಿತಿಗೆ ಕಳುಹಿಸುವುದಾಗಿ ಜಿಲ್ಲಾಧಿಕಾರಿಗಳು ಭೂಮಾಲಿಕರಿಗೆ ತಿಳಿಸಿದರು.

ಸಭೆಯಲ್ಲಿ ರಾಮನಗರ ತಹಸೀಲ್ದಾರ್‌ ನರಸಿಂಹ ಮೂರ್ತಿ ಮತ್ತಿತರರು ಭಾಗವಹಿಸಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

farmer4

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ

Vaccine

ಲಸಿಕೆ ಖರೀದಿ: ಭಾರತವೇ ಪ್ರಥಮ

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

2 ವರ್ಷಗಳ ಗರಿಷ್ಠಕ್ಕೆ ಪೆಟ್ರೋಲ್‌ ಬೆಲೆ ಏರಿಕೆ

r-ashok

ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ: ಆರ್ ಅಶೋಕ್

bsy

ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆ ಕಾಯ್ದೆ ಜಾರಿಗೆ ತೀರ್ಮಾನ: ಸಿಎಂ ಬಿಎಸ್ ವೈ

grama

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದೇ ಹಂತದ ಗ್ರಾ.ಪಂ ಚುನಾವಣೆ ನಡೆಸುವಂತೆ ಆದೇಶ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

6 ತಿಂಗಳ ಗೌರವ ಧನ ಬಿಡುಗಡೆ ಮಾಡಲು ಮನವಿ

6 ತಿಂಗಳ ಗೌರವ ಧನ ಬಿಡುಗಡೆ ಮಾಡಲು ಮನವಿ

ಕೈ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲ್ಲುವ ವಿಶ್ವಾಸ

ಕೈ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಗೆಲ್ಲುವ ವಿಶ್ವಾಸ

ರೈತರ ತೋಟದಿಂದಲೇ ಬೆಳೆ ಖರೀದಿ: ಪರಮಶಿವಯ್ಯ

ರೈತರ ತೋಟದಿಂದಲೇ ಬೆಳೆ ಖರೀದಿ: ಪರಮಶಿವಯ್ಯ

ರೇವಣ ಸಿದ್ದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ

ರೇವಣ ಸಿದ್ದೇಶ್ವರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

Udupiಮುಖ್ಯ ರಸ್ತೆಯಲ್ಲೇ ಅಪಾಯಕಾರಿ ರೀತಿ ಬಸ್ಸುಗಳ ನಿಲುಗಡೆ

ಮುಖ್ಯ ರಸ್ತೆಯಲ್ಲೇ ಅಪಾಯಕಾರಿ ರೀತಿ ಬಸ್ಸುಗಳ ನಿಲುಗಡೆ

Kud

ಹಾಸ್ಟೆಲ್‌ಗ‌ಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ: ಜಯಪ್ರಕಾಶ್‌ ಹೆಗ್ಡೆ

farmer4

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ

Vaccine

ಲಸಿಕೆ ಖರೀದಿ: ಭಾರತವೇ ಪ್ರಥಮ

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

ಹೈದರಾಬಾದ್‌: ಬಿಜೆಪಿ 12 ಪಟ್ಟು ಹಿಗ್ಗಿದ್ದು ಹೇಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.